ಅರ್ಜುನ್ ಸರ್ಜಾ ಕುಟುಂಬ 
ಸಿನಿಮಾ ಸುದ್ದಿ

ಒಬ್ಬ ತಂದೆಯಾಗಿ ನಾನು ಸುಮ್ಮನಿರಲು ಸಾಧ್ಯವಿಲ್ಲ: ಹಿರಿಯ ಪುತ್ರಿ ಐಶ್ವರ್ಯಾ 'ಮದ್ಯಪಾನಿ' ಆರೋಪಕ್ಕೆ ಆಕ್ರೋಶ; ದೂರು ದಾಖಲಿಸಿದ ಅರ್ಜುನ್ ಸರ್ಜಾ

ಜೊತೆಗೆ ಅರ್ಜುನ್ ಸರ್ಜಾ ಅವರ ಕಿರಿಯ ಮಗಳ ಮದುವೆಯಲ್ಲಿ ಉಮಾಪತಿ ಹಾಜರಿರಲಿಲ್ಲ, ಐಶ್ವರ್ಯಾ ಅವರಿಗೆ 'ಮದ್ಯಪಾನದ ಚಟವಿದೆ' (ಆಲ್ಕೋಹಾಲಿಕ್) ಎಂದೂ ಕೆಲವು ಮಾಧ್ಯಮಗಳು ಆರೋಪಿಸಿದ್ದವು.

ತಮ್ಮ ಹಿರಿಯ ಮಗಳು ಐಶ್ವರ್ಯಾ ವಿರುದ್ಧ ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ 'ಅಪಮಾನಕಾರಿ' ಆರೋಪಗಳನ್ನು ನಟ ಅರ್ಜನ್ ಸರ್ಜಾ ತೀವ್ರವಾಗಿ ಖಂಡಿಸಿದ್ದಾರೆ. ಐಶ್ವರ್ಯಾ ಮತ್ತು ಉಮಾಪತಿ ರಾಮಯ್ಯ ಅವರ ವಿವಾಹ ಜೀವನದಲ್ಲಿ ಬಿರುಕು ಮೂಡಿದೆ ಎಂದು ಕೆಲವು ವೆಬ್‌ಸೈಟ್‌ಗಳು ವರದಿ ಮಾಡಿವೆ.

ಜೊತೆಗೆ ಅರ್ಜುನ್ ಸರ್ಜಾ ಅವರ ಕಿರಿಯ ಮಗಳ ಮದುವೆಯಲ್ಲಿ ಉಮಾಪತಿ ಹಾಜರಿರಲಿಲ್ಲ, ಐಶ್ವರ್ಯಾ ಅವರಿಗೆ 'ಮದ್ಯಪಾನದ ಚಟವಿದೆ' (ಆಲ್ಕೋಹಾಲಿಕ್) ಎಂದೂ ಕೆಲವು ಮಾಧ್ಯಮಗಳು ಆರೋಪಿಸಿದ್ದವು

ಈ ವರದಿಗಳನ್ನು ತೀವ್ರವಾಗಿ ಖಂಡಿಸಿರುವ ಅರ್ಜುನ್ ಸರ್ಜಾ, ತಾವು ಸಂಬಂಧಪಟ್ಟ ಅಧಿಕಾರಿಗಳಿಗೆ ಅಧಿಕೃತ ದೂರು ನೀಡಿದ್ದಾಗಿ ತಿಳಿಸಿದ್ದಾರೆ. ಆಧಾರರಹಿತ ವರದಿಗಳನ್ನು ಹರಡುತ್ತಿರುವ ಮಾಧ್ಯಮಗಳ ಒಂದು ವರ್ಗವನ್ನು ತರಾಟೆಗೆ ತೆಗೆದುಕೊಂಡ ಅವರು, "ಗೌರವ ಮತ್ತು ಘನತೆ ಎಂಬ ವಿಷಯಗಳಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳಬಾರದು" ಎಂದು ಬರೆದಿದ್ದಾರೆ.

ನಟರಾದ ನಮಗೆ, ಸಾರ್ವಜನಿಕ ಜೀವನದಲ್ಲಿ ಊಹಾಪೋಹಗಳು ಮತ್ತು ಜನರ ಸೂಕ್ಷ್ಮ ಪರಿಶೀಲನೆ ಸಹಜ ಎಂಬುದು ತಿಳಿದಿದೆ. ಆದರೆ, ಊಹಾಪೋಹಗಳಿಗೂ ಮತ್ತು ಆಧಾರರಹಿತ ಆರೋಪಗಳನ್ನು ಉದ್ದೇಶಪೂರ್ವಕವಾಗಿ ಹರಡುವುದಕ್ಕೂ ಬಹಳ ವ್ಯತ್ಯಾಸವಿದೆ. ಸಾರ್ವಜನಿಕರ ಗಮನ ಸೆಳೆಯುವ ವಿಷಯವಾಗಿದೆ ಎಂದ ಮಾತ್ರಕ್ಕೆ, ಯಾರೊಬ್ಬರ ಬಗ್ಗೆ ಕಟ್ಟುಕಥೆಗಳನ್ನು ಸೃಷ್ಟಿಸಲು ಅಥವಾ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಯಾರಿಗೂ ಹಕ್ಕಿಲ್ಲ.

ಯಾವುದೇ ಆಧಾರವಿಲ್ಲದೆ, ಒಬ್ಬ ಮಹಿಳೆಯನ್ನು 'ಮದ್ಯಪಾನಿ' ಎಂದು ಕರೆಯುವಂತಹ ಅವಹೇಳನಕಾರಿ ಮತ್ತು ಆಧಾರರಹಿತ ಹೇಳಿಕೆಗಳನ್ನು ನೀಡುವುದು ಅತ್ಯಂತ ಬೇಜವಾಬ್ದಾರಿತನ ಮತ್ತು ಸ್ವೀಕಾರಾರ್ಹವಲ್ಲದ ಸಂಗತಿಯಾಗಿದೆ. ಒಬ್ಬ ತಂದೆಯಾಗಿ ತಾನು ಸುಮ್ಮನಿರಲು ಸಾಧ್ಯವಿಲ್ಲ ಎಂದು ನಟ ಹೇಳಿದ್ದಾರೆ.

ಮೌನವಾಗಿರುವುದೇ ಅತ್ಯಂತ ಘನತೆಯ ಪ್ರತಿಕ್ರಿಯೆ ಎಂದು ನಾವು ಯಾವಾಗಲೂ ನಂಬಿದ್ದೇವೆ. ಆದರೆ, ಮೌನವನ್ನು ಒಪ್ಪಿಗೆ ಎಂದು ತಪ್ಪಾಗಿ ಭಾವಿಸಬಾರದು; ಹಾಗೆಯೇ, ತಪ್ಪು ಮಾಹಿತಿಗಳು ಪದೇ ಪದೇ ಹರಡುವುದಕ್ಕೆ ಮತ್ತು ದೊಡ್ಡದಾಗುವುದಕ್ಕೆ ಅವಕಾಶವನ್ನೂ ನೀಡಬಾರದು. ಆದ್ದರಿಂದ, ನಾವು ಸಂಬಂಧಪಟ್ಟ ಅಧಿಕಾರಿಗಳಿಗೆ ಅಧಿಕೃತ ದೂರು ನೀಡುವ ಮೂಲಕ ಸೂಕ್ತ ಕ್ರಮ ಕೈಗೊಂಡಿದ್ದೇವೆ ಎಂದು ತಿಳಿಸಿದ್ದಾರೆ.

"ಇದು ಕೇವಲ ನನ್ನ ಮಗಳ ವಿಷಯವಷ್ಟೇ ಅಲ್ಲ. ಇದು ತಮ್ಮ ಘನತೆಯ ಬಗ್ಗೆ ಪ್ರಶ್ನೆಗಳನ್ನು ಎದುರಿಸುತ್ತಿರುವ ಮತ್ತು ತಮ್ಮ ವೈಯಕ್ತಿಕ ಆಯ್ಕೆಗಳಿಗಾಗಿ ಸಾರ್ವಜನಿಕರ ಟೀಕೆಗೆ ಗುರಿಯಾಗುತ್ತಿರುವ ಪ್ರತಿಯೊಬ್ಬ ಮಹಿಳೆಯ ವಿಷಯವಾಗಿದೆ. ಕುಟುಂಬದ ಬೆಂಬಲವಿಲ್ಲದ ಮಹಿಳೆಯರಿಗೆ ಇಂತಹ ಆರೋಪಗಳು ವಿಶೇಷವಾಗಿ ಹಾನಿಕಾರಕವಾಗಬಹುದು; ಈಗಾಗಲೇ ಕಷ್ಟಕರವಾಗಿರುವ ಅವರ ಜೀವನ ಪಯಣವನ್ನು ಇದು ಇನ್ನಷ್ಟು ದುಸ್ತರಗೊಳಿಸುತ್ತದೆ. ಯಾವುದೇ ಮಹಿಳೆ ಇಂತಹ ಪರಿಸ್ಥಿತಿಯನ್ನು ಏಕಾಂಗಿಯಾಗಿ ಎದುರಿಸಬಾರದು ಅಥವಾ ತಾನು ಹೇಗೆ ಬದುಕಬೇಕು ಎಂಬುದನ್ನು ಸಮರ್ಥಿಸಿಕೊಳ್ಳುವ ಅನಿವಾರ್ಯತೆಗೆ ಸಿಲುಕಬಾರದು," ಎಂದು ಅರ್ಜುನ್ ಸರ್ಜಾ ಹೇಳಿದರು.

"ಒಬ್ಬ ತಂದೆಯಾಗಿ, ನಾನು ಯಾವಾಗಲೂ ನನ್ನ ಮಗಳ ಪರವಾಗಿ ನಿಲ್ಲುತ್ತೇನೆ. ಘನತೆ, ಸ್ವಾತಂತ್ರ್ಯ ಮತ್ತು ಸ್ವತಂತ್ರವಾಗಿ ಬದುಕುವ ಅವಳ ಹಕ್ಕನ್ನು ನಾನು ಸದಾ ಬೆಂಬಲಿಸುತ್ತೇನೆ," ಎಂದು ಸರ್ಜಾ ಬರೆದಿದ್ದಾರೆ. ಅರ್ಜುನ್ ಸರ್ಜಾ ಅವರ ಪುತ್ರಿ ಐಶ್ವರ್ಯ ಮತ್ತು ತಂಬಿ ರಾಮಯ್ಯ ಅವರ ಪುತ್ರ ಉಮಾಪತಿ ರಾಮಯ್ಯ ಅವರು 2024ರ ಜೂನ್ 10ರಂದು ಚೆನ್ನೈನಲ್ಲಿ ವಿವಾಹವಾದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ಸಂಸ್ಕೃತಿ 'ತಿನ್ನು, ಕುಡಿ, ಮೋಜು ಮಾಡು' ಎಂಬುದಲ್ಲ; ನಾವು ಉಳಿತಾಯಕ್ಕೆ ಪ್ರೋತ್ಸಾಹ ನೀಡುತ್ತೇವೆ: ಪ್ರಧಾನಿ ಮೋದಿ

ಖ್ಯಾತ ನಟನಾಗಿದ್ದರೇ ಹೆಂಡತಿ ಕಾಲಿಗೆ ಬೀಳುತ್ತಿದ್ದರಾ? 'ಪ್ರೇಮದ ಊರಲಿ' ಬಗ್ಗೆ ನಾಗತಿಹಳ್ಳಿ ಚಂದ್ರಶೇಖರ್ ಮಾರ್ಮಿಕ ಪೋಸ್ಟ್!

ಭೂಗತಪಾತಕಿ ದಾವೋದ್ ಇಬ್ರಾಹಿಂ ಆಡಿ ಬೆಳೆದಿದ್ದ ಮುಂಬೈ ನಿವಾಸ ಧ್ವಂಸ!

ನಮ್ಮ ಹಳೇ ಬಾಸ್​​ ಭಸ್ಮಾಸುರನಂತೆ, NDA ಕಥೆ ಏನಾಗುತ್ತೋ: ಮತ್ತೆ ಎಚ್​​ಡಿ ಕುಮಾರಸ್ವಾಮಿ ವಿರುದ್ಧ ಸಚಿವ ಬಾಲಕೃಷ್ಣ ವಾಗ್ದಾಳಿ

Video: 'ಇನ್ಮೇಲೆ ನೀರಿಗಾಗಿ ಗಲಾಟೆ ಇರೋಲ್ಲ': ಕಾವೇರಿ-ಗೋದಾವರಿ ಜೋಡಣೆ ಕುರಿತು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಮಹತ್ವದ ಹೇಳಿಕೆ!