ಸಿನಿಮಾ ಸುದ್ದಿ

ಖ್ಯಾತ ನಟನಾಗಿದ್ದರೇ ಹೆಂಡತಿ ಕಾಲಿಗೆ ಬೀಳುತ್ತಿದ್ದರಾ? 'ಪ್ರೇಮದ ಊರಲಿ' ಬಗ್ಗೆ ನಾಗತಿಹಳ್ಳಿ ಚಂದ್ರಶೇಖರ್ ಮಾರ್ಮಿಕ ಪೋಸ್ಟ್!

2026ರಲ್ಲಿ ಕನ್ನಡದ ಚಿತ್ರದ ಬ್ಲಾಕ್ ಬಸ್ಟರ್ ಚಿತ್ರವಾಗಿ 'ಪ್ರೇಮದ ಊರಲಿ' ಹೊರಹೊಮ್ಮಿದೆ. 2 ಕೋಟಿ ಬಜೆಟ್ ಚಿತ್ರದಲ್ಲಿ ನಿರ್ಮಾಣವಾಗಿದ್ದ ಚಿತ್ರ ಬರೋಬ್ಬರಿ 120ಕ್ಕೂ ಹೆಚ್ಚು ಕೋಟಿ ಕಲೆಕ್ಷನ್ ಮಾಡಿತ್ತು.

ಬೆಂಗಳೂರು: 2026ರಲ್ಲಿ ಕನ್ನಡದ ಚಿತ್ರದ ಬ್ಲಾಕ್ ಬಸ್ಟರ್ ಚಿತ್ರವಾಗಿ 'ಪ್ರೇಮದ ಊರಲಿ' ಹೊರಹೊಮ್ಮಿದೆ. 2 ಕೋಟಿ ಬಜೆಟ್ ಚಿತ್ರದಲ್ಲಿ ನಿರ್ಮಾಣವಾಗಿದ್ದ ಚಿತ್ರ ಬರೋಬ್ಬರಿ 120ಕ್ಕೂ ಹೆಚ್ಚು ಕೋಟಿ ಕಲೆಕ್ಷನ್ ಮಾಡಿತ್ತು. ಅಲ್ಲದೆ ಕನ್ನಡ ಪ್ರೇಕ್ಷಕರಿಂದ ಅತ್ಯುತ್ತಮ ಸ್ಪಂದನೆ ಸಿಕ್ಕಿತ್ತು. ಅಲ್ಲದೆ ಚಿತ್ರ OTTಯಲ್ಲಿ ಬಿಡುಗಡೆಯಾಗಿದೆ.

ಈ ಮಧ್ಯೆ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಚಿತ್ರತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೆ ಚಿತ್ರದ ಪ್ರಮುಖ ದೃಶ್ಯವೊಂದನ್ನು ಮೆಚ್ಚಿಕೊಂಡಿರುವ ಅವರು, ಖ್ಯಾತ ನಟನಾಗಿದ್ದರೇ ತನ್ನ ಹೆಂಡತಿಯ ಕಾಲಿಗೆ ಬಿದ್ದು ಕ್ಷಮೆ ಕೇಳುವ ದೃಶ್ಯವನ್ನು ಮಾಡುತ್ತಿದ್ದರಾ? ಹಾಗೆ ಮಾಡಿದರೆ ಪ್ರೇಕ್ಷಕರು ಒಪ್ಪುತ್ತಿದ್ದರಾ? ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.

ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ನಾಗತಿಹಳ್ಳಿ ಚಂದ್ರಶೇಖರ್ ಅವರು, ಪ್ರೇಮದ ಊರಲಿ ಚಿತ್ರ ನಿರ್ದೇಶನಕ ಮನೋಜ್ ಅವರಿಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಪ್ರೀತಿಯ ಮನೋಜ್,..

ಗದ್ದಲ ಗೌಜು ಮುಗಿಯಲಿ ಎಂದು ಕಾದಿದ್ದೆ. ನಿಮ್ಮ ಸಿನಿಮಾ ಅಮೆಜಾನ್ ನಲ್ಲಿ ಲಭ್ಯವಿದ್ದರೂ ಶಿಷ್ಯಕೋಟಿ ಜತೆ ನಿನ್ನೆ ವೆಗಾಸಿಟಿಗೆ ಹೋಗಿ ನೋಡಿ ಬಂದೆ. ಅನಿವಾರ್ಯ ಸಂದರ್ಭ ಹೊರತುಪಡಿಸಿ ಸಿನಿಮಾಗಳನ್ನು ವಿಶಾಲ ಪರದೆಯ ಮೇಲೆ ಹಣ ಕೊಟ್ಟು ಆಸ್ವಾದಿಸಬೇಕೆಂಬುದು ನನ್ನ ನಂಬಿಕೆ.

ಗುಣಕ್ಕೆ ಮತ್ಸರ ಸಲ್ಲ. ಅದರಲ್ಲೂ ಸ್ವಯಾರ್ಜಿತ ಸೃಜನಶೀಲ ಗುಣ ಮತ್ತು ಅದೃಷ್ಟಮೂಲದಿಂದ ಬರುವ ಹಣ ಎರಡೂ ಮೆಚ್ಚುಗೆ ಮತ್ತು ಅಭಿನಂದನೆಗೆ ಅರ್ಹ. ನಿಮಗೆ, ನಿಮ್ಮ ತಂಡಕ್ಕೆ ಅಭಿನಂದನೆಗಳು.

ಹೊಸಬರೊಂದಿಗೆ ಸಿನಿಮಾ ಮಾಡುವುದು ನನಗೂ ನಿಮ್ಮಂತೆ ಇಷ್ಟವಾದ ಸಾಹಸ. ನಿಮ್ಮ ಮೂವರೂ ಶ್ರದ್ಧೆಯಿಂದ ನಟಿಸಿದ್ದಾರೆ. ರಘು ಅದ್ಭುತ ನಟ. ಮೂರು ಚಿತ್ರಗಳಲ್ಲಿ ನನ್ನೊಂದಿಗೆ ಕೆಲಸ ಮಾಡಿದ್ದಾರೆ. ಕೊಂಚ over act ಮಾಡುತ್ತಾರೆ ಅನ್ನುವುದನ್ನು ಬಿಟ್ಟರೆ ಆತ ಮನೋಜ್ಞ. ಬೆಳ್ಳಿ ತೆರೆಯ ಬಂಗಾರ.

ನನಗೆ ಮೆಚ್ಚುಗೆಯಾದ ದೃಶ್ಯ ಎಂದರೆ ಗಂಡ ಹೆಂಡತಿಯ ಕಾಲಿಗೆ ಬಿದ್ದು ಕ್ಷಮೆ ಕೇಳುವುದು. ಮನುಷ್ಯರು ಮಾಡುವ ತಪ್ಪುಗಳಿಗೆಲ್ಲಾ ಇದೇ ಪರಿಹಾರ ಎನ್ನಲಾರೆ. ಆದರೆ ಇದು ನೀವು ಸ್ತ್ರೀತ್ವಕ್ಕೆ ಕೊಟ್ಟ ಸಂತೈಕೆ. ಒಂದು ಕಮರ್ಶಿಯಲ್ ಚಿತ್ರದಲ್ಲೂ ನಿರ್ದೇಶಕನಿಗಿರಬೇಕಾದ ಮೌಲ್ಯಪ್ರಜ್ಞೆ. ಜನಪ್ರಿಯ ಯಶಸ್ವೀ ನಾಯಕ ನಟನಿದ್ದರೆ ಅವರು ಹೆಂಡತಿಯ ಕಾಲಿಗೆ ಬೀಳುತ್ತಿದ್ದರಾ? ಬಿದ್ದರೆ ಜನ ಒಪ್ಪುತ್ತಿದ್ದರಾ? ಗೊತ್ತಿಲ್ಲ.

ಇಂಥದ್ದೊಂದು ಗೆಲುವು ಉದ್ಯಮಕ್ಕೆ, ಮತ್ತು ನಮಗೆಲ್ಲ ಬೇಕಿತ್ತು. ನಿಮ್ಮ ಗೆಲುವು ನಮ್ಮದೂ ಸಹ. ಅಭಿನಂದನೆಗಳು. ಶುಭವಾಗಲಿ ಎಂದು ಪೋಸ್ಟ್ ನಲ್ಲಿ ಬರೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ಸಂಸ್ಕೃತಿ 'ತಿನ್ನು, ಕುಡಿ, ಮೋಜು ಮಾಡು' ಎಂಬುದಲ್ಲ; ನಾವು ಉಳಿತಾಯಕ್ಕೆ ಪ್ರೋತ್ಸಾಹ ನೀಡುತ್ತೇವೆ: ಪ್ರಧಾನಿ ಮೋದಿ

ಭೂಗತಪಾತಕಿ ದಾವೋದ್ ಇಬ್ರಾಹಿಂ ಆಡಿ ಬೆಳೆದಿದ್ದ ಮುಂಬೈ ನಿವಾಸ ಧ್ವಂಸ!

ನಮ್ಮ ಹಳೇ ಬಾಸ್​​ ಭಸ್ಮಾಸುರನಂತೆ, NDA ಕಥೆ ಏನಾಗುತ್ತೋ: ಮತ್ತೆ ಎಚ್​​ಡಿ ಕುಮಾರಸ್ವಾಮಿ ವಿರುದ್ಧ ಸಚಿವ ಬಾಲಕೃಷ್ಣ ವಾಗ್ದಾಳಿ

Video: 'ಇನ್ಮೇಲೆ ನೀರಿಗಾಗಿ ಗಲಾಟೆ ಇರೋಲ್ಲ': ಕಾವೇರಿ-ಗೋದಾವರಿ ಜೋಡಣೆ ಕುರಿತು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಮಹತ್ವದ ಹೇಳಿಕೆ!

Arnab ಚಂಡಮಾರುತ ಸಂಕಷ್ಟದಲ್ಲಿ ನೆರವು; ಕರ್ನಾಟಕಕ್ಕೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಧನ್ಯವಾದ; ಡಿಕೆಶಿ ಹೇಳಿದ್ದೇನು?