ಕಿಚ್ಚನ ಪಂಚಾಯ್ತಿಯಲ್ಲಿ ಸುದೀಪ್, ಕಿರಣ್ ಶಾಸ್ತ್ರಿ 
ಸಿನಿಮಾ ಸುದ್ದಿ

Bigg Boss Kannada season 13: ಮೂವರನ್ನ ಜೈಲಿಗೆ ಕಳಿಸಿದ ಶಾಸ್ತ್ರಿಗೆ ಸಿಕ್ತು ಬಂಪರ್ ಬಹುಮಾನ! Video

ಶಾಸ್ತ್ರಿ ತೋರಿದ ಧೈರ್ಯ ಮತ್ತು ಆಟದ ವೈಖರಿಯನ್ನ ಕಿಚ್ಚ ಸುದೀಪ್‌ ಮೆಚ್ಚಿಕೊಂಡಿದ್ದಾರೆ. ಇದೀಗ ವಾಹಿನಿ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಈ ಕ್ಷಣಗಳು ಬಹಿರಂಗವಾಗಿವೆ.

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕರ್ನಾಟಕದ ಅತಿದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್‌ 13ನೇ ಆವೃತ್ತಿ ಇಲ್ಲಿಯವರೆಗೂ ಅಷ್ಟೇನೂ ಹೈಪ್ ಕ್ರಿಯೇಟ್ ಮಾಡಿಲ್ಲ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಅಂತಹ ಜನಪ್ರಿಯತೆ ಸಿಗುತ್ತಿಲ್ಲ. ಆದಾಗ್ಯೂ ದೊಡ್ಮನೆಯಲ್ಲಿ ಸ್ಪರ್ಧಿಗಳ ನಡುವಿನ ಆಟ ದಿನದಿಂದ ದಿನಕ್ಕೆ ರಂಗೇರುತ್ತಿದೆ.

ಟಾಸ್ಕ್‌ಗಳ ಮೂಲಕ ಸ್ಪರ್ಧಿಗಳು ತಮ್ಮ ಸಾಮರ್ಥ್ಯ ಪ್ರದರ್ಶಿಸುತ್ತಿದ್ದರೆ, ಮತ್ತೊಂದೆಡೆ ಕಿಚ್ಚನ ಪಂಚಾಯ್ತಿಯಲ್ಲಿ ಸ್ಪರ್ಧಿಗಳ ಆಟಕ್ಕೆ ಸುದೀಪ್‌ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈ ವಾರ ಕಿರಣ್‌ ಶಾಸ್ತ್ರಿ ಅವರ ಆಟಕ್ಕೆ ಕಿಚ್ಚ ಸುದೀಪ್‌ ಭರ್ಜರಿ ಮೆಚ್ಚುಗೆ ಸೂಚಿಸಿದ್ದು, ಬಂಪರ್‌ ಬಹುಮಾನ ಕೊಟ್ಟಿದ್ದಾರೆ.

ಮಹಾರಾಣಿ ಪಟ್ಟಕ್ಕಾಗಿ ಹೋರಾಡುತ್ತಿದ್ದ ಮೂವರು ಸ್ಪರ್ಧಿಗಳಾದ ಸೌಂದರ್ಯ, ಗಾನವಿ ಮತ್ತು ಆಸಿಯಾ ಅವರನ್ನು ಜೈಲಿಗೆ ಕಳುಹಿಸುವ ಮೂಲಕ ಕಿರಣ್‌ ಶಾಸ್ತ್ರಿ ಬಿಗ್‌ಬಾಸ್‌ ಮನೆಯಲ್ಲಿ ಗಮನ ಸೆಳೆದಿದ್ದರು.

ಈ ನಿರ್ಧಾರದ ಹಿಂದೆ ಶಾಸ್ತ್ರಿ ತೋರಿದ ಧೈರ್ಯ ಮತ್ತು ಆಟದ ವೈಖರಿಯನ್ನ ಕಿಚ್ಚ ಸುದೀಪ್‌ ಮೆಚ್ಚಿಕೊಂಡಿದ್ದಾರೆ. ಇದೀಗ ವಾಹಿನಿ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಈ ಕ್ಷಣಗಳು ಬಹಿರಂಗವಾಗಿವೆ.

ಕಿಚ್ಚನ ಪಂಚಾಯ್ತಿಯಲ್ಲಿ ಮಾತನಾಡುವ ಸುದೀಪ್‌, ಎಲ್ಲಿಂದಲೋ ಒಂದು ಧ್ವನಿ ಎದ್ದೇಳುತ್ತೆ. ಕಿರಿಯ ವ್ಯಕ್ತಿ, ಆದ್ರೆ ತಿಳಿವಳಿಕೆಯಲ್ಲಿ ಎಲ್ಲರಿಗಿಂತ ಜೋರಿದ್ದಾರೆ. ಸಿಂಗಲ್‌ ಸಿಂಹವಾಗಿ ನಿಂತುಬಿಟ್ಟರು. ಅಷ್ಟೇ ಅಲ್ಲದೆ, ಬಿಗ್‌ಬಾಸ್‌ ನಿರ್ಧಾರವನ್ನೇ ಬದಲಿಸುವಂತೆ ಮಾಡಿ ತಮ್ಮ ನಿಲುವಿನಲ್ಲಿ ಗಟ್ಟಿಯಾಗಿ ನಿಂತಿದ್ದಕ್ಕೆ ಶಾಸ್ತ್ರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಬಳಿಕ ವಿಶೇಷ ಉಡುಗೊರೆಯಾಗಿ ಹೊಸ ಜಾಕೆಟ್‌ ನೀಡಿದ್ದು, ಅದನ್ನ ಸೌಂದರ್ಯ ಅವರಿಗೆ ಹಾಕುವಂತೆ ಹೇಳ್ತಾರೆ. ಇದೇ ವೇಳೆ, ಶಾಸ್ತ್ರಿ ಅವರೇ, ನಿಮ್ಮ ಆಟ ನೀವು ಆಡ್ತಿರೋದಕ್ಕೆ ಈ ವಾರದ ಇನ್ನೊಂದು ಕಿಚ್ಚನ ಚಪ್ಪಾಳೆ, ಮೆಚ್ಚುಗೆ ಇರಲಿʼ ಎಂದು ಹೇಳುವ ಮೂಲಕ ಕಿರಣ್‌ ಶಾಸ್ತ್ರಿಗೆ ಮತ್ತೊಮ್ಮೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CM ಅಧಿಕೃತ ನಿವಾಸ 'ಗಂಗಾ' ನವೀಕರಣಕ್ಕೆ ₹100 ಕೋಟಿ ಖರ್ಚು!: ವಿಜಯೇಂದ್ರ ಆರೋಪಕ್ಕೆ ಡಿಕೆಶಿ ಹೇಳಿದ್ದೇನು?

ದೇಶದ ಅತಿ ಉದ್ದದ ನದಿ ಸೇತುವೆ, ಆರು ಪಥದ 'ನಿತೀಶ್​​ ಸೇತು' ಉದ್ಘಾಟಿಸಿದ ಪ್ರಧಾನಿ ಮೋದಿ

ಇಟಲಿ: ಸೋನಿಯಾ ಗಾಂಧಿ ಬಾಲ್ಯದ ಮನೆ ಖರೀದಿಸಿದ ಸಿಖ್ ಉದ್ಯಮಿ; ಗುರುದ್ವಾರವಾಗಿ ಪರಿವರ್ತನೆ ಆಗಲಿದೆಯೇ ಕಾಂಗ್ರೆಸ್ ನಾಯಕಿಯ ಮನೆ?

CM ರಾಜಕೀಯ ಕಾರ್ಯದರ್ಶಿ ಹುದ್ದೆ ಬೇಡ; ಅದು ನನ್ನ ಹಿರಿತನಕ್ಕೆ ತಕ್ಕುದಲ್ಲ: ತನ್ವೀರ್ ಸೇಠ್ ಆಕ್ರೋಶ

ಬೈಕ್ ಟ್ಯಾಕ್ಸಿಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್: ಕಠಿಣ ನಿಯಮ ಜಾರಿಗೆ ಸರ್ಕಾರ ಸಿದ್ಧತೆ; ಯೆಲ್ಲೋ ಬೋರ್ಡ್, ವಿಮೆ, GPS ಕಡ್ಡಾಯ?