ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಿನಿಮಾ ಸುದ್ದಿ

ಬಿಗ್ ಬಾಸ್ ಖ್ಯಾತಿಯ ಶಿಶಿರ್ ಶಾಸ್ತ್ರಿ, ಐಶ್ವರ್ಯಾ ಸಿಂದೋಗಿ ಅದ್ದೂರಿ ನಿಶ್ಚಿತಾರ್ಥ! Video

ಕೆಲ ದಿನಗಳ ಹಿಂದಷ್ಟೇ ಸಾಮಾಜಿಕ ಮಾಧ್ಯಮ ಇನ್ ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳುವ ಮೂಲಕ ಪ್ರೀತಿಯ ವಿಚಾರವನ್ನು ಬಹಿರಂಗಪಡಿಸಿದ್ದರು.

ಶಿಶಿರ್ ಶಾಸ್ತ್ರಿ, ಐಶ್ವರ್ಯಾ
Nagaraja AB
Updated On : 23 Nov 2026, 12:42 pm

ಕನ್ನಡದ ಪ್ರಸಿದ್ಧ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿಗಳಾಗಿದ್ದ ನಟ ಶಿಶಿರ್ ಶಾಸ್ತ್ರಿ ಹಾಗೂ ನಟಿ ಐಶ್ವರ್ಯಾ ಸಿಂದೋಗಿ ಭಾನುವಾರ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಬಿಗ್ ಬಾಸ್ ನಂತರ ಪ್ರೇಮದ ಬಲೆಯಲ್ಲಿ ಬಿದ್ದಿದ್ದ ಈ ಜೋಡಿ, ಒಟ್ಟಿಗೆ ಮಾಡಿದ ರೀಲ್ಸ್ ಹಾಗೂ ಪೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದರು. ಇದನ್ನು ನೋಡಿ ಇವರಿಬ್ಬರು ಪ್ರೀತಿಸುತ್ತಿದ್ದಾರೆ ಎಂಬ ಚರ್ಚೆಗಳು ಅಭಿಮಾನಿಗಳಲ್ಲಿ ಹುಟ್ಟಿಕೊಂಡಿತ್ತು.

ಈ ನಡುವೆ ಕೆಲ ದಿನಗಳ ಹಿಂದಷ್ಟೇ ಸಾಮಾಜಿಕ ಮಾಧ್ಯಮ ಇನ್ ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳುವ ಮೂಲಕ ಪ್ರೀತಿಯ ವಿಚಾರವನ್ನು ಬಹಿರಂಗಪಡಿಸಿದ್ದರು.

Advertisement

Advertisement

ಬೆಂಗಳೂರಿನಲ್ಲಿ ನಡೆದ ನಿಶ್ಚಿತಾರ್ಥ ಸಮಾರಂಭದಲ್ಲಿ ಎರಡೂ ಕುಟುಂಬಗಳ ಸದಸ್ಯರು ಸೇರಿದಂತೆ ಕಿರುತೆರೆ ಹಾಗೂ ಚಿತ್ರರಂಗದ ಹಲವು ಕಲಾವಿದರು ಭಾಗಿಯಾಗಿ ಹೊಸ ಜೋಡಿಗೆ ಶುಭ ಹಾರೈಸಿದ್ದಾರೆ.

ನಿಶ್ಚಿತಾರ್ಥ ವೇಳೆ ಮಾತನಾಡಿದ ಶಿಶಿರ್, ನಮ್ಮ ಈ ಪಯಣ ಸ್ನೇಹದಿಂದ ಶುರುವಾಯಿತು. ಸ್ನೇಹದಿಂದ ಇಬ್ಬರ ನಡುವೆ ಗೌರವ ಬೆಳೆದು, ಅದು ಪ್ರೀತಿಯಾಗಿ ಬದಲಾಯಿತು. ಮೊದಲು ಪ್ರಪ್ರೋಸ್ ಮಾಡಿದ್ದು ಐಶ್ವರ್ಯಾ ಅವರೇ ಎಂದು ಹೇಳಿಕೊಂಡಿದ್ದಾರೆ.

Also Read

ಅನಿರುದ್ಧ್ ರವಿಚಂದರ್-ಕಾವ್ಯಾ ಮಾರನ್ ಆರತಕ್ಷತೆಗೆ ಪ್ರತ್ಯೇಕವಾಗಿ ಬಂದ ತಮಿಳುನಾಡು ಸಿಎಂ ವಿಜಯ್, ಪತ್ನಿ ಸಂಗೀತಾ; ತ್ರಿಶಾ ಕೃಷ್ಣನ್ ಗೈರು?

ಮತ್ತೊಂದೆಡೆ ಶಿಶಿರ್ ತೋರುವ ಕಾಳಜಿ ಹಾಗೂ ಒಳ್ಳೆಯ ಗುಣಗಳಿಗೆ ಮನಸೋತು ಪ್ರೀತಿ ಹುಟ್ಟಿತು ಎಂದು ಐಶ್ವರ್ಯಾ ಹೇಳಿದ್ದಾರೆ. ಇವರಿಬ್ಬರ ವಿವಾಹ 2027ರ ಫೆಬ್ರವರಿಯಲ್ಲಿ ನಡೆಯುವ ನಿರೀಕ್ಷೆಯಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement