ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಿನಿಮಾ ಸುದ್ದಿ

Bigg Boss Kannada 13: ಫಿನಾಲೆ ಹೊಸ್ತಿಲಲ್ಲಿ ಯಶಸ್ ಆಟಕ್ಕೆ ಬಿಗ್ ಶಾಕ್; ಸೀಸನ್ ಪೂರ್ತಿ ನಾಮಿನೇಟ್ ಮಾಡಿದ ಕ್ಯಾಪ್ಟನ್ ಗಗನ್..!

ಯಶಸ್ ಮನೆಯ ಅತ್ಯಂತ ಬಲಿಷ್ಠ ಸ್ಪರ್ಧಿಯಾಗಿದ್ದು, ಅವರಿಂದ ತಮ್ಮ ಮುಂದಿನ ಆಟಕ್ಕೆ ಕಠಿಣ ಪೈಪೋಟಿ ಎದುರಾಗಬಹುದು ಎಂಬ ತಂತ್ರಗಾರಿಕೆಯಿಂದ ನಾಮಿನೇಟ್ ಮಾಡಿರುವುದಾಗಿ ಗಗನ್ ಸಮರ್ಥಿಸಿಕೊಂಡಿದ್ದಾರೆ.

ಯಶಸ್
Manjula VN
Updated On : 24 Nov 2026, 11:11 am

ಬೆಂಗಳೂರು: ‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಆಟ ದಿನದಿಂದ ದಿನಕ್ಕೆ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ.

ಫಿನಾಲೆ ಹತ್ತಿರವಾಗುತ್ತಿರುವ ಬೆನ್ನಲ್ಲೇ ಮನೆಯ ಕ್ಯಾಪ್ಟನ್ ಗಗನ್ ಚಿನ್ನಪ್ಪ ಅವರು ತೆಗೆದುಕೊಂಡ ಒಂದು ನಿರ್ಧಾರ, ಪ್ರಬಲ ಸ್ಪರ್ಧಿ ಯಶಸ್ ಕೃಷ್ಣ ಅವರ ಆಟಕ್ಕೆ ದೊಡ್ಡ ಆಘಾತ ನೀಡಿದೆ.

ಈ ವಾರ ಮನೆಯಲ್ಲಿ ಇಬ್ಬರು ಕ್ಯಾಪ್ಟನ್ ಗಳಾಗಿದ್ದು, ಇಬ್ಬರಿಗೂ ಬಿಗ್ ಬಾಸ್ ಟಾಸ್ಕ್ ನೀಡಿದ್ದಾರೆ. ಮೊದಲು ಬಝರ್ ಪ್ರೆಸ್ ಮಾಡಿದವರು ಮುಂದಿನ ವಾರ ಮತ್ತೆ ಕ್ಯಾಪ್ಟೆನ್ಸಿ ಟಾಸ್ಕ್ ನಲ್ಲಿ ನೇರವಾಗಿ ಭಾಗವಹಿಸಲು ಅವಕಾಶ ಪಡೆಯಲಿದ್ದಾರೆಂದು ಹೇಳಿದ್ದರು. ಇದರಂತೆ ಬಝರ್ ಮೊದಲಿಗೆ ಪ್ರೆಸ್ ಮಾಡಿದ ಗಗನ್ ಅವರಿಗೆ, ಬಿಗ್ ಬಾಸ್ ಸೀಸನ್ ಮುಗಿಯುವವರೆಗಿನ ಮುಂದಿನ ಎಲ್ಲಾ ವಾರಗಳಿಗೂ ಒಬ್ಬ ಸ್ಪರ್ಧಿಯನ್ನು ನೇರವಾಗಿ ನಾಮಿನೇಟ್ ಮಾಡುವ ಅವಕಾಶ ನೀಡಿದ್ದರು. ಈ ವೇಳೆ ಗಗನ್ ಅವರು ಯಶಸ್ ಅವರ ಹೆಸರನ್ನು ಸೂಚಿಸಿದ್ದಾರೆ.

Advertisement

Advertisement

ಗಗನ್ ಕೊಟ್ಟ ಕಾರಣವೇನು?

ಯಶಸ್ ಮನೆಯ ಅತ್ಯಂತ ಬಲಿಷ್ಠ ಸ್ಪರ್ಧಿಯಾಗಿದ್ದು, ಅವರಿಂದ ತಮ್ಮ ಮುಂದಿನ ಆಟಕ್ಕೆ ಕಠಿಣ ಪೈಪೋಟಿ ಎದುರಾಗಬಹುದು ಎಂಬ ತಂತ್ರಗಾರಿಕೆಯಿಂದ ನಾಮಿನೇಟ್ ಮಾಡಿರುವುದಾಗಿ ಗಗನ್ ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ, ಈ ಹಿಂದೆ ಯಶಸ್ ತಮ್ಮ ಬಗ್ಗೆ ಆಡಿದ್ದ ಕೆಲವು ಮಾತುಗಳೂ ಈ ನಿರ್ಧಾರಕ್ಕೆ ಕಾರಣ ಎಂದು ಅವರು ತಿಳಿಸಿದ್ದಾರೆ.

Also Read

ಬಿಗ್ ಬಾಸ್ ಖ್ಯಾತಿಯ ಶಿಶಿರ್ ಶಾಸ್ತ್ರಿ, ಐಶ್ವರ್ಯಾ ಸಿಂದೋಗಿ ಅದ್ದೂರಿ ನಿಶ್ಚಿತಾರ್ಥ! Video

ಯಶಸ್ ಮತ್ತು ಸೌಂದರ್ಯಾ ಅಸಮಾಧಾನ

ಈ ನಡುವೆ ಗಗನ್ ಅವರ ಈ ನಿರ್ಧಾರ ಕೇಳಿ ಯಶಸ್ ತೀವ್ರ ಆಘಾತಕ್ಕೊಳಗಾದರು. "ನಾನು ಪ್ರಬಲ ಎದುರಾಳಿ ಎಂಬ ಕಾರಣಕ್ಕೆ ನಾಮಿನೇಟ್ ಮಾಡುವುದಾದರೆ ತಾಂಡವ್ ರಾಮ್ ಅವರನ್ನೂ ಮಾಡಬಹುದಿತ್ತಲ್ಲವೇ?" ಎಂದು ಯಶಸ್ ನೇರವಾಗಿಯೇ ಪ್ರಶ್ನಿಸಿದ್ದಾರೆ. ಇತ್ತ ಯಶಸ್ ಅವರ ಆಪ್ತ ಗೆಳತಿ ಸೌಂದರ್ಯಾ ಶೆಟ್ಟಿ ಕೂಡ ಈ ಬೆಳವಣಿಗೆಯಿಂದ ತೀವ್ರ ಬೇಸರಗೊಂಡಿದ್ದಾರೆ.

ಈ ಅನಿರೀಕ್ಷಿತ ಬೆಳವಣಿಗೆಯಿಂದಾಗಿ ಇನ್ನುಳಿದ ವಾರಗಳಲ್ಲಿ ಯಶಸ್ ನಾಮಿನೇಷನ್‌ನಿಂದ ಬಚಾವಾಗುವ ಅವಕಾಶ ಕಳೆದುಕೊಂಡಿದ್ದು, ಮನೆಯೊಳಗೆ ಉಳಿಯಲು ವೀಕ್ಷಕರ ಮತಗಳನ್ನೇ ಸಂಪೂರ್ಣವಾಗಿ ಅವಲಂಬಿಸಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement