ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಿನಿಮಾ ಸುದ್ದಿ

ಕೊನೆಯ ಕ್ಷಣದಲ್ಲಿ ಸಿಕ್ಕ ಅವಕಾಶ: ಮಿಂಚಿನ ವೇಗದಲ್ಲಿ ಟಾಸ್ಕ್‌ ಗೆದ್ದು ತೋರಿಸಿದ ಧನುಷ್; ಜೋಕರ್‌ ಕಾರ್ಡ್‌ ಗೆದ್ದು ಆಟದ ದಿಕ್ಕನ್ನೇ ಬದಲಿಸಿದ ಟಾಸ್ಕ್‌ ಮಾಸ್ಟರ್‌..!

ಮನೆಯ ಸದಸ್ಯರಲ್ಲಿ ಒಮ್ಮತ ಮೂಡದ ಕಾರಣ, ಯಶಸ್ ಅವರು ಸೌಂದರ್ಯ ಶೆಟ್ಟಿ, ಆಸಿಯಾ ಫಿರ್ದೋಸ್, ಜಗ್ಗ ಮಮ್ಮಿ ಮತ್ತು ಕಿರಣ್ ಶಾಸ್ತ್ರಿ ಅವರನ್ನು ಆಯ್ಕೆ ಮಾಡಿದ್ದರು. ಆದರೆ, ಟಾಸ್ಕ್'ಗೆ ಆಯ್ಕೆ ಮಾಡುವಂತೆ ಧನುಷ್ ಕೇಳಿಕೊಂಡಿದ್ದರೂ ಆಯ್ಕೆ ಮಾಡಿರಲಿಲ್ಲ.

ಧನುಷ್ ಮಂಜುನಾಥ್
Manjula VN
Updated On : 24 Nov 2026, 11:25 am

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 13ರ ಮನೆಯಲ್ಲಿ ನಡೆದ ಜೋಕರ್ ಕಾರ್ಡ್ ಟಾಸ್ಕ್‌ನಲ್ಲಿ ಬದಲಿ ಸ್ಪರ್ಧಿಯಾಗಿ ಕಣಕ್ಕಿಳಿದ ಧನುಷ್ ಮಂಜುನಾಥ್, ಮಿಂಚಿನ ವೇಗದಲ್ಲಿ ಆಟವಾಡಿ ಜೋಕರ್ ಕಾರ್ಡ್ ಗೆಲ್ಲುವ ಮೂಲಕ ಮನೆಯ ಸದಸ್ಯರಿಗೆ ಶಾಕ್ ನೀಡಿದ್ದಾರೆ.

ಸೀಸನ್ ಪೂರ್ತಿ ನಾಮಿನೇಷನ್‌ನಲ್ಲಿರುವ ಕಾರಣ ಯಶಸ್ ಕೃಷ್ಣ ಅವರಿಗೆ ಈ ಟಾಸ್ಕ್ ಆಡುವ ಅವಕಾಶವಿರಲಿಲ್ಲ. ಹೀಗಾಗಿ, ಈ ಟಾಸ್ಕ್‌ನಲ್ಲಿ ಯಾರು ಭಾಗವಹಿಸಬೇಕು ಎಂಬುದನ್ನು ನಿರ್ಧರಿಸುವ ಜವಾಬ್ದಾರಿಯನ್ನು ಬಿಗ್ ಬಾಸ್ ಅವರಿಗೆ ನೀಡಿದ್ದರು.

ಮನೆಯ ಸದಸ್ಯರಲ್ಲಿ ಒಮ್ಮತ ಮೂಡದ ಕಾರಣ, ಯಶಸ್ ಅವರು ಸೌಂದರ್ಯ ಶೆಟ್ಟಿ, ಆಸಿಯಾ ಫಿರ್ದೋಸ್, ಜಗ್ಗ ಮಮ್ಮಿ ಮತ್ತು ಕಿರಣ್ ಶಾಸ್ತ್ರಿ ಅವರನ್ನು ಆಯ್ಕೆ ಮಾಡಿದ್ದರು. ಆದರೆ, ಟಾಸ್ಕ್'ಗೆ ಆಯ್ಕೆ ಮಾಡುವಂತೆ ಧನುಷ್ ಕೇಳಿಕೊಂಡಿದ್ದರೂ ಆಯ್ಕೆ ಮಾಡಿರಲಿಲ್ಲ. ಇದರಿಂದ ಧನುಷ್ ಬೇಸರಗೊಂಡಿದ್ದರು.

Advertisement

Advertisement

ಈ ನಡುವೆ ಟಾಸ್ಕ್ ಆರಂಭವಾದಾಗ ಕಿರಣ್ ಶಾಸ್ತ್ರಿ ಅವರು ಆಟದಲ್ಲಿ ನಿರೀಕ್ಷಿತ ಆಸಕ್ತಿ ತೋರದೆ ನಿರ್ಲಕ್ಷ್ಯ ವಹಿಸಿದ್ದರು. ಇದನ್ನು ಗಮನಿಸಿದ ಬಿಗ್ ಬಾಸ್, ತಕ್ಷಣವೇ ಕಿರಣ್ ಅವರನ್ನು ಆಟದಿಂದ ಹೊರಗಿಟ್ಟು, ಅವರ ಬದಲಿಗೆ ಬೇರೊಬ್ಬ ಸ್ಪರ್ಧಿಯನ್ನು ಕಳುಹಿಸುವಂತೆ ಕ್ಯಾಪ್ಟನ್'ಗೆ ಸೂಚನೆ ನೀಡಿದರು.

Also Read

Bigg Boss Kannada 13: ಫಿನಾಲೆ ಹೊಸ್ತಿಲಲ್ಲಿ ಯಶಸ್ ಆಟಕ್ಕೆ ಬಿಗ್ ಶಾಕ್; ಸೀಸನ್ ಪೂರ್ತಿ ನಾಮಿನೇಟ್ ಮಾಡಿದ ಕ್ಯಾಪ್ಟನ್ ಗಗನ್..!

ಈ ವೇಳೆ ಮನೆಯ ಕ್ಯಾಪ್ಟನ್ ಗಾನವಿ ಗೌಡ ಮತ್ತು ಗಗನ್ ಚಿನ್ನಪ್ಪ ಚರ್ಚಿಸಿ ಧನುಷ್ ಅವರನ್ನು ಬದಲಿ ಆಟಗಾರನಾಗಿ ಆಯ್ಕೆ ಮಾಡಿದರು.

ಕೊನೆಯ ಕ್ಷಣದಲ್ಲಿ ಸಿಕ್ಕ ಅನಿರೀಕ್ಷಿತ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡ ಧನುಷ್, ಆಟಕ್ಕಿಳಿದ ಕ್ಷಣದಿಂದಲೇ ಮಿಂಚಿನ ವೇಗದಲ್ಲಿ ಕಾರ್ಯನಿರ್ವಹಿಸಿದರು. ಉಳಿದ ಸ್ಪರ್ಧಿಗಳು ಆಟದ ವೇಗಕ್ಕೆ ಹೊಂದಿಕೊಳ್ಳುವಷ್ಟರಲ್ಲಿ ತಮ್ಮ ಟಾಸ್ಕ್ ಪೂರ್ಣಗೊಳಿಸಿದ ಧನುಷ್, ಅಂತಿಮವಾಗಿ ಜೋಕರ್ ಕಾರ್ಡ್ ತಮ್ಮದಾಗಿಸಿಕೊಂಡರು.

ಅವಕಾಶ ಸಿಕ್ಕಾಗಲೆಲ್ಲಾ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿರುವ ಧನುಷ್, ಈ ಗೆಲುವಿನ ಮೂಲಕ ಮತ್ತೊಮ್ಮೆ ಬಿಗ್ ಬಾಸ್ ಮನೆಯ 'ಟಾಸ್ಕ್ ಮಾಸ್ಟರ್' ಎನಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಧನುಷ್ ಆಟಕ್ಕೆ ವೀಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement