ಪ್ರೇಮದ ಊರಲಿ Online Desk
ಸಿನಿಮಾ ಸುದ್ದಿ

ಪ್ರೇಮದ ಊರಲಿ ಕಲೆಕ್ಷನ್ ಜೋರು; ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿ, 10 ಕೋಟಿಯತ್ತ ದಾಪುಗಾಲು

ಕನ್ನಡ ಚಿತ್ರರಂಗದಲ್ಲಿ ಯಾವುದೇ ದೊಡ್ಡ ಆರ್ಭಟವಿಲ್ಲದೆ ಬಿಡುಗಡೆಯಾಗಿ, ಪ್ರೇಕ್ಷಕರ ಅದ್ಭುತ ಮೌತ್ ಪಬ್ಲಿಸಿಟಿಯಿಂದ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿರುವ 'ಪ್ರೇಮದ ಊರಲಿ' ಸಿನಿಮಾ 8ನೇ ದಿನದ ಕಲೆಕ್ಷನ್‌ನಲ್ಲಿ ಭಾರಿ ಜಿಗಿತ ಕಂಡಿದೆ. ಆ ಕುರಿತ ವರದಿ ಇಲ್ಲಿದೆ:

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಯಾವುದೇ ದೊಡ್ಡ ಆರ್ಭಟವಿಲ್ಲದೆ ಬಿಡುಗಡೆಯಾಗಿ, ಪ್ರೇಕ್ಷಕರ ಅದ್ಭುತ ಮೌತ್ ಪಬ್ಲಿಸಿಟಿಯಿಂದ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿರುವ 'ಪ್ರೇಮದ ಊರಲಿ' ಸಿನಿಮಾ 8ನೇ ದಿನದ ಕಲೆಕ್ಷನ್‌ನಲ್ಲಿ ಭಾರಿ ಜಿಗಿತ ಕಂಡಿದೆ. ಸೆಪ್ಟೆಂಬರ್ 25ರಂದು ಕೇವಲ 45 ರಿಂದ 60 ಪ್ರದರ್ಶನಗಳೊಂದಿಗೆ ಆರಂಭವಾದ ಈ ಸಿನಿಮಾ, ಪ್ರೇಕ್ಷಕರ ಭಾರಿ ಬೇಡಿಕೆಯಿಂದಾಗಿ 2ನೇ ವಾರದ ವೇಳೆಗೆ ಬರೋಬ್ಬರಿ 700ಕ್ಕೂ ಅಧಿಕ ಶೋಗಳನ್ನು ಪಡೆದುಕೊಂಡಿದೆ. ಆ ಕುರಿತ ವರದಿ ಇಲ್ಲಿದೆ:

8ನೇ ದಿನದ ಕಲೆಕ್ಷನ್ ಧಮಾಕಾ

ಕೇವಲ ₹2 ರಿಂದ ₹2.50 ಕೋಟಿ ಬಜೆಟ್‌ನಲ್ಲಿ ಯಾವುದೇ ದೊಡ್ಡ ಅಬ್ಬರವಿಲ್ಲದೆ ನಿರ್ಮಾಣವಾದ ಪ್ರೇಮದ ಊರಲಿ ಸಿನಿಮಾ, ಸೆಪ್ಟೆಂಬರ್ 25ರಂದು ಚಿತ್ರಮಂದಿರಗಳಿಗೆ ಲಗ್ಗೆಯಿಟ್ಟ ಚಿತ್ರಕ್ಕೆ ಆರಂಭದಲ್ಲಿ ದೊಡ್ಡ ಮಟ್ಟದ ಓಪನಿಂಗ್ ಸಿಕ್ಕಿರಲಿಲ್ಲ. ಕೇವಲ 13 ಲಕ್ಷ ರೂಪಾಯಿಯೊಂದಿಗೆ ತನ್ನ ಖಾತೆ ತೆರೆದಿತ್ತು, ಆದರೆ, ಚಿತ್ರಕ್ಕೆ ದೊಡ್ಡ ಬಲ ನೀಡಿದ್ದು ಪ್ರೇಕ್ಷಕರ ಮೆಚ್ಚುಗೆಯ ಮಾತುಗಳು. ಜನರಿಂದ ಜನರಿಗೆ ಹರಡಿದ ಸಕಾರಾತ್ಮಕ ವಿಮರ್ಶೆಗಳಿಂದಾಗಿ ವಾರದ ಕೆಲಸದ ದಿನಗಳಲ್ಲೂ ಚಿತ್ರದ ಗಳಿಕೆ ನಿರಂತರವಾಗಿ ಏರಿಕೆಯಾಗುತ್ತಾ ಹೋಯಿತು. ಸೆಪ್ಟೆಂಬರ್ 29 ರ ಮಂಗಳವಾರ 1.9ಕೋಟಿ ರೂಪಾಯಿ ಗಳಿಸಿದರೆ, ಬುಧವಾರ 1.28 ಕೋಟಿ ರೂಪಾಯಿ ಹಾಗೂ ಗುರುವಾರ 1.86 ಕೋಟಿ ರೂಪಾಯಿ ಸಂಗ್ರಹಿಸಿ ಅಚ್ಚರಿ ಮೂಡಿಸಿತು. ಆದರೆ, ಬಾಕ್ಸ್ ಆಫೀಸ್‌ನಲ್ಲಿ ಧಮಾಕಾ ಸೃಷ್ಠಿಸಿದ್ದು, ಅಕ್ಟೋಬರ್ 2ರ ಗಾಂಧಿ ಜಯಂತಿ ರಜಾದಿನದಂದು ಸಿನಿಮಾ ಬರೋಬ್ಬರಿ ₹3.16 ಕೋಟಿಗಿಂತಲೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿದೆ. ಅದರಂತೆ, ಒಟ್ಟು 8 ದಿನಗಳ ಥಿಯೇಟರ್ ರನ್ ಮುಕ್ತಾಯದ ವೇಳೆಗೆ ಈ ಸಿನಿಮಾ ವಿಶ್ವಾದ್ಯಂತ ಒಟ್ಟು ₹9.82 ಕೋಟಿ ಗ್ರಾಸ್ ಕಲೆಕ್ಷನ್ (₹8.59 ಕೋಟಿ ನೆಟ್) ಬಾಚಿಕೊಳ್ಳುವ ಮೂಲಕ ₹10 ಕೋಟಿಯ ಬೃಹತ್ ಮೈಲಿಗಲ್ಲಿನ ಸಮೀಪದಲ್ಲಿದೆ.

ಹಾಗಾದ್ರೆ, ಸಿನಿಮಾ ಯಶಸ್ಸಿಗೆ ಕಾರಣವೇನು?

  • ಶೋಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳ: ಮೊದಲ ದಿನ ರಾಜ್ಯಾದ್ಯಂತ ಕೇವಲ 45 ರಿಂದ 60 ಶೋಗಳೊಂದಿಗೆ ಆರಂಭವಾಗಿದ್ದ ಈ ಚಿತ್ರ, ಪ್ರೇಕ್ಷಕರ ಅದ್ಭುತ ಪ್ರತಿಕ್ರಿಯೆಯಿಂದಾಗಿ ಪ್ರಸ್ತುತ ದಿನಕ್ಕೆ 486 ರಿಂದ 700 ಕ್ಕೂ ಹೆಚ್ಚು ಶೋಗಳಿಗೆ ಜಿಗಿತ ಕಂಡಿದೆ.

  • ಮೌತ್ ಪಬ್ಲಿಸಿಟಿ: ಹಳ್ಳಿಯ ಸೊಗಡಿನ ಸರಳ ಕೌಟುಂಬಿಕ ಕಥೆ, ಮುಗ್ಧ ಪ್ರೀತಿ ಮತ್ತು ಭಾವನಾತ್ಮಕ ನಿರೂಪಣೆಗೆ ಫ್ಯಾಮಿಲಿ ಆಡಿಯನ್ಸ್ ಫಿದಾ ಆಗಿದ್ದಾರೆ. ಚಿತ್ರವನ್ನು ನೋಡಿದವರು ನೀಡಿದ ಅತ್ಯುತ್ತಮ ವಿಮರ್ಶೆಗಳೇ ಚಿತ್ರಮಂದಿರಗಳತ್ತ ಜನಸಾಗರ ಹರಿದುಬರಲು ಕಾರಣವಾಗಿದೆ.

  • ಸತತ ರಜೆಗಳ ಲಾಭ: ಗಾಂಧಿ ಜಯಂತಿಯ ಸರ್ಕಾರಿ ರಜೆ ಹಾಗೂ ವೀಕೆಂಡ್ (ಶನಿವಾರ, ಭಾನುವಾರ) ಒಟ್ಟಿಗೆ ಬಂದಿರುವುದು ಚಿತ್ರದ ಕಲೆಕ್ಷನ್ ಗತಿಯನ್ನು ಮತ್ತಷ್ಟು ಹೆಚ್ಚಿಸಿದೆ.

ಒಟ್ಟಾರೆಯಾಗಿ, ಚಂದನವನದಲ್ಲಿ ಚಿತ್ರಮಂದಿರಗಳಿಗೆ ಪ್ರೇಕ್ಷಕರು ಬರುತ್ತಿಲ್ಲ ಎಂಬ ಕೊರಗಿನ ನಡುವೆ, ಶ್ರೀರಾಮ್ ಹಾಗೂ ತಪಸ್ವಿನಿ ಪೂಣಚ್ಚ ನಟನೆಯ ಈ ಚಿತ್ರವು ಸಣ್ಣ ಬಜೆಟ್ ಸಿನಿಮಾಗಳ ಪವರ್ ಏನೆಂಬುದನ್ನು ಬಾಕ್ಸ್ ಆಫೀಸ್‌ನಲ್ಲಿ ಸಾಬೀತುಪಡಿಸುತ್ತಿದೆ. ಅದರಂತೆ, ಈ ಸಣ್ಣ ಬಜೆಟ್ ಸಿನಿಮಾದ ಯಶಸ್ಸು ಸ್ಯಾಂಡಲ್‌ವುಡ್‌ಗೆ ಹೊಸ ಭರವಸೆ ನೀಡಿದ್ದು, ಚಿತ್ರವು ಇದೀಗ ತೆಲುಗಿಗೂ ಡಬ್ ಆಗಿ ಬಿಡುಗಡೆಯಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026: ಇತಿಹಾಸ ಬರೆದ ಮೈಸೂರಿನ ಪ್ರಣವಿ ಅರಸ್; ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳಾ ಗಾಲ್ಫರ್

'ಅಭಿವೃದ್ಧಿಶೀಲ ರಾಷ್ಟ್ರಗಳ ಕೈಕಟ್ಟಬೇಡಿ, ಡಂಪಿಂಗ್ ವಿರುದ್ಧ ಸಾಕ್ಷ್ಯಾಧಾರಿತ ಕ್ರಮ ಕೈಗೊಳ್ಳಿ': G20 ಸಭೆಯಲ್ಲಿ ಭಾರತ ಕೆಂಡ

'ಅವನು ಆಡಿದ್ರೂ, ಆಡದಿದ್ದರೂ ಏನೂ ವ್ಯತ್ಯಾಸವಾಗಲ್ಲ’: ಭಾರತದ ಯುವ ಆಟಗಾರನ ಕುರಿತು ಕಡ್ಡಿ ಮುರಿದಂತೆ ಹೇಳಿದ Ajinkya Rahane!

Flydubai ಕಾಕ್‌ಪಿಟ್ ದಾಳಿ: ಸಹ ಪೈಲಟ್ ಗುರುತು ಬಹಿರಂಗ

FlyDubai ಕೋ ಪೈಲಟ್ ಹಾರಾಟಕ್ಕೆ ಒಮಾನ್ ನಲ್ಲಿ ನಿಷೇಧ: ಪತನಕ್ಕೆ ಯತ್ನಿಸಿದ್ದ ಆತ ಉಗ್ರವಾದ ಹಿನ್ನಲೆಯವನೇ?