ಕಿಚ್ಚಾ ಸುದೀಪ್ 
ಸಿನಿಮಾ ಸುದ್ದಿ

'ತಂದಿಟ್ಟ ಗಿಡ ಮನೆಗೇ ಹಾನಿ ಮಾಡಿದ್ರೆ..'; 'ನೋ ಕ್ಲಾಸ್', BiggBoss ಇತಿಹಾಸದ ಅತಿದೊಡ್ಡ ನಿರ್ಧಾರದ ಸುಳಿವು ನೀಡಿದ ಕಿಚ್ಚಾ ಸುದೀಪ್

ಬಿಗ್‌ಬಾಸ್ ಕನ್ನಡ ಸೀಸನ್ 13ರ ವೀಕೆಂಡ್‌ ಸಂಚಿಕೆಯಲ್ಲಿ ಸ್ಪರ್ಧಿಗಳ ನಿಯಮ ಉಲ್ಲಂಘನೆ ಮತ್ತು ಅವಾಚ್ಯ ಪದಗಳ ಬಳಕೆಯ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಲೇ ಈ ಬಗ್ಗೆ ಗರಂ ಆಗಿರುವ ನಟ ಕಿಚ್ಚಾ ಸುದೀಪ್ ಗಂಭೀರ ನಿರ್ಧಾರ..

ಬೆಂಗಳೂರು: ಬಿಗ್‌ಬಾಸ್ ಕನ್ನಡ ಸೀಸನ್ 13 ವಿವಾದ ಮತ್ತು ಸ್ಪರ್ಧಿಗಳ ನಡುವಿನ ಜಗಳದಿಂದಲೇ ಸಾಕಷ್ಟು ಸುದ್ದಿಗೆ ಗ್ರಾಸವಾಗುತ್ತಿದ್ದು, ಈ ನಡುವೆ ಶೋನ ನಿರೂಪಕ ಕಿಚ್ಚಾ ಸುದೀಪ್ BiggBoss ಇತಿಹಾಸದ ಅತಿದೊಡ್ಡ ನಿರ್ಧಾರದ ಸುಳಿವು ನೀಡಿದ್ದಾರೆ.

ಹೌದು.. ಬಿಗ್‌ಬಾಸ್ ಕನ್ನಡ ಸೀಸನ್ 13ರ ವೀಕೆಂಡ್‌ ಸಂಚಿಕೆಯಲ್ಲಿ ಸ್ಪರ್ಧಿಗಳ ನಿಯಮ ಉಲ್ಲಂಘನೆ ಮತ್ತು ಅವಾಚ್ಯ ಪದಗಳ ಬಳಕೆಯ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಲೇ ಈ ಬಗ್ಗೆ ಗರಂ ಆಗಿರುವ ನಟ ಕಿಚ್ಚಾ ಸುದೀಪ್ ಗಂಭೀರ ನಿರ್ಧಾರ ತೆಗೆದುಕೊಳ್ಳು ಸುಳಿವು ನೀಡಿದ್ದಾರೆ.

ಪ್ರಸ್ತುತ ಬಿಡುಗಡೆಯಾಗಿರುವ ವಾರದ ಕಥೆಯ ಪ್ರೋಮೋದಲ್ಲಿ ಸ್ಪರ್ಧಿಗಳ ವಿರುದ್ಧ ಕಿಚ್ಚಾ ಸುದೀಪ್ ಗರಂ ಆಗಿದ್ದು, ಸ್ಪರ್ಧಿಗಳಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಮಾತ್ರವಲ್ಲದೇ ಗಿಡ ಮತ್ತು ಮನೆಯ ಉದಾಹರಣೆ ನೀಡಿರುವ ಅವರು, ಚರ್ಚೆಗಿಂತ ಕಠಿಣ ನಿರ್ಧಾರದ ಸುಳಿವು ನೀಡಿದ್ದಾರೆ.

ನಿರ್ಧಾರ ತೆಗೆದುಕೊಳ್ಳುವ ಸಮಯ

ಸ್ಪರ್ಧಿಗಳು ಆಟವಾಡುವ ಸಂದರ್ಭದಲ್ಲಿ ನಿಯಮಗಳನ್ನು ಉಲ್ಲಂಘನೆ ಮಾಡುವ ಮೂಲಕ ಬಿಗ್‌ಬಾಸ್ ಮನೆಗೆ ಅವಮಾನಿಸಿದ್ದಾರೆ. ಸದ್ಯ ಈ ವಿಷಯವನ್ನು ಸುದೀಪ್ ಗಂಭೀರವಾಗಿ ಪರಿಗಣಿಸಿದಂತೆ ಕಾಣಿಸುತ್ತಿದೆ. ಹಾಗಾಗಿ ಸುದೀಪ್, ಇದು ನಿರ್ಧಾರ ತೆಗೆದುಕೊಳ್ಳುವ ಸಮಯ ಎಂದಿದ್ದಾರೆ.

ಸುದೀಪ್ ಹೇಳಿದ್ದೇನು?

ನಾವು ವಾಸ ಮಾಡುವ ಚೆನ್ನಾಗಿರಲಿ ಎಂದು ಒಂದು ಗಿಡವನ್ನು ತಂದಿಡುತ್ತವೆ. ಆದ್ರೆ ಈ ಗಿಡ ಅಡ್ಡಾದಿಡ್ಡಿಯಾಗಿ ಬೆಳೆದು ಗೋಡೆಯನ್ನೇ ಒಡೆಯುವ ಹಂತಕ್ಕೆ ಹೋದ್ರೆ? ಈಗ ನಮ್ಮ ಮುಂದೆ ಬರುವ ಪ್ರಶ್ನೆ ಗಿಡನಾ ಅಥವಾ ಮನೆನಾ ಎಂದು ಬರುತ್ತದೆ ಎಂದು ಸುದೀಪ್ ಹೇಳಿದ್ದಾರೆ. ಈ ವಾರ ಚರ್ಚೆಗಿಂತ ನಿರ್ಧಾರ ಎಂದಿದ್ದಾರೆ.

ಸ್ಪರ್ಧಿಗಳ ನಡುವೆ ಜಗಳ, ವಾಗ್ವಾದ, ಅವಾಚ್ಯ ನಿಂದನೆ

ಮನೆಯಲ್ಲಿನ ಜಗಳ, ಅವಾಚ್ಯ ಪದಗಳ ಬಳಕೆಯಿಂದ ಬಿಗ್‌ಬಾಸ್ ಮನೆ ಸಂಪೂರ್ಣವಾಗಿ ಪ್ರಕ್ಷುಬ್ದವಾಗಿದೆ. ಮನೆಯಲ್ಲಿ ಇಷ್ಟೆಲ್ಲಾ ಜಗಳ ನಡೆದ್ರೂ ಸ್ಪರ್ಧಿಗಳು ತಮ್ಮನ್ನು ತಾವು ಸಮರ್ಥಿಸಿಕೊಳ್ಳುತ್ತಿದ್ದಾರೆ. ಸಹ ಸ್ಪರ್ಧಿಗಳು ಘಟನೆ ಬಗ್ಗೆ ವಿವರಿಸಿದರೂ ಅದನ್ನು ಒಪ್ಪಿಕೊಳ್ಳುತ್ತಿಲ್ಲ.

ಸ್ಪರ್ಧಿಗಳಿಂದ ಮನೆಗೆ ಧಕ್ಕೆಯುಂಟಾಗಿದ್ದರಿಂದ ಬಿಗ್‌ಬಾಸ್ ಕೋಪಗೊಂಡಿದ್ದು, ನಿಯಮಗಳ ಉಲ್ಲಂಘನೆ ಮಾಡಿರೋ ಸ್ಪರ್ಧಿಗಳು ಔಟ್ ಆಗ್ತಾರಾ? ಅಥವಾ ಯಾವುದಾದ್ರೂ ಕಠಿಣ ಶಿಕ್ಷೆ ನೀಡ್ತಾರಾ ಎಂಬುದು ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ.

ಅಂತೆಯೇ ಸುದೀಪ್ ಮುಂದೆ ತಮ್ಮ ಅಭಿಪ್ರಾಯಗಳನ್ನು ಹೇಗೆ ವ್ಯಕ್ತಪಡಿಸುತ್ತಾರೆ ಎಂಬುದನ್ನು ನೋಡಬೇಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌‌ವೇಯಲ್ಲಿ ಅಪಘಾತಕ್ಕೆ ಬಿಗ್ ಟ್ವಿಸ್ಟ್: ಸ್ನೇಹಿತನಿಂದಲೇ ಭೂಮಿಕಾ ಕೊಲೆ?

CJP ಪ್ರತಿಭಟನೆ: ದೆಹಲಿ ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ!

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video