ಕ್ಯಾಪ್ಟೆನ್ಸಿ ಟಾಸ್ಕ್ ನಲ್ಲಿ ಸ್ಪರ್ಧಿಸುತ್ತಿರುವ ಸೌಂದರ್ಯ ಹಾಗೂ ಆಸಿಯಾ 
ಸಿನಿಮಾ ಸುದ್ದಿ

Bigg Boss Kannada 13: ಸೌಂದರ್ಯ-ಆಸಿಯಾ ನಡುವೆ ತೀವ್ರ ಪೈಪೋಟಿ, ಈ ವಾರ ಕ್ಯಾಪ್ಟನ್ ಪಟ್ಟ ಯಾರಿಗೆ..?

ಬಿಗ್‌ಬಾಸ್ ಮನೆಯಲ್ಲಿ ಈ ವಾರದ ಕ್ಯಾಪ್ಟನ್ ಪಟ್ಟಕ್ಕಾಗಿ ಮಹಿಳಾ ಸ್ಪರ್ಧಿಗಳಾದ ಆಸಿಯಾ ಫಿರ್ದೋಸ್ ಮತ್ತು ಸೌಂದರ್ಯ ಶೆಟ್ಟಿ ನಡುವೆ ಪೈಪೋಟಿ ಏರ್ಪಟ್ಟಿದೆ.

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 13ರ ಮನೆಯಲ್ಲಿ ಈ ವಾರದ ಕ್ಯಾಪ್ಟನ್ಸಿ ರೇಸ್ ತೀವ್ರ ಕುತೂಹಲ ಮೂಡಿಸಿದೆ.

ಬಿಗ್‌ಬಾಸ್ ಮನೆಯಲ್ಲಿ ಈ ವಾರದ ಕ್ಯಾಪ್ಟನ್ ಪಟ್ಟಕ್ಕಾಗಿ ಮಹಿಳಾ ಸ್ಪರ್ಧಿಗಳಾದ ಆಸಿಯಾ ಫಿರ್ದೋಸ್ ಮತ್ತು ಸೌಂದರ್ಯ ಶೆಟ್ಟಿ ನಡುವೆ ಪೈಪೋಟಿ ಏರ್ಪಟ್ಟಿದೆ.

ಕ್ಯಾಪ್ಟನ್ ಪಟ್ಟಕ್ಕಾಗಿ ಬಿಗ್ ಬಾಸ್ ಇಬ್ಬರಿಗೂ 36 ಬಿಲ್ಲೆಗಳ (Blocks) ಹೈ-ವೋಲ್ಟೇಜ್ ಟಾಸ್ಕ್ ನೀಡಿದ್ದು, ಇಬ್ಬರು ಮಹಿಳಾ ಸ್ಪರ್ಧಿಗಳು ಪರಸ್ಪರ ಗೆಲುವಿಗಾಗಿ ತೀವ್ರ ಜಿದ್ದಾಜಿದ್ದಿಗೆ ಬಿದ್ದಿದ್ದಾರೆ.

ಸಾಮರ್ಥ್ಯ ಮತ್ತು ಬುದ್ಧಿವಂತಿಕೆಯ ಆಟಕ್ಕೆ ಸಾಕ್ಷಿಯಾಗಲಿರುವ ಈ ಸ್ಪರ್ಧೆಯಲ್ಲಿ ಇಬ್ಬರಲ್ಲಿ ಯಾರು ಗೆಲುವಿನ ನಗೆ ಬೀರುತ್ತಾರೆ ಎಂಬ ಕುತೂಹಲ ವೀಕ್ಷಕರಲ್ಲಿ ಹೆಚ್ಚಾಗಿದೆ.

ಈ ವಾರ ಕ್ಯಾಪ್ಟನ್ ಆಗುವ ಸ್ಪರ್ಧಿಗೆ ನಾಮಿನೇಷನ್‌ನಿಂದ ವಿನಾಯಿತಿ ಸಿಗಲಿರುವುದರಿಂದ ಈ ಸ್ಪರ್ಧೆ ಮತ್ತಷ್ಟು ಮಹತ್ವ ಪಡೆದುಕೊಂಡಿದೆ. ಕ್ಯಾಪ್ಟನ್ ಪಟ್ಟದ ಜೊತೆಗೆ ನಾಮಿನೇಷನ್‌ನಿಂದ ಪಾರಾಗುವ ಅವಕಾಶವೂ ಇಬ್ಬರ ಮುಂದಿದೆ.

ಇತ್ತೀಚೆಗೆ ನಡೆದ ‘ಲೂಟಿಕೋರರು ಮತ್ತು ರಕ್ಷಕರು’ ಟಾಸ್ಕ್‌ನಲ್ಲಿ ಲೂಟಿಕೋರರ ತಂಡದಲ್ಲಿದ್ದ ಆಸಿಯಾ, ಸೌಂದರ್ಯ, ತಾಂಡವ್ ಮತ್ತು ಲಕ್ಷ್ಮಿ ಉತ್ತಮ ಪ್ರದರ್ಶನ ನೀಡಿದ್ದರು. ಈ ಟಾಸ್ಕ್‌ನಲ್ಲಿ ಗೆಲುವು ಸಾಧಿಸಿದ 6 ಮಂದಿ ಲೂಟಿಕೋರರ ತಂಡಕ್ಕೆ ತಲಾ ಇಬ್ಬರಂತೆ ವಿಂಗಡಿಸಿ ಬಿಗ್ ಬಾಸ್ ಪಜಲ್ ಗೇಮ್ ನೀಡಿದ್ದರು. ಈ ಟಾಸ್ಕ್ ನಲ್ಲಿ ಆಸಿಯಾ ಹಾಗೂ ಸೌಂದರ್ಯ ಜೋಡಿ ಗೆಲುವು ಸಾಧಿಸಿ, ಕ್ಯಾಪ್ಟೆನ್ಸಿ ಸ್ಪರ್ಧೆಗೆ ಆಯ್ಕೆಯಾಗಿದ್ದರು.

ಇದೀಗ ಕ್ಯಾಪ್ಟೆನ್ಸಿ ಸ್ಪರ್ಧೆಗೆ ಬಿಗ್ ಬಾಸ್ ಮತ್ತೊಂದು ಟಾಸ್ಕ್ ನೀಡಿದ್ದಾರೆ. ಕ್ಯಾಪ್ಟನ್ ಪಟ್ಟಕ್ಕಾಗಿ ಇಬ್ಬರ ನಡುವೆ ನೇರ ಹಣಾಹಣಿ ನಡೆಯಲಿದ್ದು, ಈ ಸ್ಪರ್ಧೆಯಲ್ಲಿ ಯಾರು ಮೇಲುಗೈ ಸಾಧಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಚುನಾವಣಾ ಆಯೋಗದೊಳಗೆ ತೀವ್ರ ಮುಸುಕಿನ ಗುದ್ದಾಟ: ಉಪ ಚುನಾವಣಾ ಆಯುಕ್ತರ ವಿರುದ್ಧ ಕ್ಯಾಬಿನೆಟ್ ಕಾರ್ಯದರ್ಶಿಗೆ ದೂರು ನೀಡಿದ ಆಯುಕ್ತರು, ಕೇಂದ್ರ ಹೇಳಿದ್ದೇನು?

ಟಿಬೆಟ್‌ನಲ್ಲಿ ಪ್ರಬಲ ಭೂಕಂಪ: ನೂರಾರು ಮನೆಗಳು ಧರಾಶಾಹಿ; ಕನಿಷ್ಟ 16 ಮಂದಿ ಸಾವು, 54ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ..!

ಮೆಟ್ರೋ ನಿಲ್ದಾಣಗಳಿಗೆ ಜಯಲಲಿತಾ, ಕರುಣಾನಿಧಿ, ಎಂ.ಜಿ.ಆರ್. ಹೆಸರು! ಬೆಂಗಳೂರು-ಹೊಸೂರು ಮೆಟ್ರೋಗೆ ಕನ್ನಡ ಸಂಘಟನೆಗಳ ವಿರೋಧ: ಮಿನಿ ತಮಿಳುನಾಡು ಆಗುತ್ತಾ ಸಿಲಿಕಾನ್ ಸಿಟಿ?

ಇಸ್ರೋದ ಉಪಗ್ರಹ ಉಡಾವಣೆ ವೈಫಲ್ಯಕ್ಕಿಂತ ಕಾಂಗ್ರೆಸ್ ನಾಯಕನ ರೀ ಲಾಂಚ್ ಫೈಲ್ಯೂರ್ ಹೆಚ್ಚಾಗಿದೆ : ಪ್ರಧಾನಿ ಮೋದಿ ವ್ಯಂಗ್ಯ; Video

ರಾಜ್ಯದಲ್ಲಿ ಭೀಕರ ಬರ: 62,481 ಕೋಟಿ ರೂ. ಬೆಳೆ ನಷ್ಟ, ನೆರವು ಕೋರಿ ಪ್ರಧಾನಿ ಮೋದಿಗೆ DCM ಪರಮೇಶ್ವರ್ ಪತ್ರ