ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ 
ಸಿನಿಮಾ ಸುದ್ದಿ

'ಇಡೀ ಜಗತ್ತೇ ನಮ್ಮ ವಿರುದ್ಧ ನಿಂತರೂ...': ರಶ್ಮಿಕಾ ನಂತರ ಟ್ರೋಲ್‌ಗಳಿಗೆ ವಿಜಯ್ ದೇವರಕೊಂಡ ಖಡಕ್ ತಿರುಗೇಟು!

ಟ್ರೋಲ್ ಬಗ್ಗೆ ರಶ್ಮಿಕಾ ಮಂದಣ್ಣ ಅವರು ಸುದೀರ್ಘ ಪೋಸ್ಟ್ ಹಾಕಿದ ಬೆನ್ನಲ್ಲೇ ಪತಿ ವಿಜಯ್ ದೇವರಕೊಂಡ ಅವರು ಸಹ ಪತ್ನಿಯ ಹೇಳಿಕೆ ಬೆಂಬಲಿಸಿ ಪೋಸ್ಟ್ ಹಾಕಿದ್ದು, ಟ್ರೋಲ್‌ಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಕಾಫಿ ವಿತ್ ಕರಣ್ 9' (Koffee With Karan 9) ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ನಂತರ ತಮಗೆ ಮತ್ತು ತಮ್ಮ ಪತ್ನಿ ರಶ್ಮಿಕಾ ಮಂದಣ್ಣ ಅವರಿಗೆ ಎದುರಾದ ಆನ್‌ಲೈನ್ ಟೀಕೆಗಳ ನಟ ವಿಜಯ್ ದೇವರಕೊಂಡ ಅವರು ಮೊದಲ ಬಾರಿ ಪ್ರತಿಕ್ರಿಯಿಸಿದ್ದಾರೆ.

ಟ್ರೋಲ್ ಬಗ್ಗೆ ರಶ್ಮಿಕಾ ಮಂದಣ್ಣ ಅವರು ಸುದೀರ್ಘ ಪೋಸ್ಟ್ ಹಾಕಿದ ಬೆನ್ನಲ್ಲೇ ಪತಿ ವಿಜಯ್ ದೇವರಕೊಂಡ ಅವರು ಸಹ ಪತ್ನಿಯ ಹೇಳಿಕೆ ಬೆಂಬಲಿಸಿ ಪೋಸ್ಟ್ ಹಾಕಿದ್ದು, ಟ್ರೋಲ್‌ಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಕಾಫಿ ವಿತ್ ಕರಣ್'ನಲ್ಲಿ ಇಬ್ಬರೂ ಮ್ಯಾರೇಜ್​ ಪ್ರಪೋಸಲ್​ ಬಗ್ಗೆ ಹಂಚಿಕೊಂಡಿದ್ದರು. ದಂಪತಿಯ ಈ ಸಂಭಾಷಣೆ ಸಾಕಷ್ಟು ಟೀಕೆಗೆ ಗುರಿಯಾಯಿತು. ಇದೀಗ ವಿಜಯ್ ದೇವರಕೊಂಡ ಅವರು ತಮ್ಮ ಮತ್ತು ರಶ್ಮಿಕಾ ಮಂದಣ್ಣ ಸುತ್ತಲಿನ ಆನ್‌ಲೈನ್ ಟ್ರೋಲಿಂಗ್‌ಗೆ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.

ನಟ ವಿಜಯ್ ದೇವರಕೊಂಡ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ರಶ್ಮಿಕಾ ಅವರೊಂದಿಗಿನ ಫೋಟೋ ಮತ್ತು ವಿಡಿಯೋವನ್ನು ಹಂಚಿಕೊಂಡಿದ್ದು, ತಮ್ಮ ಸಂಬಂಧದ ಬಗ್ಗೆ ಕಾಮೆಂಟ್ ಮಾಡುತ್ತಿರುವವರಿಗೆ ಕಠಿಣ ಸಂದೇಶವೊಂದನ್ನು ನೀಡಿದ್ದಾರೆ.

"ನನ್ನ ಆಪ್ತ ಸ್ನೇಹಿತೆ, ನನ್ನ ಪತ್ನಿ, ನನ್ನ ಸಂಗಾತಿ. ನನ್ನ ಜೀವನದ ಅತ್ಯಂತ ಸುಂದರವಾದ ಭಾಗಗಳಲ್ಲಿ ಒಂದು, ಇದನ್ನು ನಾನು ಸರಿಯಾಗಿಯೇ ಆಯ್ಕೆ ಮಾಡಿಕೊಂಡಿದ್ದೇನೆ. ನಾನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇನೆ. ನಮ್ಮ ಬಗ್ಗೆ ಚಿಂತಿಸುವವರಿಗೆ ಹೇಳುವುದೇನೆಂದರೆ, ನಾವಿಬ್ಬರೂ ತುಂಬಾ ಸಂತೋಷವಾಗಿದ್ದೇವೆ. ನಾನು ನಿಜಕ್ಕೂ ಅದೃಷ್ಟಶಾಲಿ" ಎಂದು ವಿಜಯ್ ಬರೆದಿದ್ದಾರೆ.

ಈ ಟೀಕೆಗಳಿಂದ ತಮಗೆ ಯಾವುದೇ ತೊಂದರೆಯಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ ವಿಜಯ್, "ಒಂದು ವೇಳೆ ಇಡೀ ಜಗತ್ತೇ ನಮ್ಮ ವಿರುದ್ಧ ನಿಂತರೂ ಸರಿ, ನಾವಿಬ್ಬರೂ ಒಟ್ಟಾಗಿ ಎದುರಿಸುತ್ತೇವೆ. ಪ್ರೀತಿಯನ್ನು ಮತ್ತು ಸರಳವಾದ ಸುಖೀ ಜೀವನವನ್ನು ಸಂಭ್ರಮಿಸುವ ಎಲ್ಲರಿಗೂ ನನ್ನ ಪ್ರೀತಿ" ಎಂದು ವಿಜಯ್ ದೇವರಕೊಂಡ ಹೇಳಿದ್ದಾರೆ.

ತಮ್ಮನ್ನು ಟೀಕಿಸುವುದನ್ನು ಮುಂದುವರಿಸಿದವರಿಗೆ ನೇರ ಮತ್ತು ಕಠಿಣ ಸಂದೇಶ ನೀಡುತ್ತಾ, "ಇನ್ನು, ಯಾವುದೇ ರೀತಿಯ ಸೌಜನ್ಯ ಅಥವಾ ಗೌರವವಿಲ್ಲದೆ ಹೇಳುವುದಾದರೆ, ಉಳಿದವರೆಲ್ಲರೂ ಹೋಗಿ ತಮ್ಮ ಕೆಲಸ ನೋಡಿಕೊಳ್ಳಲಿ (ಅಥವಾ ನರಕಕ್ಕೆ ಹೋಗಲಿ). :)) ದೇವರಕೊಂಡ ವಿಜಯ್ ಸಾಯಿ" ಎಂದು ವಿಜಯ್ ಪೋಸ್ಟ್ ಮುಕ್ತಾಯಗೊಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

100 ಕೋಟಿ ರೂ. ಖಾಸಗಿ ಶಾಲೆಗಳ ಹಗರಣ: ಮಾಜಿ ಶಿಕ್ಷಣ ಸಚಿವ, DMK ನಾಯಕನ ಬಂಧನ!

ತಮ್ಮದೇ ಸರ್ಕಾರದ ವಿರುದ್ಧ ಉಗ್ರಪ್ಪ ವಾಗ್ದಾಳಿ: ಪ್ರಧಾನಿ ಮೋದಿ ಮುಂದೆ ಸರ್ವಪಕ್ಷ ನಿಯೋಗ ಕೊಂಡೊಯ್ಯಲು ಆಗ್ರಹ

ಇಸ್ರೇಲ್‌ನಲ್ಲಿ ಮಂಗಳೂರಿನ ವ್ಯಕ್ತಿ ನಾಪತ್ತೆ; ಪತ್ತೆಗಾಗಿ ಭಾರತೀಯ ರಾಯಭಾರ ಕಚೇರಿಗೆ ಕುಟುಂಬದ ಮನವಿ

ಬಹುತೇಕ ಮುಸ್ಲಿಮರು ಮಾಜಿ ದಲಿತರು, ಯಾವ ಕಾರಣಕ್ಕೆ ಮತಾಂತರಗೊಂಡರು ಎಂಬುದು ಎಲ್ಲರಿಗೂ ಗೊತ್ತಿದೆ: ಸಚಿವ ರಿಜ್ವಾನ್ ಅರ್ಷದ್

"ಮೋದಿ ಕಾ ಬಾಪ್ ಭಿ ಜಾಯೇಗಾ": ಖರ್ಗೆ ಹೇಳಿಕೆ ಖಂಡಿಸಿ ದೇಶಾದ್ಯಂತ ಬಿಜೆಪಿ ಪ್ರತಿಭಟನೆ; ಕ್ಷಮೆಯಾಚಿಸಬೇಕು ಎಂದು ಆಗ್ರಹ!