ಕಾವ್ಯಾ ಮಾರನ್ - ಅನಿರುದ್ಧ್ ರವಿಚಂದ್ರನ್ 
ಸಿನಿಮಾ ಸುದ್ದಿ

ಗ್ರೀಸ್‌ನಲ್ಲಿ ವಿವಾಹ; ಹೈದರಾಬಾದ್‌ನಲ್ಲಿ ನಡೆಯಲಿರುವ ಅನಿರುದ್ಧ್ ರವಿಚಂದರ್-ಕಾವ್ಯಾ ಮಾರನ್ ಆರತಕ್ಷತೆ ಆಮಂತ್ರಣ ಪತ್ರಿಕೆ ವೈರಲ್!

ಗ್ರೀಸ್‌ನಲ್ಲಿ ನಡೆಯಲಿರುವ ಸಂಪೂರ್ಣ ವಿವಾಹ ಸಮಾರಂಭವನ್ನು ಮಾರನ್ ಕುಟುಂಬವು ಯೋಜಿಸುತ್ತಿದೆ ಮತ್ತು ನಿರ್ವಹಿಸುತ್ತಿದೆ.

ಖ್ಯಾತ ಸಂಗೀತ ಸಂಯೋಜಕ ಅನಿರುದ್ಧ್ ರವಿಚಂದರ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ (SRH) ಸಿಇಒ ಕಾವ್ಯಾ ಮಾರನ್ ಅವರು ಗ್ರೀಸ್‌ನಲ್ಲಿ ನಡೆಯಲಿರುವ ಆಪ್ತ ಸಮಾರಂಭವೊಂದರಲ್ಲಿ ವಿವಾಹವಾಗಲಿದ್ದಾರೆ.

ಇದೀಗ, ಈ ಜೋಡಿಯ ಆರತಕ್ಷತೆಯ ಆಮಂತ್ರಣ ಪತ್ರಿಕೆಯ ಝಲಕ್‌ಗಳು ನೆಟ್ಟಿಗರ ಗಮನ ಸೆಳೆದಿವೆ. 'ಬರೋಕ್' (Baroque) ಶೈಲಿಯಿಂದ ಪ್ರೇರಿತವಾದ ಈ ಆಮಂತ್ರಣ ಪತ್ರಿಕೆಯು, ಇವೋರಿ ಮತ್ತು ತಿಳಿ ನೀಲಿ ಬಣ್ಣದ ವಿಶೇಷ ಪೆಟ್ಟಿಗೆಯ ರೂಪದಲ್ಲಿದ್ದು, ಗಮನ ಸಳೆಯುತ್ತಿದೆ.

ಆಮಂತ್ರಣ ಪತ್ರಿಕೆಯನ್ನು ವಿನ್ಯಾಸಗೊಳಿಸಿದ 'ಪಿಂಕ್ ವಿಷಲ್ ಮ್ಯಾನ್' (Pink Whistle Man) ಸಂಸ್ಥೆಯ ರಂಜನಿ ಅಯ್ಯಂಗಾರ್ ಅವರು ಸಾಮಾಜಿಕ ಜಾಲತಾಣದಲ್ಲಿನ ಪೋಸ್ಟ್‌ನಲ್ಲಿ, 'ಕಾವ್ಯಾ ಮಾರನ್ ಮತ್ತು ಅನಿರುದ್ಧ್ ರವಿಚಂದರ್ ಅವರಿಗಾಗಿ ಈ ಆಮಂತ್ರಣ ಪತ್ರಿಕೆಗಳನ್ನು ವಿನ್ಯಾಸಗೊಳಿಸಿದ್ದು, ನನಗೆ ಅತ್ಯಂತ ಸಂತೋಷದಾಯಕ ಹಾಗೂ ತೃಪ್ತಿದಾಯಕ ಅನುಭವವನ್ನು ನೀಡಿದೆ!' ಎಂದು ಬರೆದುಕೊಂಡಿದ್ದಾರೆ.

ಆರತಕ್ಷತೆಯು ನವೆಂಬರ್ 21 ರಂದು ಚೆನ್ನೈನಲ್ಲಿ ನಡೆಯಲಿದೆ.

ಮೂಲಗಳ ಪ್ರಕಾರ, ಈ ವಿವಾಹ ಸಮಾರಂಭವನ್ನು ಎರಡು ದಿನಗಳ ಕಾರ್ಯಕ್ರಮವಾಗಿ ಆಯೋಜಿಸಲಾಗುತ್ತಿದ್ದು, ಇದು ನವೆಂಬರ್ 10 ಮತ್ತು 11 ರಂದು ನಡೆಯುವ ಸಾಧ್ಯತೆಯಿದೆ. ಗ್ರೀಸ್‌ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಕುಟುಂಬದ ಆಪ್ತರು ಮತ್ತು ಆಯ್ದ ಸ್ನೇಹಿತರು ಮಾತ್ರ ಭಾಗವಹಿಸಲಿದ್ದು, ಇದೊಂದು ಖಾಸಗಿ ಸಮಾರಂಭವಾಗಿರಲಿದೆ.

ಈ ಜೋಡಿಯ ವಿವಾಹ ನಡೆಯುವ ಸ್ಥಳದ ಬಗ್ಗೆ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿದ್ದವು. ಆದರೆ, ಈ ಸ್ಥಳದ ಕುರಿತಾದ ವರದಿಗಳು ಮತ್ತು ಊಹೆಗಳಿಗೆ ಭಿನ್ನವಾಗಿ, ವಿವಾಹವು ಸ್ಯಾಂಟೋರಿನಿಯಲ್ಲಿ ನಡೆಯುವುದಿಲ್ಲ ಎಂದು ಮೂಲಗಳು ಎನ್‌ಡಿಟಿವಿಗೆ ಸ್ಪಷ್ಟಪಡಿಸಿವೆ.

ಗ್ರೀಸ್‌ನಲ್ಲಿ ನಡೆಯಲಿರುವ ಸಂಪೂರ್ಣ ವಿವಾಹ ಸಮಾರಂಭವನ್ನು ಮಾರನ್ ಕುಟುಂಬವು ಯೋಜಿಸುತ್ತಿದೆ ಮತ್ತು ನಿರ್ವಹಿಸುತ್ತಿದೆ. ಅತಿಥಿಗಳಿಗೆ ಅಗತ್ಯವಿರುವ ವಿಮಾನ ಪ್ರಯಾಣ, ವಸತಿ ಮತ್ತು ಸಾರಿಗೆ ವ್ಯವಸ್ಥೆಗಳನ್ನು ಕೂಡ ಈ ಕುಟುಂಬವೇ ನೋಡಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಅತಿಥಿಗಳು ಕೇವಲ ಅಲ್ಲಿಗೆ ಆಗಮಿಸಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡರೆ ಸಾಕು; ಉಳಿದ ಎಲ್ಲ ವ್ಯವಸ್ಥೆಗಳನ್ನು ಆಯೋಜಕರೇ ನಿರ್ವಹಿಸಲಿದ್ದಾರೆ.

ಅನಿರುದ್ಧ್ ರವಿಚಂದರ್ ಒಬ್ಬ ಜನಪ್ರಿಯ ಸಂಗೀತ ಸಂಯೋಜಕರಾಗಿದ್ದು, ಇವರು 'ಲಿಯೋ', 'ಇಂಡಿಯನ್ 2', 'ವೇಟ್ಟೈಯನ್', 'ವಿದಾಮುಯಾರ್ಚಿ' ಮತ್ತು 'ಕೂಲಿ' ಸೇರಿದಂತೆ ಹಲವಾರು ಪ್ರಮುಖ ಚಲನಚಿತ್ರಗಳಿಗೆ ಸಂಗೀತ ನೀಡಿದ್ದಾರೆ.

ಇನ್ನೊಂದೆಡೆ, ಕಾವ್ಯಾ ಮಾರನ್ ಅವರು ಸನ್ ಗ್ರೂಪ್‌ನ ಅಧ್ಯಕ್ಷ ಕಲಾನಿಧಿ ಮಾರನ್ ಅವರ ಪುತ್ರಿಯಾಗಿದ್ದು, ಸನ್ ಟಿವಿ ನೆಟ್‌ವರ್ಕ್‌ನಲ್ಲಿ ಕಾರ್ಯನಿರ್ವಾಹಕ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ, ಅವರು 'ಸನ್‌ರೈಸರ್ಸ್ ಹೈದರಾಬಾದ್' ತಂಡದ ಮಾಲೀಕರಾಗಿ ಇಂಡಿಯನ್ ಪ್ರೀಮಿಯರ್ ಲೀಗ್ (IPL) ನೊಂದಿಗೂ ಗುರುತಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Veto ಇಲ್ಲದ ಖಾಯಂ ಸದಸ್ಯತ್ವ ‘2ನೇ ದರ್ಜೆ’ಗೆ ಸಮಾನ, ಅರೆಬರೆ ಸದಸ್ಯತ್ವ ನಮಗೆ ಬೇಡ: ವಿಶ್ವಸಂಸ್ಥೆಗೆ ಭಾರತ ಖಡಕ್ ಸಂದೇಶ

ಗರ್ಭಿಣಿ ಪತ್ರಕರ್ತೆಯನ್ನು'ತಳ್ಳಿದ' ಆರೋಪ: ರಾಹುಲ್ ಗಾಂಧಿಯಿಂದ ಪ್ರತಿಕ್ರಿಯೆ ಕೇಳಿದ ಸುಪ್ರೀಂಕೋರ್ಟ್!

ಫಲ ನೀಡದ ಬೆಳಗಾವಿ ಸಭೆ: ಕಬ್ಬು ಬೆಳೆಗಾರರಿಗೆ ಮತ್ತೆ ನಿರಾಸೆ: ಸಮಸ್ಯೆ ಆಲಿಸಲು ಅ. 29 ರಂದು ಮತ್ತೊಮ್ಮೆ ಸಿಎಂ ಸಭೆ..!

Russia ದ್ವಿಮುಖ ನೀತಿ: ಕದನ ವಿರಾಮ ಘೋಷಣೆಯಾದ ಕೆಲವೇ ನಿಮಿಷಗಳಲ್ಲಿ Kyiv ಮೇಲೆ ಕ್ಷಿಪಣಿಗಳ ಮಳೆಗರೆದ ಪುಟಿನ್ ಸೇನೆ, Zelenskyy ತೀವ್ರ ಆಕ್ರೋಶ..!

'ಸತ್ಯಂ ಶಿವಂ ಸುಂದರಂ': ಸುಪ್ರೀಂನಲ್ಲಿ SIR ವಿಚಾರಣೆಗೂ ಮುನ್ನ ಫೋಟೊ ಹಂಚಿಕೊಂಡ ರಾಹುಲ್ ಗಾಂಧಿ!