ಝೈದ್ ಖಾನ್ - ದರ್ಶನ್ - ಧನ್ವೀರ್ 
ಸಿನಿಮಾ ಸುದ್ದಿ

ನನ್ನ ಫ್ಯಾಮಿಲಿ ಬಗ್ಗೆ ಮಾತಾಡೋಕೆ ಯಾರಿಗೂ ಅಧಿಕಾರ ಇಲ್ಲ: ಜೈಲಿನಿಂದಲೇ ಧನ್ವೀರ್​ಗೆ ದರ್ಶನ್ ವಾರ್ನಿಂಗ್!

ಹೌದು, ವಿಜಯಲಕ್ಷ್ಮಿ ಹಾಗೂ ನಟ ಧನ್ವೀರ್ ನಡುವಿನ ವಿವಾದ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಇದರ ಬೆನ್ನಲ್ಲೇ ಇಂದು ವಿಜಯಲಕ್ಷ್ಮಿ ಅವರು ನಟ ಝೈದ್ ಖಾನ್ ಅವರೊಂದಿಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ತೆರಳಿ, ದರ್ಶನ್ ಭೇಟಿ ಮಾಡಿದ್ದಾರೆ.

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಪತ್ನಿ ವಿಜಯಲಕ್ಷ್ಮಿ ವಿರುದ್ಧ ಶೀತಲ ಸಮರ ನಡೆಸುತ್ತಿರುವ, ಆಪ್ತ ಸ್ನೇಹಿತ ನಟ ಧನ್ವೀರ್ ಗೌಡಗೆ ಜೈಲಿನಿಂದಲೇ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಹೌದು, ವಿಜಯಲಕ್ಷ್ಮಿ ಹಾಗೂ ನಟ ಧನ್ವೀರ್ ನಡುವಿನ ವಿವಾದ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಇದರ ಬೆನ್ನಲ್ಲೇ ಇಂದು ವಿಜಯಲಕ್ಷ್ಮಿ ಅವರು ನಟ ಝೈದ್ ಖಾನ್ ಅವರೊಂದಿಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ತೆರಳಿ, ದರ್ಶನ್ ಭೇಟಿ ಮಾಡಿದ್ದಾರೆ.

ದರ್ಶನ್ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಝೈದ್ ಖಾನ್, ‘ಧನ್ವೀರ್​ಗೆ ವಾರ್ನಿಂಗ್ ಕೊಡೋಕೆ ದರ್ಶನ್ ಹೇಳಿದ್ದಾರೆ. ನಾನು ಒಳಗಡೆ ಇದ್ದಾಗ ನನ್ನ ಹೆಂಡತಿ, ಮಕ್ಕಳ ಬಗ್ಗೆ ಮಾತಾಡೋದು ತಪ್ಪು. ನನ್ನ ಫ್ಯಾಮಿಲಿ ಬಗ್ಗೆ ಮಾತಾಡೋಕೆ ಯಾರಿಗೂ ಅಧಿಕಾರ ಇಲ್ಲ. ನಾನು ಹೊರಗೆ ಬಂದ ಮೇಲೆ ಧೈರ್ಯ ಇದ್ದರೆ ನನ್ನ ಮುಂದೆ ಮಾತಾಡಲಿ’ ಎಂದು ದರ್ಶನ್ ಹೇಳಿರುವುದಾಗಿ ತಿಳಿಸಿದರು.

‘ಜೈಲಿನಿಂದಲೇ ಧನ್ವೀರ್ ವಿರುದ್ದ ದರ್ಶನ್ ದೂರು ನೀಡುತ್ತಾರೆ. ವಕೀಲರ ಜೊತೆ ಚರ್ಚೆ ಮಾಡಿದ್ದಾರೆ. ಈಗ ದೂರನ್ನು ಕೊಡುತ್ತಾರೆ. ತಾವೇ ಮಾತಾಡಿದರೆ ಅಭಿಮಾನಿಗಳಿಗೆ ಗೊಂದಲ ಕ್ಲಿಯರ್ ಆಗುತ್ತೆ ಅಂತ ಅವರು ಹೇಳಿದ್ದಾರೆ. ಮಾಧ್ಯಮಗಳ ಮೂಲಕ ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ. ಯಾವುದೇ ಕಾರಣಕ್ಕೂ ನೀವು ತಲೆಕೆಡಿಸಿಕೊಳ್ಳಬೇಡಿ. ಅಭಿಮಾನಿಗಳು ಧೈರ್ಯವಾಗಿ, ಆರಾಮಾಗಿರಿ ಅಂದಿದ್ದಾರೆ’ ಎಂದು ಝೈದ್ ಖಾನ್ ಹೇಳಿದ್ದಾರೆ.

ಧನ್ವೀರ್ ತಾನೇ ಸಹಾಯ ಮಾಡ್ತೀನಿ ಅಂತ ಮನೆಗೆ ನುಗ್ಗಿ, ಮನೆ ಹಾಳು ಮಾಡಿದ್ದಾನೆ. ನಾವು ಎಲ್ಲರೂ ಮಾಡುತ್ತಾ ಇರುವುದು ದರ್ಶನ್ ಅಣ್ಣನಿಗೋಸ್ಕರ. ಅವರು ಪ್ರೀತಿಸುವ ಪತ್ನಿ, ಮಗನ ಬಗ್ಗೆ ಮಾತಾಡಿದರೆ ಸರಿಯಲ್ಲ. ಧನ್ವೀರ್ ಕ್ರೆಡಿಟ್ ತೆಗೆದುಕೊಳ್ಳುವ ಕೆಲಸ ಮಾಡ್ತಾ ಇದ್ದಾನೆ ಎಂದು ಝೈದ್ ಖಾನ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಂಗ್ರೆಸ್ ಗೆ ಮುಖಭಂಗ: ಬ್ಯಾಲೆಟ್ ಪೇಪರ್ ಮೂಲಕ ನಡೆದ MLC ಚುನಾವಣೆಯಲ್ಲಿ 4 ಸ್ಥಾನ NDA ತೆಕ್ಕೆಗೆ!

MLC election: BJP-JDS ಮೈತ್ರಿ ಅಭ್ಯರ್ಥಿ ರಂಗನಾಥ್ ಭರ್ಜರಿ ಗೆಲುವು; ಪುಟ್ಟಣ್ಣಗೆ ಹೀನಾಯ ಸೋಲು, ಕಾಂಗ್ರೆಸ್​ಗೆ ಮುಖಭಂಗ!

ದೇವರ ದಯೆಯಿಂದ ನನ್ನ‌ ಆರೋಗ್ಯ ಸ್ಥಿರವಾಗಿದೆ: ಆಸ್ಪತ್ರೆಯಿಂದಲೇ DCM ಪರಮೇಶ್ವರ ಪೋಸ್ಟ್

'ಸೆಂಚುರಿ ಹೊಡೆದ್ರೇನು.. 12 ಬಾಲ್`ನಲ್ಲಿ 50 ರನ್ ಮಾಡಲಾಗಲಿಲ್ಲ'; ಮತ್ತೆ ಶಿಷ್ಯನ ಕಾಲೆಳೆದ Yuvraj Singh!

ಕರ್ನಾಟಕದ ಅಂತಿಮ ಮತದಾರರ ಪಟ್ಟಿ ಪ್ರಕಟ; ಒಟ್ಟು ಮತದಾರರು 4.55 ಕೋಟಿ, 99 ಲಕ್ಷಕ್ಕೂ ಹೆಚ್ಚು ಹೆಸರು ಡಿಲೀಟ್!