ಯಶ್ 
ಸಿನಿಮಾ ಸುದ್ದಿ

ಕನ್ನಡ ಚಿತ್ರರಂಗದ ಭಾಗವಾಗಿರುವುದಕ್ಕೆ ಹೆಮ್ಮೆ ಇದೆ: ರಾಮಾಯಣವನ್ನು ಜಗತ್ತಿನಾದ್ಯಂತ ಕೊಂಡೊಯ್ಯಬೇಕು; ಯಶ್

ಈ ಪ್ರೀಮಿಯರ್ ಕಾರ್ಯಕ್ರಮದಲ್ಲಿ ಮಾತನಾಡಿದ ಯಶ್, ರಾಮಾಯಣವನ್ನು ಜಗತ್ತಿನಾದ್ಯಂತ ಕೊಂಡೊಯ್ಯುವುದು ಮುಖ್ಯ ಎಂದು ಹೇಳಿದರು. ಈ ಅಂತರರಾಷ್ಟ್ರೀಯ ವೇದಿಕೆಯಲ್ಲಿ ನಟ ಯಶ್ ಮಾತನಾಡಿದ ಮಾತುಗಳು ಎಲ್ಲರ ಗಮನ ಸೆಳೆದಿವೆ

ಲಾಸ್ ಏಂಜಲೀಸ್‌ನಲ್ಲಿರುವ 'ಅಕಾಡೆಮಿ ಮ್ಯೂಸಿಯಂ ಆಫ್ ಮೋಷನ್ ಪಿಕ್ಚರ್ಸ್'ನಲ್ಲಿ ನಡೆದ 'ರಾಮಾಯಣ'ದ ಭವ್ಯ ಪ್ರೀಮಿಯರ್‌ನಲ್ಲಿ 'ರಾಕಿಂಗ್ ಸ್ಟಾರ್' ಯಶ್ ಭಾಗವಹಿಸಿದ್ದರು. ಇವರೊಂದಿಗೆ ನಿರ್ದೇಶಕ ನಿತೇಶ್ ತಿವಾರಿ, ನಿರ್ಮಾಪಕ ನಮಿತ್ ಮಲ್ಹೋತ್ರಾ ಹಾಗೂ ಸಹನಟರಾದ ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ಕೂಡ ಉಪಸ್ಥಿತರಿದ್ದರು.

ಭಾರತೀಯ ಸಿನಿಮಾರಂಗದ ಅತ್ಯಂತ ನಿರೀಕ್ಷಿತ ಪೌರಾಣಿಕ ಚಿತ್ರ ಎಂದರೆ ಅದು ‘ರಾಮಾಯಣ’ ಈ ಚಿತ್ರದ ವಿಶೇಷ ಪ್ರೀಮಿಯರ್ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಅಕ್ಟೋಬರ್ 27ರಂದು ಅದ್ದೂರಿಯಾಗಿ ನೆರವೇರಿತು.

ತಮ್ಮ ಪತ್ನಿ ರಾಧಿಕಾ ಪಂಡಿತ್ ಅವರೊಂದಿಗೆ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ ಯಶ್‌ಗೆ, ಅಭಿಮಾನಿಗಳಿಂದ ಭರ್ಜರಿ ಸ್ವಾಗತ ಸಿಕ್ಕಿತು. ಅವರು ಆಗಮಿಸುತ್ತಿದ್ದಂತೆಯೇ, ಅಲ್ಲಿ ನೆರೆದಿದ್ದ ಅಭಿಮಾನಿಗಳು ಅವರ ಹೆಸರನ್ನು ಕೂಗುತ್ತಾ ಸಂಭ್ರಮಿಸಿದರು.

ಈ ಪ್ರೀಮಿಯರ್ ಕಾರ್ಯಕ್ರಮದಲ್ಲಿ ಮಾತನಾಡಿದ ಯಶ್, ರಾಮಾಯಣವನ್ನು ಜಗತ್ತಿನಾದ್ಯಂತ ಕೊಂಡೊಯ್ಯುವುದು ಮುಖ್ಯ ಎಂದು ಹೇಳಿದರು. ಈ ಅಂತರರಾಷ್ಟ್ರೀಯ ವೇದಿಕೆಯಲ್ಲಿ ನಟ ಯಶ್ ಮಾತನಾಡಿದ ಮಾತುಗಳು ಎಲ್ಲರ ಗಮನ ಸೆಳೆದಿವೆ. ‘ಎಲ್ಲರಿಗೂ ನಮಸ್ಕಾರ’ ಎಂದು ಯಶ್ ಕನ್ನಡದಲ್ಲೇ ಮಾತು ಆರಂಭಿಸಿದರು. ‘ನಾವು ಬಂದ ನೆಲವನ್ನು ಎಂದಿಗೂ ಮರೆಯಬಾರದು. ಕನ್ನಡ ಚಿತ್ರರಂಗ ಮತ್ತು ಭಾರತೀಯ ಚಿತ್ರರಂಗದ ಭಾಗ ಆಗಿರುವುದಕ್ಕೆ ಹೆಮ್ಮೆ ಇದೆ’ ಎಂದು ಹೇಳಿದರು.

ತಮ್ಮ ಪ್ರಯಾಣವನ್ನು ನೆನಪಿಸಿಕೊಂಡ ಯಶ್, "ನೀವು ಎಲ್ಲಿಂದ ಪ್ರಾರಂಭಿಸುತ್ತೀರಿ ಎಂಬುದು, ನೀವು ಎಷ್ಟು ದೂರ ಸಾಗಬಲ್ಲಿರಿ ಎಂಬುದನ್ನು ಎಂದಿಗೂ ನಿರ್ಧರಿಸಲಾರದು" ಎಂದು ಹೇಳಿದರು. "ಕನ್ನಡ ಚಲನಚಿತ್ರೋದ್ಯಮ ಹಾಗೂ ಭಾರತೀಯ ಚಲನಚಿತ್ರೋದ್ಯಮದ ಭಾಗವಾಗಿರುವುದಕ್ಕೆ ಮತ್ತು ನಮ್ಮ ಕಥೆಯನ್ನು ಅದೂ ಕೇವಲ ಒಂದು ಕಥೆಯಲ್ಲ, ಅದಕ್ಕಿಂತ ಮಿಗಿಲಾದದ್ದನ್ನು ಹೇಳುತ್ತಿರುವುದಕ್ಕೆ ನನಗೆ ಹೆಮ್ಮೆಯೆನಿಸುತ್ತಿದೆ" ಎಂದು ಅವರು ನುಡಿದರು.

ರಾಮಾಯಣ ಪೀಳಿಗೆಯಿಂದ ಪೀಳಿಗೆಗೆ ಸಾಗಿಬಂದಿರುವ ಮಹತ್ವದ ಬಗ್ಗೆಯೂ ಮಾತನಾಡಿದ ಯಶ್, ಈ ಮಹಾಕಾವ್ಯವು ಸಾವಿರಾರು ವರ್ಷಗಳಿಂದ ಭಾರತದ ಕಥೆ ಹೇಳುವ ಪರಂಪರೆಯ ಅವಿಭಾಜ್ಯ ಅಂಗವಾಗಿದೆ ಎಂದು ವಿವರಿಸಿದರು.

"ನಮ್ಮ ದೇಶದಲ್ಲಿ, ನಾವು ಕೇವಲ ಕಥೆಯನ್ನು ಹೇಳುವುದಿಲ್ಲ; ಅದನ್ನು ನೆನಪಿನಲ್ಲಿಟ್ಟುಕೊಳ್ಳುತ್ತೇವೆ ಮತ್ತು ಮುಂದಿನ ಪೀಳಿಗೆಗೆ ಅದನ್ನು ತಲುಪಿಸುತ್ತೇವೆ, ಈ ಕಥೆಯು ಸಾವಿರಾರು ವರ್ಷಗಳಿಂದ ಸಾಗಿಬಂದಿದೆ" ಎಂದು ಅವರು ಹೇಳಿದರು.

ಈ ಕಾಲಾತೀತ ಭಾರತೀಯ ಮಹಾಕಾವ್ಯವನ್ನು ಜಗತ್ತಿನಾದ್ಯಂತ ಇರುವ ಪ್ರೇಕ್ಷಕರ ಮುಂದೆ ಪ್ರಸ್ತುತಪಡಿಸುತ್ತಿರುವುದರ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಯಶ್, "ಈ ಕಥೆಯನ್ನು ಜಗತ್ತಿಗೆ ಅರ್ಪಿಸುತ್ತಿರುವುದಕ್ಕೆ ನಮಗೆ ಹೆಮ್ಮೆಯಿದೆ. ಭಾರತದ ಸಂಸ್ಕೃತಿ ಮತ್ತು ಪರಂಪರೆಯು ಜಾಗತಿಕ ಪ್ರೇಕ್ಷಕರಿಗೆ ಅಥವಾ ಇಡೀ ಜಗತ್ತಿಗೆ ಏನನ್ನು ನೀಡಬಲ್ಲದು ಎಂಬ ಸಂದೇಶವನ್ನು ಇದು ರವಾನಿಸುತ್ತದೆ ಎಂದು ನಾವು ಭಾವಿಸುತ್ತೇವೆ" ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸುಡಾನ್‌ನಲ್ಲಿ ಭೀಕರ ನರಮೇಧ: ಜನನಿಬಿಡ ಮಾರುಕಟ್ಟೆ ಮೇಲೆ ಸೇನೆಯಿಂದ ಡ್ರೋನ್ ದಾಳಿ, 100ಕ್ಕೂ ಹೆಚ್ಚು ಸಾವು!

Cyclone Arnab: ಆಂಧ್ರಪ್ರದೇಶ ಕರಾವಳಿಗೆ ಅಪ್ಪಳಿಸಿದ 'ಅರ್ನಬ್' ಚಂಡಮಾರುತ; ಗಂಟೆಗೆ 150 ಕಿಮೀ ವೇಗದಲ್ಲಿ ಬಿರುಗಾಳಿ; Video

ಭೀಕರ ಬರಕ್ಕೆ ನಲುಗಿದ ಗದಗ: ಹೊಂಬಾಳ ಗ್ರಾಮದಲ್ಲಿ ರೈತರ ಆಕ್ರಂದನ, ಬದುಕಿಗಾಗಿ ನಗರಗಳತ್ತ ಮುಖ ಮಾಡಿದ ಅನ್ನದಾತ..!

"ಮೋದಿ ಕಾ ಬಾಪ್ ಭಿ ಜಾಯೇಗಾ" ಹೇಳಿಕೆ ವಿವಾದ: ನಿಂದಿಸಿಲ್ಲ, ಪ್ರಚೋದನೆಗೆ ಉತ್ತರಿಸಿದ್ದಾರೆ: ಖರ್ಗೆ ಬೆನ್ನಿಗೆ ನಿಂತ 'ಕೈ' ಪಡೆ..!

ಬೆಂಗಳೂರು ಅಭಿವೃದ್ಧಿಗೆ 10 ವರ್ಷಗಳ ಮೆಗಾ ಪ್ಲ್ಯಾನ್‌; ₹1 ಲಕ್ಷ ಕೋಟಿ ವೆಚ್ಚದ ಯೋಜನೆಗಳ ಘೋಷಣೆ..!