ವಿನೀಶ್, ವಿಜಯಲಕ್ಷ್ಮೀ, ದರ್ಶನ್ 
ಸಿನಿಮಾ ಸುದ್ದಿ

ಮಗನ ಹುಟ್ಟುಹಬ್ಬಕ್ಕೆ ನಟ ದರ್ಶನ್ ಜೈಲಿನಿಂದಲೇ ವಿಶೇಷ ಗಿಫ್ಟ್: ಭಾವುಕ ಪೋಸ್ಟ್ ಹಂಚಿಕೊಂಡ ವಿನೀಶ್

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್, ತಮ್ಮ ಪುತ್ರನ ಹುಟ್ಟುಹಬ್ಬಕ್ಕೆ ಜೈಲಿನಿಂದಲೇ ವಿಶೇಷ ಗಿಫ್ಟ್ ಕಳುಹಿಸಿದ್ದಾರೆ. ದರ್ಶನ್ ಪುತ್ರ ವಿನೀಶ್ 18ನೇ ವರ್ಷದ ಹುಟ್ಟುಹಬ್ಬದ ಹಿನ್ನಲೆಯಲ್ಲೆ ದರ್ಶನ್ ಜೈಲಿನಿಂದಲೇ ವಿಶೇಷ ಗಿಫ್ಟ್ ಕಳುಹಿಸಿಕೊಟ್ಟಿದ್ದಾರೆ.

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್, ತಮ್ಮ ಪುತ್ರನ ಹುಟ್ಟುಹಬ್ಬಕ್ಕೆ ಜೈಲಿನಿಂದಲೇ ವಿಶೇಷ ಗಿಫ್ಟ್ ಕಳುಹಿಸಿದ್ದಾರೆ. ದರ್ಶನ್ ಪುತ್ರ ವಿನೀಶ್ 18ನೇ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ ದರ್ಶನ್ ಜೈಲಿನಿಂದಲೇ ವಿಶೇಷ ಗಿಫ್ಟ್ ಕಳುಹಿಸಿಕೊಟ್ಟಿದ್ದಾರೆ. ಈ ಬಗ್ಗೆ ವಿನೀಸ್ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.

ತನ್ನ ಹುಟ್ಟುಹಬ್ಬದ ಪ್ರಯುಕ್ತ ವಿನೀಶ್ ಜೈಲಿನಲ್ಲಿರುವ ತನ್ನ ತಂದೆಯನ್ನು ಭೇಟಿಯಾಗಲು ಸಂಬಂಧಿ ಸುಶಾಂತ್ ನಾಯ್ಡು ಜೊತೆ ಜೈಲಿಗೆ ಭೇಟಿ ನೀಡಿದ್ದರು. ಜೈಲಿನಲ್ಲಿ ದರ್ಶನ್ ಮಗ ವಿನೀಶ್ ನನ್ನು ತಬ್ಬಿಕೊಂಡು ಕಣ್ಮೀರಿಟ್ಟಿದ್ದಾರೆ. ಅಲ್ಲದೆ, ಜೈಲಿನಲ್ಲಿ ತಮಗೆ ಲಭ್ಯವಿದ್ದ ‘ಕಿಟ್‌ಕ್ಯಾಟ್’ ಚಾಕೊಲೇಟ್‌ ಅನ್ನು ಮಗನಿಗೆ ಹುಟ್ಟುಹಬ್ಬದ ಉಡುಗೊರೆಯಾಗಿ ನೀಡಿ ಆಶೀರ್ವದಿಸಿದ್ದಾರೆ.

ಇನ್ನು ತಂದೆಯಿಂದ ಸಿಕ್ಕ ವಿಶೇಷ ಗಿಫ್ಟ್ ಬಗ್ಗೆ ಮಗ ವಿನೀಶ್ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಪ್ರಪಂಚದಲ್ಲಿ ನನ್ನ ಅಪ್ಪ ಕೊಟ್ಟ ಈ ಗಿಫ್ಟ್‌ಗಿಂತ ದೊಡ್ಡದು ಬೇರೆ ಯಾವುದೂ ಇಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಈಗ ನೀನು ಟಿನೇಜ್‌ಗೆ ಕಾಲಿಟ್ಟಿದ್ದೀಯಾ. ಇನ್ಮುಂದೆ ನಿನ್ನ ಬಗ್ಗೆ ಯಾವುದೇ ಕಂಪ್ಲೇಂಟ್‌ಗಳು ಬರಬಾರದು. ಜವಾಬ್ದಾರಿಯಿಂದ ನಡೆದುಕೋ ಎಂದು ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ ಎನ್ನಲಾಗಿದೆ.

ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ಜೈಲಿಗೆ ಹೋದ ಬಳಿಕ ಸಾಕಷ್ಟು ಏರಿಳಿತಗಳನ್ನು ಅನುಭವಿಸಿದ್ದಾರೆ. ಈಗ ಅವರ ವಿರುದ್ಧ ಆಪ್ತ ಎನಿಸಿಕೊಂಡಿದ್ದ ಧನ್ವೀರ್ ಬಂಡಾಯ ಎದ್ದಿದ್ದು, ಕುಟುಂಬದ ಚಿಂತೆಯನ್ನು ಹೆಚ್ಚಿಸಿದೆ. ಧನ್ವೀರ್ ವಿರುದ್ಧ ವಿಜಯಲಕ್ಷ್ಮಿ ಮ್ಯಾನೇಜರ್ ಕೇಸ್ ದಾಖಲು ಮಾಡಿದರೆ, ಧನ್ವೀರ್ ತಂದೆ ಪ್ರತಿ ದೂರು ದಾಖಲು ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ರಾಹುಲ್ ಗಾಂಧಿಯನ್ನು ಅಣಕು ಪ್ರಧಾನಿ ಮಾಡಿ; ಪ್ರತಿದಿನ ಪ್ರಧಾನ ಮಂತ್ರಿ, ಪ್ರಧಾನ ಮಂತ್ರಿ ಅಂತ ಭಜನೆ ಮಾಡಿ': 'ಮಹಾಭಿಯೋಗ'ಕ್ಕೆ BJP ಟಾಂಗ್

ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಇಂಡಿಯಾ ಬ್ಲಾಕ್ ಆರು ಆರೋಪ ಪ್ರಸ್ತಾಪ; ವಜಾಗೊಳಿಸಲು, ದೇಶದ್ರೋಹದ ವಿಚಾರಣೆಗೆ ಒತ್ತಾಯ; Video

ಅಪ್ಪ ನೀನು ಆ ಪಕ್ಷಿಯನ್ನು ಕೊಂದಿದ್ದು ನನಗೆ ಇಷ್ಟ ಆಗಲಿಲ್ಲ: ಯಶ್ ಮಗ ಯಥರ್ವ್ ಕಣ್ಣೀರು!

ಮೇಕೇದಾಟು ಯೋಜನೆ ಬಗ್ಗೆ CM DK Shivakumar ಬಿಗ್ ಅಪ್ಡೇಟ್: ಜಲಾಶಯ ನಿರ್ಮಾಣ ಯಾವಾಗ? ಇಲ್ಲಿದೆ ಮಾಹಿತಿ..

ರೈತರನ್ನು ಉಳಿಸಲು ಸಕ್ಕರೆ MSP ದರವನ್ನು ಕೇಂದ್ರ 50 ರೂ ಗೆ ಏರಿಸಬೇಕು: ಸಿಎಂ ಡಿ.ಕೆ ಶಿವಕುಮಾರ್