ಪತ್ನಿ ರಾಧಿಕಾ ಪಂಡಿತ್ ಮತ್ತು ಮಕ್ಕಳೊಂದಿಗೆ ನಟ ಯಶ್ 
ಸಿನಿಮಾ ಸುದ್ದಿ

ರಾಮಾಯಣ ಪ್ರೀಮಿಯರ್ ಶೋ: ಲಾಸ್ ಏಂಜಲೀಸ್‌ನಲ್ಲಿ ಮಕ್ಕಳ ಜೊತೆ ಸಿನಿಮಾ ವೀಕ್ಷಿಸಿದ ನಟ ಯಶ್, ರಾಧಿಕಾ ಪಂಡಿತ್!

ಇದರ ಪಾತ್ರವರ್ಗದಲ್ಲಿ ಲಕ್ಷ್ಮಣನಾಗಿ ರವಿ ದುಬೆ, ಹನುಮಾನ್ ಆಗಿ ಸನ್ನಿ ಡಿಯೋಲ್, ಮಂಡೋದರಿಯಾಗಿ ಕಾಜಲ್ ಅಗರ್ವಾಲ್, ಕೈಕೇಯಿಯಾಗಿ ಲಾರಾ ದತ್ತಾ ಸೇರಿದಂತೆ ಹಲವರು ನಟಿಸಿದ್ದಾರೆ.

ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಚಿತ್ರ ನವೆಂಬರ್ 05 ರಂದು ಬಿಡುಗಡೆಯಾಗಲಿದ್ದು, ನಟ ಯಶ್ ಅವರು ರಾವಣನ ಪಾತ್ರದಲ್ಲಿ ನಟಿಸಿದ್ದಾರೆ. ರಣಬೀರ್ ಕಪೂರ್ ರಾಮನಾಗಿ ಮತ್ತು ಸಾಯಿ ಪಲ್ಲವಿ ಸೀತೆಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಪ್ರೈಮ್ ಫೋಕಸ್ ಸ್ಟುಡಿಯೋಸ್‌ನ ನಮಿತ್ ಮಲ್ಹೋತ್ರಾ ಮತ್ತು ಸ್ವತಃ ಯಶ್ ತಮ್ಮ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಇತ್ತೀಚೆಗೆ, 'ರಾಮಾಯಣ' ಚಿತ್ರ ಬಿಡುಗಡೆಗೂ ಮುನ್ನ, ಚಿತ್ರತಂಡ ಲಾಸ್ ಏಂಜಲೀಸ್‌ನಲ್ಲಿ ಫಸ್ಟ್ ಪ್ರೀಮಿಯರ್ ಶೋ ನಡೆಸಿತು.

ಈ ವಿಶೇಷ ಪ್ರದರ್ಶನವು ಕೆಜಿಎಫ್ ತಾರೆ ನಟ ಯಶ್ ಮತ್ತು ನಟಿ ರಾಧಿಕಾ ಪಂಡಿತ್ ಮಕ್ಕಳಾದ ಐರಾ ಮತ್ತು ಯಥರ್ವ್ ಅವರಿಗೆ ಸ್ಮರಣೀಯ ಅನುಭವವನ್ನು ನೀಡಿತು. ಈ ಮೂಲಕ ಅವರು ಥಿಯೇಟರ್‌ನಲ್ಲಿ ಚಿತ್ರ ವೀಕ್ಷಣೆಯ ಅನುಭವವನ್ನು ಪಡೆದರು. ಐರಾಗೆ ಕೇವಲ ಏಳು ವರ್ಷವಾದರೆ, ಯಥರ್ವ್‌ಗೆ ಕೂಡ ಕಳೆದ ಶುಕ್ರವಾರ (ಅಕ್ಟೋಬರ್ 30) ಆರು ತುಂಬಿದೆ. ಈ ಚಿತ್ರ ಯಶ್ ಅವರ ವೃತ್ತಿಜೀವನದಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದ್ದು, ಅವರ ಮಕ್ಕಳು ಕೂಡ ಮೊಟ್ಟ ಮೊದಲ ಬಾರಿಗೆ ಚಿತ್ರ ವೀಕ್ಷಿಸಿದ್ದಾರೆ.

ಚಿತ್ರವು ಮೂರು ಗಂಟೆ 15 ನಿಮಿಷಗಳ ಅವಧಿಯನ್ನು ಹೊಂದಿದೆ. ಇದರ ಪಾತ್ರವರ್ಗದಲ್ಲಿ ಲಕ್ಷ್ಮಣನಾಗಿ ರವಿ ದುಬೆ, ಹನುಮಾನ್ ಆಗಿ ಸನ್ನಿ ಡಿಯೋಲ್, ಮಂಡೋದರಿಯಾಗಿ ಕಾಜಲ್ ಅಗರ್ವಾಲ್, ಕೈಕೇಯಿಯಾಗಿ ಲಾರಾ ದತ್ತಾ, ಮಂಥರಾ ಆಗಿ ಶೀಬಾ ಚಡ್ಡಾ ಮತ್ತು ರಾಜ ದಶರಥನಾಗಿ ಅರುಣ್ ಗೋವಿಲ್ ಇದ್ದಾರೆ.

ಚಿತ್ರಕ್ಕೆ ಅಕಾಡೆಮಿ ಪ್ರಶಸ್ತಿ ವಿಜೇತರಾದ ಹ್ಯಾನ್ಸ್ ಜಿಮ್ಮರ್ ಮತ್ತು ಎಆರ್ ರೆಹಮಾನ್ ಅವರ ಸಂಗೀತ ಮತ್ತು ಎಂಟು ಬಾರಿ ಆಸ್ಕರ್ ಪ್ರಶಸ್ತಿ ವಿಜೇತ ಡಿಎನ್‌ಇಜಿ ಅವರ ದೃಶ್ಯ ಪರಿಣಾಮಗಳಿವೆ. ಸ್ಯಾಕ್ನಿಲ್ಕ್ ದತ್ತಾಂಶದ ಪ್ರಕಾರ, ಚಿತ್ರವು ಈಗಾಗಲೇ ಸುಮಾರು 17.50 ಕೋಟಿ ಮುಂಗಡ ಬುಕಿಂಗ್‌ಗಳನ್ನು ಗಳಿಸಿದೆ.

‘ಮತಗಳ್ಳತನ’ ಕುರಿತು ಚರ್ಚಿಸಲು ವಿಶೇಷ ಅಧಿವೇಶನಕ್ಕೆ ಬಿಜೆಪಿ ಸಿದ್ಧ, ಆದರೆ ವಿರೋಧ ಪಕ್ಷಗಳಿಗೆ ಆಸಕ್ತಿಯಿಲ್ಲ: ಅಮಿತ್ ಶಾ

ISRO ಮುಡಿಗೆ ಮತ್ತೊಂದು ಗರಿ: GSLV-F18 ರಾಕೆಟ್ ಮೂಲಕ NVS-03 ಉಪಗ್ರಹ ಯಶಸ್ವಿ ಉಡಾವಣೆ..!

ಜ್ಞಾನಭಾರತಿ ಬಳಿ ಸ್ಫೋಟಕ ರೀತಿಯ ವಸ್ತು ಪತ್ತೆ: ಸ್ಥಳಕ್ಕೆ ಪೊಲೀಸರ ಭೇಟಿ, ಪರಿಶೀಲನೆ!

37 ವರ್ಷಗಳ ದಾಖಲೆ ಧೂಳೀಪಟ! ಆಸ್ಟ್ರೇಲಿಯಾ ವಿರುದ್ಧ ರಿಕಲ್ಟನ್, ಮುಲ್ಡರ್ World Record ಶತಕ!

Hormuzನಲ್ಲಿ ತೈಲ ಟ್ಯಾಂಕರ್‌ ಮೇಲೆ limpet ಮೈನ್ ದಾಳಿ: ನಾವಿಕರ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ, 27 ಮಂದಿ ಭಾರತೀಯರು ಪ್ರಾಣಾಪಾಯದಿಂದ ಪಾರು..!