ಆದಿತ್ಯ ಧರ್ 
ಸಿನಿಮಾ ಸುದ್ದಿ

'ಟಾಕ್ಸಿಕ್'ಸಿನಿಮಾಗೆ ಆದಿತ್ಯ ಧರ್ ಜೈ ಪರಾಕ್: ಯಶ್ ಮುಂದಿನ ಚಿತ್ರಕ್ಕೆ ಧುರಂಧರ್ ನಿರ್ದೇಶಕನ ಆ್ಯಕ್ಷನ್ ಕಟ್?

ಎಲ್ಲರೂ ಯಶ್ ಹಾಗೂ ಆದಿತ್ಯ ಧರ್ ಅವರು ಸಿನಿಮಾ ಮಾಡಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ. ಆದಿತ್ಯ ಧರ್ ಪೋಸ್ಟ್ ನೋಡಿದ ನಂತರ ಯಶ್​ ಮುಂದಿನ ಸಿನಿಮಾಗೆ ಆದಿತ್ಯ ಆ್ಯಕ್ಷನ್​ ಕಟ್​ ಹೇಳುತ್ತಾರಾ ಎಂಬ ಗುಸು-ಗುಸು ಜೋರಾಗಿದೆ.

ಮುಂಬೈ: ರಾಕಿಂಗ್​​ ಸ್ಟಾರ್​​ ಯಶ್​ ಅಭಿನಯದ ಹಾಗೂ ಗೀತು ಮೋಹನ್​ದಾಸ್​ ನಿರ್ದೇಶನ ಟಾಕ್ಸಿಕ್​: ಎ ಫೇರಿ ಟೇಲ್ಸ್​​ ಫಾರ್​ ಗ್ರೋನಪ್ಸ್​​ ಸಿನಿಮಾ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಪ್ರಾರಂಭದಲ್ಲಿ ಈ ಸಿನಿಮಾಗೆ ನೆಗೆಟಿವ್​ ಹಾಗೂ ಮಿಶ್ರ ಪತ್ರಿಕ್ರಿಯೆ ಲಭ್ಯವಾದರೂ ಇಲ್ಲಿವರೆಗೆ ಸುಮಾರು 250 ಕೋಟಿಗೂ ಅಧಿಕ ಗಳಿಕೆಯನ್ನು ಮಾಡಿದೆ ಎಂದು ವರದಿಗಳು ಕೇಳಿ ಬರುತ್ತಿವೆ.

ಈಗ ಈ ಸಿನಿಮಾವನ್ನು ನೋಡಿರುವ ಉರಿ ಹಾಗೂ ಧುರಂಧರ್​ ಸಿನಿಮಾ ನಿರ್ದೇಶಕ ಆದಿತ್ಯ ಧರ್ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಅವರು ‘ಟಾಕ್ಸಿಕ್’ ಚಿತ್ರವನ್ನು ವೀಕ್ಷಿಸಿದ್ದು ಯಶ್ ಅವರನ್ನು ಹಾಡಿ ಹೊಗಳಿದ್ದಾರೆ. ಈ ಸಂದರ್ಭದ ಪೋಸ್ಟ್ ವೈರಲ್ ಆಗಿದೆ.

ಎಲ್ಲರೂ ಯಶ್ ಹಾಗೂ ಆದಿತ್ಯ ಧರ್ ಅವರು ಸಿನಿಮಾ ಮಾಡಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ. ಆದಿತ್ಯ ಧರ್ ಪೋಸ್ಟ್ ನೋಡಿದ ನಂತರ ಯಶ್​ ಮುಂದಿನ ಸಿನಿಮಾಗೆ ಆದಿತ್ಯ ಆ್ಯಕ್ಷನ್​ ಕಟ್​ ಹೇಳುತ್ತಾರಾ ಎಂಬ ಗುಸು-ಗುಸು ಜೋರಾಗಿದೆ.

ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನಪ್ಸ್' ಸಿನಿಮಾ ಇತ್ತೀಚೆಗೆ ತೆರೆಕಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದ ಬಗ್ಗೆ ಬಾಲಿವುಡ್ ನಿರ್ದೇಶಕ ಆದಿತ್ಯ ಧರ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಯಶ್ ಅವರ ಪೋಸ್ಟರ್ ಶೇರ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರದ ನಿರ್ದೇಶಕಿ ಗೀತು ಮೋಹನ್‌ದಾಸ್ ಅವರ ಕೆಲಸವನ್ನು ಕೊಂಡಾಡಿರುವ ಅವರು, ಅದಕ್ಕೆ ಕೆಂಪು ಹೃದಯದ ಎಮೋಜಿ ಹಾಕಿ ಬೆಂಬಲ ಸೂಚಿಸಿದ್ದಾರೆ.

ಆದಿತ್ಯ ಧರ್ ಅವರ ಈ ಇನ್‌ಸ್ಟಾಗ್ರಾಮ್ ಸ್ಟೋರಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವೈರಲ್ ಆಗಿದ್ದು, ಯಶ್ ಅಭಿಮಾನಿಗಳ ಮನ ಗೆದ್ದಿದೆ. ಸಿನಿಮಾ ಹಿನ್ನಡೆ ಅನುಭವಿಸುತ್ತಿರುವಾಗ ಬಾಲಿವುಡ್‌ನಿಂದ ಮೊದಲ ವ್ಯಕ್ತಿಯಾಗಿ ಆದಿತ್ಯ ಧರ್ ಬೆಂಬಲಕ್ಕೆ ನಿಂತಿರುವುದನ್ನು ಅಭಿಮಾನಿಗಳು ಶ್ಲಾಘಿಸುತ್ತಿದ್ದಾರೆ. ‘ಖ್ಯಾತ ನಿರ್ದೇಶಕರು ಸಿನಿಮಾದ ಹಿಂದಿನ ದೂರದೃಷ್ಟಿ ಮತ್ತು ಶ್ರಮವನ್ನು ಗುರುತಿಸಿದಾಗ ಅದುವೇ ನಿಜವಾದ ಔರಾ’ ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇರಾನ್ ವಿರುದ್ಧ ಇತ್ತೀಚಿನ ದಾಳಿ ಪೂರ್ಣಗೊಳಿಸಿದ್ದೇವೆ; ಪ್ರತೀಕಾರಕ್ಕೆ ಮುಂದಾದರೆ ಮತ್ತಷ್ಟು ದಾಳಿ: ಡೊನಾಲ್ಡ್ ಟ್ರಂಪ್ ಎಚ್ಚರಿಕೆ

ನೇಪಾಳ ಪ್ರವಾಹ ಮಹಾ ದುರಂತ: ಸಾವಿನ ಸಂಖ್ಯೆ 1,127ಕ್ಕೆ ಏರಿಕೆ, ನಾಪತ್ತೆಯಾಗಿರುವ 4,858 ಮಂದಿಗಾಗಿ ಮುಂದುವರೆದ ಕಾರ್ಯಾಚರಣೆ..!

ಗೃಹಲಕ್ಷ್ಮಿ ನಕಲಿ ಖಾತೆಗಳಿಗೆ ಕಡಿವಾಣ: ಮನೆ-ಮನೆ ಸಮೀಕ್ಷೆಗೆ ಸರ್ಕಾರ ಮುಂದು, ಸಮೀಕ್ಷೆ ತಪ್ಪಿಸಿದ್ರೆ ನಿಲ್ಲಲಿದೆ 2,000 ರೂ. ಹಣ..!

ನೇಪಾಳ ಮಹಾ ಪ್ರವಾಹ: ಸಾವಿನ ದವಡೆಯಿಂದ ಜಸ್ಟ್ ಮಿಸ್; ಸುರಕ್ಷಿತವಾಗಿ ಬೆಂಗಳೂರಿಗೆ ಮರಳಿದ 17 ಮಂದಿ ಕನ್ನಡಿಗರು!

ಏನಾದರೂ ಮಾಡುತ್ತಿದ್ದೇವೆ ಎಂದು ತೋರಿಸಿಕೊಳ್ಳಲು ಅಶೋಕ-ವಿಜಯೇಂದ್ರ ಪಾದಯಾತ್ರೆ ನಡೆಸುತ್ತಿದ್ದಾರೆ: ಬಿ.ಕೆ.ಹರಿಪ್ರಸಾದ್ ವ್ಯಂಗ್ಯ