ಮೈಥಿಲಿ ಠಾಕೂರ್ ಮತ್ತು ಕಂಗನಾ ರಣಾವತ್ 
ಸಿನಿಮಾ ಸುದ್ದಿ

ರೋಲ್ಸ್ ರಾಯ್ಸ್ ಕಾರಿನಲ್ಲಿ ಬಂದ ಮೈಥಿಲಿ ಠಾಕೂರ್ ಟ್ರೋಲ್: ನಾವು ಬಡವರಂತೆ ಜೀವನ ನಡೆಸಬೇಕೆಂಬ ನಿರೀಕ್ಷೆ ಅತಾರ್ಕಿಕ; ಗಾಯಕಿ ಬೆಂಬಲಿಸಿದ ಕಂಗನಾ

ಜನಪ್ರತಿನಿಧಿಯಾಗಿ ಇಷ್ಟೊಂದು ದುಬಾರಿ ಕಾರಿನಲ್ಲಿ ಬಂದಿದ್ದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಟೀಕೆ ವ್ಯಕ್ತವಾಗಿತ್ತು. ಇದೀಗ ನಟಿ ಹಾಗೂ ಸಂಸದೆ ಕಂಗನಾ ರಣಾವತ್ ಅವರು ಮೈಥಿಲಿ ಬೆಂಬಲಕ್ಕೆ ನಿಂತು ಟ್ರೋಲಿಗರಿಗೆ ತಕ್ಕ ಉತ್ತರ ನೀಡಿದ್ದಾರೆ.

ದೆಹಲಿ: ಬಿಹಾರದ ಯುವ ಶಾಸಕಿ ಹಾಗೂ ಪ್ರಸಿದ್ಧ ಗಾಯಕಿ ಮೈಥಿಲಿ ಠಾಕೂರ್ ಇತ್ತೀಚೆಗೆ ಮುಂಬೈನ ಲಾಲ್‌ಬಾಗ್‌ಚಾ ರಾಜ ಗಣಪತಿ ದರ್ಶನಕ್ಕೆ ರೋಲ್ಸ್ ರಾಯ್ಸ್ ಕಾರಿನಲ್ಲಿ ಬಂದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದರು.

ಜನಪ್ರತಿನಿಧಿಯಾಗಿ ಇಷ್ಟೊಂದು ದುಬಾರಿ ಕಾರಿನಲ್ಲಿ ಬಂದಿದ್ದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಟೀಕೆ ವ್ಯಕ್ತವಾಗಿತ್ತು. ಇದೀಗ ನಟಿ ಹಾಗೂ ಸಂಸದೆ ಕಂಗನಾ ರಣಾವತ್ ಅವರು ಮೈಥಿಲಿ ಬೆಂಬಲಕ್ಕೆ ನಿಂತು ಟ್ರೋಲಿಗರಿಗೆ ತಕ್ಕ ಉತ್ತರ ನೀಡಿದ್ದಾರೆ.

ಸೆಪ್ಟೆಂಬರ್ 15ರಂದು ಮೈಥಿಲಿ ಠಾಕೂರ್ ಮುಂಬೈನ ಪ್ರಸಿದ್ಧ ಲಾಲ್‌ಬಾಗ್‌ಚಾ ರಾಜ ಪಂಡಾಲ್‌ಗೆ ಭೇಟಿ ನೀಡಿದ್ದರು. ನೀಲಿ ಬಣ್ಣದ ರೋಲ್ಸ್ ರಾಯ್ಸ್ ಕುಲ್ಲಿನಾನ್ ಐಷಾರಾಮಿ ಕಾರಿನಲ್ಲಿ ಅವರು ಆಗಮಿಸಿದ್ದರು. ಕಾರಿನಲ್ಲಿದ್ದುಕೊಂಡೇ ಜನರಿಗೆ ಕೈಬೀಸಿ ನಂತರ ಗಣೇಶನ ದರ್ಶನ ಪಡೆದಿದ್ದರು.

ಈ ಟೀಕೆಗಳ ಬಗ್ಗೆ ಕಂಗನಾ ರಣಾವತ್‌ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ರಾಜಕಾರಣಿಗಳು ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ಕಾರಣಕ್ಕೆ ಅವರು ಐಶಾರಾಮಿ ಜೀವನಶೈಲಿಯನ್ನು ಏಕೆ ತ್ಯಜಿಸಬೇಕು ಎಂದು ಕಂಗನಾ ಪ್ರಶ್ನಿಸಿದ್ದಾರೆ.

ರಾಜಕಾರಣಿಗಳು ಉತ್ತಮ ಜೀವನ ನಡೆಸುವುದನ್ನು ನೋಡಿದಾಗಲೆಲ್ಲಾ ಕೆಲವರು ಕಿಡಿಕಾರಲು ಪ್ರಾರಂಭಿಸುತ್ತಾರೆ. ಈಗ ನಮ್ಮ ಯುವ ಶಾಸಕಿ ಐಷಾರಾಮಿ ಕಾರು ಬಳಸಿದ್ದಕ್ಕಾಗಿ ಟ್ರೋಲ್ ಆಗುತ್ತಿದ್ದಾರೆ. ನಾವು ಸಮಾಜ ಸೇವೆಗೆ ಒಲವು ತೋರಬಹುದು. ಆದರೆ, ನಮಗೆ ನಮ್ಮದೇ ಆದ ವೃತ್ತಿ, ಜೀವನ ಮತ್ತು ಜನಪ್ರಿಯತೆಯೂ ಇದೆ.

ನಾವು ನಿಸ್ವಾರ್ಥವಾಗಿ ಸಾರ್ವಜನಿಕ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತೇವೆ. ಆದರೆ, ಕೆಲವರು ನಾವು ಚೆನ್ನಾಗಿ ಬದುಕುವುದನ್ನು ನೋಡಿದರೆ ತುಂಬಾ ನೋವಾಗುತ್ತದೆ, ಏಕೆ? ನಾವೂ ಚೆನ್ನಾಗಿ ಬದುಕಲು ಸಾಧ್ಯವಿಲ್ಲವೇ? ನಮಗೆ ಸಾರ್ವಜನಿಕ ಹಣದಲ್ಲಿ ಆಸಕ್ತಿ ಇಲ್ಲ. ಆದರೆ, ನಾವು ಬಡವರಾಗಿ ಮತ್ತು ನಿರ್ಜೀವವಾಗಿ ಉಳಿಯಬೇಕೆಂದು ನಿರೀಕ್ಷಿಸುವುದು ಒಳ್ಳೆಯದಲ್ಲ ಎಂದಿದ್ದಾರೆ.

ಮತ್ತೊಂದೆಡೆ ಮೈಥಿಲಿ ಠಾಕೂರ್ ಅವರ ಆಸ್ತಿ ವಿವರದ ಬಗ್ಗೆಯೂ ಅಂತರ್ಜಾಲದಲ್ಲಿ ದೊಡ್ಡ ಚರ್ಚೆ ಶುರುವಾಗಿದೆ. 2025ರ ಬಿಹಾರ ವಿಧಾನಸಭೆ ಚುನಾವಣೆಯ ಅಫಿಡವಿಟ್‌ನಲ್ಲಿ ಮೈಥಿಲಿ ಅವರು ಒಟ್ಟು 3.82 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಘೋಷಿಸಿಕೊಂಡಿದ್ದರು. ಅವರ ಆಸ್ತಿ ಪಟ್ಟಿಯಲ್ಲಿ ದ್ವಿಚಕ್ರ ವಾಹನ ಮತ್ತು ಚಿನ್ನಾಭರಣಗಳಿತ್ತೇ ಹೊರತು ರೋಲ್ಸ್ ರಾಯ್ಸ್ ಕಾರಿನ ಉಲ್ಲೇಖವಿರಲಿಲ್ಲ. ಹೀಗಾಗಿ ಈ ಕಾರು ಯಾರದ್ದು ಎನ್ನುವ ಪ್ರಶ್ನೆ ನೆಟ್ಟಿಗರಲ್ಲಿ ಮೂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಧರ್ಮಸ್ಥಳ ಸೌಜನ್ಯಾ ಅತ್ಯಾಚಾರ-ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶ..!

IIT Bombay ವಿದ್ಯಾರ್ಥಿ ನಕಲು ಮಾಡಿದ್ದನ್ನು ತಡೆದಿದ್ದೇ ತಪ್ಪಾ? ಪ್ರೊಫೆಸರ್ ವಿರುದ್ಧ ಪ್ರತಿಭಟನೆ; ಯಾರು ಈ ಪ್ರೊ. Suryanarayana Doolla?

TMC ಹೆಸರು-ಚಿಹ್ನೆ ಫ್ರೀಜ್; ಚುನಾವಣಾ ಆಯೋಗದ ನಿರ್ಧಾರಕ್ಕೆ ಮಮತಾ ಬ್ಯಾನರ್ಜಿ ಆಕ್ಷೇಪ, ತುರ್ತು ವಿಚಾರಣೆಗೆ ಸುಪ್ರೀಂ ಒಪ್ಪಿಗೆ..!

ಭೂಮಿಯನ್ನು ಸುತ್ತುತ್ತಿರುವ ಆಯುಧಗಳು: ಭಾರತದ ಮುಂದಿರುವ ಸವಾಲುಗಳೇನು? (ಜಾಗತಿಕ ಜಗಲಿ)

ರಾಯಲಸೀಮೆ ವಿಸ್ಮಯ; ನೀರಿಲ್ಲದೇ ಗಣಪನ ವಿಸರ್ಜನೆ, ನದಿ ತಟದಲ್ಲಿ ಮೂರ್ತಿಗಳು ಅನಾಥ; ಕೊನೆಗೂ ಸುರಿದ ಮಳೆರಾಯ, Video