ಚಿತ್ರದ ಪೋಸ್ಟರ್ 
ಸಿನಿಮಾ ಸುದ್ದಿ

Toxic ಬೆನ್ನಲ್ಲೇ ಭಾರೀ ಹೈಪ್ ಕ್ರಿಯೆಟ್ ಮಾಡಿದ್ದ Paradiseಗೆ ತೆಲುಗರಿಂದಲೇ ತರಾಟೆ; ಆದರೂ ಮೊದಲ ದಿನ ದಾಖಲೆ ಕಲೆಕ್ಷನ್!

ಶ್ರೀಕಾಂತ್ ಒಡೆಲಾ ನಿರ್ದೇಶನದ ನಾನಿ ಅಭಿನಯದ ಪ್ಯಾರಡೈಸ್ ಚಿತ್ರವು ಭಾರೀ ಹೈಪ್ ನೊಂದಿಗೆ ಇಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. CBFC ಯಿಂದ A ರೇಟಿಂಗ್ ಪಡೆದ ಈ ಚಿತ್ರವು ನಾನಿ ವೃತ್ತಿಜೀವನದಲ್ಲೇ ಅತಿದೊಡ್ಡ ಓಪನಿಂಗ್ ಪಡೆದಿದೆ.

ಶ್ರೀಕಾಂತ್ ಒಡೆಲಾ ನಿರ್ದೇಶನದ ನಾನಿ ಅಭಿನಯದ ಪ್ಯಾರಡೈಸ್ ಚಿತ್ರವು ಭಾರೀ ಹೈಪ್ ನೊಂದಿಗೆ ಇಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. CBFC ಯಿಂದ A ರೇಟಿಂಗ್ ಪಡೆದ ಈ ಚಿತ್ರವು ನಾನಿ ವೃತ್ತಿಜೀವನದಲ್ಲೇ ಅತಿದೊಡ್ಡ ಓಪನಿಂಗ್ ಪಡೆದಿದೆ. ಇದು ಅವರ ಹಿಂದಿನ ಚಿತ್ರಗಳಾದ ದಸರಾ, HIT: ದಿ ಥರ್ಡ್ ಕೇಸ್ ಮತ್ತು ಸರಿಪೋಧಾ ಸನಿವಾರಂ ಗಳ ಓಪನಿಂಗ್‌ಗಳನ್ನು ಮೀರಿಸಿದೆ. ಆದರೆ ಪ್ಯಾರಡೈಸ್ ಬಗ್ಗೆ ಮಿಶ್ರ ಪ್ರತಿಕ್ರಿಯೆ ಬಂದಿದ್ದು ತೆಲುಗು ಪ್ರೇಕ್ಷಕರಿಂದ ಟೀಕೆಗೆ ಗುರಿಯಾಗಿದೆ.

ಸಕ್ನಿಲ್ಕ್ ಪ್ರಕಾರ, ದಿ ಪ್ಯಾರಡೈಸ್ ತನ್ನ ಆರಂಭಿಕ ದಿನದಂದು ರಾತ್ರಿ 8 ಗಂಟೆಯ ಹೊತ್ತಿಗೆ ಭಾರತದಲ್ಲಿ 31.04 ಕೋಟಿ ನಿವ್ವಳ ಸಂಗ್ರಹವನ್ನು ಹೊಂದಿದೆ. ಇದು 8639 ಪ್ರದರ್ಶನಗಳಿಂದ 46.8ರಷ್ಟು ಆಕ್ಯುಪೆನ್ಸಿಯನ್ನು ತೋರಿಸಿದೆ. ಈ ಚಿತ್ರವು ತೆಲುಗಿನಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಆದರೆ ಹಿಂದಿ ಮತ್ತು ತಮಿಳಿನಲ್ಲಿ ಹೇಳಿಕೊಳ್ಳುವಷ್ಟು ಕಲೆಕ್ಷನ್ ಮಾಡಿಲ್ಲ. ದಿ ಪ್ಯಾರಡೈಸ್ ದಿನವಿಡೀ 59ರಷ್ಟು ಕ್ಕಿಂತ ಹೆಚ್ಚಿನ ಆಕ್ಯುಪೆನ್ಸಿಯನ್ನು ಕಾಯ್ದುಕೊಂಡಿದೆ.

'HIT 3' ಚಿತ್ರವು 2025ರಲ್ಲಿ ಬಿಡುಗಡೆಯಾಗಿತ್ತು. 'A' ರೇಟಿಂಗ್ ಪಡೆದಿದ್ದರೂ, ಈ ಪೊಲೀಸ್ ಥ್ರಿಲ್ಲರ್ ಚಿತ್ರವು ಭಾರತದಲ್ಲಿ ಬಿಡುಗಡೆಯಾದ ಮೊದಲ ದಿನವೇ 21 ಕೋಟಿ ನಿವ್ವಳ ಆದಾಯವನ್ನು ಗಳಿಸಿತ್ತು. ಇದು ಆ ಸಮಯದವರೆಗೆ ಅವರ ಚಿತ್ರಗಳಲ್ಲೇ ಅತಿ ಹೆಚ್ಚಿನ ಆರಂಭಿಕ ಗಳಿಕೆಯಾಗಿತ್ತು. ಇನ್ನು ಒಡೆಲಾ ನಿರ್ದೇಶನದ ಚೊಚ್ಚಲ ಚಿತ್ರ 'ದಸರಾ' ಕ್ರಮವಾಗಿ 23.20 ಕೋಟಿ ಗಳಿಸಿದ್ದವು.

200 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ 'ದಿ ಪ್ಯಾರಡೈಸ್' (The Paradise) ಚಿತ್ರವು ತನ್ನ ಪ್ರೀಮಿಯರ್ ಪ್ರದರ್ಶನಗಳ ಹಾಗೂ ಬಿಡುಗಡೆಯಾದ ಮೊದಲ ದಿನದಂದು ಉತ್ತಮ ಪ್ರದರ್ಶನ ನೀಡಿದೆ. ಆದರೆ ನೆಗೆಟಿವ್ ಕಮೆಂಟ್ ಗಳು ಬರುತ್ತಿರುವುದರಿಂದ ಶುಕ್ರವಾರ ಮತ್ತು ವಾರಾಂತ್ಯದ (ವೀಕೆಂಡ್) ಲಾಭ ಸಿಕ್ಕುತ್ತದೆಯೇ ಇಲ್ಲವೆ ಎಂಬುದನ್ನು ಕಾದು ನೋಡಬೇಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೋದಿ, ಶಾ, ಜ್ಞಾನೇಶ್ ಕುಮಾರ್ ದೇಶದ್ರೋಹಿಗಳು'; ನೂರಕ್ಕೆ ನೂರರಷ್ಟು ಎಲ್ಲಾ ಚುನಾವಣೆಗಳಲ್ಲೂ ಅಕ್ರಮ; ಸಂಚುಕೋರರಿಗೆ ಶಿಕ್ಷೆಯಾಗಬೇಕು: ರಾಹುಲ್ ಗಾಂಧಿ

ಈ ಬಾರಿ ಮೈಸೂರು ದಸರಾ ಉದ್ಘಾಟಕರಾಗಿ ಗವಿಸಿದ್ದೇಶ್ವರ ಸ್ವಾಮೀಜಿ ಆಯ್ಕೆ; ಗೊಂದಲಕ್ಕೆ ತೆರೆ

ಬಿಹಾರದಲ್ಲಿ ಜಮುಯಿ ಘಟನೆ ಬೆನ್ನಲ್ಲೇ ಮತ್ತೊಂದು ಹೀನ ಕೃತ್ಯ: ಬಾಲಕಿಯನ್ನು ಹಿಡಿದು ಎಳೆದಾಡಿದ ಕೀಚಕರು; Video

ಮುಸ್ಲಿಂ ಮತದಾರರ ಹೆಸರು ಡಿಲೀಟ್ ಮಾಡುವಂತೆ ಚುನಾವಣಾ ಆಯೋಗಕ್ಕೆ BJP ಶಾಸಕ ಪತ್ರ: ಬಿ.ಕೆ ಹರಿಪ್ರಸಾದ್ ರಿಂದ ದಾಖಲೆ ಬಿಡುಗಡೆ!

ದೇಶಾದ್ಯಂತ ಮತದಾರರ ಪಟ್ಟಿಯಿಂದ 13 ಕೋಟಿ ಮತದಾರರ ಹೆಸರು ಡಿಲೀಟ್! ಅವರ ಮಕ್ಕಳ ಗತಿಯೇನು? CEC ವಿರುದ್ಧ ದೂರು ದಾಖಲಿಸಿದ TMC ಸಂಸದೆ