ಒಂದು ಮೊಟ್ಟೆಯ ಕಥೆ 
ಸಿನಿಮಾ ವಿಮರ್ಶೆ

ಒಂದು ಮೊಟ್ಟೆಯ ಕಥೆ: ಬಾಲ್ಡ್ ಆದರೂ ಬ್ಯೂಟಿಫುಲ್!

ಸರಳ, ತೆಳ್ಳಗಿನ, ಬಕ್ಕ ತಲೆಯ ವ್ಯಕ್ತಿಯೊಬ್ಬ ಸುಂದರ ಯುವತಿಯನ್ನು ವಿವಾಹವಾಗುವ ಆಸೆ ಹೊಂದಿದ್ದು, ವಧು ಅನ್ವೇಷಣೆಯಲ್ಲಿ ತೊಡಗಿರುವುದೇ ಚಿತ್ರ ಕಥೆಯ ಎಳೆ.

ಸರಳ ಸ್ಕ್ರಿಪ್ಟ್ ಮೂಲಕ ಉತ್ತಮ ಚೊಚ್ಚಲ ಚಿತ್ರ ನೀಡುವುದು ಹಲವು ನಿರ್ದೇಶಕರಿಗೆ ಆತ್ಮಚರಿತ್ರೆಯ ಭಾಗವಾಗಲಿದೆ. 
ಒಂದು ಮೊಟ್ಟೆಯ ಕಥೆ ಇದಕ್ಕೆ ಉದಾಹರಣೆಯಾಗಬಹುದು. ಸರಳ, ತೆಳ್ಳಗಿನ, ಬಕ್ಕ ತಲೆಯ ವ್ಯಕ್ತಿಯೊಬ್ಬ ಸುಂದರ ಯುವತಿಯನ್ನು ವಿವಾಹವಾಗುವ ಆಸೆ ಹೊಂದಿದ್ದು, ವಧು ಅನ್ವೇಷಣೆಯಲ್ಲಿ ತೊಡಗಿರುವುದೇ ಚಿತ್ರ ಕಥೆಯ ಎಳೆ. 
ರಾಜ್ ಬಿ. ಶೆಟ್ಟಿ ಸರಳತೆಯಿಂದಲೇ ವಿಸ್ಮಯವನ್ನು ಮೂಡಿಸಿದ್ದು, ಆನ್ ಸ್ಕ್ರೀನ್ ನಲ್ಲಿ ಅತ್ಯಂತ ವಿರಳವಾಗಿ ಕಂಡುಬರುವ ವಾಸ್ತವಕ್ಕೆ ಹತ್ತಿರವಾಗಿರುವ ಅಂಶಗಳನ್ನು ಚಿತ್ರದಲ್ಲಿ ತೋರಿಸಿದ್ದಾರೆ. ವಾಸ್ತವದಲ್ಲಿರುವ ಅಂಶಗಳನ್ನು  ಸತ್ಯವನ್ನು ತೆರೆ ಮೇಲೆ ತಂದಿರುವುದರ ಜೊತೆಗೆ  ವೀಕ್ಷಕರಿಗೆ ಇರುವ ವ್ಯಂಗ್ಯ, ಹಾಸ್ಯದ ಮನರಂಜನೆಯನ್ನೂ ನೀಡುತ್ತದೆ. ತಮ್ಮ ಚೊಚ್ಚಲ ಪ್ರಯತ್ನದಲ್ಲಿಯೇ ರಾಜ್ ಬಿ ಶೆಟ್ಟಿ ಚಿತ್ರವನ್ನು ಜನರಿಗೆ ಮೆಚ್ಚುಗೆಯಾಗುವ ರೀತಿಯಲ್ಲಿ ನಿರ್ವಹಿಸಿದ್ದಾರೆ ಎನ್ನಬಹುದಾಗಿದೆ. 
ಬಕ್ಕ ತಲೆಯ ಕನ್ನಡದ ಪ್ರಾಧ್ಯಾಪಕನಾಗಿರುವ 28 ವರ್ಷದ ಜನಾರ್ದನ್ (ರಾಜ್ ಬಿ.ಶೆಟ್ಟಿ)  ಕುಟುಂಬದವರೊಂದಿಗೆ ವಧು ಅನ್ವೇಷಣೆಯಲ್ಲಿ ನಿರತನಾಗಿರುತ್ತಾನೆ. ಒಂದೆಡೆ 'ಮೊಟ್ಟೆ' ಎಂಬ ಅಡ್ಡಹೆಸರು ಪಡೆದಿದ್ದ ಜನಾರ್ದನ್ ನ್ನು  ಯುವತಿಯರು ವಿವಾಹವಾಗಲು ಒಪ್ಪುವುದಿಲ್ಲ. ಮತ್ತೊಂದೆಡೆ ಜನಾರ್ದನ್ ಸಹ ದಪ್ಪಗಿನ ಹುಡುಗಿಯರನ್ನು ಒಪ್ಪುವುದಿಲ್ಲ. ಈ ರೀತಿಯ ಮಾನವನ ಸಹಜ ಪ್ರವೃತ್ತಿಗಳನ್ನು ವಿಡಂಬನೆಯ ನಡುವೆ ಪರಿಶೋಧನೆಗೊಳಪಡಿಸಿರುವುದು ಹಾಗೂ ಅದನ್ನು ಸರಳ, ವ್ಯಂಗ್ಯ ಕಟ್ಟಿಕೊಟ್ಟಿರುವುದು ಸಿನಿಮಾದ ಹೆಗ್ಗಳಿಕೆ ಹಾಗೂ ಶಕ್ತಿಯಾಗಿದೆ. 
ನಿರ್ದೇಶನದಲ್ಲಷ್ಟೇ ಅಲ್ಲದೇ ರಾಜ್.ಬಿ.ಶೆಟ್ಟಿ ಉತ್ತಮ ಪ್ರತಿಭೆ ಎಂಬುದನ್ನು ಚಿತ್ರದಲ್ಲಿ ತೋರಿಸಿದ್ದಾರೆ. ಶೈಲಶ್ರೀ, ಉಷಾ ಭಂಡಾರಿ, ಶ್ರೀನಿವಾಸ್ ಆಗಿ ಪ್ರಕಾಶ್ ಸೇರಿದಂತೆ ಎಲ್ಲ ಪಾತ್ರಧಾರಿಗಳು ಉತ್ತಮವಾಗಿ ಅಭಿನಯಿಸಿದ್ದು ರಾಜ್ ಶೆಟ್ಟಿಗೆ ಸಾಥ್ ನೀಡಿದ್ದಾರೆ. ಮುಕುಂದನ್ ಸಂಗೀತವೂ ಉತ್ತಮವಾಗಿದ್ದು, ಸಿನಿಮಾದ ಉದ್ದಕ್ಕೂ ಪ್ರೇಕ್ಷಕರಿಗೆ ಮನರಂಜನೆ ನೀಡುವ ಒಂದು ಮೊಟ್ಟೆಯ ಕಥೆ ಸಿದ್ಧ ಸೂತ್ರಗಳಿಗೆ ಸೆಡ್ಡು ಹೊಡೆದಿದ್ದು, ಬಾಲ್ಡ್ ಆದರೂ ಬ್ಯೂಟಿಫುಲ್ ಆಗಿದೆ ಎನ್ನಬಹುದು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT