ಆರ್ಥಿಕ ಪರಿಸ್ಥಿತಿ: ಎನ್ ಡಿಎ V/s ಯುಪಿಎ
ಭಾರತದ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿ ಯಾವ ಸರ್ಕಾರದಡಿ ಚೆನ್ನಾಗಿತ್ತು?...
ಭಾರತದ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿ ಯಾವ ಸರ್ಕಾರದಡಿ ಚೆನ್ನಾಗಿತ್ತು? ಯುಪಿಎದ ಅಡಿಯಲ್ಲಿಯೇ ಅಥವಾ ಎನ್ ಡಿಎ ಸರ್ಕಾರದಡಿಯೇ? ಈ ಪ್ರಶ್ನೆಗೆ ಉತ್ತರವನ್ನು ಭಾಷಣ ಬಿಗಿಯುವುದರಿಂದ ಕಂಡುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ, ವಾಸ್ತವಾಂಶದ ಆಧಾರದಲ್ಲಿ ಕಂಡುಕೊಳ್ಳೋಣ. ನಾನೀಗ, ಆರ್ಥಿಕ ಮತ್ತು ಸಾಮಾಜಿಕ ಮಾನದಂಡಗಳನ್ನೂ ಒಳಗೊಂಡಂತೆ ಪ್ರಮುಖ 10 ಮಾನದಂಡಗಳ ಮೂಲಕ ಯುಪಿಎ ಮತ್ತು ಎನ್ಡಿಎದ ಕಾರ್ಯನಿರ್ವಹಣೆಯ ವಿಶ್ಲೇಷಣೆಯನ್ನು ಮಾಡಲಿದ್ದೇನೆ...
1. ಜಿಡಿಪಿ(ಸಮಗ್ರ ದೇಶೀಯ ಉತ್ಪನ್ನ)ಯ ಬೆಳವಣಿಗೆ
1998ರಿಂದ 2004ರ ಎನ್ಡಿಎ ಅಧಿಕಾರಾವಧಿಯಲ್ಲಿ ದೇಶದ ಜಿಡಿಪಿಯ ಸರಾಸರಿ ವಾರ್ಷಿಕ ಬೆಳವಣಿಗೆ 6 ಪ್ರತಿಶತದಷ್ಟಿತ್ತು. ಇನ್ನು ಯುಪಿಎ ಅಧಿಕಾರಾವಧಿಯಲ್ಲಿ, ಅಂದರೆ 2004 ರಿಂದ 2013ರ ವೇಳೆಗೆ ಜಿಡಿಪಿಯ ಸರಾಸರಿ ವಾರ್ಷಿಕ ಬೆಳವಣಿಗೆ 7.9 ಪ್ರತಿಶತದಷ್ಟಿದೆ.
ಸ್ಪಷ್ಟ ಕಾರಣಗಳು 1: ವಾಜಪೇಯಿ ನೇತೃತ್ವದ ಸರ್ಕಾರ 1998ರ ಮೇ ತಿಂಗಳಂದು ನಡೆಸಿದ ಪೋಖ್ರಾನ್-2 ಪರಮಾಣು ಪರೀಕ್ಷೆಯಿಂದಾಗಿ ಅಮೆರಿಕದಿಂದ ಆರ್ಥಿಕ ನಿಬಂಧನೆಯನ್ನು ದೇಶ ಎದುರಿಸಬೇಕಾಯಿತು. ಕಡಿಮೆ ಸಮಯದ, ಆದರೆ ಅತಿ ದುಬಾರಿಯಾಗಿ ಪರಿಣಮಿಸಿದ ಕಾರ್ಗಿಲ್ ಯುದ್ಧವನ್ನು 1999ರಲ್ಲಿ ಎನ್ಡಿಎ ಎದುರಿಸಿತು. ಅಲ್ಲದೆ 2000ನೇ ಇಸವಿಯಲ್ಲಿ ಜಗತ್ತನ್ನು ಕಾಡಿದ ಅಂತರ್ಜಾಲ ಸಮಸ್ಯೆ (ವೈ2ಕೆ)ಯಿಂದಾಗಿಯೂ ಭಾರತ ಆಗ ಸಮಸ್ಯೆ ಎದುರಿಸಿತ್ತು. ಇನ್ನು ಎನ್ಡಿಎ ಅಧಿಕಾರಕ್ಕೆ ಬಂದ ವೇಳೆಯಲ್ಲಿ, ಅಂದರೆ 1997-98ರಲ್ಲಿ ಇಡೀ ಪೂರ್ವ ಏಷಿಯಾ ಹಣಕಾಸು ಬಿಕ್ಕಟ್ಟಿಗೆ ಸಿಲುಕಿತ್ತು. ಈ ಸಮಸ್ಯೆಯ ವಿರುದ್ಧವೂ ಅದು ಸೆಣೆಸಬೇಕಾಯಿತು.
ಸ್ಪಷ್ಟ ಕಾರಣಗಳು 2: ಎನ್ಡಿಎ ಸರ್ಕಾರದ ಕೊನೆಯ ವರ್ಷದಲ್ಲಿ(2003-2004) ದೇಶದ ಜಿಡಿಪಿ ಇದ್ದದ್ದು 8.1 ಪ್ರತಿಶತದಷ್ಟು. ಆ ಬೆಳವಣಿಗೆಯ ಲಾಭ ಅಧಿಕಾರಕ್ಕೆ ಬಂದ ಯುಪಿಎಗೆ ದೊರಕಿತು. ಇನ್ನು ಆ ಸಮಯದಲ್ಲಿನ ಜಾಗತಿಕ ಆರ್ಥಿಕ ಉಬ್ಬರದಿಂದಾಗಿ ವಿದೇಶಿ ಹಣ ಭಾರತಕ್ಕೆ ಹರಿದು ಬಂದಿತು. ಇದರಿಂದಾಗಿ ಯುಪಿಎದ ಮೊದಲ ಆಡಳಿತಾವಧಿಯಲ್ಲಿ ಜಿಡಿಪಿಯ ಪ್ರಮಾಣದಲ್ಲಿ ಏರಿಕೆಯಾಯಿತು. 2008ರಲ್ಲಿ ಲೆಹ್ಮನ್ ಸಹೋದರರ ಸಾಮ್ರಾಜ್ಯ ಕುಸಿದುಬಿದ್ದಾಗ ಭಾರತದ ಆರ್ಥಿಕತೆಗೆ ಹೊಡೆತಬಿತ್ತಾದರೂ, ನಂತರದ ಫೆಡರಲ್ ರಿಸರ್ವ್ನ ಆಸ್ತಿ ಖರೀದಿ ಕಾರ್ಯಕ್ರಮದಿಂದಾಗಿ 2009ರ ನಂತರ, ಅಜಮಾಸು ಶೂನ್ಯ ಬಡ್ಡಿದರದಲ್ಲಿ ಭಾರತಕ್ಕೆ ಡಾಲರ್ಗಳು ಹರಿದು ಬಂದವು.
2. ಆಯಾತ ನಿರ್ಯಾತದ ಅಂತರ
- 2004: ()7.36 ಬಿಲಿಯನ್ ಡಾಲರ್ಗಳು (ಹೆಚ್ಚುವರಿ)
- 2013: (-) 80 ಬಿಲಿಯನ್ ಡಾಲರ್ಗಳು
- 2004: (-) 13.16 ಬಿಲಿಯನ್ ಡಾಲರ್ಗಳು,
- 2013: () 180 ಬಿಲಿಯನ್ ಡಾಲರ್ಗಳು.
- 2004: ಜಿಡಿಪಿಯ 4.7 ಪ್ರತಿಶತದಷ್ಟು
- 2013: ಜಿಡಿಪಿಯ 4.8 ಪ್ರತಿಶತದಷ್ಟು
- 1998-2004: 5 ಪ್ರತಿಶತ
- 2004-2013: 9 ಪ್ರತಿಶತ(ಆಯಾ ಸರ್ಕಾರಗಳ ಅಧಿಕಾರಾವಧಿಯನ್ನು ಗಮನದಲ್ಲಿಟ್ಟುಕೊಂಡು ಈ ಅಂಕಿ ಅಂಶವನ್ನು ಸಿದ್ಧಪಡಿಸಲಾಗಿದೆ)
- 2004: 111.6 ಬಿಲಿಯನ್ ಡಾಲರ್ಗಳು,
- 2013: 390 ಬಿಲಿಯನ್ ಡಾಲರ್ಗಳು
- 1999-2004(ಎನ್ಡಿಎ): 6 ಕೋಟಿ ಉದ್ಯೋಗಗಳ ಸೃಷ್ಟಿ
- 2004-11(ಯುಪಿಎ): 1 ಕೋಟಿ 46 ಲಕ್ಷ ಉದ್ಯೋಗ ಸೃಷ್ಟಿ
- 1998-2004(ಎನ್ಡಿಎ): ವ್ಯತ್ಯಯ: 1 ಡಾಲರ್ 39 ರಿಂದ 49 ರುಪಾಯಿ.
- 2004-13(ಯುಪಿಎ): ವ್ಯತ್ಯಯ: 1 ಡಾಲರ್ 39 ರಿಂದ 68 ರುಪಾಯಿ.
- (ಮಾನವಸಂಪನ್ಮೂಲ ಅಭಿವೃದ್ಧಿ ಸೂಚಿ)
- 2004: 2004ರಲ್ಲಿ ಭಾರತ ಈ ಸೂಚಿಯಲ್ಲಿ 0.453 ಅಂಕಗಳೊಂದಿಗೆ 123ನೇ ಸ್ಥಾನದಲ್ಲಿತ್ತು.
- 2013: 13 ಸ್ಥಾನ ಕುಸಿದ ಭಾರತ 2013ರಲ್ಲಿ 0.554 ಅಂಕಗಳೊಂದಿಗೆ ಜಾಗತಿಕವಾಗಿ 136ನೇ ಸ್ಥಾನಕ್ಕೆ ಕುಸಿಯಿತು.
- - 2004: 44, 327 ಕೋಟಿ ರುಪಾಯಿ.
- - 2013: 2,31, 584 ಕೋಟಿ ರುಪಾಯಿ.
ಹಿರಿಯ ಪತ್ರಕರ್ತ