ಮಕ್ಕಳ ಹಕ್ಕುಗಳ ಉಲ್ಲಂಘನೆ ಇಲ್ಲಿಲ್ಲವೇ?
ಕರ್ನಾಟಕದ ಅನೇಕ ದೊಡ್ಡ -ದೊಡ್ಡ ಶಹರಗಳಲ್ಲಿ ಆಂಗ್ಲ ಮಾಧ್ಯಮಗಳಲ್ಲಿ ಶಿಕ್ಷಣ ಕೊಡಿಸಬೇಕೆಂಬ ಒಂದೇ ಗುರಿಯಿಂದ ಅವರ ಬಾಲ್ಯತನವನ್ನು ಒತ್ತಾಯಪೂರ್ವಕವಾಗಿ, ಅದಕ್ಕೆ ಪೂರಕವಾಗಿ ಶಿಕ್ಷಣ ಸಂಸ್ಥೆಗಳು ವರ್ತಿಸುವುದು ಅತಿ ದೊಡ್ಡ ದುರಂತ. ನನ್ನ ಈ ಕೆಳಗಿನ ಕೆಲವು ಸಂಶಯಗಳಿಗೆ ಸರ್ಕಾರದಿಂದ ಉತ್ತರ ಬೇಕಾಗಿದೆ.
1. L.K.G.& Pre-nursery, Baby Sitting ಇವುಗಳು ಶಿಕ್ಷಣ ಇಲಾಖೆ ಮತ್ತು ಕಾನೂನಿನ ಪರಿಧಿಯೊಳಗೆ ಬರುವುದಿಲ್ಲವೇ?
2. ಒಂದನೇ ತರಗತಿ ಪ್ರವೇಶ ಪಡೆಯಬೇಕಾದರೆ L.K.G.& u.k.G., nursery, Baby Sitting ಪಾಸಾಗಿರಬೇಕೆ ಹೇಗೆ?
3. ಖಾಸಗಿ ಶಾಲೆಯೊಂದು, ಸರ್ಕಾರಿ ಶಾಲೆಗೊಂದು ಈ ರೀತಿ ಸರ್ಕಾರದಿಂದ 2 ಕಾಯ್ದೆಗಳು ಜಾರಿಯಲ್ಲಿವೆಯೇ ಹೇಗೆ?
4. ತಮ್ಮ ಮಕ್ಕಳಿಗೆ ತರಗತಿಗಳಿಗೆ ಪ್ರವೇಶ ಪಡೆಯಬೇಕಾದರೆ ಪಾಲಕರು ಪೋಷಕರು ಕಡ್ಡಾಯವಾಗಿ ಶಾಲಾ ಆಡಳಿತ ಮಂಡಳಿ ಲಿಖಿತ ಪರೀಕ್ಷೆ ಹಾಗೂ ಮೌಖಿಕ ಪರೀಕ್ಷೆ ಪಾಸಾಗಬೇಕೆ ಹೇಗೆ?
5. ಒಂದು ವೇಳೆ ಅವಿದ್ಯಾವಂತ ಪಾಲಕರು-ಪೋಷಕರು ಇದ್ದರೆ, ಅವರು ಒಳ್ಳೆಯ ಶಾಲೆಯಲ್ಲಿ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವುದರಿಂದ ವಂಚಿತರಾಗಬೇಕೆ ಹೇಗೆ?
6. ಖಾಸಗಿ ಶಾಲೆಗಳ ಆಡಳಿತ ಮಂಡಳಿಯವರು ಮೇಲಿನ ಕಾರಣಗಳಿಂದ ಮಕ್ಕಳಿಗೆ ಪ್ರವೇಶ ನಿರಾಕರಿಸಿದರೇ ಭವಿಷ್ಯದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣದಿಂದ ವಂಚಿತರಾದಲ್ಲಿ, ಅವರಿಗೆ ಪರಿಹಾರವೇನು? ಬೇರೆ ದಾರಿ ಯಾವುದು? ಸರ್ಕಾರದ ಕಾನೂನಿನಲ್ಲಿರುವ ಲೋಪದೋಷಗಳ ಲಾಭವೇನಾದರೂ ಅವರು ಪಡೆಯ ಬಯಸುತ್ತಿರಬಹುದೇ ಹೇಗೆ?
7. ಖಾಸಗಿ ಶಾಲೆಗಳಿಗೆ ಮನ್ನಣೆ ನೀಡುವಾಗ ಸರ್ಕಾರ ವಿಧಿಸಿರುವ ಷರತ್ತುಗಳು ಉಲ್ಲಂಘನೆಯಾಗುತ್ತಿರುವುದು ಶಿಕ್ಷಣ ಇಲಾಖೆಯ ಗಮನಕ್ಕೆ ಬರುತ್ತಿಲ್ಲವೇಕೆ?
8. ಮಗುವಿನ 3ನೇ ವಯಸ್ಸಿಗೆ ಅವರ ಬಾಲ್ಯವನ್ನು ಕಸಿದುಕೊಳ್ಳುವ ನಿರಂತರ ಪ್ರಕ್ರಿಯೆಗೆ ಸರ್ಕಾರವಾಗಲಿ, ಮಕ್ಕಳ ಹಕ್ಕುಗಳ ಆಯೋಗ ಮೌನವಾಗಿರುವುದೇಕೆ?
9. ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಹೀಗೆ ಅನೇಕ ದೊಡ್ಡ ನಗರಗಳಲ್ಲಿ Play-Home, L.K.G.& U.K.G. ಎಂಬ ಹೆಸರಿನಲ್ಲಿ ಕಾರುಗಳು ನಿಲ್ಲಿಸುವ ಶೆಡ್ನಲ್ಲಿ, ಅವ್ಯವಸ್ಥೆಯ ಪರಿಸರದಲ್ಲಿ ಮಗುವಿನ ಆವಶ್ಯಕತೆಗಳನ್ನು ಪೂರೈಸಲಾರದಂತಹ ವಾತಾವರಣದಲ್ಲಿ ಅಥವಾ ಖಾಸಗಿ ಶಾಲಾ ಆಡಳಿತ ಮಂಡಳಿಯವರು ತಾವು ನಡೆಸಿಕೊಂಡು ಬರುತ್ತಿರುವ ಪ್ರಾಥಮಿಕ, ಪ್ರೌಢಶಾಲೆಗಳ ಕಟ್ಟಡದಲ್ಲಿಯೇ All-in-one ಎಂಬ ನಿಯಮದಡಿಯಲ್ಲಿ ಬೆಳಗಿನ 7 ಗಂಟೆಯಿಂದ ಸಾಯಂಕಾಲ 5ರಿಂದ 5.30ರ ಸಮಯದವರೆಗೆ ಶಾಲೆಗಳನ್ನು ನಡೆಸಿಕೊಂಡು ಬರುತ್ತಿರುವುದು ಸರಿಯೇ?
10. 3-4 ವರ್ಷದ ಮಕ್ಕಳಿಗೆ ವೈದ್ಯಕೀಯ ಶಾಸ್ತ್ರದನುಸಾರ ಬೆಳಗಿನ ನಿದ್ರೆ ಅತಿ ಮುಖ್ಯ. ತೀರಾ ಚಿಕ್ಕ ಮಕ್ಕಳು ಬೆಳಗಿನ ಜುಮಜುಮ ಎನ್ನುವ ನಿದ್ರಾಲೋಕದಲ್ಲಿ ಹಾಯಾಗಿ ಪವಡಿಸಿರುವಾಗ ಈ ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳು ಒಂದೇ ಕಟ್ಟಡದಲ್ಲಿ ನೂರೆಂಟು ತರಗತಿ, ಇತ್ಯಾದಿ ಹಣ ಸುಲಿಯುವ ದೃಷ್ಟಿಯಿಂದ ನಡೆಸಿಕೊಂಡು ಬಂದು ಆ ಮುಗ್ಧ ಮಕ್ಕಳಿಗೆ ಬೆಳಗ್ಗೆ 7ರಿಂದ 10ರವರೆಗೆ ಶಾಲೆ ನಡೆಸುವುದು ಎಷ್ಟರಮಟ್ಟಿಗೆ ಸರಿ?
11. ಮಗು 7ಕ್ಕೆ ಶಾಲಾ ಆವರಣದಲ್ಲಿರಬೇಕೆಂದರೆ ಮನೆಯನ್ನು 6.30ಕ್ಕೆ ಬಿಡಬೇಕು. 6.30ಕ್ಕೆ ಬಿಡಬೇಕೆಂದರೆ ಕನಿಷ್ಟ ಪಕ್ಷ ಮಗು 5.30ಕ್ಕೆ ಏಳಲೇಬೇಕು. ಕಾರಣ ಆ ವಯಸ್ಸಿನ ಮಕ್ಕಳು ಒಳ್ಳೆ ಸುಖ ನಿದ್ರೆಯಲ್ಲಿರುವಾಗ ಆ ಸಮಯಕ್ಕೆ ಒಮ್ಮೆಲೆ ಏಳಲು ಇಚ್ಛಿಸುವುದಿಲ್ಲ. 2-2 ಬಾರಿ ಎಬ್ಬಿಸಿ, ಜೋರು ಮಾಡಿ, ಸ್ನಾನ ಮಾಡಿಸಿ, ಹೊಟ್ಟೆಗೆ ಏನಾದರೂ ಹಾಕಿ, ಬಟ್ಟೆ ರೆಡಿ ಮಾಡಿ ಕಳಿಸಲು ಕನಿಷ್ಠ ಪೋಷಕರಿಗೆ ಒಂದು ಗಂಟೆಯಾದರೂ ಬೇಕು. ಅಂದ ಬಳಿಕ ಈ ಶಾಲಾ ಶಿಕ್ಷಣ ಸಂಸ್ಥೆಗಳ ಹೊಟ್ಟೆ ತುಂಬಿಸಲು, ನಮ್ಮ ಮಕ್ಕಳಿಗೆ ಒಳ್ಳೆ ಶಿಕ್ಷಣ ಸಿಗಬೇಕೆಂಬ (ಅತಿ ಹುಚ್ಚುತನ) ಅವರ ಸುಖ ನಿದ್ರೆಯನ್ನು ನಾವು ಕಸಿದುಕೊಳ್ಳುವುದು ಅನ್ಯಾಯವಲ್ಲವೇ? ಪ್ರತ್ಯಕ್ಷವಾಗಿ ಹೇಳಬೇಕಾದರೆ, ಹುಬ್ಬಳ್ಳಿಯಲ್ಲಿ ಇಂತಹ ಶಾಲೆಗಳು ಸಾಕಷ್ಟು ಇವೆ.
12. ಇನ್ನು Play-Home, nursery ಶಿಕ್ಷಣದ ಹೆಸರಿನಲ್ಲಿ ಮಕ್ಕಳ ಶೋಷಣೆ ಹೇಳತೀರದು. ಕೆಲ ದಿನಗಳ ಹಿಂದೆ ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಬಂದಂತಹ ವರದಿಗಳನ್ನು ತಾವು ನೋಡಿರಬಹುದು. ಓದಿರಬಹುದು. ಅವೆಲ್ಲವೂ ಸತ್ಯ ಘಟನೆಗಳೇ. ಹಾಗೇ ಇನ್ನು ಕೆಲ ಕಡೆ ಇವುಗಳಿಗಿಂತ ರೋಚಕ ಸನ್ನಿವೇಶಗಳು ನಡೆದದ್ದನ್ನು ನಾವು ಕೇಳಿದ್ದೇವೆ.
ಅ) ಮಗು ಹಟ ಮಾಡಬಹುದೆಂದು ನಿದ್ರೆ ಮಾತ್ರೆ ಇಲ್ಲವೇ ಒಂದು ರೀತಿಯಲ್ಲಿ ಡ್ರಗ್ ಸೇವಿಸಿ ಸದಾ ಮಲಗಿರುವಂತೆ ನೋಡಿಕೊಳ್ಳುವುದು.
ಆ) ಮಗು ಅಳುತ್ತಿದ್ದರೆ, ಗದರಿಸಿ, ಬಡಿದು, ಬೆದರಿಸಿ ಸುಮ್ಮನಾಗಿಸುವುದು.
ಇ) ಮಗು ಪದೇ -ಪದೇ ಮೂತ್ರ ವಿಸರ್ಜನೆ ಮಾಡಬಹುದೆಂಬ ಕಾರಣದಿಂದ ನೀರು ಕುಡಿಸದೇ ಇರುವುದು.
ಈ) ಮಗು ಹೇಸಿಗೆ ಮಾಡಿಕೊಳ್ಳಬಹುದೆಂದು ಅರ್ಧ ಊಟ ಉಣಿಸುವುದು ಇಲ್ಲವೇ ಆಯಾಗಳು, ಶಿಕ್ಷಕಿಯರೇ ತಿನ್ನುವುದು.
ಉ) ಕೆಲವೊಂದು ಶಾಲೆಗಳಲ್ಲಿ ಔ.ಈ.ಇ.ಪಠ್ಯಕ್ರಮ ಬಳಸುತ್ತಿರುವುದು ಮಕ್ಕಳ ಮೇಲೆ ಎಂತಹ ಪರಿಣಾಮ ಬೀರಬಹುದೆಂದು ಯೋಚಿಸಿರಿ. ಅಂತಾರಾಷ್ಟ್ರೀಯ ಮಟ್ಟದ ಪಠ್ಯಕ್ರಮ ನಮ್ಮ ಎಳೆಮಕ್ಕಳಿಗೆ ಸೂಕ್ತ ಹೊಂದಾಣಿಕೆಯಾಬಲ್ಲದೇ?
ಇನ್ನು ಕೆಲ ಶಿಕ್ಷಕ-ಶಿಕ್ಷಕಿಯರು ತಾವು ಕೆಲಸ ಮಾಡುವ ಶಾಲೆಯ ಸಮಯ 10.30ಕ್ಕೆ ಇದ್ದರೆ, ಮನೆಪಾಠಕ್ಕಾಗಿ, ಮಕ್ಕಳನ್ನು ತಮ್ಮ ಮನೆಗೆ 7ಕ್ಕೆ ಬರಲು ಹೇಳಿ ಸಣ್ಣ ಪುಟ್ಟ ಕೆಲಸ ಮಕ್ಕಳಿಂದ ಮಾಡಿಸಿಕೊಳ್ಳುತ್ತಾ ಅಲ್ಪಸ್ವಲ್ಪ ಪಾಠ ಹೇಳಿಕೊಟ್ಟಂತೆ ಮಾಡಿ, ಆ ಕಡೆ ತಮ್ಮ ಮನೆಯ ಕೆಲಸವಾಯಿತು, ಈ ಕಡೆ ಟ್ಯೂಶನ್ ಕ್ಲಾಸ್ ಕೂಡ ಮುಗಿಯಿತು. ಹಣ ಸಂಪಾದನೆ ಕೂಡ ಆಯ್ತು ಎಂಬ ಲೆಕ್ಕಾಚಾರದಲ್ಲಿರುವುದು.
ಆದ್ದರಿಂದ ಸನ್ಮಾನ್ಯ ಮಂತ್ರಿಗಳು ಈ ಬಗ್ಗೆ ನಿರ್ದಿಷ್ಟ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಂಡು ಹಾಗೇ ಬೇಕಾದರೆ ಕಾನೂನಿಗೆ ಸೂಕ್ತ ತಿದ್ದುಪಡಿ ತಂದು ಮಕ್ಕಳ ಮೇಲಿನ ಶೋಷಣೆ ತಡೆಯಬೇಕಾಗಿ ವಿನಂತಿ. "ಮಕ್ಕಳು ಮುಗ್ಧರು" "ಬಾಯಿಯಿಲ್ಲದ ಪ್ರಾಣಿಗಳಂತೆ" ಅವರನ್ನು ನಮ್ಮ ಸ್ವಾರ್ಥಕ್ಕಾಗಿ ಬಲಿ ಕೊಡುವುದು ಬೇಡ.
- ಎಂ.ಆರ್. ಭಟ್
ಮುಂಡಗೋಡ