ಈ ರಹಸ್ಯ ವ್ಯಾಪಾರದಲ್ಲಿ ಅನೇಕ ರಾಷ್ಟ್ರಗಳು ಭಾಗಿ
ಕಳೆದ ವರ್ಷದ ಜೂನ್ 9 ರಂದು ಎಡ್ವರ್ಡ್ ಸೋಡೆನ್ ಎನುವ ಯುವಕ ಹಾಂಕಾಂಗ್ನಲ್ಲಿ...
ಕಳೆದ ವರ್ಷದ ಜೂನ್ 9 ರಂದು ಎಡ್ವರ್ಡ್ ಸೋಡೆನ್ ಎನುವ ಯುವಕ ಹಾಂಕಾಂಗ್ನಲ್ಲಿ ಕುಳಿತು ಅಮೆರಿಕ ಸರ್ಕಾರದ ರಹಸ್ಯ ಕಣ್ಗಾವಲು ಕಾರ್ಯಕ್ರಮದ ವಿಷಯವನು ಪ್ರಪಂಚದೆದುರು ತೆರೆದಿಟ್ಟುಬಿಟ್ಟ. ಅಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆ(ಎನ್ಎಸ್ಎ)ಯ ದಾಖಲೆಗಳನು 'ದಿ ಗಾರ್ಡಿಯನ್' ಮತ್ತು 'ವಾಶಿಂಗ್ಟನ್ ಪೋಸ್ಟ್' ಪತ್ರಿಕೆಗಳಿಗೆ ಕೊಟ್ಟು, ಹೇಗೆ ಅಮೆರಿಕ, ಪ್ರಪಂಚದಾದ್ಯಂತ ಜನರ ಮಾಹಿತಿಯನು ಕಲೆಹಾಕುತ್ತಿದೆ ಎನುವ ವಿಷಯ ಹೊರಗೆ ಬರುವಂತೆ ಮಾಡಿದ. ಇದರಿಂದಾಗಿ ರಾಷ್ಟ್ರೀಯ ಭದ್ರತೆ ಮತ್ತು ಅಂತರ್ಜಾಲ ಗೌಪ್ಯತೆಯ ನಡುವಿನ ಘರ್ಷಣೆಯ ಬಗ್ಗೆ ನಡೆದಿದ್ದ ಚರ್ಚೆ ತೀವ್ರವಾಯಿತು. ಅಮೆರಿಕದ ವಿರುದ್ಧ ಹಲವಾರು ರಾಷ್ಟ್ರಗಳು ಕಣ್ಣು ಕೆಂಪು ಮಾಡಿದವು . ಎನ್ಎಸ್ಎದ ಕೇಂದ್ರದಲ್ಲಿ ಸರ್ಕಾರಿ ಗುತ್ತಿಗೆದಾರನಾಗಿದ್ದ ಎಡ್ವರ್ಡ್ನನು ಹಿಡಿಯಲು ಒಂದು ವರ್ಷದಿಂದ ಅಮೆರಿಕ ಪ್ರಯತಿಸುತ್ತಲೇ ಇದೆ. ಸದ್ಯಕ್ಕೆ ರಷ್ಯಾದಲ್ಲಿ ಆಶ್ರಯ ಪಡೆದಿರುವ ಆತ, ಕೆಲವು ದಿನಗಳ ಹಿಂದೆ ಜರ್ಮನಿಯ ಎಆರ್ಡಿ ಎಂಬ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದ ಆಯ್ದ ಭಾಗ...
- ಕೆಲವು ದಿನಗಳಿಂದ ಸರಿಯಾಗಿ ನಿದ್ರೆಯಾಗುತ್ತಿದೆಯೇ? ಏಕೆಂದರೆ ಪೊಲೀಸ್ ರಕ್ಷಣೆ ಬೇಕೆಂದು ನೀವು ಸರ್ಕಾರವನು (ರಷ್ಯನ್) ಕೇಳಿಕೊಂಡಿದ್ದೀರಿ ಎನುವ ಸುದ್ದಿ ಬಂದಿದೆ. ನಿಮಗೆ ಜೀವಬೆದರಿಕೆಯಿದೆಯೇ?
ಬೆದರಿಕೆಯೇನೋ ಇದೆ, ಆದರೆ ನಿದ್ರೆಗೆ ತೊಂದರೆಯೇನೂ ಇಲ್ಲ. ಬಜ್ಫೀಡ್ ಎನುವ ಜಾಲತಾಣದಲ್ಲಿ ಸುದ್ದಿಯೊಂದು ಪ್ರಕಟವಾಗಿದೆ. ಹೆಸರು ಹೇಳಲಿಚ್ಛಿಸದ ಪೆಂಟಗನ್ ಮತ್ತು ಎನ್ಎಸ್ಎ(ಅಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆ)ದ ಕೆಲವು ಅಧಿಕಾರಿಗಳು ನನ ಹೆಣವನು ನೋಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಹಣೆಗೆ ಗುಂಡು ಹೊಡೆದೋ, ವಿಷ ಹಾಕಿಯೋ... ಒಟ್ಟಿನಲ್ಲಿ ಹೇಗಾದರೂ ಮಾಡಿ ನನನು ಕೊಲ್ಲಬೇಕು ಎಂದು ಕಾದಿದ್ದಾರೆ.
- ಸುದೈವವಶಾತ್ ನೀವು ಜೀವಂತವಾಗಿ ನಮ್ಮೆದುರಲ್ಲೇ ಇದ್ದೀರಿ...
ನಿಜ. ಏನು ಸರಿ ಅನಿಸಿತೋ ಅದನೇ ನಾನು ಮಾಡಿದ್ದೇನೆ. ತಪ್ಪು ಮಾಡಿದ್ದರೆ ತಾನೇ ನಿದ್ರೆಗೆಡುವುದು? ಹೆದರಿ ಕುಳಿತುಕೊಳ್ಳಲು ನನಗಿಷ್ಟವಿಲ್ಲ.
- ನೀವು ಬಹಿರಂಗಪಡಿಸಿರುವ ಮಾಹಿತಿಯಿಂದಾಗಿ ಹೆಚ್ಚಿನ ಬದಲಾವಣೆಗಳೇನೂ ಆಗವು ಎನುವ ಭಯ ಎಲ್ಲರಿಗೂ ಇತ್ತು. ನಿಮ್ಮ ಭಯವೂ ಅದೇ ಆಗಿತ್ತು. ಆದರೆ ಎನ್ಎಸ್ಎದ ಬಗ್ಗೆ ಕೇವಲ ಅಮೆರಿಕವಷ್ಟೇ ಅಲ್ಲದೆ ಜರ್ಮನಿ, ಬ್ರೆಜಿಲ್ ಮತ್ತು ಪ್ರಪಂಚದಾದ್ಯಂತ ಮಾತನಾಡಲಾಗುತ್ತಿದೆ. ಈ ಕಾರಣಕ್ಕಾಗಿಯೇ ಒಬಾಮಾಗೆ ಕಾನೂನಿನ ನೆಲೆಗಟ್ಟಿನಲ್ಲಿ ಎನ್ಎಸ್ಎ ಕಾರ್ಯವೈಖರಿಯ ಬಗ್ಗೆ ಬಹಿರಂಗವಾಗಿ ಮಾತನಾಡಲೇಬೇಕಾದ ಅನಿವಾರ್ಯತೆ ಎದುರಾಗಿದೆ..
ನಾನು ಮಾಹಿತಿ ಬಹಿರಂಗ ಮಾಡಿದಾಗ, ಎನ್ಎಸ್ಎ ಅನು ರಕ್ಷಿಸಲು ಸರ್ಕಾರದ ಹಿರಿಯ ತಲೆಗಳೆಲ್ಲ ಓಡಾಡತೊಡಗಿದವು. ಜನತೆಯನು, ಅವರ ಹಕ್ಕನು ರಕ್ಷಿಸಬೇಕಾದ ಸರ್ಕಾರ, ತನ ಮತ್ತು ತನ ಸಂಸ್ಥೆಗಳನು ರಕ್ಷಿಸಿಕೊಳ್ಳುವುದರಲ್ಲಿ ನಿರತವಾಯಿತು. ಎನ್ಎಸ್ಎ ಜನತೆಯ ಮೇಲೆ ಕಣ್ಗಾವಲಿಟ್ಟಿಲ್ಲ, ಅವರ ಮಾಹಿತಿಯನು ಸಂಗ್ರಹಿಸುತ್ತಿಲ್ಲ ಎಂದು ಮೊದಲು ವಾದಿಸಿದ ಒಬಾಮಾ ಈಗ 'ಹೌದು ದುರುಪಯೋಗಗಳಾಗಿವೆ' ಎಂದು ಹೇಳುತ್ತಿದ್ದಾರೆ.
- ಎನ್ಎಸ್ಎ ಕೊಟ್ಯಂತರ ಮಾಹಿತಿ ತುಣುಕುಗಳನು ಸಂಗ್ರಹಿಸಿದೆ ಎಂದು ಮೊದಲ ಬಾರಿಗೆ ಒಬಾಮಾ ಒಪ್ಪಿಕೊಂಡಿದ್ದಾರೆ...
ಪ್ರತಿಬಾರಿಯೂ ನೀವು ಫೋನ್ ಕಾಲ್ ಮಾಡಿದಾಗ, ಮಿಂಚಂಚೆ ಕಳುಹಿಸಿದಾಗ, ಶಾಪಿಂಗ್ಗೆ ಹೋದಾಗ, ನಿಮ್ಮ ಕಾರ್ಡನು ಸ್ವೈಪ್ ಮಾಡಿದಾಗ ಅಲ್ಲಿ ನೀವು ನಿಮ್ಮ ಕುರುಹನು ಬಿಟ್ಟಿರುತ್ತೀರಿ. ಇಂಥ ಎಲ್ಲರ, ಎಲ್ಲಾ ಮಾಹಿತಿಗಳನು ಕಲೆಹಾಕಬೇಕು ಎಂದು ಅಮೆರಿಕ ಸರ್ಕಾರ ನಿರ್ಧರಿಸಿತು. ಒಬ್ಬ ವ್ಯಕ್ತಿಯ ಮೇಲೆ ಅನುಮಾನ ಬಂದರೆ, ಮೊದಲು ವಾರಂಟ್ ಸಿದ್ಧಪಡಿಸಿಕೊಳ್ಳಬೇಕಾಗುತ್ತದೆ. ವಾರಂಟ್ ತಯಾರಾದ ನಂತರವೇ ಮುಂದಿನ ಹೆಜ್ಜೆಯಿಡಲು ಅಧಿಕಾರ ಸಿಗುತ್ತದೆ. ಎನ್ಎಸ್ಎ ಮಾಡಿದ್ದೇನು? ಅವಶ್ಯಕತೆಯಿರಲಿ, ಇಲ್ಲದಿರಲಿ ಎಲ್ಲರ ಮಾಹಿತಿಯನೂ(ವೈಯಕ್ತಿಕ) ಕಲೆ ಹಾಕುವ ಕೆಲಸಕ್ಕೆ ಧುಮುಕಿತು.
- ಈ ಚರ್ಚೆಯನು ಹುಟ್ಟುಹಾಕಿದ್ದು ನೀವೇ. ಈ ಅಂತರ್ಜಾಲ ಯುಗದಲ್ಲಿ ಎಡ್ವರ್ಡ್ ಸೋಡೆನ್ ಈಗ ಬಹುದೊಡ್ಡ ಹೆಸರು. ಕಳೆದ ವರ್ಷ ಈ ವೇಳೆಗೆ ನೀವು ಎನ್ಎಸ್ಎದೊಂದಿಗೆ ಕೆಲಸ ಮಾಡುತ್ತಿದ್ದಿರಿ. ಆ ಸಮಯದಲ್ಲೇ ರಹಸ್ಯವಾಗಿ ಸಾವಿರಾರು ಗೌಪ್ಯ ದಾಖಲೆಗಳನು ಕಲೆಹಾಕಿ, ಬಹಿರಂಗಗೊಳಿಸಿದಿರಿ. ಆ ರೀತಿ ಮಾಡಲು ಪ್ರೇರೇಪಿಸಿದ ನಿರ್ಣಾಯಕ ಕ್ಷಣವ್ಯಾವುದು?
ನಿರ್ಣಾಯಕ ಗಳಿಗೆ ಎನುವುದಾದರೆ, ಎನ್ಎಸ್ಎದ ನಿರ್ದೇಶಕರಾದ ಜೇಮ್ಸ್ ಕ್ಲ್ಯಾಪರ್ ಪ್ರಮಾಣವಚನ ಸ್ವೀಕಾರದ ವೇಳೆ ಹೇಳಿದ ಮಾತನು ಕೇಳಿದ್ದು. ಜನತೆಯ ರಕ್ಷಣೆಯೇ ತಮ್ಮ ಹೊಣೆ ಎನುತ್ತಾರವರು. ಆದರೆ ಎನ್ಎಸ್ಎ ಜನತೆಗೆ ಸುಳ್ಳು ಹೇಳುತ್ತಿದೆ. ತಮ್ಮ ಸುತ್ತಲೂ ಏನಾಗುತ್ತಿದೆ, ಯಾವ ಸಂಸ್ಥೆ ಕೆಲಸ ಏನು ಎನುವುದು ಸಾರ್ವಜನಿಕರಿಗೆ ತಿಳಿಯಲೇಬೇಕು. ಎನ್ಎಸ್ಎದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಮತ್ತೊಬ್ಬರ ಜೀವನದಲ್ಲಿ ಇಣುಕಿ ನೋಡುವ ಶಕ್ತಿಯಿದೆ. ತುಸು ಎಚ್ಚರಿಕೆ ವಹಿಸಿದರೆ ಅಮೆರಿಕ ಅಧ್ಯಕ್ಷರ ಪ್ರತಿಯೊಂದು ಚಲನವಲನಗಳ ಮಾಹಿತಿಯೂ ಕ್ಷಣಾರ್ಧದಲ್ಲಿ ಕಲೆಹಾಕಬಹುದು. ಉದಾಹರಣೆಗೆ, ನೀವು ಜರ್ಮನಿಯ ಬಹುದೊಡ್ಡ ಕಂಪನಿಯಲ್ಲಿದ್ದೀರಿ ಎಂದಿಟ್ಟುಕೊಳ್ಳಿ. ನಿಮ್ಮ ಕಂಪನಿಯ ನೆಟ್ವರ್ಕ್ನೊಳಗೆ ನಾನು ಇಣುಕಬೇಕೆಂದು ಬಯಸಿದರೆ, ನಿಮ್ಮ ಪಾಸ್ವರ್ಡ್ ಅನು ತಿಳಿದುಕೊಂಡು, ಅದರ ಮೂಲಕ ನಿಮ್ಮ ಕಂಪನಿಯ ಮಾಹಿತಿಯನು ಕಲೆಹಾಕಬಹುದು. ಎಕ್ಸ್ಕೀಸ್ಕೋರ್ ಎನುವ ತಂತ್ರಜ್ಞಾನದಿಂದ ನಿಮ್ಮ ಬೆರಳ ಗುರುತನು ನಾನು ಸೇವ್ಮಾಡಿಕೊಂಡು ದುರ್ಬಳಕೆ ಮಾಡಿಕೊಳ್ಳಬಹುದು!
- ಜರ್ಮನಿಯ ಗುಪ್ತಚರ ಸಂಸ್ಥೆ ಬಿಎನ್ಡಿ ಮತ್ತು ಅಮೆರಿಕದ ಎನ್ಎಸ್ಎ ನಡುವಿನ ಗೆಳೆತನ ಹೇಗಿದೆ ?
ಅವೆರಡೂ ಗಳಸ್ಯಕಂಠಸ್ಯ ಅನುವಂತಿವೆ.
- ಇದನು ಬಹುಪಕ್ಷೀಯ ಒಪ್ಪಂದವೆಂದೂ ಹೇಳಲಾಗುತ್ತದೆ. ಫೈವ್ ಐಸ್(ಐದು ಕಣ್ಣುಗಳು) ಎಂದು ಕರೆದುಕೊಳ್ಳುವ ಆ ರಾಷ್ಟ್ರಗಳ್ಯಾವು ಮತ್ತು ಅವುಗಳ ಉದ್ದೇಶವೇನು?
ಇಂಗ್ಲೆಂಡ್, ಅಮೆರಿಕ, ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಈ ಐದು ರಾಷ್ಟ್ರಗಳು. ತಮ್ಮ ಜನತೆಯ ಮೇಲೆ ಬೇಹುಗಾರಿಕೆ ನಡೆಸಬಾರದು ಎನುವ ನಿಯಮ ಬಹುತೇಕ ರಾಷ್ಟ್ರಗಳಲ್ಲಿದೆ. ಉದಾಹರಣೆಗೆ ಬ್ರಿಟನ್, ಯಾವುದೇ ರಾಷ್ಟ್ರದ ಜನತೆಯ ಮಾಹಿತಿಯನು ಕಲೆಹಾಕಬಹುದು, ಆದರೆ ಅದು ತನ ಜನರ ಮೇಲೆ ಮಾತ್ರ ಬೇಹುಗಾರಿಕೆ ನಡೆಸುವ ಹಾಗಿಲ್ಲ. ಆದರೆ ಅಮೆರಿಕ ಈ ಕೆಲಸಕ್ಕೆ ಬ್ರಿಟನ್ಗೆ ಸಹಾಯ ಮಾಡಬಲ್ಲದು. ಅದು ಬ್ರಿಟನ್ವಾಸಿಗಳ ಮೇಲೆ ಬೇಹುಗಾರಿಕೆ ನಡೆಸಿ, ಅವರ ಮಾಹಿತಿಯನು ಆ ಸರ್ಕಾರಕ್ಕೆ ರವಾನಿಸಬಲ್ಲದು! ಇದೊಂದು ರೀತಿ ವ್ಯಾಪಾರವಿದ್ದಂತೆ. ಆದರೆ ರಹಸ್ಯ ವ್ಯಾಪಾರ. ಮಾಹಿತಿಯ ಮೇಲೆ ಕಣ್ಣಾಡಿಸಿದರೆ ಅದನು ಅಧಿಕಾರ ದುರುಪಯೋಗ ಎಂದು ಸ್ಪಷ್ಟವಾಗಿ ಹೇಳಲಾಗದು, ಆದರೆ ಮಾಹಿತಿಯನು ಕಲೆಹಾಕುವುದಿದೆಯಲ್ಲ, ಅದು ಬಹುದೊಡ್ಡ ತಪ್ಪು.
- ಹಾಗಿದ್ದರೆ ದಕ್ಷಿಣ ಯುರೋಪಿಯನ್ ರಾಷ್ಟ್ರಗಳ ಕಥೆಯೇನು? ಇಟಲಿ, ಫ್ರಾನ್ಸ್ ಮತ್ತು ಸ್ಪೇನ್ನಿಂದಲೂ ಎನ್ಎಸ್ಎ ಮಾಹಿತಿ ಕಲೆಹಾಕುತ್ತಿದೆಯೇ?
ಅಲ್ಲಷ್ಟೇ ಅಲ್ಲ, ಈ ಕೆಲಸ ಪ್ರಪಂಚದಾದ್ಯಂತ ವಿಸ್ತರಿಸಿದೆ...
- ಹಾಗಿದ್ದರೆ ಅಮೆರಿಕ, ಸೀಮನ್ಸ್ ಮತ್ತು ಮರ್ಸಿಡಿಸ್ನಂಥ ಯಶಸ್ವೀ ಕಂಪನಿಗಳ ಮೇಲೂ ಕಣ್ಣಿಟ್ಟಿದೆಯೇ? ಅಂದರೆ ಆ ಕಂಪನಿಗಳಲ್ಲಾಗುತ್ತಿರುವ ವೈಜ್ಞಾನಿಕ ಮತ್ತು ಆರ್ಥಿಕ ಬದಲಾವಣೆಗಳ ಮೇಲೆ?
ಆರ್ಥಿಕ ಗೂಢಚರ್ಯೆಯಲ್ಲಿ ಅಮೆರಿಕ ನಿರತವಾಗಿದೆ ಎನುವ ಪ್ರಶೆಯೇ ಉದ್ಭವವಾಗದು. ಆದರೆ ಒಂದು ವೇಳೆ ಸೀಮನ್ಸ್ ಅಥವಾ ಮರ್ಸಿಡಿಸ್ನಲ್ಲಿನ ಯಾವುದಾದರೂ ಸಂಗತಿ ಕುತೂಹಲಕರವೆನಿಸಿದ ಅಮೆರಿಕದ ರಾಷ್ಟ್ರೀಯ ಹಿತಾಸಕ್ತಿಗೆ ಅದು ಲಾಭತರಬಹುದು ಎಂದನಿಸಿದರೆ, ಅಮೆರಿಕ ಆ ಕುರಿತ ಮಾಹಿತಿಗಳನು ಕಲೆಹಾಕಬಲ್ಲದು...
- ಕೊನೆಗೆ ರಷ್ಯಾಕ್ಕೆ ಬಂದು ತಲುಪಿದ್ದೀರಿ. ಇಲ್ಲಿ ಆಶ್ರಯ ಪಡೆಯಲು ಈ ರಾಷ್ಟ್ರದೊಂದಿಗೆ ಒಪ್ಪಂದ ಮಾಡಿಕೊಂಡಿರಬಹುದು ಎಂದು ಬಹಳಷ್ಟು ಗುಪ್ತಚರ ಸಮುದಾಯಗಳು ಅನುಮಾನ ಪಡುತ್ತಿವೆ.
ನಾನು ಏಕಾಂಗಿಯಾಗಿಯೇ ಈ ಅಪಾಯಕ್ಕೆ ಕೈ ಹಾಕಿದೆ. ಅನ್ಯ ರಾಷ್ಟ್ರಗಳ ಸರ್ಕಾರಗಳೊಡನೆ ನಾನು ಕೈ ಜೋಡಿಸಿಲ್ಲ. ಒಂದು ವೇಳೆ ನಾನು ದೇಶದ್ರೋಹಿಯಾಗಿದ್ದರೆ, ಕಲೆಹಾಕಿದ ಎಲ್ಲಾ ಮಾಹಿತಿಯನು ಅಮೆರಿಕದ ಜನರ ಮುಂದೇಕೆ ತೆರೆದಿಡುತ್ತಿದ್ದೆ?
- ಮಾಹಿತಿ ಬಹಿರಂಗ ಮಾಡಿದ ಮೇಲೆ ನಿಮಗೆ ಯಾವ ಯುರೋಪಿಯನ್ ರಾಷ್ಟ್ರಗಳ ಸಹಾಯವೂ ದೊರೆಯಲಿಲ್ಲ. ಯಾವ ರಾಷ್ಟ್ರಗಳಿಗೆ ಆಶ್ರಯ ಕೋರಿದ್ದಿರಿ?
ಜರ್ಮನಿ, ಫ್ರಾನ್ಸ್, ಇಂಗ್ಲೆಂಡ್...ಅಷ್ಟೇ ಅಲ್ಲದೆ ಇನೂ ಅನೇಕ ರಾಷ್ಟ್ರಗಳು ನನ ಪಟ್ಟಿಯಲ್ಲಿದ್ದವು. ಆದರೆ ಅವ್ಯಾವೂ ನನಗೆ ಆಶ್ರಯ ನೀಡಲು ಮುಂದಾಗಲಿಲ್ಲ. ದುರ್ದೈವವೆಂದರೆ, ಸತ್ಯವನು ಬೆಂಬಲಿಸುವುದಕ್ಕಿಂತ, ಅಮೆರಿಕದ ರಾಜಕೀಯ ಹಿತಾಸಕ್ತಿಗನುಗುಣವಾಗಿ ವರ್ತಿಸುವುದೇ ಸರಿಯೆಂದು ಅವು ಭಾವಿಸಿದವು.
- ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ, ನಿಮಗೆ ಕ್ಷಮಾದಾನ ನೀಡಬೇಕು ಎಂದು ಒತ್ತಾಯಿಸಿ ದೊಡ್ಡ ವರದಿಯನೇ ಪ್ರಕಟಿಸಿತು. ಒಬಾಮಾ ಕೂಡಲೇ ಸೋಡೆನ್ಗೆ ಭದ್ರತೆ ಒದಗಿಸಿ ಅವರನು ಸುರಕ್ಷಿತವಾಗಿ ದೇಶಕ್ಕೆ ತರುವ ಕೆಲಸಕ್ಕೆ ಮುಂದಾಗಬೇಕು ಎಂದದು ಹೇಳಿತು. ಅದಾದ ನಂತರ ಶ್ವೇತಭವನದಿಂದ ನಿಮಗೆ ಕರೆ ಬಂದಿತೆ?
ಯಾರಿಂದಲೂ ಯಾವ ಕರೆಯೂ ಬಂದಿಲ್ಲ. ಯಾರ ಕರೆಗೋಸ್ಕರವೂ ನಾನು ಕಾದು ಕುಳಿತಿಲ್ಲ.
- ಸದ್ಯಕ್ಕೆ ಒಬಾಮಾ ಅಂತೂ ನಿಮ್ಮ ವಿರುದ್ಧ ತಣ್ಣಗಾಗುವಂತೆ ಕಾಣುತ್ತಿಲ್ಲ. ನಿಮ್ಮ ಮೇಲೆ ಮೂರು ಗಂಭೀರ ಆರೋಪಗಳಿವೆ ಎಂದವರು ಹೇಳಿದ್ದಾರೆ. ಒಂದು ವೇಳೆ ನೀವು ಅಮೆರಿಕಕ್ಕೆ ಹಿಂದಿರುಗಿದರೆ, ನಿಮ್ಮ ವಕೀಲರೊಂದಿಗೆ ನ್ಯಾಯಾಲಯದಲ್ಲಿ ವಾದಿಸುವಿರಾ? ನಿಮ್ಮ ಮುಂದಿರುವ ಪರಿಹಾರ ಮಾರ್ಗ ಇದೇ ತಾನೇ?
ಬೇಹುಗಾರಿಕಾ(ಎಸ್ಪಿಯೋನೇಡ್) ಕಾಯ್ದೆಯಡಿಯಲ್ಲಿ ನನ ಮೇಲೆ ಆರೋಪ ಮಾಡಲಾಗಿದೆ. ಆದರೆ ಅದು ಹೇಳುವುದೇ ಬೇರೆ- ಒಬ್ಬ ವ್ಯಕ್ತಿ ತನ ದೇಶದ, ಸರ್ಕಾರದ ಬಗೆಗಿನ ಮಾಹಿತಿಯನು ಅನ್ಯ ದೇಶಗಳಿಗೆ ಮಾರಿಕೊಂಡರೆ, ದೇಶದ ಭದ್ರತೆಗೆ ಚ್ಯುತಿ ತಂದರೆ ಆತನಿಗೆ ಶಿಕ್ಷೆಯಾಗಬೇಕು ಎಂದು. ನಾನು ಮಾಹಿತಿಯನು ಜನರ ಒಳಿತಿಗಾಗಿಯೇ ಅವರ ಮುಂದಿಟ್ಟಿದ್ದೇನೆ. ಅವರ ಹಕ್ಕನು ಕಾಪಾಡುವುದಕ್ಕೆ ಹೀಗೆ ಮಾಡಿದೆ. ಇದೇನೇ ಇರಲಿ, ಇಲ್ಲೊಂದು ಕುತೂಹಲಕರ ಅಂಶವನು ನೀವು ಗಮನಿಸಬೇಕು. ನನ ವಿರುದ್ಧ ಮೂರು ಆರೋಪಗಳಿವೆ ಎನುವುದು ಸರಿ. ಆದರೆ ಅವುಗಳಿಂದಾಗಿ ನನಗೆ ನ್ಯಾಯಾಲಯದಲ್ಲಿ ವಾದವನು ಮಂಡಿಸುವ ಅಧಿಕಾರ, ಅವಕಾಶವೇ ಇರುವುದಿಲ್ಲ! ಅಂದರೆ ಆಗಲೇ ಆ ಆರೋಪಗಳ ಮೂಲಕ ನನ ಕೈ ಕಟ್ಟಿಹಾಕಲಾಗಿದೆ. ಆದರೆ ಇದನೆಲ್ಲ ಒಬಾಮಾ ಬಹಿರಂಗವಾಗಿ ಹೇಳುತ್ತಿಲ್ಲವಷ್ಟೆ.