ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಬೌದ್ಧಿಕ ವಲಯಕ್ಕೇಕೆ ಇವರೆಂದರೆ ಹೆದರಿಕೆ?

ಅತ್ಯಂತ ಸಂವೇದನಾಶೀಲ ಕವಿಯಾಗಿದ್ದ ಟ್ಯಾಗೋರರು- "ಭಾರತದ ವಾತಾವರಣದಲ್ಲಿ...

Mainashree
Updated On : 27 Feb 2014, 10:52 am

ಅತ್ಯಂತ ಸಂವೇದನಾಶೀಲ ಕವಿಯಾಗಿದ್ದ ಟ್ಯಾಗೋರರು- "ಭಾರತದ ವಾತಾವರಣದಲ್ಲಿ ಉಪದ್ರದ ಭಾವವೊಂದು ಹರಿದಾಡುತ್ತಿದೆ. ಅದು ಸಶಸ್ತ್ರ ಪಡೆಗಳದ್ದಂತೂ ಅಲ್ಲ. ಆದರೆ ಅದು ಅಗೋಚರವಾಗಿರುವುದರಿಂದ ಇನ್ನೂ ಹೆಚ್ಚಿನ ಅಪಾಯಕಾರಿಯೆನಿಸುತ್ತಿದೆ. ಯಾರೋ ಒಬ್ಬರಿಗೆ ವಿಧೇಯತೆ ತೋರಿಸುವುದಕ್ಕಾಗಿ ಹೀಗೆ ಮಾಡಲಾಗುತ್ತಿದೆ. ಆದರೆ ಈ ವಿಧೇಯತೆ ಯಾರಿಗೆ? ಯಾವುದೋ ಒಂದು ಮಂತ್ರಕ್ಕೆ, ವಿವೇಚನೆಯಿಲ್ಲದ ಒಂದು ಸಿದ್ಧಾಂತಕ್ಕೆ...' ಎಂದು ಹೇಳಿದ್ದರು.

ಕಳೆದ ವಾರ ನನಗೆ 'ಭಾರತೀಯ ಸಾರ್ವತ್ರಿಕ ಚುನಾವಣೆಗಳ' ಬಗ್ಗೆ ಅಧ್ಯಯನ ನಡೆಸುತ್ತಿರುವ ಜರ್ಮನ್ ಲೇಖಕರೊಬ್ಬರ ಭೇಟಿಯಾಯಿತು. ತಮ್ಮ ಭಾರತೀಯ ಪ್ರಗತಿಪರ ಸ್ನೇಹಿತರು, ಅತ್ಯಂತ ಸಹಜವೆನ್ನುವಂತೆ ತಮ್ಮ ಮಾತುಗಳಲ್ಲಿ 'ಫ್ಯಾಸಿಸಮ್‌' ಮತ್ತು 'ಸಾಮೂಹಿಕ ಹತ್ಯಾಕಾಂಡ' ಎನ್ನುವ ಪದಗಳನ್ನು ಪದೇ ಪದೆ ಬಳಸುತ್ತಿರುವುದರ ಬಗ್ಗೆ ತಮ್ಮ ಇರುಸುಮುರುಸನ್ನು ವ್ಯಕ್ತಪಡಿಸಿದರವರು. ಮಾನವ ಇತಿಹಾಸದಲ್ಲಿ ಹಿಟ್ಲರ್ ಎಂಬ ಅಧ್ಯಾಯ ಅತ್ಯಂತ ಅಸಾಮಾನ್ಯ ಬುದ್ಧಿಭ್ರಮಣೆಯ ಸಮಯ. ಅಂಥ ವಿದ್ಯಮಾನ ಮತ್ತೆ ಎದುರಾಗುವುದು ಅಸಂಭವ. 21ನೇ ಶತಮಾನದಲ್ಲಂತೂ ಅದು ಸಾಧ್ಯವಿಲ್ಲ ಎಂದರವರು.
ದುರಂತವೆಂದರೆ ಈ ರೀತಿ ಯೋಚಿಸುವವರು, ಅತ್ಯಂತ ವ್ಯವಸ್ಥಿತ ಸಂಪರ್ಕ ಜಾಲ ಹೊಂದಿರುವ ಕೆಲವೇ ಕೆಲವು ವ್ಯಕ್ತಿಗಳ ಬುದ್ಧಿಜೀವಿಗಳ ಅಬ್ಬರದ ಮೋಹಕ ಬಲೆಗೆ ವಶರಾಗುವ ಅಪಾಯದಲ್ಲಿದ್ದಾರೆ. ಈ ರೀತಿ ಅಬ್ಬರಿಸುವ ಗುಂಪುಗಳು, ಈಗಿನ ಭಾರತವನ್ನು ಅಂತರ್ಯುದ್ಧದಲ್ಲಿ ಮುಳುಗಿರುವ ಯುರೋಪ್‌ನ ಪ್ರತಿಬಿಂಬದಂತೆಯೇ ಕಾಣುತ್ತಿದ್ದಾರೆ.
ಅದಾಗ್ಯೂ ಇಂಥವನ್ನೆಲ್ಲ ಸೂಕ್ಷ್ಮವಾಗಿ ಪರಿವೀಕ್ಷಣೆಗೊಳಪಡಿಸುವ ಗುಣ ಈ ಜರ್ಮನ್ ಲೇಖಕನಿಗಿದೆ ಎಂದು ನನಗನಿಸುತ್ತದೆ. ಆದರೆ ನನ್ನ ಗೆಳೆಯ, ಇತಿಹಾಸಕಾರ, ರಾಮಚಂದ್ರ ಗುಹ ಅದೇಕೋ ಈ ಬಲೆಯಲ್ಲಿ ತುಸು ಕಾಲಿಟ್ಟಂತೆ ಕಾಣುತ್ತಿದ್ದಾರೆ. ನರೇಂದ್ರ ಮೋದಿಯವರ ಯಶಸ್ವಿ ರ್ಯಾಲಿಯ ನಂತರ, ಉತ್ತರ ಕೋಲ್ಕತ್ತಾಕ್ಕೆ ಗುಹ ತೆರಳಿದ್ದರು. ಆ ಪ್ರದೇಶದಲ್ಲಿ ಹಿಂದು/ಮುಸ್ಲಿಂ/ಜೈನ್ ಮತ್ತು ಕ್ರಿಶ್ಚಿಯನ್ನರ ಪ್ರಭಾವಗಳು ಒಟ್ಟಾರೆಯಾಗಿ ಶತಮಾನಗಳಿಂದ ಜೀವಂತವಾಗಿರುವುದನ್ನು ಮೆಚ್ಚಿ ಅವರು ಟ್ವೀಟ್ ಮಾಡಿದ್ದರು. ಆದರೆ ಅಲ್ಲಿ ಅವರ ಕಣ್ಣಿಗೆ ಕಠೋರವಾಗಿ ಕಂಡ ಒಂದು ಸಂಗತಿಯ ಬಗ್ಗೆ ಅವರು ಹೀಗೆ ಬರೆದಿದ್ದರು- "ಪ್ರತಿಯೊಂದು ಬಿಲ್ಡಿಂಗ್‌ಗಳ ಮೇಲೆ, ಮರಗಳ ಮೇಲೆ ಮತ್ತು ತಿರುವುಗಳಲ್ಲಿ ನಿಂತ 'ನಾಯಕ'ನ ಬೃಹತ್ ಪೋಸ್ಟರ್‌ಗಳು ಇತಿಹಾಸದ ಕಥೆಗಳನ್ನೆಲ್ಲ ಮರೆಮಾಚಿದ್ದವು."
ಅವರು ಯಾರನ್ನು ಕುರಿತು 'ನಾಯಕ' ಎಂಬ ಪದವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎನ್ನುವುದು ತಿಳಿಯುವಂಥದ್ದೆ. ಅದಾಗ್ಯೂ ಗುಹಾ ಅವರು 'ಮೋದಿಯೆಂದರೆ ಹಿಟ್ಲರ್ ಇದ್ದಂತೆ' ಎನ್ನುವ ಘೋಷಣೆಯನ್ನು ನಂಬುವುದಿಲ್ಲವಾದರೂ(ಅವರು ಮೋದಿ ಮತ್ತು ವೆನಿಜುವೆಲಾದ ನಾಯಕ ಹೂಗೋ ಶಾವೇಜ್‌ರ ನಡುವೆ ಸಾಮ್ಯತೆಯನ್ನು ಕಾಣುತ್ತಾರೆ), ಮೋದಿ ಬಂದರೆ ಸರ್ವಾಧಿಕಾರಿ ರಾಜಕೀಯ ಎದುರಾಗಬಹುದು ಎನ್ನುವ ಪ್ರಗತಿಪರರ ವಾದಕ್ಕೆ ತುಪ್ಪವನ್ನಂತೂ ಸುರಿಯುತ್ತಾರೆ.
ಕುತೂಹಲಕರ ಸಂಗತಿಯೆಂದರೆ, 1921ರಲ್ಲಿ ರವೀಂದ್ರನಾಥ್ ಟ್ಯಾಗೋರರೂ ಕೂಡ, 'ಗಾಂಧೀಜಿ'ಯವರ ಹಿಂದೆ ಸಾಮೂಹಿಕ ಭಟ್ಟಂಗಿಗಳು ಬೆಳೆಯುತ್ತಿದ್ದಾರೆ ಎಂದು ಭಾವಿಸಿ ಇಂಥದ್ದೇ ಸಂದೇಹ/ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಅತ್ಯಂತ ಸಂವೇದನಾಶೀಲ ಕವಿಯಾಗಿದ್ದ ಟ್ಯಾಗೋರರು- "ಭಾರತದ ವಾತಾವರಣದಲ್ಲಿ ಉಪದ್ರದ ಭಾವವೊಂದು ಹರಿದಾಡುತ್ತಿದೆ. ಅದು ಸಶಸ್ತ್ರ ಪಡೆಗಳದ್ದಂತೂ ಅಲ್ಲ. ಆದರೆ ಅದು ಅಗೋಚರವಾಗಿರುವುದರಿಂದ ಇನ್ನೂ ಹೆಚ್ಚಿನ ಅಪಾಯಕಾರಿಯೆನಿಸುತ್ತಿದೆ. ಯಾರೋ ಒಬ್ಬರಿಗೆ ವಿಧೇಯತೆ ತೋರಿಸುವುದಕ್ಕಾಗಿ ಹೀಗೆ ಮಾಡಲಾಗುತ್ತಿದೆ. ಆದರೆ ಈ ವಿಧೇಯತೆ ಯಾರಿಗೆ? ಯಾವುದೋ ಒಂದು ಮಂತ್ರಕ್ಕೆ, ವಿವೇಚನೆಯಿಲ್ಲದ ಒಂದು ಸಿದ್ಧಾಂತಕ್ಕೆ...' ಎಂದು ಹೇಳಿದ್ದರು. ಆದರೆ, ದೇಶದ ಮನಸ್ಥಿತಿ ಮತ್ತು ಗಾಂಧೀಜಿಯವರೆಡೆಗೆ ಅದಕ್ಕಿದ್ದ ಆಕರ್ಷಣೆಯನ್ನು ಅರ್ಥಮಾಡಿಕೊಳ್ಳಲು ಟ್ಯಾಗೋರ್ ಸೋತಿದ್ದರು ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಇದು ಅರ್ಥವಾದ ಕಾರಣಕ್ಕಾಗಿಯೇ ಅವರು ಮುಂದೆ ಗಾಂಧೀಜಿಯವರನ್ನು 'ಮಹಾತ್ಮಾ' ಎಂದು ಕರೆದರು.
ಮಹಾತ್ಮಾ ಗಾಂಧಿಯವರ ಕೊಡುಗೆಯಲ್ಲಿ ತಪ್ಪು ಹುಡುಕಿದವರು ಕೇವಲ ಟ್ಯಾಗೋರರಷ್ಟೇ ಅಲ್ಲ. 1944ರಲ್ಲಿ ಪ್ರಕಟವಾಗಿ, ಅಗಾಧ ಪ್ರಭಾವವನ್ನು ಬೀರಿದ್ದ "ವರ್ಡಿಕ್ಟ್ ಆನ್ ಇಂಡಿಯಾ" ಪುಸ್ತಕದ ಲೇಖಕ ಬೇವರ್ಲಿ ಹಿಲ್ಸ್ ಕೂಡ 'ಗಾಂಧಿ, ಕಾಂಗ್ರೆಸ್ ಮತ್ತು ಹಿಂದೂ ಧರ್ಮಗಳನ್ನು' ದುಷ್ಟ ಅವತಾರಗಳೆಂದೇ ಕರೆದಿದ್ದರು! ಭಾರತದ ಸ್ವಾತಂತ್ರ್ಯ ಸಂಗ್ರಾಮವನ್ನು ಕಂಡು ಮೂಕವಿಸ್ಮಿತರಾಗಿದ್ದ ಕೆಲವು ಮೃದು ಹೃದಯದ ಪಾಶ್ಚಾತ್ಯ ಬುದ್ಧಿಜೀವಿಗಳನ್ನು ಮೂದಲಿಸುತ್ತಾ ಆತ, "ಆಧುನಿಕ ಜಗತ್ತು ಕಂಡ ಅತ್ಯಂತ ಫ್ಯಾಸಿಸ್ಟ್ ಮತ್ತು ಜಡ್ಡುಗಟ್ಟಿರುವ ಪಕ್ಷವೆಂದರೆ ಕಾಂಗ್ರೆಸ್‌" ಎಂದು ಹೇಳಿದ್ದ.
ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಗೆ ವೆಂಡಿ ಡೊನಿಗರ್‌ಳ ಸಹೋದ್ಯೋಗಿ 'ಮಾರ್ಥಾ ನುಸ್‌ಬೌಮ್‌' ಇತ್ತೀಚೆಗೆ ಬರೆದ ಲೇಖನದಲ್ಲಿ "ಪೆಂಗ್ವಿನ್ ಪಬ್ಲಿಕೇಷನ್ ಆಸಾನಾಗಿ ಗೆಲ್ಲಬಹುದಾದ ಕೇಸೊಂದರಲ್ಲಿ, ಹೇಡಿಯಂತೆ ಕರಾರಿಗೆ ಒಪ್ಪಿಕೊಂಡಿತು" ಎಂದು ಮೂಗು ಕೆಂಪು ಮಾಡಿಕೊಂಡಿದ್ದಾರೆ. ಮುಂದುವರಿದು, "ಹಿಂಸೆಯ ಭಯ ಗೆಲುವು ಸಾಧಿಸಿದೆ. ಇಂಥ ಘಟನೆಗಳು ಹಿಂದೆಯೂ ಆಗಿವೆ. ಆದರೆ ಈ ಬಾರಿ ನಡೆದಿರುವ ಘಟನೆ, ಮುಂದಿನ ದಿನಗಳಲ್ಲಿ ಆರ್‌ಎಸ್‌ಎಸ್ ತನಗಿಷ್ಟವಿರದ ಎಲ್ಲಾ ಪುಸ್ತಕಗಳನ್ನು ನಿಷೇಧಿಸುವ ಅಧಿಕಾರ ಪಡೆಯಲಿದೆ ಎನ್ನುವುದರ ಸೂಚನೆ" ಎಂದಿದ್ದಾರೆ. ಅವರ ಸಂದೇಶ ಸ್ಪಷ್ಟವಾಗಿದೆ: ಮೋದಿಯನ್ನು ಆಯ್ಕೆ ಮಾಡಿದರೆ, ಭಾರತದಲ್ಲಿ ಪುಸ್ತಕ ನಿಷೇಧದ ಪರ್ವ ಶುರುವಾಗಲಿದೆ ಮತ್ತು ಭಿನ್ನಮತೀಯರ ಶೋಷಣೆ ನಡೆಯಲಿದೆ!
ಈಗಂತೂ ಪ್ರಗತಿಪರ ಗುಹೆಗಳಲ್ಲಿ ಇದೇ ಮಾತು ಪ್ರತಿಧ್ವನಿಸುತ್ತಿದೆ. ಮಾಜಿ ಗವರ್ನರ್ ಗೋಪಾಲ್ ಗಾಂಧಿಯವರು ಇತ್ತೀಚೆಗೆ ಡೋನಿಗರ್ ಅಧ್ಯಾಯದ ಕುರಿತು ಬರೆದ ಲೇಖನದ ತುಂಬೆಲ್ಲಾ ಅಂಕೆಯಿಲ್ಲದ ಆಲಂಕಾರಿಕ ಅಂಶಗಳೇ ಕಾಣುತ್ತವೆ. "ಕೋಮುವಾದಿಗಳ ವಾಕ್ಚಾತುರ್ಯ ಹೆಚ್ಚುತ್ತಲೇ ಇದೆ. ಈಗಂತೂ ಭಾರತ ಹಿಂದು ದೇಶ, ನಾವೆಲ್ಲ ಹಿಂದುಗಳು, ನಾವೇ ಭಾರತ ಎನ್ನುವ ಮಾತು....'ಭಾರತ ಮಾತೆ ಅಪಾಯದಲ್ಲಿದ್ದಾಳೆ' ಎನ್ನುವ ಪರಿಭಾಷೆಗೆ ಈಗ, ಋಆಖಿಏಊಖಔಆಃಉ ಗಕಈಆಇ್ಖಔಆಖಘಯನ್ನು ಸೇರಿಸಲಾಗಿದೆ. ನೆಹರೂ ಏನಾಗಿರಲಿಲ್ಲವೋ, ಅವರ ಬೆಂಬಲಿಗರು ಏನಾಗಲಿಲ್ಲವೋ ಮತ್ತು ಆಗುವುದಿಲ್ಲವೋ ಅಂಥ ವ್ಯಕ್ತಿತ್ವದ ನಾಯಕನ ಕನಸು ಕಾಣಲಾಗುತ್ತಿದೆ."
ನುಸ್‌ಬೌಮ್ ಅಥವಾ ಗೋಪಾಲ್ ಗಾಂಧಿಯವರ ರಾಜಕೀಯ ಆದ್ಯತೆಯನ್ನು ನೋಡಿ ನನಗೇನು ಅಸಮಾಧಾನವಾಗುತ್ತಿಲ್ಲ, ಆದರೆ ಅನುಕಂಪ ಹುಟ್ಟುತ್ತಿದೆ! ಬಿಲ್‌ಬೋರ್ಡ್‌ಗಳ ಮೇಲಿಂದ ನಮ್ಮನ್ನು ದೃಷ್ಟಿಸುತ್ತಿರುವ ಪರ್ಯಾಯ ನಾಯಕನೊಬ್ಬನ ಚಿತ್ರಗಳು ಇಂಥವರನ್ನೆಲ್ಲ ಅಣುಕಿಸುತ್ತಿದೆಯಲ್ಲ ಎಂಬ ಕಾರಣಕ್ಕೆ. ಹೇಗೆ ಅಭಿವೃದ್ಧಿಯಿಂದ ಏಕತೆ ಸಾಧ್ಯವಾಗುತ್ತದೆ, ಹೇಗೆ ಪ್ರವಾಸೋದ್ಯಮ ಜನರನ್ನು ಹತ್ತಿರಕ್ಕೆ ತರುತ್ತದೆ, ಹೇಗೆ 'ಸಂಪರ್ಕ' ರಾಷ್ಟ್ರೀಯ ಏಕತೆಗೆ ಕಾರಣವಾಗುತ್ತದೆ ಎಂದು ಹೇಳುತ್ತಿರುವ ವ್ಯಕ್ತಿಯ ಮೇಲೆ ಇವರೆಲ್ಲ ಕಾಲ್ಪನಿಕ ಅಪರಾಧಗಳನ್ನು ಹೊರಿಸುತ್ತಿದ್ದಾರೆ.
ಬಹುಶಃ ಸಮಸ್ಯೆ ಉದ್ಭವವಾಗಿದ್ದೇ, ಮೋದಿಯನ್ನು ಇವರೆಲ್ಲ ತಪ್ಪಾಗಿ ಗ್ರಹಿಸಿದ ಕಾರಣಕ್ಕೇನೋ. ಅವರು ರಾಷ್ಟ್ರೀಯ ವೇದಿಕೆಗೆ ಬಂದಾಗ, ಕೋಮುವಾದಿ ಗಾಳಿ ಬೀಸಲಿದೆ, ಮುಸಲ್ಮಾನರನ್ನು ಖಂಡಿಸಲಿದ್ದಾರೆ ಮತ್ತು ಪಾಕಿಸ್ತಾನದ ಮೇಲೆ ಪರಮಾಣು ಎಸೆಯುವ ಮಾತನಾಡುತ್ತಾರೆ(ಮಾತನಾಡಲಿ) ಎನ್ನುವುದನ್ನೇ ವಿರೋಧಿಗಳು ಆಶಿಸುತ್ತಿದ್ದರು. ಆದರೆ ಅಲ್ಪಸಂಖ್ಯಾತರನ್ನು ಹೆದರಿಸಲು ಬುದ್ಧಿಜೀವಿಗಳು ಮೊದಲೇ ತಯಾರು ಮಾಡಿಕೊಂಡಿದ್ದ ಸ್ಕ್ರಿಪ್ಟ್‌ಗೆ ತಕ್ಕಂತೆ ಮೋದಿ ನಡೆದುಕೊಳ್ಳಲಿಲ್ಲ!
ಭವಿಷ್ಯವೆನ್ನುವುದು ಪ್ರತಿಯೊಬ್ಬ ಭಾರತೀಯನ ಆರ್ಥಿಕ ಪರಿಸ್ಥಿತಿ ಸುಧಾರಿಸಿದಾಗ ಮಾತ್ರ ಉಜ್ವಲವಾಗುತ್ತದೆ ಎನ್ನುವ ಮಾತಿನಿಂದ ಮೋದಿ ಅತ್ತಿತ್ತ ವಾಲಿಲ್ಲ. ಪ್ರಗತಿಪರರು ಊಹಿಸಿಕೊಂಡಂತೆ ವರ್ತಿಸದೆ, ಅವರಿಗೆಲ್ಲ ಬೇಜಾರು ಮಾಡಿದ್ದಾರವರು!
ಯಾವುದು 'ಗೌರವಾನ್ವಿತ' ಎನ್ನುವುದನ್ನು ವ್ಯಾಖ್ಯಾನಿಸುತ್ತಾ ಬಂದಿದ್ದ ಬುದ್ಧಿಜೀವಿಗಳ ವಲಯಕ್ಕೆ ಮೋದಿ ಅಪಾಯ ತಂದೊಡ್ಡುತ್ತಿದ್ದಾರೆ. ಏಕೆಂದರೆ, ಅವರುಗಳ ಆಕರ್ಷಣೀಯ ವಲಯಕ್ಕೆ ಅವರು ಸೇರಿದವರಲ್ಲ. ಮೋದಿಯವರ ಬೌದ್ಧಿಕ ಟೀಕಾಕರರು ಪ್ರಜಾಪ್ರಭುತ್ವಕ್ಕೆ ಹೆದರುತ್ತಿಲ್ಲ, ಆದರೆ ತಾವೆಲ್ಲಿ ಅಪ್ರಸ್ತುತರಾಗುತ್ತೇವೋ ಎನ್ನುವುದಕ್ಕೆ ಹೆದರುತ್ತಿದ್ದಾರೆ.

- ಸ್ವಪನ್‌ದಾಸ್ ಗುಪ್ತ   
swapan55@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement