ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಹೊಸ ವರ್ಷಕ್ಕೆ ಜವಾಬ್ದಾರಿಯುತ ಸಂಕಲ್ಪ

Mainashree
Updated On : 2 Jan 2014, 11:22 am

ಹೊಸ ವರ್ಷವನ್ನು ಪ್ರವೇಶಿಸುವ ನಾವು ಈ ವರ್ಷ ನಮಗೆ ಶುಭ ತರಲೆಂದು, ಏನಾದರೂ ಹೊಸ ಒಳ್ಳೆಯ ವಿಷಯಗಳು ನಡೆಯಲೆಂದು, ಹಿಂದೆ ಸಂಭವಿಸಿದ ಕಹಿ ಘಟನೆಗಳು ಮರುಕಳಿಸದಿರಲೆಂದು ನಿರೀಕ್ಷಿಸುವುದು ಸಾಮಾನ್ಯ. ಇದರ ಜೊತೆಗೆ ಸಾಕಷ್ಟು ಮಂದಿ ತಮ್ಮ ವೈಯಕ್ತಿಕ ವಿಷಯಗಳಿಗೆ ಸಂಬಂಧಿಸಿದಂತಹ ಒಂದು ಸಂಕಲ್ಪ (Resolution) ತೆಗೆದುಕೊಳ್ಳುವುದನ್ನು ನಾವು ಕಾಣುತ್ತೇವೆ. ಉದಾಹರಣೆಗೆ ಧೂಮಪಾನ ಮಾಡುವವರು ಈ ವರ್ಷದಿಂದ ಅದನ್ನು ತ್ಯಜಿಸುತ್ತೇನೆಂದು, ಆಲ್ಕೋಹಾಲ್ ಸೇವಿಸುವವರು ಸ್ವಲ್ಪ-ಸ್ವಲ್ಪವಾಗಿ ಕಡಿಮೆಗೊಳಿಸುತ್ತೇವೆಂದು, ತೂಕ ಹೆಚ್ಚಿರುವವರು ಈ ವರ್ಷದಿಂದ ನಡಿಗೆಯನ್ನು ಪ್ರಾರಂಭಿಸಿ ತೂಕ ಇಳಿಸುತ್ತೇವೆಂದು, ಟಿ.ವಿ.ಯನ್ನು ಅಧಿಕವಾಗಿ ನೋಡುವವರು ಬೇರೆ ಹವ್ಯಾಸದಲ್ಲಿ ತೊಡಗಿಸಿಕೊಳ್ಳುತ್ತೇವೆಂದು, ಹೀಗೆ ಯಾವುದಾದರೂ ಸಂಕಲ್ಪವನ್ನು ತೆಗೆದುಕೊಂಡು ಅದರಲ್ಲಿ ಯಶಸ್ವಿಯಾಗುತ್ತಾರೆ. ಸ್ವಲ್ಪ ಯೋಚಿಸಿ ಈ ಬಗ್ಗೆ ಚಿಕ್ಕ-ಚಿಕ್ಕ ಸಂಕಲ್ಪಗಳನ್ನು ತೆಗೆದುಕೊಂಡು ಗೆಲುವು ಸಾಧಿಸಿದ ರೀತಿಯಲ್ಲೇ ಪ್ರತಿಯೊಬ್ಬರೂ ತಮ್ಮ ವೈಯಕ್ತಿಕ ಸಂಕಲ್ಪಗಳ ಜೊತೆಗೆ ಯಾವುದಾದರೂ ಒಂದು ಸಾಮಾಜಿಕ ಕಾಳಜಿಯುಳ್ಳ ಜವಾಬ್ದಾರಿಯುತ ಸಂಕಲ್ಪವನ್ನು ತೆಗೆದುಕೊಂಡು ಅದರಲ್ಲೂ ಯಶಸ್ವಿಯಾದರೆ? ಅಂತಹದ್ದೇ ಕೆಲವು ಸಂಕಲ್ಪಗಳನ್ನು ಈ ಕೆಳಗೆ ನೀಡಲಾಗಿದೆ. ಒಮ್ಮೆ ಓದಿ.
ಟ ಒಂದೆರಡು ಬಟ್ಟೆಯ ಕೈ ಚೀಲಗಳನ್ನು ಖರೀದಿಸುವುದು, ಅವನ್ನು ಹಣ್ಣು, ತರಕಾರಿ ಹಾಗೂ ಇತರೆ ವಸ್ತುಗಳನ್ನು ತರಲು ಹೋಗುವಾಗ ಬಳಸುವುದು. ಅದರಿಂದ ಪ್ಲಾಸ್ಟಿಕ್ ಚೀಲಗಳ ಬಳಕೆ ಕಡಿಮೆಯಾಗುತ್ತದೆ.ಟ ನಮ್ಮ ಬದುಕಿಗೆ ಆಸರೆಯಾಗಿರುವ ಜೀವಜಲವನ್ನು ಸಂರಕ್ಷಿಸುವುದು, ದಿನಕ್ಕೆ ಹೇಗಾದರೂ ಸರಿ ಒಂದೈದು ಲೀಟರ್ನಷ್ಟಾದರೂ ಉಳಿಸಲು ಪ್ರಯತ್ನಿಸುವುದು. ಮನೆಯಲ್ಲೇ ಆಗಲಿ ಅಥವಾ ಕಚೇರಿಯಲ್ಲೇ ಆಗಲಿ, ನಲ್ಲಿಯಲ್ಲಿ ನೀರು ಸೋರುತ್ತಿದ್ದರೆ ಅದನ್ನು ತಕ್ಷಣವೇ ರಿಪೇರಿಯಾಗುವಂತೆ ಕ್ರಮ ಕೈಗೊಳ್ಳುವುದು. ಟ ದಿನದಲ್ಲೊಂದು ಬಾರಿಯಾದರೂ ಹದಿನೈದು ನಿಮಿಷಗಳ ಕಾಲ ವಿದ್ಯುತ್ ದೀಪವನ್ನು ಬಳಸದಿರುವುದು ಅಥವಾ ಫ್ರಿಡ್ಜ್ ಅನ್ನು ನಂದಿಸುವುದು. ಟ ತಿಂಗಳಿಗೆರೆಡು ಸಲವಾದರೂ ದ್ವಿಚಕ್ರವಾಹನ ಅಥವಾ ಕಾರ್ ಬಳಸದೆ ಕೆಲಸಕ್ಕೆ ಹೋಗುವುದು, ಇದರಿಂದ ಇಂಧನದ ಮೇಲೆ ಅವಲಂಬನೆ ಕಡಿಮೆಯಾಗುತ್ತದೆ. ಪರಿಸರ ಮಾಲಿನ್ಯವೂ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ. ಟ ಅನಾವಶ್ಯಕವಾಗಿ ಕಾಗದವನ್ನು ಬಳಸಿ ಬಿಸಾಕದಿರುವುದು, ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ "ಒಂದು ಬದಿಯ" (್ಟಟಿಜ ಡ್ಝಜಜಜ ಠಛಠಜ್ಠ)ಬಳಸುವುದು. ಕಾಗದ ತಯಾರಿಸಲು ಕತ್ತರಿಸುವ ಮರಗಳ ಸಂಖ್ಯೆಯನ್ನು ಕಡಿಮೆಗೊಳಿಸಿ ಪರಿಸರವನ್ನು ರಕ್ಷಿಸಿದಂತಾಗುತ್ತದೆ. ಟ ಮನೆಗೆ ದಿನಪತ್ರಿಕೆಯೊಂದನ್ನು ಹಾಕಿಸಿಕೊಳ್ಳಲು ಪ್ರಾರಂಭಿಸುವುದು, ಪ್ರಚಲಿತ ವಿದ್ಯಮಾನಗಳ ಬಗ್ಗೆ ಅರಿಯುವುದು, ಮಕ್ಕಳಲ್ಲೂ ಓದುವ ಹವ್ಯಾಸವನ್ನು ಬೆಳೆಸುವುದು. ಟ ಹೊರ ಹೋಗುವಾಗ ನೀರಿನ ಬಾಟಲಿಯಲ್ಲಿ ನೀರನ್ನು ಕೊಂಡೊಯ್ಯುವುದು, ಇದರಿಂದ ನಮ್ಮ ಆರೋಗ್ಯಕ್ಕೂ ಒಳ್ಳೆಯದು. ಜೊತೆಗೆ ಅಂಗಡಿಯಲ್ಲಿ ನೀರಿನ ಬಾಟಲಿಯನ್ನು ಕೊಂಡುಕೊಳ್ಳುವುದು ತಪ್ಪುತ್ತದೆ, ಪ್ಲಾಸ್ಟಿಕ್ ತ್ಯಾಜ್ಯವೂ ಕಡಿಮೆಯಾಗುತ್ತದೆ. ಟ ಟ್ರಾಫಿಕ್ ಸಿಗ್ನಲ್ನಲ್ಲಿ ಹೆಚ್ಚು ಹೊತ್ತು ನಿಲ್ಲಬೇಕೆಂದರೆ ವಾಹನವನ್ನು ಸ್ವಿಚ್ ಆಫ್ ಮಾಡುವುದು ಮತ್ತು ಟ್ರಾಫಿಕ್  ನಿಯಮಗಳನ್ನು ಮುರಿಯದಿರುವುದು.
ಹೀಗೆ ಸಮಾಜಕ್ಕೆ ಒಳಿತೆನಿಸುವ, ಪರಿಸರ ಕಾಳಜಿಯ, ನಾಗರಿಕ ಜವಾಬ್ದಾರಿಯನ್ನು ಮೆರೆಸುವಂತಹ ಅನೇಕ ರೀತಿಯ ಚಿಕ್ಕ-ಚಿಕ್ಕ ಬಗೆಯ ಸಂಕಲ್ಪಗಳನ್ನು ನಾವು ಕೈಗೊಳ್ಳಬಹುದು. ಆ ಮೂಲಕ ಈ ಸಮಾಜದ ಅಭಿವೃದ್ಧಿಯಲ್ಲಿ, ಸ್ವಾಸ್ಥ್ಯದಲ್ಲಿ ನಮ್ಮ ಕೊಡುಗೆಯನ್ನು ನೀಡಬಹುದು. ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ ಈ ರೀತಿಯ ಸಂಕಲ್ಪಗಳನ್ನು ನಾವು ಅಳವಡಿಸಿಕೊಂಡು ಅದನ್ನು ಪಾಲಿಸಲು ನಮಗೇನು ಹಣ ಖರ್ಚಾಗುವುದಿಲ್ಲ ಮತ್ತು ಹೆಚ್ಚು ಸಮಯವನ್ನು ವ್ಯಯಿಸಬೇಕಾಗಿಲ್ಲ. ನಮ್ಮ ದಿನನಿತ್ಯದ ಚಟುವಟಿಕೆಗಳಲ್ಲೇ ಈ ಸಂಕಲ್ಪಗಳ ಅನುಸರಣೆಯನ್ನು ಬಹಳ ಸುಲಭ ರೀತಿಯಲ್ಲಿ ಮಾಡಬಹುದು. ಆದ್ದರಿಂದ ಈ ಹೊಸ ವರ್ಷ ನಿಮ್ಮ ವೈಯಕ್ತಿಕ ಸಂಕಲ್ಪಗಳ ಜೊತೆಗೆ ನಿಮಗೆ ಸಾಧ್ಯವೆನಿಸುವಂತಹ, ಸೂಕ್ತವೆನಿಸುವಂತಹ, ಇತರರಿಗೆ ಸಹಾಯವಾಗುವ ಯಾವುದಾದರೂ ಒಂದು ಸಾಮಾಜಿಕ ಸಂಕಲ್ಪದ ನಿರ್ಧಾರವನ್ನು ತೆಗೆದುಕೊಳ್ಳಿ ಮತ್ತು ಅದರಲ್ಲಿ ಯಶಸ್ವಿಯಾಗಿ.

- ಎಸ್. ಸುಧಾಕರ, ಎಚ್.ಎ.ಎಲ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement