ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಹಿಂದುಳಿದ ಹೈ-ಕ 'ರಿಚ್‌' ಆಗಲಿ ಎಂಬ ಕನಸು

Mainashree
Updated On : 27 Jul 2014, 9:39 am

2010ರಲ್ಲಿ ಬೆಂಗಳೂರಿನಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಸಲಾಯಿತು. ಆಗ ಹೊಸ ಉದ್ಯೋಗಗಳನ್ನು ತೆರೆಯುವ ಬಹಳಷ್ಟು ಪ್ರಸ್ತಾವನೆಗಳು ಉತ್ತರ ಕರ್ನಾಟಕ ಪ್ರದೇಶಕ್ಕೆ ಸಂಬಂಧಿಸಿದ್ದಾಗಿದ್ದವು. ಅದರಂತೆ ಸ್ಥಳೀಯ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯವರು ತುಂಬಾ ಉತ್ಸಾಹದಿಂದ, ಈ ಭಾಗದಲ್ಲಿ ಉದ್ಯಮಶೀಲತೆಯನ್ನು ವೃದ್ಧಿಸಲು ಮುಂದೆ ಬಂದರು.  
2011ನೇ ಜನಗಣತಿಯ ಪ್ರಕಾರ ದೇಶದಲ್ಲಿ ಎಪ್ಪತ್ಮೂರು ಕೋಟಿ ಜನ ಮೂವತ್ತು ವರ್ಷಕ್ಕಿಂತ ಕೆಳಗಿನವರು. ಅವರ ಪೈಕಿ ಹನ್ನೆರಡು ಕೋಟಿ ಜನ ಹದಿನೆಂಟರಿಂದ ಮೂವತ್ತು ವರ್ಷ ವಯಸ್ಸಿನವರು. ದೇಶದ ಆರ್ಥಿಕ ಅಭಿವೃದ್ಧಿಗಾಗಿ ಈ ಸಮುದಾಯವನ್ನು ನಾವು ಉತ್ತೇಜಿಸಿ, ಸರಿಯಾದ ಮಾರ್ಗದರ್ಶನ ನೀಡಿದರೆ, ನಾವು ಶ್ರೀಮಂತಿಕೆಯಲ್ಲಿ ವಿಶ್ವದಲ್ಲಿ ಪ್ರಥಮ ಸ್ಥಾನವನ್ನು ಪಡೆಯುವುದು ಕಷ್ಟಕರವಲ್ಲ.
1990ರಲ್ಲಿ ಇಸ್ರೇಲ್‌ನ ಸರ್ಕಾರವು ಘ್ಟಣಟಛ ಎಂಬ ಒಂದು ಹೊಸ ಯೋಜನೆಯನ್ನು ಪ್ರಾರಂಭಿಸಿದರು. ಅದರಂತೆ ಖಾಸಗಿ ಸಾಹಸೋದ್ಯಮ ಬಂಡವಾಳ ಸಂಸ್ಥೆ (venture capital firms)ಗಳಲ್ಲಿ ತಾಂತ್ರಿಕ ನಿಧಿಗಳನ್ನು ತೆರೆಯಲು ಸರ್ಕಾರದ ಯೋಜನೆಯಲ್ಲಿ ಸರ್ಕಾರದ ವತಿಯಿಂದ ಹೊಂದಾಣಿಕೆ ಅನುದಾನ ನೀಡಿ ಪ್ರೋತ್ಸಾಹ ಕೊಟ್ಟರು. ಇದರಿಂದ ಉನ್ನತ ತಂತ್ರಜ್ಞಾನ ಉದ್ಯಮ, ವಿನೂತನ ಪ್ರಯೋಗಗಳ ಮೂಲಕ ಯುರೋಪ್, ಕೊರಿಯಾ, ಜಪಾನ್, ಸಿಂಗಪೂರ್, ಚೀನಾ ಮತ್ತು ಭಾರತ ಸೇರಿ ಎಷ್ಟು ಕಂಪೆನಿಗಳು ಃಆಖಉಆ್ಕ ಪಟ್ಟಿಯಲ್ಲಿವೆ. ಅವುಗಳಿಗಿಂತ ಹೆಚ್ಚು ಕಂಪೆನಿಗಳು ಇಸ್ರೇಲ್‌ನಲ್ಲಿ ಬಂದವು.  
ಅಭಿವೃದ್ಧಿಯ ಮೂಲ ಮಂತ್ರ ಇರುವುದು ನಾವೀನ್ಯತೆಯಲ್ಲಿ. ಭಾರತದಲ್ಲಿ ಬಹುರಾಷ್ಟ್ರೀಯ ಕಂಪೆನಿಗಳ 1031 ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರಗಳು ಇರುತ್ತವೆ. ಉದಾ: ಯೂನಿಲಿವರ್, ಎಕ್ಸ್‌ಪೀಡಿಯಾ, ಪ್ಯಾನಾಸೋನಿಕ್, ಫೈರ್‌ಐ, ರಿಕೋ, ರಾಯಲ್ ಡಿಎಸ್‌ಎಂ, ರುಕ್ಕಸ್ ವೈರ್ಲೆಸ್, ಅಬ್ಬೋಟ್ ಮತ್ತು ಸಿಗ್ಮಾ-ಆಲ್‌ಡ್ರಿಚ್ ಇತ್ಯಾದಿ.  ಜನರ ಬದುಕಿಗೆ ಇವತ್ತು ಯಾವ ಸಮಸ್ಯೆ ಕಾಡುತ್ತದೆಯೋ ಅದರ ಪರಿಹಾರಕ್ಕಾಗಿ ಹೊಸ ಆವಿಷ್ಕಾರಗಳು ಬೇಕಾಗುತ್ತವೆ. ಇವುಗಳಲ್ಲಿ ಅತಿ ಮುಖ್ಯವಾದ ಸಂಶೋಧನೆ ಇರುವುದು ಇಂಧನ ಸಾಮರ್ಥ್ಯ, ಇಂಧನ ಶೇಖರಣೆ, ಅತ್ಯಾಧುನಿಕ ಇಂಧನಗಳು, ನೀರಿನ ನಿರ್ವಹಣೆ, ಪರಿಸರ ಸ್ನೇಹಿ ಕಟ್ಟಡಗಳು, ಸಮರ್ಥ ಗ್ರಿಡ್‌ಗಳು, ಭೂ ಸಾರಿಗೆ ಇತ್ಯಾದಿ.  ಈ ದೊಡ್ಡ ಪ್ರಯೋಗಗಳನ್ನು ಬಿಟ್ಟರೆ ಸಣ್ಣ ಪ್ರಮಾಣದಲ್ಲಿ, ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಉಪಯೋಗ ಇರುವಂಥ ಕೆಲವು ವಿನೂತನ ಪರಿಹಾರಗಳನ್ನು ನಾವು ಬಳಸಿಕೊಂಡರೆ ಖಂಡಿತವಾಗಿ ನಮ್ಮ ಕೈಗಾರಿಕಾ ಕ್ಷೇತ್ರದಲ್ಲಿ ಬೃಹತ್ ಸುಧಾರಣೆಯಾಗಲು ಸಾಧ್ಯವಿದೆ. ಆದುದರಿಂದ, ಪ್ರಸ್ತುತ ಹೆಚ್ಚಿನ ತಂತ್ರಜ್ಞಾನ ಬಳಕೆಯನ್ನು ಉತ್ತೇಜಿಸಲು ಯುವ ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಅವಶ್ಯಕತೆ ಇರುತ್ತದೆ. ಯಾಕಂದ್ರೆ ವಿದ್ಯಾರ್ಥಿಗಳು ವಿನೂತನ ಕಲ್ಪನೆಯನ್ನು ನೀಡುತ್ತಾರೆ. ಇದರಿಂದ ದೇಶದ ನಿರುದ್ಯೋಗ ಸಮಸ್ಯೆ ಹಾಗೂ ಬಡತನ ನಿರ್ಮೂಲನೆಗೆ ಹೆಚ್ಚು ಅನುಕೂಲವಾಗುತ್ತದೆ. ಇದಕ್ಕಾಗಿ ಕೇಂದ್ರ ಸರ್ಕಾರದ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಇಲಾಖೆಯ ಅಡಿಯಲ್ಲಿ Technoprenueur Promotion Programme (TePP) ಎಂಬ ಯೋಜನೆ ಇದ್ದು, ಇದರಲ್ಲಿ ಸುಮಾರು ಇಪ್ಪತ್ತೈದು ಕೋಟಿ ರುಪಾಯಿ ಅನುದಾನ ಇರುತ್ತದೆ. ಸದರಿ ಇಲಾಖೆಯು ಕೆಲವು ಸಂಸ್ಥೆಗಳ ಮೂಲಕ ಧನ ಸಹಾಯವನ್ನು ಒದಗಿಸುತ್ತದೆ.  eTBI ಸಂಸ್ಥೆಯು ಈ ರೀತಿಯ ಒಂದು ಯೋಜನೆಯ ಪ್ರಸ್ತಾವನೆಯನ್ನು ತೆಗೆದುಕೊಂಡು ನನ್ನ ಹತ್ತಿರ ಬಂದಿತ್ತು. ಅದು ಸೆಕ್ಷನ್ ಇಪ್ಪತ್ತೈದರ ಅಡಿ ಲಾಭಾಂಶ ಇಲ್ಲದಿರುವ ಸಂಸ್ಥೆ ಆಗಿರುತ್ತದೆ ಮತ್ತು ಕೇಂದ್ರ ಸರ್ಕಾರದ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಇಲಾಖೆಯ ಧನಸಹಾಯ ಪಡೆದಿರುತ್ತದೆ. ಆ ಸಂಸ್ಥೆಯವರು ಇಪ್ಪತ್ತು ಸಾವಿರ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಈಗಾಗಲೇ ತರಬೇತಿ ನೀಡಿರುತ್ತಾರೆ. ಐದು ವಿದ್ಯಾರ್ಥಿಗಳು ತಯಾರಿಸಿದ ಉತ್ಪನ್ನವನ್ನು ಎರಡು ವರ್ಷದೊಳಗೆ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದರು. ಪ್ರೊ. ಶಿವರಾಂ ಮಳವಳ್ಳಿಯವರು ಈ ಸಂಸ್ಥೆಯ ಸಂಸ್ಥಾಪಕ ಸದಸ್ಯರಾಗಿದ್ದರು. ಅವರು ವೈಜ್ಞಾನಿಕ ಮನೋಭಾವದ ಉದ್ಯಮಶೀಲರಾಗಿದ್ದು, ಜೊತೆಗೆ ಸುಮಾರು ಇನ್ನೂರು ಉದ್ಯಮಿಗಳನ್ನು ಭಾರತ ಮತ್ತು ಅಮೆರಿಕದಲ್ಲಿ ತಯಾರು ಮಾಡಿದವರು. ಅಲ್ಲದೇ ಗಡಿಯಾಚೆ ಉದ್ಯಮಶೀಲತೆ ತರಬೇತಿ ಕಾರ್ಯಕ್ರಮಗಳನ್ನು ಸ್ಯಾನ್ ಫ್ರಾನ್ಸಿಸ್ಕೋ, ಬೆಂಗಳೂರು- ಸಿಸ್ಟರ್ ಸಿಟಿ ಪ್ರಾರಂಭ ಎಂದು ನಡೆಸಿರುತ್ತಾರೆ.   ಅದರಂತೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಜೊತೆಗೆ ಒಂದು ಒಪ್ಪಂದ ಮಾಡಿಕೊಂಡು ಇನ್ನೂರು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಇನ್ನೂರು ಚೀಫ್ ಇನೋವೇಷನ್ ಅಧಿಕಾರಿಗಳನ್ನು ನೇಮಿಸಲು ಪ್ರಸ್ತಾಪವಿಟ್ಟರು. ಇದನ್ನು ಪ್ರಮುಖವಾಗಿ ಗುಲ್ಬರ್ಗದಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರದಲ್ಲಿ ಪ್ರಾರಂಭಿಸಲು ಯೋಚಿಸಲಾಯಿತು. ಇದಕ್ಕೆ RICH (Regional Innovation & Collaboration Hub) ಎಂದು ಹೆಸರಿಡಲಾಯಿತು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಮತ್ತು ಜಖಿಇಐಗಳ ನಡುವೆ ಒಪ್ಪಂದ ಮಾಡಲಾಯಿತು. ಸಲಹಾ ಸಮಿತಿಯಲ್ಲಿ ಬ್ಯಾಂಕು ಹಾಗೂ ಕೈಗಾರಿಕಾ ಸಂಸ್ಥೆಗಳ ಪ್ರತಿನಿಧಿಗಳು, ಸಣ್ಣ ಮತ್ತು ಅತಿ ಸಣ್ಣ ಉದ್ಯಮ ಇಲಾಖೆ, ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯವರು ಮುಂತಾದ ಗಣ್ಯರು ಸೇರಿದರು. ಗುಲ್ಬರ್ಗದ ಕೈಗಾರಿಕಾ ಮಂಡಳಿಯವರು ಸ್ಥಾಪಿಸಿದ ಪರೀಕ್ಷಾ ಲ್ಯಾಬ್‌ನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ಒದಗಿಸಿಕೊಟ್ಟರು. ಅಂತೆಯೇ ಈ ಪ್ರಾದೇಶಿಕ ವಿ.ಟಿ.ಯು. ಕೇಂದ್ರದಲ್ಲಿ ಒಂದು ಇನ್ಕ್ಯುಬೇಷನ್ ಕೇಂದ್ರವನ್ನು ಸ್ಥಾಪಿಸಲಾಯಿತು. ಅಂದರೆ ವಿದ್ಯಾರ್ಥಿಗಳಿಗೆ ಬೇಕಾದ ಯಂತ್ರಗಳು, ಉಪಕರಣಗಳು ಹಾಗೂ ಕಚ್ಚಾ ವಸ್ತುಗಳನ್ನು ಒದಗಿಸಲು ಹಣ ಸಹಾಯವನ್ನು ನೀಡುವುದು.    
ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಜವಾಬ್ದಾರಿಗಳು: ಯಾವುದೇ ಹಣ ಖರ್ಚು ಮಾಡದೇ ಕೇವಲ ಸಹಯೋಗ ನೀಡುವ ಮೂಲಕ ನಾವು ಸರ್ಕಾರದ ಪರ ವಹಿಸುವುದು.
= ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯು ಹಲವಾರು ಕಾರ್ಯಕ್ರಮ ಅನುಷ್ಠಾನಗೊಳಿಸುವ ಇಲಾಖೆಗಳಿಂದ ಖಐಈಏಗೆ ಅಗತ್ಯ ಅನುದಾನವನ್ನು ನೇರವಾಗಿ ಒದಗಿಸಲು ಸಹಾಯ.  
= ಕರ್ನಾಟಕ ಕೈಗಾರಿಕಾ ನೀತಿ 2009-14ರ ಅಡಿಯಲ್ಲಿ ಖಐಈಏನ ಉದ್ಯಮಿಗಳಿಗೆ ಎಲ್ಲಾ ರೀತಿಯ ಪ್ರೋತ್ಸಾಹ ಮತ್ತು ರಿಯಾಯಿತಿಗಳನ್ನು ಒದಗಿಸಲು ಹಾಗೂ ಪ್ರಗತಿಶೀಲ ಉದ್ಯಮಿಗಳಿಗೆ ಉತ್ತೇಜನ ನೀಡುವ ಸಲುವಾಗಿ ಹೆಚ್ಚುವರಿ ಪಾಲಿಸಿ ಮಟ್ಟದ ನಿರ್ಧಾರಗಳನ್ನು ಜಾರಿಗೆ ತರಲು ಕ್ರಮ.
= = RICHನ ಚಟುವಟಿಕೆಗಳಲ್ಲಿ ಸಹಕಾರಿಯಾಗಲು ಇಲಾಖೆಗಳಿಂದ ಅವರು ಆರಿಸಿದ ಸೂಕ್ತ ಸಿಬ್ಬಂದಿಯನ್ನು ನಿಯೋಜಿಸುವುದು ಹಾಗೂ ಇತರ ಸರ್ಕಾರಿ ಇಲಾಖೆ ಹಾಗೂ ಏಜೆನ್ಸಿಗಳೊಂದಿಗೆ ಸಹಭಾಗಿತ್ವದ ಮೂಲಕ ಧ್ಯೇಯವನ್ನು ಸಾಧಿಸುವುದಕ್ಕೆ ಪ್ರಯತ್ನಿಸುವುದು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ವತಿಯಿಂದ RICH ಘಟಕದಲ್ಲಿ ಒಬ್ಬ ವ್ಯವಸ್ಥಾಪಕ (ತಾಂತ್ರಿಕ), ವ್ಯವಸ್ಥಾಪಕ (ಮಾರುಕಟ್ಟೆ), ಇಬ್ಬರು ಲ್ಯಾಬ್ ಅಸಿಸ್ಟಂಟ್‌ಗಳು ಮತ್ತು ಇಬ್ಬರು ಮಾರ್ಗದರ್ಶಕರನ್ನು ನೇಮಿಸಲಾಯಿತು.  ಇದಕ್ಕೆ ಬೇಕಾದ ಸ್ಥಳ, ಜನ ಹಾಗೂ ಉಪಕರಣಗಳನ್ನು ಒದಗಿಸಲಾಯಿತು.
ರಿಚ್ ದೂರದೃಷ್ಟಿ:  ತಾಂತ್ರಿಕ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ವಿನೂತನ ಪ್ರಯೋಗಗಳನ್ನು ನಡೆಸಲು ಉತ್ತೇಜನ ನೀಡುವುದು. ಅವರ ಮನಸ್ಸಿನಲ್ಲಿರುವ ಯೋಜನೆಯನ್ನು ವಾಸ್ತವ ರೂಪಕ್ಕಿಳಿಸಲು ಇನ್ಕ್ಯುಬೇಟರ್ ವ್ಯವಸ್ಥೆಯ ಬಳಕೆ.
= ವಿದ್ಯಾರ್ಥಿಗಳು ತಯಾರಿಸುವ ಉತ್ಪನ್ನವನ್ನು ಸಾಹಸೋದ್ಯಮ ಬಂಡವಾಳಕ್ಕೂ ಮಾರುಕಟ್ಟೆಯಲ್ಲಿ ತರಲು ಉತ್ಪಾದನಾ ಸೌಲಭ್ಯವನ್ನು ಒದಗಿಸುವುದು ಅಥವಾ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಂಸ್ಥೆಗಳ ಮೂಲಕ ಅವರಿಗೆ ಬೇಕಾದ ತಂತ್ರಜ್ಞಾನ ಪೂರೈಸುವುದು.
= ಮಾರುಕಟ್ಟೆಗೆ ಬೇಕಾದ ಧನಸಹಾಯ, ವ್ಯವಹಾರ ಯೋಜನೆ, ಬ್ಯಾಂಕ್‌ನಿಂದ ಸಾಲ-ಸೌಲಭ್ಯ, ಪ್ರದರ್ಶನ ವ್ಯವಸ್ಥೆ, ಹಕ್ಕುಸ್ವಾಮ್ಯ ಮುಂತಾದ ಸೌಲಭ್ಯಗಳನ್ನು ನೀಡುವುದು.
ರಿಚ್‌ನ ಮುಖ್ಯ ಉದ್ದೇಶಗಳು: ತಂತ್ರಜ್ಞಾನ ಆಧಾರಿತ ಹೊಸ ಉದ್ಯಮಗಳು, ಮೌಲ್ಯವರ್ಧಿತ ಹುದ್ದೆ ಹಾಗೂ ಸೇವೆಗಳ ಸೃಷ್ಟಿ.
= ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳ ಉತ್ಪನ್ನಗಳ ವೇಗದ ವಾಣಿಜ್ಯೀಕರಣಕ್ಕೆ ಒತ್ತು, ತಂತ್ರಜ್ಞಾನ ವರ್ಗಾವಣೆಗೆ ಹೊಸ ಸಾಧನಗಳ ಅಭಿವೃದ್ಧಿ.
= ಅಸ್ತಿತ್ವದಲ್ಲಿರುವ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆದಾರರಿಗೆ ನೂತನ ತಂತ್ರಜ್ಞಾನದ ಬಳಕೆಯ ಬಗ್ಗೆ ಅರಿವು ಮೂಡಿಸುವುದು.
= ಅಸ್ತಿತ್ವದಲ್ಲಿರುವ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆದಾರರಿಗೆ ವಿಶೇಷ ಸೇವೆಗಳಿಗೆ ಸಹಕರಿಸುವುದು
ರಿಚ್ ನಿರ್ವಹಣೆ: ಯಾವುದೇ ಒಬ್ಬ ವಿದ್ಯಾರ್ಥಿಯು RICH ಸಂಸ್ಥೆಗೆ ಅರ್ಹನಾಗಬೇಕೆಂದರೆ, ಮೊದಲು ಆ ಸಂಸ್ಥೆಯ ಸಮಿತಿ ಮೂಲಕ ಅವರ ಅರ್ಹತಾ ಪರೀಕ್ಷೆ ತೆಗೆದುಕೊಳ್ಳಲಾಗುತ್ತದೆ. ವಿದ್ಯಾರ್ಥಿಯಲ್ಲಿ ವಿನೂತನ ಪರಿಕಲ್ಪನೆ ಏನಿದೆ, ಅದು ಈಗಾಗಲೇ ಉದ್ಯಮದಲ್ಲಿ ಲಭ್ಯವಿದೆಯೋ ಇಲ್ಲವೋ ಎಂದು ಪರೀಕ್ಷಿಸಬೇಕಾಗುತ್ತದೆ. ಜೊತೆಗೆ ಆ ಒಂದು ಪರಿಕಲ್ಪನೆ ದೊಡ್ಡ ಪ್ರಮಾಣದ ಉತ್ಪಾದನೆಗೆ ಅಥವಾ ಹೆಚ್ಚು ಪ್ರಮಾಣದಲ್ಲಿ ಉಪಯೋಗವಾಗುವ ಸಾಧ್ಯತೆಯನ್ನು ಕೂಡ ವಿಶ್ಲೇಷಿಸಬೇಕಾಗುತ್ತದೆ. ಅದಕ್ಕಾಗಿ ವಿದ್ಯಾರ್ಥಿಗಳ ತಾಂತ್ರಿಕ ಸಿದ್ಧತೆ ಮತ್ತು ಬೇಕಾಗಿರುವ ಯಂತ್ರಗಳ ಲಭ್ಯತೆ ಬಗ್ಗೆಯೂ ವಿಚಾರಿಸಬೇಕಾಗುತ್ತದೆ. ಅಂದರೆ ಈ ಒಂದು ಕಲ್ಪನೆ ಎಷ್ಟು ಚೌಕಟ್ಟಿನೊಳಗೆ ನಿಜವಾಗಿ ಒಂದು ಉತ್ಪನ್ನವನ್ನಾಗಿ ಪರಿವರ್ತನೆ ಆಗುತ್ತದೆ ಎಂಬುದರ ಅಂದಾಜು ಮಾಡಲಾಗುತ್ತದೆ. ಅದರ ಒಂದು ಮಾದರಿ ತಯಾರಿಸಿ ಅದರಿಂದ ಒಂದು ಉತ್ಪನ್ನವನ್ನು ತಯಾರಿಸಲಾಗುತ್ತದೆ. ನಂತರ ಅದನ್ನು ಜಾಗತಿಕ ಮಾರುಕಟ್ಟೆಗೆ ಪರಿಚಯಿಸಬೇಕಾಗುತ್ತದೆ. ಸುಮಾರು ಹದಿನೆಂಟು ತಿಂಗಳವರೆಗೆ ಈ ಸಹಾಯ ವೇದಿಕೆಯನ್ನು RICH ಮೂಲಕ ನೀಡಲಾಗುತ್ತದೆ.  
ಹಿಂದುಳಿದ ಹಣೆ ಪಟ್ಟಿಯನ್ನು ಹೊಂದಿದ ಹೈದರಾಬಾದ್ ಕರ್ನಾಟಕ ಪ್ರದೇಶ RICH ಆಗಲಿ ಎಂಬುದು ನನ್ನ ಮಹತ್ತರ ಕನಸಾಗಿತ್ತು.

-ಶಾಲಿನಿ ರಜನೀಶ್, ಐಎಎಸ್
anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement