ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ನಿಮಗೆ ದೇಶ ಒಡೆದು ಹೋಗುವುದು ಬೇಕಾಗಿದೆಯೇ?

ಮಲ್ಲೇಶ್ವರದಿಂದ ಪೀಣ್ಯದವರೆಗಿನ 'ಹಸಿರು ಮಾರ್ಗ'ವನು ನಮ್ಮ ಮೆಟ್ರೋ ಆರಂಭಿಸಿದಾಗ...

Vishwanath S
Updated On : 29 Jun 2014, 12:59 pm

ಮಲ್ಲೇಶ್ವರದಿಂದ ಪೀಣ್ಯದವರೆಗಿನ 'ಹಸಿರು ಮಾರ್ಗ'ವನು ನಮ್ಮ ಮೆಟ್ರೋ ಆರಂಭಿಸಿದಾಗ ನಿಜಕ್ಕೂ ಕನಡಿಗರು ಆಘಾತಗೊಂಡರು. ಯಾಕೆಂದರೆ ಅಲ್ಲಿ ಕಂಡಿದ್ದು ಹಿಂದಿ ದರ್ಬಾರು. ಎಲ್ಲಿ ನೋಡಿದರೆ ಅಲ್ಲಿ ಹಿಂದಿ ಅಕ್ಷರಗಳ ನಾಮಫಲಕಗಳು. ಭದ್ರತಾ ಸಿಬ್ಬಂದಿಗಳ ಹಿಂದಿ ಮಾತುಗಳು. ಕನಡಿಗರು ಈ ಹಿಂದಿವಾಲಾಗಳೊಂದಿಗೆ ವ್ಯವಹರಿಸಲಾಗದೆ ಒದ್ದಾಡಿದ್ದೂ ಆಯ್ತು. ಯಾಕೆ ಈ ಹಿಂದಿ ನಾಮಫಲಕಗಳು ಎಂದು ಪ್ರಶಿಸಿದರೆ ನಮ್ಮ ಮೆಟ್ರೋಗೆ ಸಂಬಂಧಿಸಿದ ಅಧಿಕಾರಿಗಳು ಹೇಳಿದ್ದು 'ನಮ್ಮ ಮೆಟ್ರೋಗೆ ಕೇಂದ್ರ ಸರ್ಕಾರವೂ ಹಣ ತೊಡಗಿಸಿದೆ. ಹೀಗಾಗಿ ಹಿಂದಿ ಬಳಕೆ ಕಡ್ಡಾಯ' ಎಂಬ ಮಾತನು.
ಈ ಉತ್ತರ ಎರಡು ಮುಖ್ಯವಾದ ಪ್ರಶೆಗಳನು ಮೇಲೆತ್ತುತ್ತದೆ. ಕೇಂದ್ರ ಸರ್ಕಾರ ಹಣ ತೊಡಗಿಸಿದ ಮಾತ್ರಕ್ಕೇ ಹಿಂದಿಯನೇಕೆ ಬಳಸಬೇಕು. ಕೇಂದ್ರ ಸರ್ಕಾರ ಹಿಂದಿ ಭಾಷಿಕರಿಗೆ ಸೇರಿದ್ದೋ? ಕೇಂದ್ರ ಸರ್ಕಾರ ಹಿಂದಿಯನು ಬಿಟ್ಟು ಕೊಟ್ಟು ಏನನೂ ಮಾಡಕೂಡದು ಎಂದೋ? ಇನು ಕೇಂದ್ರ ಸರ್ಕಾರದ ಹಣ ಬಳಸಲಾಗಿದೆ ಎಂದರೆ ಏನರ್ಥ? ಕೇಂದ್ರ ಸರ್ಕಾರ ಕೊಡುವ ಹಣ ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದ್ದಲ್ಲವೇ? ನಾವು ಕೇಂದ್ರಕ್ಕೆ ಕೊಡುವ ಸಾವಿರಾರು ಕೋಟಿ ರು. ತೆರಿಗೆ ಹಣದಲ್ಲಿ ರಾಜ್ಯಕ್ಕೆ ಅನುದಾನವಾಗಿ ಬರುವ ಹಣವಾದರೂ ಎಷ್ಟು? ಶೇ. 20? ಶೇ. 10? ಅಥವಾ ಅದಕ್ಕೂ ಕಡಿಮೆಯಿರಬಹುದೇ? ಹೀಗಿರುವಾಗ ಕೇಂದ್ರ ಸರ್ಕಾರ ಎಲ್ಲೋ ಆಕಾಶದಿಂದ ದುಡ್ಡನು ಸೃಷ್ಟಿಸಿ ಕೊಡುತ್ತಿರುವ ಹಾಗೆ 'ಕೇಂದ್ರ ಸರ್ಕಾರದ ಹಣ' ಎಂದು ಹಣೆಪಟ್ಟಿ ಹಚ್ಚುವುದಾದರೂ ಯಾತಕ್ಕಾಗಿ? ಹಿಂದಿಯನು ಬಲವಂತವಾಗಿ ಕನಡಿಗರ ಮೇಲೆ ಹೇರುವ ಮೆಟ್ರೋ ಸಂಸ್ಥೆಯ ಹುನಾರವನು ವಿಫಲಗೊಳಿಸುವ ಉದ್ದೇಶದಿಂದ ಕರ್ನಾಟಕ ರಕ್ಷಣಾ ವೇದಿಕೆ ನಿರಂತರ ಹೋರಾಟಗಳನು ನಡೆಸಿತು. ಕಳೆದ ವಾರ ನಾವು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲಾ ಅವರನು ಪ್ರತಿಭಟನಾ ಸ್ಥಳಕ್ಕೆ ಕರೆಸಿಕೊಂಡಿದ್ದವು. ಆಗ ನಾನು ನನ ಎಂದಿನ ಧಾಟಿಯಲ್ಲಿ ಹೇಳಿದೆ-"ಹಿಂದಿ ನಾಮಫಲಕಗಳು ಇರಕೂಡದು. ಅದರ ಅಗತ್ಯ ಕರ್ನಾಟಕದಲ್ಲಿ ಇಲ್ಲ. ನೀವು ತೆಗೆಯದೇ ಹೋದರೆ ನಾವೇ ಎಲ್ಲ ನಿಲ್ದಾಣಗಳಿಗೂ ನುಗ್ಗಿ ಕಿತ್ತು ಎಸೆಯಬೇಕಾಗುತ್ತದೆ. ಇಂಥ ನೂರಾರು ಕಾರ್ಯಾಚರಣೆಗಳನು ನಡೆಸಿದ ಅನುಭವ ನಮಗಿದೆ. ಕನಡದ ವಿಷಯಕ್ಕೆ ಬಂದಾಗ ಜೈಲು- ಪೊಲೀಸ್ ಇತ್ಯಾದಿಗಳಿಗೆ ನಾವು ಅಂಜುವವರೂ ಅಲ್ಲ. ನಿಮಗೆ ರೈಲು ಮಾರ್ಗ ಹಾಕಲು ಜಾಗ ಕೊಟ್ಟಿರುವುದು ಕನಡಿಗರು, ರೈಲಿನಲ್ಲಿ ಓಡಾಡುವವರು ಕನಡಿಗರು. ಯೋಜನೆ ನಡೆದಿರುವುದು ನಮ್ಮ ತೆರಿಗೆ ಹಣದಲ್ಲಿ. ಇನ್ಯಾವುದೋ ಪರದೇಸಿ ಭಾಷೆಯನು ತಂದು ತುರುಕಲು ಯತಿಸಿದರೆ ಪರಿಸ್ಥಿತಿ ನೆಟ್ಟಗಿರೋದಿಲ್ಲ. ನಮ್ಮ ಆಗ್ರಹಕ್ಕೆ ಮಣಿಯದೇ ಹೋದಲ್ಲಿ ಇನು ಮುಂದೆ 'ನಮ್ಮ ಮೆಟ್ರೋ' ಯಾವುದೇ ಮಾರ್ಗವನು ಆರಂಭಿಸಲು ಅವಕಾಶ ಕೊಡುವುದಿಲ್ಲ. ನಮ್ಮ ಮೆಟ್ರೋದಲ್ಲಿ ಭದ್ರತಾ ಸಿಬ್ಬಂದಿ ಸೇರಿ ಎಲ್ಲ ಹುದ್ದೆಗಳನು ಕನಡಿಗರಿಗೆ ಕೊಡಬೇಕು. ಕನಡದಲ್ಲೇ ವ್ಯವಹಾರ ನಡೆಯಬೇಕು. ಇಲ್ಲವಾದಲ್ಲಿ ಸುಮ್ಮನೆ ಬಿಡುವುದಿಲ್ಲ."
ಹೀಗೆ ಹೇಳಿದ ನಂತರ ಖರೋಲಾ ತಕ್ಷಣವೇ ಹಿಂದಿ ನಾಮಫಲಕಗಳನು ಕಿತ್ತು ಹಾಕಿಸುವುದಾಗಿ ಭರವಸೆ ನೀಡಿದರು. ಕನಡದಲ್ಲೇ ವ್ಯವಹರಿಸಲು ಸಿಬ್ಬಂದಿಗೆ ಸೂಚಿಸುವುದಾಗಿಯೂ, ಕನಡ ಬಲ್ಲವರನೇ ನೇಮಕಾತಿ ಮಾಡಿಕೊಳ್ಳುವುದಾಗಿಯೂ ಆಶ್ವಾಸನೆ ನೀಡಿದರು. ನಮ್ಮ ಬೇಡಿಕೆಗೆ ಮಣಿದು ಹಿಂದಿ ನಾಮಫಲಕಗಳ ಮೇಲೆ ಪೇಪರ್‌ಗಳನು ಮೆತ್ತಿಸಲಾಯಿತು. ಒಂದು ಹಂತಕ್ಕೆ ನಮ್ಮ ಮೆಟ್ರೋದಲ್ಲಿ ಹಿಂದಿಯನು ಪ್ರತಿಷ್ಠಾಪಿಸುವ ಯತ ವಿಫಲಗೊಂಡಂತಾಯಿತು.
ಆದರೆ ಸಮಸ್ಯೆ ಇಲ್ಲಿಗೆ ನಿಲ್ಲುವುದಿಲ್ಲ. ನಮ್ಮ ಮೆಟ್ರೋದಲ್ಲಿ ಹಿಂದಿ ಹೇರಿಕೆ ನಿಂತ ತಕ್ಷಣ ಇತರೆಡೆಗಳಲ್ಲಿ ಅದು ನಿಂತಂತಾಗುವುದಿಲ್ಲ. ಬಲವಂತದ ಹಿಂದಿ ಹೇರಿಕೆ ಕನಡ ನಾಡನು ಅದೃಶ್ಯವಾಗಿ ಕಾಡುತ್ತಿರುವ ಪೆಡಂಭೂತ. ಈ ಭೂತ ಒಮ್ಮೊಮ್ಮೆ ಒಂದೊಂದು ವೇಷ ತೊಟ್ಟುಕೊಂಡು ಬರುತ್ತದೆ. ಒಮ್ಮೆ ಮುಂದೆ, ಒಮ್ಮೆ ಹಿಂದೆ, ಮತ್ತೊಮ್ಮೆ ನಮ್ಮ ಎಡಬಲದಲ್ಲಿ ಪ್ರತ್ಯಕ್ಷವಾಗುತ್ತದೆ. ಇದರ ಬಣ್ಣಬಣ್ಣದ ವೇಷಗಳಿಗೆ ಒಮ್ಮೊಮ್ಮೆ ಕನಡಿಗರೇ ಮರುಳಾಗುವುದುಂಟು.
ಭಾರತ ಸ್ವಾತಂತ್ರ್ಯ ಪಡೆದ ನಂತರ ಅಧಿಕಾರ ಸ್ಥಾನದಲ್ಲಿದ್ದ ಉತ್ತರ ಭಾರತೀಯರು ಬಹಳ ನಾಜೂಕಾಗಿ ಹಿಂದಿಯನು ಮೆರೆಸುವ ಕೆಲಸ ಆರಂಭಿಸಿದರು. ಸಂವಿಧಾನದಲ್ಲಿಯೇ ಹಿಂದಿಗೆ ಇಂಗ್ಲಿಷಿನ ಜತೆಗೆ ಆಡಳಿತ ಭಾಷೆಯ ಸ್ಥಾನಮಾನವನು ನೀಡಲಾಯಿತು. ಹಿಂದಿ ಅತಿ ಹೆಚ್ಚಿನ ಭಾರತೀಯರು ಬಳಸುವ ಭಾಷೆ. ಅದು ಐಕ್ಯತೆಯನು ಮೂಡಿಸುತ್ತದೆ ಎಂಬ ಬಣ್ಣ ಬಣ್ಣದ ಸುಳ್ಳುಗಳನು ಹೇಳಿ ತ್ರಿಭಾಷಾ ಸೂತ್ರವನು ಹೇರಲಾಯಿತು. 'ಇಂಗ್ಲಿಷ್ ಮತ್ತು ಹಿಂದಿ ಕಡ್ಡಾಯ, ಮಿಕ್ಕಂತೆ ಆಯಾ ಪ್ರದೇಶದ ಭಾಷೆ ಬೇಕಿದ್ದರೆ ಬಳಸಬಹುದು' ಎಂಬ ನೀತಿಯನು ಆರಂಭಿಸಿದ ಕೇಂದ್ರ ಸರ್ಕಾರ ಮತ್ತು ಅದರ ಅಧೀನ ಸಂಸ್ಥೆಗಳು ನಿಧಾನವಾಗಿ ಪ್ರಾದೇಶಿಕ ಭಾಷೆಗಳನು ಗುಡಿಸಿ ಹಾಕಿ ಕೇವಲ ಹಿಂದಿ ಮತ್ತು ಇಂಗ್ಲಿಷನು ಬಳಸತೊಡಗಿದವು. ಒಂದು ಉದಾಹರಣೆಯನು ಗಮನಿಸಿ. ಈಗಿರುವ ತ್ರಿಭಾಷಾ ಸೂತ್ರದ ಅನ್ವಯವಾದರೂ ಕೇಂದ್ರ ಸರ್ಕಾರದ ಇಲಾಖೆಗಳು, ಅಧೀನ ಸಂಸ್ಥೆಗಳು ನಡೆದುಕೊಳ್ಳುತ್ತಿವೆಯೇ? ರೈಲ್ವೆ ಟಿಕೆಟುಗಳಲ್ಲಿ ಕನಡವಿದೆಯಾ? ಬ್ಯಾಂಕುಗಳು ಕೊಡುವ ಚೆಕ್ ಪುಸ್ತಕಗಳಲ್ಲಿ ಕನಡವಿದೆಯಾ? ಚಲನ್‌ಗಳಲ್ಲಿ ಕನಡವಿದೆಯಾ? ಅಂಚೆ ಕಛೇರಿಗಳ ಅರ್ಜಿಗಳು ಕನಡದಲ್ಲಿವೆಯಾ?
ಬ್ಯಾಂಕುಗಳಲ್ಲಿ ಕನಡದಲ್ಲಿ ವ್ಯವಹಾರ ಮಾಡುವುದು ಹಾಗಿರಲಿ, ಕನಡದಲ್ಲಿ ಬರೆದ ಚೆಕ್‌ಗಳನು ತಿರಸ್ಕರಿಸಲಾಗುತ್ತದೆ. ಇದು ಯಾವ ಸೀಮೆಯ ಭಾಷಾ ನೀತಿ?
 ಇದನು 'ಹಿಂದಿ ಮಾಫಿಯಾ' ಎಂದೇ ಕರೆಯಲು ಬಯಸುತ್ತೇನೆ. ಇಂಥ ಹಿಂದಿ ಮಾಫಿಯಾದ ವಿರುದ್ಧ ತೊಡೆತಟ್ಟಿ ನಿಂತಿದ್ದು ತಮಿಳುನಾಡಿನ ಜನರು ಮತ್ತು ಅಲ್ಲಿನ ಸರ್ಕಾರ. ತಮಿಳಿಗರ ನಿರಂತರ ಹೋರಾಟ, ಬಲಿದಾನದಿಂದಾಗಿಯೇ 1976ರಲ್ಲಿ ಕೇಂದ್ರ ಸರ್ಕಾರ ಆಡಳಿತ ಭಾಷೆ ಕಾಯ್ದೆಗೆ ತಿದ್ದುಪಡಿ ತಂದು ತಮಿಳುನಾಡನು ಆ ಕಾಯ್ದೆಯಿಂದ ಹೊರಗೆ ಇಟ್ಟಿತು. ಅದರರ್ಥವೇನು? ಹಿಂದಿಯೇತರ ರಾಜ್ಯಗಳ ಜನರಿಗೆ ದೇಶದ ಆಡಳಿತ ಭಾಷೆ ಕಾಯ್ದೆಯಿಂದ ಸಮಸ್ಯೆಯಾಗುತ್ತಿದೆ ಎಂದಲ್ಲವೇ?
ತಮಿಳುನಾಡಿಗೆ ಯಾವ ಮಾನದಂಡವನು ಇಟ್ಟುಕೊಂಡು ಈ ವಿಶೇಷ ಅವಕಾಶವನು ಒದಗಿಸಲಾಯಿತೋ ಅದೇ ಮಾನದಂಡ ಕರ್ನಾಟಕ, ಕೇರಳ, ಆಂಧ್ರ, ಒಡಿಸ್ಸಾ, ಅಸ್ಸಾಂ, ಮಣಿಪುರ, ಮಹಾರಾಷ್ಟ್ರದಂಥ ರಾಜ್ಯಗಳಿಗೂ ಅನ್ವಯಿಸುವುದಿಲ್ಲವೇ?
ಇವತ್ತು ಕರ್ನಾಟಕಕ್ಕೆ ಆಗಬೇಕಾಗಿರುವುದೂ ಅದೇ. ಹೇಗೆ 1976ರ ಸಂವಿಧಾನ ತಿದ್ದುಪಡಿಯಲ್ಲಿ ಆಡಳಿತ ಭಾಷೆ ಕಾಯ್ದೆಯಿಂದ ತಮಿಳುನಾಡನು ಹೊರಗೆ ಇಡಲಾಯಿತೋ ಹಾಗೆಯೇ ಕರ್ನಾಟಕವನೂ ಹೊರಗೆ ಇಡಬೇಕಿದೆ. ತನ್ಮೂಲಕ ಕರ್ನಾಟಕದಲ್ಲಿ ತ್ರಿಭಾಷಾ ಸೂತ್ರದ ಬದಲು ದ್ವಿಭಾಷಾ ಸೂತ್ರ ಜಾರಿಗೆ ಬರಬೇಕಾಗಿದೆ. ಮೊದಲು ನಮ್ಮ ಶಾಲಾ ಪಠ್ಯಕ್ರಮಗಳಿಂದ ಹಿಂದಿಯನು ಹೊರಗೆ ಇಡಬೇಕಿದೆ. ಕನಡ ಮತ್ತು ಇಂಗ್ಲಿಷ್ ನಂತರ ಕನಡದ ಜನರು ಯಾವುದೇ ಭಾಷೆಯನು ತೃತೀಯ ಭಾಷೆಯನಾಗಿ ಪಡೆದುಕೊಳ್ಳುವ ಅವಕಾಶ ಕಲ್ಪಿಸಬೇಕಿದೆ. ಹಿಂದಿಯೇ ಏಕೆ? ತಮಿಳು, ತೆಲುಗು, ಫ್ರೆಂಚ್, ಜರ್ಮನ್, ಮಲೆಯಾಳ, ಅಸ್ಸಾಮಿ ಹೀಗೆ ಯಾವುದೇ ಭಾಷೆಯನು ತೃತೀಯ ಭಾಷೆಯನಾಗಿ ಆಯ್ಕೆ ಮಾಡಿಕೊಳ್ಳುವ ಅವಕಾಶವನು ಕನಡಿಗರಿಗೆ ಒದಗಿಸಬೇಕಿದೆ. ಆದರೆ ಇದು ಅಷ್ಟು ಸುಲಭವಾದ ವಿಷಯವಾಗೇನೂ ಇಲ್ಲ. ಯಾಕೆಂದರೆ 'ಹಿಂದಿ ಮಾಫಿಯಾ' ಈಗ ಹೆಚ್ಚು ಹೆಚ್ಚು ಬಲಶಾಲಿಯಾಗಿದೆ ಮತ್ತು ಕ್ರಿಯಾಶೀಲವಾಗಿದೆ. ನರೇಂದ್ರ ಮೋದಿಯವರ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಆರಂಭದಲ್ಲಿಯೇ ಅದು ಹೊರಡಿಸಿದ ಎರಡು ಆದೇಶಗಳು ಇದಕ್ಕೆ ಸಾಕ್ಷಿ. ಸರ್ಕಾರಿ ಅಧಿಕಾರಿಗಳು ಸಾಮಾಜಿಕ ತಾಣಗಳಲ್ಲಿ ಹಿಂದಿಯನೇ ಬಳಸಬೇಕು ಎಂದು ನೀಡಿದ ಆದೇಶ ಒಂದಾದರೆ, ಎಲ್ಲ ರಾಜ್ಯಗಳು ಕೇಂದ್ರ ಸರ್ಕಾರದೊಂದಿಗೆ ಹಿಂದಿಯಲ್ಲೇ ವ್ಯವಹರಿಸಬೇಕು ಎಂಬ ಆದೇಶ ಮತ್ತೊಂದು. ಈ ಎರಡು ಆದೇಶಗಳು ಹೊರಗೆ ಬಂದಾಗ ನನಗೆ ಪ್ರಾಮಾಣಿಕವಾಗಿ ಅನಿಸಿದ್ದು- ಹೀಗಿದ್ದ ಮೇಲೆ ಈ ಕೇಂದ್ರ ಸರ್ಕಾರವಾದರೂ ಯಾಕೆ ಬೇಕು? ಈ ಒಕ್ಕೂಟ ವ್ಯವಸ್ಥೆಯಾದರೂ ಯಾಕೆ ಬೇಕು (ಹಿಂದಿಯೇತರ ರಾಜ್ಯಗಳು) ಭಾರತದಲ್ಲಿ ಯಾಕಾದರೂ ಇರಬೇಕು?
ನರೇಂದ್ರ ಮೋದಿಯವರು ಪ್ರಧಾನಿಯಾದ ಸಂದರ್ಭದಲ್ಲಿ ನಾನು ಅವರಿಗೆ ಬರೆದ ಬಹಿರಂಗ ಪತ್ರದಲ್ಲಿ "ಹಿಂದಿ ಹೇರಿಕೆ"ಯ ವಿಷಯವನು ಪ್ರಸ್ತಾಪಿಸಿದ್ದೆ. ಅದರ ಕೆಲವು ಸಾಲುಗಳು ಹೀಗಿವೆ-"ದೇಶವನು ಕಟ್ಟುವ ಬಗೆಯ ಕುರಿತು ಹಲವು ಬಗೆಯ ಅಭಿಪ್ರಾಯಗಳು, ನಿಲುವುಗಳು ಇವೆ. 'ವಿವಿಧತೆಯಲ್ಲಿ ಏಕತೆ' ನಮ್ಮ ಪ್ರಜಾಪ್ರಭುತ್ವದ ವಿಶೇಷ ಗುಣ ಎಂದು ಸಂವಿಧಾನ ಸಾರುತ್ತದೆ. ನನಂಥವರು ನಂಬುವುದು ಈ 'ವಿವಿಧತೆಯಲ್ಲಿ ಏಕತೆ' ಎಂಬ ಮೂಲಮಂತ್ರವನು. ಈ ದೇಶ ಬಹುಭಾಷಿಕರ ನಾಡು, ಬಹು ಸಂಸ್ಕೃತಿಗಳ ನೆಲೆವೀಡು. ಈ ಸಾಂಸ್ಕೃತಿಕ ವೈವಿಧ್ಯತೆ ಜೀವಂತವಾಗಿದ್ದಷ್ಟು ಕಾಲ ಈ ದೇಶ ಒಂದಾಗಿರಲು ಸಾಧ್ಯ. ಒಂದು ವೇಳೆ ಈ 'ಬಹುತ್ವ'ವನು ಹೊಸಕಿ ಹಾಕಿ 'ಏಕತ್ವ'ವನು ದೇಶದ ಮೇಲೆ ಹೇರಲು ಹೊರಟರೆ ಅದರ ಪರಿಣಾಮ ಭೀಕರವಾಗುತ್ತದೆ. ಈ ದೇಶ ಒಂದಾಗಿ ಉಳಿಯುವುದೇ ಕಷ್ಟಸಾಧ್ಯವಾಗುತ್ತದೆ. ಕನಡಿಗರು ಕನಡಿಗರಾಗಿಯೇ, ಕನಡ ಸಂಸ್ಕೃತಿಯನು ಮುಂದುವರೆಸಿಕೊಂಡೇ ದೇಶದ ಭಾಗವಾಗಿರುವ ಅವಕಾಶ ನೀಡಬೇಕು. ಅದೇ ರೀತಿ ಗುಜರಾತಿಗಳು ಗುಜರಾತಿಗಳಾಗಿಯೇ ಗುಜರಾತಿ ಸಂಸ್ಕೃತಿಯನು ಎತ್ತಿ ಹಿಡಿಯುವತ್ತ ದೇಶದ ಭಾಗವಾಗಬೇಕು. ಆದರೆ ದೇಶವನು ಆಳಿಕೊಂಡು ಬಂದ, ದೇಶವನು ನಿಯಂತ್ರಿಸಿಕೊಂಡು ಬಂದ ಶಕ್ತಿಗಳು 'ಬಹುತ್ವ' ದ ಶಕ್ತಿಗಳಂತೆಯೇ ವರ್ತಿಸುತ್ತಿವೆ. ಅದಕ್ಕೆ ಅತ್ಯಂತ ಪರಿಣಾಮಕಾರಿಯಾದ ಉದಾಹರಣೆಯೆಂದರೆ ಈಗಲೂ ಆಂತರಿಕ ದಂಗೆಯಿಂದ ಬಸವಳಿದಿರುವ ಈಶಾನ್ಯ ರಾಜ್ಯಗಳು. ಈಶಾನ್ಯ ರಾಜ್ಯಗಳ ಭಾಷೆ, ಸಂಸ್ಕೃತಿಯ ಮೇಲೆ ಸವಾರಿ ಮಾಡಿದ ಪರಿಣಾಮವನು ನಾವು ಈಗ ಕಣ್ಣಾರೆ ನೋಡುತ್ತಿದ್ದೇವೆ. ಏಕಧರ್ಮ, ಏಕ ಸಂಸ್ಕೃತಿ, ಏಕಭಾಷೆಯನು ಯಾವುದೇ ಸಮುದಾಯದ ಮೇಲೆ ಹೇರಲು ಯತಿಸುವುದು ಅತ್ಯಂತ ಅಮಾನವೀಯ ಮತ್ತು ಕ್ರೂರತನ. ಇದು ದೇಶ ಕಟ್ಟುವ  ಕೆಲಸ ಅಲ್ಲವೇ ಅಲ್ಲ."
ಕೇಂದ್ರ ಸರ್ಕಾರದ ಮುಂದೆ ಈಗ ಇರುವುದು ಎರಡು ಆಯ್ಕೆ. ಒಂದು ಎಲ್ಲ ಪ್ರಾದೇಶಿಕ ಭಾಷೆಗಳನು ಗೌರವಿಸುವತ್ತ, ಸಂವಿಧಾನಕ್ಕೆ ತಿದ್ದುಪಡಿ ತಂದು ಸಂವಿಧಾನದ 8ನೇ ಪರಿಚ್ಛೇದದಲ್ಲಿ ಉಲ್ಲೇಖಿಸಿರುವ ಎಲ್ಲ 22 ಭಾಷೆಗಳನು ಅಧಿಕೃತ, ಆಡಳಿತ ಭಾಷೆಗಳನಾಗಿ ಮಾಡಿ ಈ ದೇಶದ ಬಹುತ್ವವನು ಆ ಮೂಲಕ ಸಾರ್ವಭೌಮತೆಯನು ಕಾಪಾಡುವುದು. ಎರಡನೇ ಆಯ್ಕೆ ಆತ್ಮಘಾತಕನದ್ದು. ಹಿಂದಿಯನು ಬಲವಂತವಾಗಿ ಎಲ್ಲ ರಾಜ್ಯಗಳ ಮೇಲೂ ಹೇರುವ ಮೂಲಕ ಈ ದೇಶದಲ್ಲಿ ಒಡಕಿಗೆ ಕಾರಣವಾಗುವುದು. ಅಖಂಡತೆಗೆ ಕುತ್ತು ತಂದುಕೊಳ್ಳುವುದು.
ಕೇಂದ್ರ ಸರ್ಕಾರ ದೇಶವನು ಅಖಂಡವಾಗಿ ಉಳಿಸುವ ನಿರ್ಧಾರವನೇ ಕೈಗೊಳ್ಳುತ್ತದೆ ಎಂಬ ಆಶಾಭಾವನೆ ನನದು. ಇಲ್ಲದೇ ಹೋದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯಂತೂ ಯಾವುದೇ ಸ್ವರೂಪದ ಹೋರಾಟಕ್ಕೂ ಸಜ್ಜಾಗಿಯೇ ಇರುತ್ತದೆ.


- ಟಿ.ಎ. ನಾರಾಯಣಗೌಡ
 ರಾಜ್ಯಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement