ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಸಂದರ್ಶನ, ಸುದ್ದಿಗಳ ಚುನಾವಣೆ ಭೋಜನ

Vishwanath S
Updated On : 18 May 2014, 12:28 pm

ದಿನಾಂಕ 17 ರ 'ಕನ್ನಡ ಪ್ರಭ'ದ ಮುಖಪುಟ "ಮನಮೋಹನ" ಅರ್ಥಗರ್ಭಿತವಾಗಿತ್ತು. ಮನಮೋಹನ ಹೆಸರಿನಲ್ಲಿ "ನಮೋ" ಹೆಸರನ್ನು ಸೂಚಿಸಿ ಉಳಿದ ಅಕ್ಷರಗಳನ್ನು ಅಳಿಸಿದ್ದು, ಕನ್ನಡಪ್ರಭದ ಸಂಪಾದಕ ಹಾಗೂ ಬಳಗಕ್ಕೆ ಕೃತಜ್ಞತೆಗಳು. ಇಂತಹ ವಿಭಿನ್ನ ಯೋಚನೆಗಳು ವಿಭಿನ್ನ ಪ್ರಯೋಗಗಳು ಸದಾ ಮಾಡುತ್ತಿರುವ ಕರುನಾಡ ಪತ್ರಿಕೆ ಸದಾ ಕಾಲ ವಿಭಿನ್ನವಾದದನ್ನೇ ಕೊಡುತ್ತಿರಲಿ ಎಂದು ಆಶಿಸುವೆ.
- ಎಂ.ಪರಮೇಶ್ವರ, ಮದ್ದಿಹಳ್ಳಿ

ನಮೋಲ್ಲಾಸಕ್ಕೆ ನೀವು ಕೊಟ್ಟ ಶೀರ್ಷಿಕೆ ಮನಮೋಹನ ಪರಿಕಲ್ಪನೆ ಅದ್ಭುತ. ಶೀರ್ಷಿಕೆಗಳಿಗೆ ಕನ್ನಡ ಪ್ರಭಾಗೆ ಕ.ಪ್ರಭವೇ ಸರಿಸಾಟಿ. ನೀವು ಬೆಳೆಸಿದ ನಮ್ಮೂರ 'ಸಿಂಹದ ಮರಿ'  ನಿಮ್ಮನ್ನು ನೆನೆಪಿಸಿಕೊಂಡು ಕೃತಜ್ಞತೆ ಅರ್ಪಿಸಿದ್ದು ನೋಡಿ ಇನ್ನೂ ಖುಷಿಯಾಯ್ತು.
- ರಾಘವೇಂದ್ರ, ಕೃಷ್ಣಮೂರ್ತಿಪುರಂ, ಮೈಸೂರು  

ತಾವು ಪ್ರಕಟಿಸುತ್ತಿರುವ ಅಂಕಣ ಬರಹಗಳು ಅತ್ಯಂತ ಪ್ರಭಾವಶಾಲಿಯಾಗಿವೆ. ತಮ್ಮ ಪತ್ರಿಕೆ ದೇಶದ ಮತ್ತು ದೇಶದ ಜನತೆಯ ಬಗ್ಗೆ ಕಾಳಜಿಯುಳ್ಳ ಸಿಕ್ಕಿದೆಯೆನ್ನುವುದನ್ನು ಸುಸ್ಪಷ್ಟ. ಪ್ರಸ್ತುತ, ಮುಖ್ಯವಾಗಿ ದಿ. 15.5.14ರ ಗುರುವಾರದ ಕ.ಪ್ರ. ಅಂಕಣದಲ್ಲಿ ಬಂದಿರುವ ವಿಶ್ವೇಶ್ವರ ಭಟ್ಟರ 'ನೂರೆಂಟು ನೋಟ' ದಲ್ಲಿನ ಬರಹ ಮತ್ತು ಸಹನಾ ವಿಜಯಕುಮಾರ್‌ರವರ ಅಂಕಣ 'ಎಂಥವರು ಬೇಕೀಗ ಭಾರತಕ್ಕೆ' ಎಷ್ಟು ವಾಸ್ತವ ಮತ್ತು ಅರ್ಥಪೂರ್ಣವಾಗಿದೆ.
-ಕೆ.ಎಸ್. ಅನಂತರಾಮನ್, ಬೆಂಗಳೂರು.

ಪ್ರಸ್ತುತ ನಡೆದ ಲೋಕಸಭಾ ಚುನಾವಣಾ ಕಾಲದಲ್ಲಿ ಕ.ಪ್ರ. ಪತ್ರಿಕೆಯು ಕರಾರುವಾಕ್ ದಾಖಲೆಯ ಸುದ್ದಿಗಳನ್ನು ಓದುಗರಿಗೆ ನೀಡಿ ಮಹೋಪಕಾರ ಮಾಡಿದೆ. ಅಭ್ಯರ್ಥಿಗಳ ಕುರಿತು ಅವರ ಲೀಲಾವಿನೋದಗಳ ಚರಿತ್ರೆಯನ್ನು ಅನಾವರಣ ಮಾಡಿದೆ. ಸ್ವಾತಂತ್ರ್ಯಾನಂತರ ನಡೆದ ಹಲವಾರು ಚುನಾವಣೆಗಳ 'ಕ್ಷ-ಕಿರಣ'ನ್ನು ನೀಡಿ ಮತದಾರರಲ್ಲಿ ಜಾಗೃತಿ ಮೂಡಿಸಿದೆ. ಬಿಸಿ -ಬಿಸಿ ಸುದ್ದಿಗಳನ್ನು ಓದುಗರಿಗೆ ನೀಡುವಲ್ಲಿ ಕನ್ನಡಪ್ರಭ ಮುಂಚೂಣಿಯಲ್ಲಿದೆ- ಅಭಿನಂದನೆಗಳು.
-ಕೋಟೇಶ್ವರ ಸೂರ್ಯನಾರಾಯಣರಾವ್,
ಬಸವನಗುಡಿ, ಬೆಂಗಳೂರು. ದೂ. 266 24164

ಆಂಗ್ಲ ಸುದ್ದಿ ವಾಹಿನಿ ಟೈಮ್ಸ್ ನೌಗೆ, ನರೇಂದ್ರ ಮೋದಿ ನೀಡಿರುವ ಸಂದರ್ಶನದ ಸಂಪೂರ್ಣ ವರದಿಯನ್ನು ಕನ್ನಡಪ್ರಭದಲ್ಲಿ ಪ್ರಕಟಗೊಳಿಸಿದ್ದು ಶ್ಲಾಘನೀಯ. (ಕ.ಪ್ರ.9/5). ಮೋದಿ ಹಿಂದಿಯಲ್ಲಿ ಉತ್ತರಿಸಿದ್ದು ದಕ್ಷಿಣ ಭಾರತದವರಿಗೆ ಹಿಂದಿ ಭಾಷೆ ಅಷ್ಟೊಂದು ಅರ್ಥವಾಗದ ಹಿನ್ನೆಲೆಯಲ್ಲಿ ಈ ವರದಿ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಹಿಂದೂ ಧರ್ಮದ ವಿಷಯವೇ ಇರಲಿ, ದೇಶ ನಡೆಸುವ ವಿಚಾರವೇ ಇರಲಿ, ನೆರೆ ರಾಷ್ಟ್ರಗಳೊಂದಿಗಿನ ಸಂಬಂಧದ ವಿಷಯವೇ ಇರಲಿ, ಚುನಾವಣೋತ್ತರ ಮೈತ್ರಿ ಬಗೇ ಇರಲಿ, ಮೋದಿ ಉತ್ತರಿಸಿದ ರೀತಿ ಬೆರಗು ತರುವಂತಿತ್ತು. ತನ್ನ ಎಂದಿನ ಚಾಳಿ ಎಂಬಂತೆ, ಜಾತಿ ರಾಜಕಾರಣದ ವಿಷಯ, ಬೇಹುಗಾರಿಕೆಯ ವಿಷಯ, ದೂರದರ್ಶನ ನಡೆಸಿದ ಸಂದರ್ಶನದ ವಿಷಯ, ಪ್ರಿಯಾಂಕಾ ವಾದ್ರಾ ಪ್ರಕರಣ, ಉಗ್ರರ ವಿಷಯಗಳನ್ನೆಲ್ಲ ಮುಂದಿಟ್ಟು ಮೋದಿಯವರನ್ನು ಕೆಣಕಲು ಪ್ರಯತ್ನಿಸಿದ ಅರ್ನಬ್ ಗೋಸ್ವಾಮಿಯವರಿಗೆ, ತಮ್ಮ ಎಂದಿನ ಹಾರಾಟ-ಚೀರಾಟಗಳನ್ನೆಲ್ಲ ಬದಿಗಿಟ್ಟು, ಮೋದಿಯವರು ಹೇಳಿದ್ದನ್ನು ಕೇಳಿ ಸುಮ್ಮನಾದದ್ದನ್ನು ಕನ್ನಡಿಗರಿಗೆ ನೆನಪಿಸಿದ್ದಕ್ಕೆ ಧನ್ಯವಾದ.
-ಶಂಕರನಾರಾಯಣಭಟ್, ಮಾಡಗೇರಿ, ಹೊನ್ನಾವರ.ಮೊ. 9632 821920

ದಿ. 10.5.14ರ ಕ.ಪ್ರ.ದಲ್ಲಿ ದಿನಾಂಕ 11.05.14ರ ಭಾನುವಾರದಂದು ವಿಶ್ವ ಅಮ್ಮಂದಿರ ದಿನದ ಮುನ್ನಾದಿನ ಬೈಟುಕಾಫಿಯಲ್ಲಿ ಹಲವಾರು ಮಂದಿ ಸಿನಿಮಾನಟ ನಟಿಯರ ಅಮ್ಮಂದಿರ ಅನಿಸಿಕೆ, ಅಭಿಪ್ರಾಯಗಳನ್ನು ಸಂಗ್ರಹಿಸಿ ಸಚಿತ್ರ ಲೇಖನ ಪ್ರಕಟಿಸಿರುವುದು ಔಚಿತ್ಯ ಪೂರ್ಣ ಹಾಗೂ ಸಂದರ್ಭೋಚಿತವಾಗಿದೆ. ಅದರಲ್ಲೂ ವಿಶೇಷವಾಗಿ ಕನ್ನಡದ ಹೆಸರಾಂತ ನಟಿ ದಿವಂಗತ ಮಂಜುಳಾರ ಪಡಿಯಚ್ಚಿನಂತಿರುವ ಅವರ ಮಗ ಅಭಿಷೇಕ್‌ರ ಸಚಿತ್ರ ಲೇಖನವಂತೂ ಕ.ಪ್ರ. ಬಳಗದ ಹೆಮ್ಮೆಯ ಕೊಡುಗೆಯಾಗಿದೆ.
-ಎಂ.ಬಿ. ಕೃಷ್ಣಮೂರ್ತಿ
ಚಾಮರಾಜನಗರ, ಮೊ. 94491-30531

ಭಾವತೀರಯಾನ ಅಂಕಣದಲ್ಲಿ ಎ.ಆರ್. ಮಣಿಕಾಂತ್‌ರವರ ಕಾರಣವಿಲ್ಲದೇ ಬಂದಾಕೆ, ಕಾರಣ ಹೇಳದೇ ಹೋಗಿ ಬಿಟ್ಟಳು! (ಮೇ, 14ರ ಸಂಚಿಕೆ) ಲೇಖನ ಜಗತ್ತಿನಾದ್ಯಂತ ವಿಫಲ ಪ್ರೇಮದಿಂದ ಬಿಕ್ಕುತ್ತಿರುವ ಪ್ರೇಮಿಗಳ ಪ್ರೇಮ ಪುರಾಣವಾಗಿದೆ. ಹೊಸ ಪ್ರೇಮದ ಅಮಲಿನಲ್ಲಿ ನಗುತ್ತಿರುವ, ನಲುಗುತ್ತಿರುವ ಯುವಪ್ರೇಮಿಗಳು ಪ್ರೌಢ ಪ್ರೇಮಿಗಳು ಪ್ರೀತಿಸಿದ ಮನಸ್ಸಿನಿಂದ ಎದ್ದು ಹೋಗಲು ಪ್ರಯತ್ನಿಸುತ್ತಲೇ ಇರುತ್ತಾರೆ. ಈ ಪ್ರೀತಿ ಓಂಥರಾ ಕಚಗುಳಿಯೂ ಹೌದು. ಆಯಸ್ಕಾಂತವೂ ಹೌದು. ಆದರೆ ಪ್ರೀತಿಯ ಆಯಸ್ಸು ಮಾತ್ರ ಕಮ್ಮಿ. ಪ್ರೇಮ ಸೆಳೆತದಲ್ಲಿ ವಿಜಯಿಗಳೂ ಇದ್ದಾರೆ ದಿಗ್ವಿಜಯ್‌ಗಳೂ ಇದ್ದಾರೆ!
-ವಿ. ಹೇಮಂತಕುಮಾರ್,ಬೆಂಗಳೂರು.  ಮೊ. 9035 992900

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement