ವಾನರ ಸೇನೆ 
ಅಂಕಣಗಳು

ರಾಮಾಯಣದ ಕಪಿಗಳು ವಾನರರಲ್ಲ ! ಸುರರು !!

ಪಾಯಸ ಪ್ರದಾನಕ್ಕೆ ವರ್ಷವೊಂದಕ್ಕೂ ಹಿಂದೆ ನೆಡೆದ ಒಂದು ಘಟನೆ. ಸತ್ಯ ಲೋಕದ ತುಂಬೆಲ್ಲ ಸಹಸ್ರ ಸಂಖ್ಯೆಯಲ್ಲಿ ದೇವತೆಗಳು ನೆರೆದಿದ್ದಾರೆ.

ಪಾಯಸ ಪ್ರದಾನಕ್ಕೆ ವರ್ಷವೊಂದಕ್ಕೂ ಹಿಂದೆ ನೆಡೆದ ಒಂದು ಘಟನೆ. ಸತ್ಯ ಲೋಕದ ತುಂಬೆಲ್ಲ ಸಹಸ್ರ ಸಂಖ್ಯೆಯಲ್ಲಿ ದೇವತೆಗಳು ನೆರೆದಿದ್ದಾರೆ. ಅಜನ ವಿಶೇಷ ಆಮಂತ್ರಣ. ಹೀಗಾತ ಇಂತಹುದೊಂದು ಸಭೆಯನ್ನು ಇತ್ತೀಚೆಗೆ ಕರೆದದ್ದೇ ಇಲ್ಲ. ಕಾತುರದಿಂದ ಕಾಯುತ್ತಿದ್ದ ದೇವತೆಗಳನ್ನುದ್ದೇಶಿಸಿ ಬ್ರಹ್ಮಾದೇಶ ಹೊರಟಿತು. ನಾಲ್ಮೊಗ ಪೂರ್ವಾಭಿಮುಖದ ಮುಖದಿಂದ ಗಭೀರ ಧ್ವನಿಯಲ್ಲಿ ಮಾತನಾಡುತ್ತಿದ್ದಾನೆ. " ಗಮನವಿಟ್ಟು ಕೇಳಿ, ಇದು ಅತ್ಯಂತ ಗಮನಾರ್ಹ ಸಭೆ. ಹಿಂದೆಲ್ಲ ಪರಮಾತ್ಮ ಅವತಾರವೆತ್ತಿದಾಗ ನಾವು ಆತನ ನೆರವಿಗೆ, ಆತನಿಗೆ ಸಹಾಯ ಮಾಡಲು, ಆತನ ಕಾರ್ಯ ಸಾಧನೆಗೆ ನಮ್ಮ ಪಾಲಿನ ಕರ್ತವ್ಯವನ್ನು ನೆರವೇರಿಸಲು ಧಾವಿಸುತ್ತಿದ್ದೆವು. ಆದರೆ ಈಗ ಕಾರ್ಯ ತಂತ್ರ ಬದಲಾಗಬೇಕಿದೆ. ಈಗಿನದು ಶ್ರೀರಾಮಾವತಾರ. ಈ ಅವತಾರಕ್ಕೊಂದು ಮಿತಿ. ಅದೇ ಅದರ ಮಹತ್ವ. ಈಗಾಗಲೇ ಹೇಳಿರುವಂತೆ ಈ ಸಪ್ತಮಾವತಾರ ಮನುಷ್ಯ ರೂಪದಲ್ಲಿ. ಅದು ಕಾರಣ ಆ ಮನುಷ್ಯ ಮಿತಿಯಲ್ಲಿ ಮಂತ್ರ ತಂತ್ರಗಳು ಹೊರಗೆ. ಕಣ್ಣು ತೆರೆವಷ್ಟರಲ್ಲಿ ಏನು ಬೇಕಾದರೂ ಮಾಡಬಹುದಾದ ದೈವೀ ಸಂಕಲ್ಪ ಇಲ್ಲಿ ಸಾಧ್ಯವಿಲ್ಲ. ಪವಾಡಗಳಂತೆ ಏನೇನೋ ಅತಿಮಾನುಷ ಕ್ರಿಯೆಗಳು.. ಊಹುಂ !! ಎಲ್ಲವನ್ನೂ ಮನುಷ್ಯ, ಮನಸ್ಸನ್ನು ಅಂಕೆಯಲ್ಲಿಟ್ಟ ಮನೋನಿಗ್ರಹಿ, ಹಿಮಾಚಲ ಸದೃಶ ದೃಢ ಸಂಕಲ್ಪಿ ಮಾತ್ರ ಮಾಡಬಲ್ಲ ಸಾಧಾರಣದ ಮಿತಿ ಮೀರಿದ ಅಸಾಧಾರಣ ಶಕ್ತಿ ವಿಜೃಂಭಣೆ ಇರಬಹುದೇ ವಿನಹಃ , ಅಮಾನುಷವೂ ಇಲ್ಲ, ಅತಿಮಾನುಷವೂ ಇಲ್ಲ. 
ಹೀಗಾಗಿ ಶ್ರೀರಾಮ ಅವತಾರ,  ಮನುಷ್ಯನೊಬ್ಬ ಸೆಳೆತ, ಭಾವ, ಕರ್ತವ್ಯ, ರೋಷಗಳನ್ನೆಲ್ಲ ಹೇಗೆ ನಿಯಂತ್ರಿಸಬಲ್ಲ? ಹೇಗೆ ಧಾರ್ಮಿಕನಾಗಿ ಅಣು ಅಧರ್ಮಕ್ಕೂ ಆಸ್ಪದವೀಯದಂತೆ ಬದುಕಬಲ್ಲನೆಂದು ಆಚರಿಸಿ ತೋರಿಸುವ ಕಠಿಣ ಅಸಿಧಾರಾ ವ್ರತ. ಇದರೊಟ್ಟಿಗೆ ನಮಗೂ ಒಂದು ಮಿತಿಯುಂಟು. ನಾವು ದೇವತೆಗಳಾಗಿ ಅಲ್ಲಿ ಕಾಣಿಸುವಂತಿಲ್ಲ. ಸಹಾಯ ಮಾಡುವಂತಿಲ್ಲ. ನಾವೇನಿದ್ದರೂ ಕಪಿರೂಪ ಧರಿಸಿ ನೆರವಾಗಬಹುದಷ್ಟೇ. ಅದಕ್ಕೂ ಆ ದಶಕಂಠನೇ ಕಾರಣ. ಪರಮೇಶ್ವರನ ಭೇಟಿಗೆ ಹೋದಾಗ ನಂದಿಯನ್ನು ಕಪಿ ಎಂದು ಅಣಕಿಸಿದ್ದ. ಆಗ ನಂದೀಶ್ವರ ಅವನಿಗಿತ್ತ ಶಾಪವೆಂದರೆ, " ಕಪಿವೇಷವನ್ನು ತೊಟ್ಟ ನನ್ನನ್ನು, ಸಿಡಿಲು ಹೊಡೆದಂತೆ ಅಪಹಾಸ್ಯ ಮಾಡುವೆಯ? ನನ್ನ ರೂಪವನ್ನೇ ಹೊತ್ತು ನನ್ನಷ್ಟೇ ಶಕ್ತಿಶಾಲಿಗಳಾದ ಕಪಿಗಳು ಜನಿಸಿ ನಿನ್ನ ವಂಶವನ್ನೇ ನಾಶ ಮಾಡುವರು. 
(ಅಶನೀ ಪಾತ ಸಂಕಾಶಂ ಉಪಹಾಸಂ ಪ್ರಮುಕ್ತವಾನ್ 
ತಸ್ಮಾತ್ ಮದ್ರೂಪ ಸಂಪನ್ನಾ ಮದ್ವೀರ್ಯ ಸಮತೇಜಸಃ
ಉತ್ಪತ್ಸ್ಯಂತಿ ವದಾರ್ಥಂ ಹಿ ಕುಲಸ್ಯ ತವ ವಾನರಾಃ)
ಇದು ಕಾರಣ ನೀವೆಲ್ಲ ಕಪಿರೂಪ ಧರಿಸಬೇಕಿದೆ. ನೇರವಾಗಿ ಕಪಿಗಳಾಗಬೇಕೆಂದಿಲ್ಲ, ಕಿಷ್ಕಿಂಧೆಯನ್ನು ಪ್ರಧಾನವಾಗಿಟ್ಟುಕೊಂಡು ಸುತ್ತ ಮುತ್ತಲೆಲ್ಲ ಲಕ್ಷ ಲಕ್ಷ ವಾನರಿಯರಲ್ಲಿ ನಿಮ್ಮ ಅಂಶಗಳನ್ನು ಸ್ಥಾಪಿಸಿ. ಹುಟ್ಟುವವರೆಲ್ಲ ಅಮಿತ ತೇಜಸ್ಕರಾಗಿ, ಮಹಾ ದೃಢರಾಗಿ, ಮೈಲುಗಳನ್ನು ನೆಗೆಯಬಲ್ಲ, ಚತುರರಾಗಿ ವೃಕ್ಷಗಳನ್ನೋ, ಬಂಡೆಗಳನ್ನೋ ಹೊರಬಲ್ಲ ಸಮರ್ಥರಾಗಿ ಮೆರೆಯಲಿ. ಕಾಲ ಬಂದಾಗ,  ಶ್ರೀರಾಮರ ಆಗಮನ ಕಿಷ್ಕಿಂಧೆಗೆ ಆದಾಗ, ದೈವಾಂಶ ಸಂಭೂತರೆಲ್ಲ ರಾಮ ದಾಸರಾಗಿ ಶ್ರೀರಾಮರ ಧರ್ಮೋತ್ಥಾನದಲ್ಲಿ ಕೈಜೋಡಿಸಿ ಧರ್ಮ ಸ್ಥಾಪನೆಗೆ ಕಾರಣರಾಗಿ. "
ಸೃಷ್ಟಿಕರ್ತನ ದೀರ್ಘ ಭಾಷಣ ಕೇಳಿ ಗಭೀರರಾದರು. ತಮ್ಮ ಕರ್ತವ್ಯಗಳನ್ನು ಅರಿತು ಹೇಗೆ ಮುಂದುವರಿಯಬೇಕೆಂದು ಯೋಚಿಸಹತ್ತಿದರು. ಬ್ರಹ್ಮ ಮುಂದುವರಿಸಿದ, " ಈ ಹಿಂದೆ ನನ್ನ ಅಂಶದಿಂದ ಮಹಾ ಭಲ್ಲೂಕನ ಸೃಷ್ಟಿಯಾಗಿದೆ . ಆಕಳಿಸುವಾಗ ನನ್ನ ಬಾಯಿಂದ ಹೊರಬಂದ ಅವ. ಅವನೇ ಜಾಂಬವಂತ, ಕರಡಿಗಳ ಮುಖ್ಯಸ್ಥ. ಮುಂದೆ ಈತನಿಂದ ಬಹು ಪ್ರಯೋಜನಗಳಾಗಲಿವೆ. " 
(ಪೂರ್ವಂ ಏವ ಮಯಾ ಸೃಷ್ಟ್ವಾ ಜಾಂಬವಾನ್ ಋಕ್ಷ ಪುಂಗವಃ
ಜೃಂಭಮಾಣಸ್ಯ ಸಹಸಾ ಮಮ ವಕ್ತ್ರಾತ್ ಅಜಾಯತ )
                                         *************
ದೇವತೆಗಳೆಲ್ಲ ಇಳಿದು ಬಂದಿದ್ದಾರೆ. ಅಪ್ಸರ ಸ್ತ್ರೀಯರು, ಗಂಧರ್ವ ಕನ್ಯೆಯರು, ಯಕ್ಷಿಯರು, ನಾಗ ಸ್ತ್ರೀಯರು, ಇವರ ಆಗಮನಕ್ಕಾಗಿಯೇ ಕಾಯುತ್ತಿದ್ದಾರೆ, ಬಯಸಿದಾಗ ಮರ್ಕಟದಂತೆ ಕಾಣಬಲ್ಲ ಅವರಲ್ಲಿ ದೇವತೆಗಳು ತಮ್ಮ ತೇಜಸ್ಸನ್ನು ಇಟ್ಟಿದ್ದಾರೆ. ಆ ಅಸೀಮ ಸುರ ಶಕ್ತಿಯಿಂದ ಲಕ್ಷಾಂತರ ಕಪಿ ರೂಪಿ ದೇವತೆಗಳು ಹುಟ್ಟಿದ್ದಾರೆ. ಸೂರ್ಯಾಂಶದಿಂದ ಸುಗ್ರೀವನಾದರೆ ಇಂದ್ರಾಂಶದಿಂದ ವಾಲಿ ಹುಟ್ಟಿದ್ದಾನೆ. ಸುರ ಗುರುವಿನಿಂದ ತಾರ ಬಂದರೆ ವಿಶ್ವಕರ್ಮ ನಳನ ಹುಟ್ಟಿಗೆ ಕಾರಣನಾದ . ಅಗ್ನಿಯಿಂದ ನೀಲ ಉತ್ಪತ್ತಿಯಾದರೆ, ಅಶ್ವಿನೀ ದೇವತೆಗಳಿಂದ ಮೈಂದ-ದ್ವಿವಿದರು ಜನಿಸಿದರು. ಹೀಗೆ ಲಕ್ಷ ಲಕ್ಷ. ಈ ಎಲ್ಲ ವಾನವರೂ ವಾಲಿ -ಸುಗ್ರೀವರ ಅಂಕೆಯಲ್ಲಿ ಬದುಕುತ್ತಿದ್ದಾರೆ. 
                                            ************
ಅಸಂಖ್ಯ ವಾನರ ರೂಪಿಗಳಿಗಿನ್ನ, ವಿಶೇಷ ಮಹಿಮಾನ್ವಿತನ ಉದಯದ ಬಗ್ಗೆ ಒಂದೆರಡು ಹೆಚ್ಚುವರಿ ವಾಕ್ಯಗಳನ್ನು ಬರೆಯಬೇಕು. ಏಕೆಂದರೆ ಆ ಅಮಿತ ಶಕ್ತನಿಗೆ ತೋರಬೇಕಾದ ಮರ್ಯಾದೆ ಅದು. 
                                               *********
ಮೇರು ಪರ್ವತದಲ್ಲಿ ಕೇಸರಿಯೆಂಬ ರಾಜ. ಅವನಿಗೊಬ್ಬ ಪತ್ನಿ. ಹೆಸರು ಅಂಜನೆ. ಪುತ್ರ ಪ್ರಾಪ್ತಿಗಾಗಿ ಗಂಡ ಹೆಂಡತಿಯರು ತಪಸ್ಸನ್ನಾಚರಿಸಿದರು 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

5 ರಾಜ್ಯಗಳಿಗೆ ರಾಜ್ಯಪಾಲರ ನೇಮಕ; ಇವರೇ ಕರ್ನಾಟಕದ ನೂತನ ರಾಜ್ಯಪಾಲರು...

ವಿಡಿಯೋ ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ಕೋರ್ಟ್ ಮೆಟ್ಟಿಲೇರಿದ ಮಾಜಿ ಮುಖ್ಯಮಂತ್ರಿ!

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ವಿಚ್ಛೇದನ: 7 ವರ್ಷದ ದಾಂಪತ್ಯಕ್ಕೆ ಅಂತ್ಯವಾಡಿದ ಕನ್ನಡದ ಕಿರುತೆರೆ ನಟಿ!

CM ಡಿಕೆಶಿ​​ ಕುರ್ತಾ ಹಿಡಿದು ಹಿಂದೆ ತಳ್ಳಿದ ರಾಹುಲ್ ಗಾಂಧಿ: ವಿಡಿಯೋ ವೈರಲ್; ಬಂಡೆಗೆ ಸಿಕ್ಕ ಮರ್ಯಾದೆ! ಫುಲ್‌ ಅನ್‌ ರೆಸ್ಪೆಕ್ಟು!

ಕರ್ನಾಟಕ ಸೇರಿ 5 ರಾಜ್ಯಗಳಿಗೆ 2 ದಿನಗಳಲ್ಲಿ ಭಾರೀ ಮಳೆ: IMD ಎಚ್ಚರಿಕೆ