ಗೋಲ್ಡ್ ಬಾಂಡ್ 
ಅಂಕಣಗಳು

ಗೋಲ್ಡ್ ಬಾಂಡ್ ಮೇಲಿನ ಹೂಡಿಕೆ ಸರಿಯೇ?: ಹೂಡಿಕೆದಾರರು ತಿಳಿದಿರಬೇಕಾದ ಅಂಶಗಳು

ಈ ಬಾಂಡ್ ಮೇಲಿನ ಕನಿಷ್ಠ ಹೂಡಿಕೆ ಒಂದು ಗ್ರಾಂ! ಮತ್ತು ಗರಿಷ್ಟ ಹೂಡಿಕೆ 4 ಕೆಜಿ. ಇದೆ ಮಿತಿ ಹಿಂದೂ ಅನ್ ಡಿವೈಡೆಡ್ ಫ್ಯಾಮಿಲಿಗೂ ಲಾಗೂ ಆಗುತ್ತದೆ. ಆದರೆ ಟ್ರಸ್ಟ್ ಇಲ್ಲಿ 20 ಕೆಜಿ ತನಕ ಹೂಡಿಕೆ ಮಾಡಬಹುದಾಗಿದೆ.

ಭಾರತ ಸರಕಾರ ಸೆಂಟ್ರಲ್ ಬ್ಯಾಂಕ್ ನ ಸಹಯೋಗದೊಂದಿಗೆ 2017, ಮತ್ತು 2018 ಕ್ಕೆ ಚಿನ್ನದ ಬಾಂಡ್ ಬಿಡುಗಡೆ ಮಾಡಲು ನಿರ್ಧರಿಸಿದೆ. ವಿಶೇಷವೆಂದರೆ ಭಾರತ ಸರಕಾರ ಇದನ್ನ ಪ್ರತಿವಾರ ಆಯ್ದ ಎರಡು ದಿನಗಳಲ್ಲಿ ಬಿಡುಗಡೆ ಮಾಡಲಿದೆ! ಇದರಿಂದ ಹೂಡಿಕೆದಾರರು ನಿಗದಿತ ಸಮಯ ಮುಗಿಯಿತು ಹೂಡಿಕೆ ಮಾಡಲು ಆಗಲಿಲ್ಲ ಎನ್ನುವ ಕೊರಗು ತಪ್ಪಿದೆ. ಅಕ್ಟೋಬರ್ 9, 2017  ರಿಂದ ಪ್ರತಿವಾರ ಇಲ್ಲಿ ಹೂಡಿಕೆ ಮಾಡುವ ಅವಕಾಶವಿದೆ. ಈ ಬಾಂಡ್ ಅನ್ನು ನೀವು ನವೆಂಬರ್ 6-8 ರಲ್ಲಿ ಕೊಳ್ಳಬಹುದಿತ್ತು. ಆಗ ಕೊಳ್ಳಲು ಸಾಧ್ಯವಾಗಿಲ್ಲವೆಂದರೆ ನವೆಂಬರ್ 13-15  ರಲ್ಲಿ ಕೊಳ್ಳಬಹುದು. ಹೀಗೆ ನವೆಂಬರ್ 20-22 ಮತ್ತು 27-29 ರಲ್ಲಿ ಕೂಡ ನೀವು ಕೊಳ್ಳಬಹುದು. ನವಂಬರ್ ನಲ್ಲಿ ಹೂಡಿಕೆ ಸಾಧ್ಯವಿಲ್ಲ ಎನ್ನುವರು ಡಿಸೆಂಬರ್ ನ ಆಯ್ದ ದಿನಗಳಲ್ಲಿ ಖರೀದಿ ಮಾಡಬಹುದಾಗಿದೆ. 
ಈ ಬಾಂಡ್ ಮೇಲಿನ ಕನಿಷ್ಠ ಹೂಡಿಕೆ ಒಂದು ಗ್ರಾಂ! ಮತ್ತು ಗರಿಷ್ಟ ಹೂಡಿಕೆ 4 ಕೆಜಿ. ಇದೆ ಮಿತಿ ಹಿಂದೂ ಅನ್ ಡಿವೈಡೆಡ್ ಫ್ಯಾಮಿಲಿಗೂ ಲಾಗೂ ಆಗುತ್ತದೆ. ಆದರೆ ಟ್ರಸ್ಟ್ ಇಲ್ಲಿ 20 ಕೆಜಿ ತನಕ ಹೂಡಿಕೆ ಮಾಡಬಹುದಾಗಿದೆ. ಹೂಡಿಕೆ ಮೇಲೆ ಸಿಗುವ ಬಡ್ಡಿ 2.50 ಪ್ರತಿಶತ ಮತ್ತು ಇದನ್ನ ಪ್ರತಿ ಆರು ತಿಂಗಳಿಗೆ ನಿಮ್ಮ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ.   ಇವನ್ನು ಸ್ಟಾಕ್ ಮಾರ್ಕೆಟ್ ನಲ್ಲಿ ಷೇರು ಖರೀದಿಸಿದಂತೆ ಡಿಮ್ಯಾಟ್ ಖಾತೆಯ ಮೂಲಕ ಪಡೆಯಬಹುದಾಗಿದೆ. ಹೂಡಿಕೆಗೆ ಮತ್ತೊಂದು ಪೂರಕ ಅಂಶವೆಂದರೆ 8 ವರ್ಷ ಹೂಡಿಕೆ ಅವಧಿ ಮುಗಿದ ನಂತರ ಲಾಭಾಂಶದ ಮೇಲೆ ಹಾಕುವ ‘ಕ್ಯಾಪಿಟಲ್ ಗೈನ್‘ ತೆರಿಗೆಯಿಂದ ವಿನಾಯತಿ ಕೊಟ್ಟಿರುವುದು. ಉದಾಹರಣೆ ನೋಡಿ… ಇಂದು ನಿಮ್ಮ ಹೂಡಿಕೆ 10 ಗ್ರಾಂ ಅಂದರೆ 31 ಸಾವಿರದ 200 ರೂಪಾಯಿ, 8 ವರ್ಷದ ನಂತರ 10 ಗ್ರಾಂ ಚಿನ್ನದ ಬೆಲೆ 45 ಸಾವಿರ ರೂಪಾಯಿ ಎಂದುಕೊಳ್ಳಿ. ಕ್ಯಾಪಿಟಲ್ ಗೈನ್ 13800 (45000-31200) ಅಂದರೆ 13800 ರೂಪಾಯಿಯ ಮೇಲೆ ಕಟ್ಟಬೇಕಾಗಿದ್ದ ತೆರಿಗೆ ಈಗ ಕಟ್ಟಬೇಕಿಲ್ಲ.
ಗೋಲ್ಡ್ ಬಾಂಡ್ ಖರೀದಿಯಿಂದ ಗ್ರಾಹಕನಿಗೆ/ ಹೂಡಿಕೆದಾರನಿಗೆ ಆಗುವ ಲಾಭಗಳೇನು ?
  • ಮುಖ್ಯವಾಗಿ ಇದು ಷೇರು ಮಾರುಕಟ್ಟೆಯಲ್ಲಿ ‘ಟ್ರೇಡೆಬಲ್’ ಅಂದರೆ ನಿಮಗೆ ಬೇಡ ಅನಿಸಿದರೆ ಇದನ್ನ ಷೇರು ಮಾರಿದಂತೆ ಡಿಮ್ಯಾಟ್ ಖಾತೆಯ ಮೂಲಕ ಮಾರಿಬಿಡಬಹುದು. ನಿಮ್ಮ ಬಾಂಡ್ ವಿತರಣೆಯಾದ ದಿನಾಂಕದಿಂದ ಹದಿನೈದು ದಿನದ ನಂತರ ಇದನ್ನ ನೀವು ಷೇರು ಮಾರುಕಟ್ಟೆಯಲ್ಲಿ ಮಾರಾಟಕ್ಕಿಡಬಹದು. 
  • ಮಾರಲು ಇಚ್ಛಿಸದೆ ಇರುವ ಹೂಡಿಕೆದಾರ ಅಕಸ್ಮಾತ್ ಹಣದ ಅವಶ್ಯಕತೆ ಬಿದ್ದರೆ ಇದನ್ನ ಅಡವಿಟ್ಟು ಸಾಲ ಪಡೆಯುವ ಅವಕಾಶ ಕೂಡ ಇದೆ.
  • ಇದು ಪೇಪರ್ ನಲ್ಲಿ ಇರುವ ಚಿನ್ನ ಹಾಗಾಗಿ ಸಾಂಪ್ರದಾಯಿಕವಾಗಿ ಚಿನ್ನದ ಖರೀದಿಯಲ್ಲಿ ಆಗುವ ಚಿನ್ನದ ಸುರಕ್ಷತೆಯ ಚಿಂತೆ ಇರುವುದಿಲ್ಲ.
  • ಹೂಡಿಕೆದಾರ ಹೂಡಿಕೆಯ ಪೂರ್ಣಾವಧಿ 8 ವರ್ಷ ಪೂರೈಸಿದರೆ ‘ ಕ್ಯಾಪಿಟಲ್ ಗೈನ್ ‘ ಟ್ಯಾಕ್ಸ್ ನಿಂದ ವಿನಾಯತಿ ಪಡೆಯಬಹುದು.
  • ಸಾಂಪ್ರದಾಯಿಕ ಚಿನ್ನದ ಮೇಲಿನ ಹೂಡಿಕೆ ಬಡ್ಡಿ ನೀಡುವುದಿಲ್ಲ ಮಾರುವ ಸಮಯದಲ್ಲಿ ಹೆಚ್ಚಿರುವ ಬೆಲೆ ಮಾತ್ರವೇ ಇಲ್ಲಿನ ಲಾಭ. ಗೋಲ್ಡ್ ಬಾಂಡ್ ಮೂಲ ಹೂಡಿಕೆಯ ಮೇಲೆ 2.5 ಪ್ರತಿಶತ ಬಡ್ಡಿ ಪ್ರತಿ ಆರು ತಿಂಗಳಿಗೆ ಒಮ್ಮೆ ನೀಡುತ್ತದೆ.
  • ಪೂರ್ಣ ಹೂಡಿಕೆ ಅವಧಿ ಪೂರೈಸಿದ್ದೇ ಆದರೆ ಹೂಡಿಕೆಯ ಮೇಲೆ 20 ರಿಂದ 25 ಪ್ರತಿಶತ ಲಾಭಾಂಶ ಪಡೆಯುವ ಸಾಧ್ಯತೆಗಳು ನಿಚ್ಚಳವಾಗಿವೆ.
  • ಹಣಕ್ಲಾಸು ಅಂಕಣದಲ್ಲಿ ಯಾವಾಗಲೂ ಹೂಡಿಕೆಯ ಮೇಲಿನ ಎಲ್ಲಾ ರೀತಿಯ ಸಾಧಕ ಭಾದಕಗಳ ಅವಲೋಕಿಸಿಸುತ್ತಾ ಬಂದಿದ್ದೇವೆ ಆದರೆ ಇದರಲ್ಲಿ ಹೂಡಿಕೆ ಮಾಡಿ ಎಂದು ಹೇಳಿಲ್ಲ. ಸಾಧಕ-ಬಾಧಕಗಳ ಅಳೆದು ತೂಗಿ ಓದುಗ ತೆಗೆದುಕೊಳ್ಳಬೇಕಾದ ನಿರ್ಧಾರವದು. ಗೋಲ್ಡ್ ಬಾಂಡ್ ಮೇಲಿನ ಹೂಡಿಕೆ ಸುರಕ್ಷಿತ, ಸರಕಾರದ ಅಭಯ ಬೇರೆ ಇದೆ.  ಇಷ್ಟೇ ಅಲ್ಲದೆ ಚಿನ್ನದ ಬಾಂಡ್ ಖರೀದಿಸಿದರೆ ನಷ್ಟವಂತೂ ಇಲ್ಲ ಎನ್ನುವುದಕ್ಕೆ ಈ ಕೆಳಗಿನ ಕಾರಣಗಳು ಹೆಚ್ಚು ಬುನಾದಿ ಒದಗಿಸುತ್ತವೆ. 
  •  ಅಂತಾರಾರಾಷ್ಟ್ರಿಯ ಮಾರುಕಟ್ಟೆಯಲ್ಲಿ ಸ್ಥಿರತೆಯ ಕೊರತೆ.
  • ಆರ್ಥಿಕವಾಗಿ ಕಂಗೆಟ್ಟಿರುವ ಯೂರೋಪಿನ ಮೇಲೆ ಆಗುತ್ತಿರುವ ಭಯೋತ್ಪಾದಕ ದಾಳಿಗಳು.
  •  ಮೇಲೇರದ ಅಮೆರಿಕ ಆರ್ಥಿಕತೆ.
  • ಬ್ರಿಕ್ಸಿಟ್ ನಿಂದ ಚೇತರಿಸಿಕೊಳ್ಳಲು ಆಗದೆ ಕುಸಿದಿರುವ ಬ್ರಿಟನ್ ರಿಯಲ್ ಎಸ್ಟೇಟ್ ಉದ್ಯಮ.
  •  ನಾಗಾಲೋಟದಲ್ಲಿ ಓಡುತಿದ್ದ ಚೀನಾ ಎನ್ನುವ ಓಟಗಾರ ದಣಿದು ಸುಧಾರಿಸಿಕೊಳ್ಳಲು ಕೂತಿರುವುದು.
  • ಸ್ಥಿರತೆ ಇರದ ಮಧ್ಯ ಪ್ರಾಚ್ಯ.. ಸೌದಿ ಅರೇಬಿಯಾ ಇರಾನ್ ಮೇಲೆ ಯಾವ ಕ್ಷಣದಲ್ಲಿ ದಾಳಿ ಮಾಡಬಹದು ಎನ್ನುವ ವಾತಾವರಣವಿದೆ. ಅಕಸ್ಮಾತ್ ಹೀಗಾದರೆ ತೈಲದ ಬೆಲೆಯಲ್ಲಿ ಏರುಪೇರಾಗುವುದು ಸಹಜ. ಇದು ಸಹಜವಾಗಿ ಅತ್ಯಂತ ನಂಬಿಕೆಯ ಹೂಡಿಕೆ ಎಂದು ಶತಮಾನಗಳಿಂದ ಹೆಸರುಗಳಿಸಿದ ಚಿನ್ನದ ಬೆಳೆಯನ್ನ ಇನ್ನಷ್ಟು ಹೆಚ್ಚಿಸುತ್ತದೆ. 
ಇವೆಲ್ಲಾ ಅಳೆದು ತೂಗಿ ನೋಡಿದರೆ ಮುಂಬರುವ ದಿನಗಳಲ್ಲಿ ಚಿನ್ನದ ಮೇಲಿನ ಬೇಡಿಕೆ ಹೆಚ್ಚುವುದರಲ್ಲಿ ಸಂಶಯವಿಲ್ಲ. ಆಕಸ್ಮಾತ್ ನಮ್ಮ ಲೆಕ್ಕಾಚಾರ ತಪ್ಪಾಯ್ತು ಅಂದುಕೊಳ್ಳಿ ಹಾಗಾದರೂ ಹೂಡಿಕೆದಾರ ಕಳೆದುಕೊಳ್ಳುವುದಿಲ್ಲ! ಹೇಗೆ? ಹಣದುಬ್ಬರ ಇಲ್ಲಿ ಕೆಲಸ ಮಾಡುತ್ತೆ. ಹಾಗಾಗಿ ಕನಿಷ್ಠ ಹಣದುಬ್ಬರದ ಜೊತೆ ಜೊತೆಯಾಗಿ ನಡೆಯಲು ಚಿನ್ನದ ಮೇಲಿನ ಹೂಡಿಕೆ ಎಲ್ಲಾ ತರಹದಲ್ಲೂ ಸೂಕ್ತ.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT