ಅಂಕಣಗಳು

ಶಾಲಾಪೂರ್ವ ಮಕ್ಕಳ ಆಹಾರ (ಕುಶಲವೇ ಕ್ಷೇಮವೇ)

ಮಕ್ಕಳು ಶಾಲಾಪೂರ್ವ ವಯಸ್ಸಿನಲ್ಲಿ ಬಹುಬೇಗನೇ ಬೆಳೆಯುತ್ತವೆ. ಆದ್ದರಿಂದ ಅವರ ಬೆಳವಣಿಗೆಗೆ ಪೂರಕ ಮತ್ತು ಸಹಾಯಕವಾದ ಆಹಾರವನ್ನು ನೀಡಬೇಕು.

ಶಾಲಾಪೂರ್ವ ಮಕ್ಕಳಿಗೆ ಆಡಲು, ಓಡಲು, ಕಾಯಿಲೆ/ರೋಗಗಳನ್ನು ತಡೆಗಟ್ಟಲು ಮತ್ತು ಮನಸ್ಸಿಗೆ ಖುಷಿ ನೀಡಲು ಆಹಾರವನ್ನು ಕೊಡಬೇಕು. ಇತ್ತೀಚೆಗೆ ನಗರಗಳು ಮತ್ತು ಪಟ್ಟಣಗಳ ಬೀದಿಬೀದಿಗಳಲ್ಲಿ ಬಗೆಬಗೆಯ ಆಹಾರಗಳು, ತಿಂಡಿತಿನಿಸುಗಳು ಸಿಗುವ ಅಂಗಡಿಗಳು ಹೆಚ್ಚಾಗಿಯೇ ತಲೆ ಎತ್ತಿವೆ. ಕೇವಲ ಐದು ಮತ್ತು ಹತ್ತು ರೂಪಾಯಿಗಳು ಹಲವು ರೀತಿಯ ತಿಂಡಿತಿನಿಸುಗಳು ಸಿಗುತ್ತಿವೆ. ಆದರೆ ಅಂಗಡಿಗಳಲ್ಲಿ ಸಿಗುತ್ತಿರುವ ಆಹಾರಗಳಲ್ಲಿ ಉತ್ತಮ ಆಹಾರಗಳ ಸಂಖ್ಯೆ ಕಡಿಮೆ.

ಬೆಳೆಯುವ ಮಕ್ಕಳಿಗೆ ಕ್ಯಾಲೋರಿಯುಕ್ತ ಆಹಾರ

ಮಕ್ಕಳು ಶಾಲಾಪೂರ್ವ ವಯಸ್ಸಿನಲ್ಲಿ ಬಹುಬೇಗನೇ ಬೆಳೆಯುತ್ತವೆ. ಆದ್ದರಿಂದ ಅವರ ಬೆಳವಣಿಗೆಗೆ ಪೂರಕ ಮತ್ತು ಸಹಾಯಕವಾದ ಆಹಾರವನ್ನು ನೀಡಬೇಕು. ಅಂದರೆ ನಾವು ಕೊಡುವ ಆಹಾರ ಎಳೆಯ ಮಕ್ಕಳ ಜೀವಕೋಶಗಳಿಗೆ ಹೆಚ್ಚಿನ ಶಕ್ತಿಯನ್ನು ಕೊಡಬೇಕು. ಜೊತೆಗೆ ಆರೋಗ್ಯಕರವಾಗಿ ದೇಹದ ತೂಕವನ್ನು ಮಕ್ಕಳು ಹೊಂದಲು ಸೂಕ್ತ ಕ್ಯಾಲೋರಿಯುಕ್ತ (ಕ್ಯಾಲೋರಿ ಎಂದರೆ ಆಹಾರ ಶಕ್ತಿಯನ್ನು ಅಳೆಯುವ ಮಾಪನ) ಆಹಾರವನ್ನು ನೀಡಬೇಕು.

ಸಾಮಾನ್ಯವಾಗಿ ಶಾಲಾಪೂರ್ವ ವಯಸ್ಸಿನ ಮಕ್ಕಳು ನಿಧಾನವಾಗಿ ನಡೆಯುವುದಿಲ್ಲ. ಒಂದು ಕಡೆ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಅವರಿಗೆ ನಡೆಯುವುದು ಎಂದರೆ ಓಡುವುದೇ ಆಗಿರುತ್ತದೆ. ಬುಡುಬುಡು ಓಡಿದರೆ ಅವರಿಗೆ ಖುಷಿ. ಆದ್ದರಿಂದ ಅವರಿಗೆ ಹೆಚ್ಚು ಶಕ್ತಿಯನ್ನು ತಂದುಕೊಡುವ ಆಹಾರದ ಅವಶ್ಯಕತೆ ಇರುತ್ತದೆ. ಉದಾಹರಣೆಗೆ ಕೊಬ್ಬಿರುವ ಆಹಾರವನ್ನು ನೀಡಿದಾಗ ಒಂದು ಗ್ರಾಂ ಕೊಬ್ಬು ದೇಹದಲ್ಲಿ ಉರಿದು ಕನಿಷ್ಠ 9 ಕ್ಯಾಲೋರಿ ಶಕ್ತಿಯನ್ನು ಕೊಡತ್ತದೆ. ಅಂದ ಮಾತ್ರಕ್ಕೆ ಕೊಬ್ಬಿರುವ ಪದಾರ್ಥಗಳನ್ನು ಮಕ್ಕಳಗೆ ಕೊಡಬೇಕೆಂದಿಲ್ಲ. ಮಕ್ಕಳ ಆರೋಗ್ಯಕ್ಕಾಗಿ ಶರ್ಕರಭರಿತ ಆಹಾರಗಳನ್ನು ಕೊಟ್ಟರೆ ಒಳಿತು. ಆಗ ಮಕ್ಕಳಿಗೆ ಇಂತಹ ಆಹಾರಗಳಿಂದ ಬರುವ ಕ್ಯಾಲೋರಿಗಳು ಕೊಬ್ಬಿನ ಆಹಾರಗಳಿಂದ ಬರುವ ಕ್ಯಾಲೋರಿಗಳು ಕಡಿಮೆ ಇರುತ್ತವೆ. ಪ್ರೋಟಿನುಭರಿತ ಆಹಾರಗಳನ್ನು ಕೊಡುವುದು ಅತ್ಯುತ್ತಮ. ಆಹಾರದಲ್ಲಿ ಒಂದೊಮ್ಮೆ ಸೂಕ್ತ ಪ್ರಮಾಣದಲ್ಲಿ ಶರ್ಕರಗಳು, ಕೊಬ್ಬು ಮತ್ತು ಪ್ರೋಟಿನುಗಳು ಇಲ್ಲದಿದ್ದರೆ ಜೀವಕೋಶಗಳು ಸರಿಯಾಗಿ ಮಕ್ಕಳಲ್ಲಿ ಬೆಳೆಯುವುದಿಲ್ಲ. ಜೊತೆಗೆ ಮಕ್ಕಳು ದಿನವಿಡೀ ಹೆಚ್ಚಿನ ಆಡುವುದು ಮತ್ತು ಓಡುವುದರಿಂದ ಹೆಚ್ಚು ಶಕ್ತಿಯು ಖರ್ಚಾಗುತ್ತದೆ. ಆದ್ದರಿಂದ ಇಂತಹ ಮಕ್ಕಳಿಗೆ ಪ್ರತಿದಿನ ಊಟದಲ್ಲಿ ಅಕ್ಕಿ, ರಾಗಿ, ನವಣೆ, ಸಜ್ಜೆಗಳಿಂದ ಮಾಡಿದ ಪದಾರ್ಥಗಳು, ರೊಟ್ಟಿಗಳು, ಹುರಿಟ್ಟು, ಪೊಂಗಲ್, ಡೋಕ್ಲಾ ಮತ್ತು ಉಪ್ಪಿಟ್ಟುಗಳನ್ನು ಧಾರಾಳವಾಗಿ ಕೊಡಬಹುದು. ಆಹಾರ ತಯಾರಿಸುವಾಗ ತುಪ್ಪ, ಬೆಣ್ಣೆ ಮತ್ತು ತೆಂಗಿನಕಾಯಿಯನ್ನು ಯಥೇಚ್ಛವಾಗಿ ಬಳಸಬೇಕು.

ಜೀವಕೋಶಗಳ ಬೆಳವಣಿಗೆಗೆ ಬೇಕು ಪ್ರೋಟಿನ್ ಸಮೃದ್ಧ ಆಹಾರ

ಮಕ್ಕಳು ಆರು ವರ್ಷಗಳ ತನಕ ತೀವ್ರವಾಗಿ ಬೆಳೆಯುತ್ತವೆ. ಈ ಸಮಯದಲ್ಲಿ ಅವರ ಸಾಮಾಜಿಕ, ಬೌದ್ಧಿಕ ಮತ್ತು ಭಾವನಾತ್ಮಕ ಬೆಳವಣಿಗೆಯ ಸ್ಪಷ್ಟವಾಗಿ ಕಂಡುಬರುತ್ತದೆ. ಮಕ್ಕಳ ತೂಕವೂ ಸ್ವಲ್ಪ ಹೆಚ್ಚಾಗುತ್ತದೆ. ಆದ್ದರಿಂದ ಪ್ರೋಟಿನುಯಕ್ತ ಆಹಾರ ನೀಡುವುದು ಒಳ್ಳೆಯದು. ಪ್ರೋಟಿನ್ ಇರುವ ಆಹಾರ ಜೀವಕೋಶಗಳ ಬೆಳವಣಿಗೆಗೆ ಬಹಳ ಮುಖ್ಯ. ಆದ್ದರಿಂದ ಆಹಾರದಲ್ಲಿ ಹಾಲು ಮತ್ತು ದ್ವಿದಳಧಾನ್ಯಗಳನ್ನು ಹೆಚ್ಚು ಬಳಸಬೇಕು. ಮಾಂಸಾಹಾರವನ್ನು ಕೊಡಲೇಬೇಕು ಎಂದೇನಿಲ್ಲ. ದಿನನಿತ್ಯದ ಊಟದಲ್ಲಿ ಮೊಸರು, ಇಡ್ಲಿ, ದೋಸೆ, ಹುಳಿ, ತೊವ್ವೆ, ಎಳ್ಳು, ಕಡಲೇಕಾಯಿ ಬೀಜ, ಪೊಂಗಲ್, ಡೋಕ್ಲಾಗಳೇ ಸಾಕು. ಅಲ್ಲದೇ ವಿವಿಧ ರೀತಿಯ ಚಟ್ನಿಪುಡಿಗಳು ಅವರ ಪ್ರೋಟಿನ್ ಅವಶ್ಯಕತೆಯನ್ನು ಪೂರೈಸುತ್ತವೆ. ಮಕ್ಕಳ ತೂಕ ಕನಿಷ್ಠ ಮೂರು ನಾಲ್ಕು ಕೆಜಿಯಷ್ಟು ಹೆಚ್ಚಾಗುತ್ತದೆ. ಪ್ರೋಟಿನ್ ಮನೆಯಲ್ಲಿ ಸಾಮಾನ್ಯವಾಗಿ ಮಾಡುವ ತಿಂಡಿಊಟದಲ್ಲಿ ಇರುತ್ತದೆ. ಇದಕ್ಕಾಗಿ ಅಂಗಡಿಯಿಂದ ಸೋಯಾಕಾಳು ಆಥವಾ ಸೋಯಾಹಾಲನ್ನು ತಂದು ನೀಡಬೇಕಾಗಿಲ್ಲ. ಹಾಲು, ದ್ವಿದಳ ಧಾನ್ಯಗಳೇ ಸಾಕಷ್ಟು ಪ್ರೋಟಿನ್ ಹೊಂದಿವೆ.

ವಿಟಮಿನ್‌ ಮತ್ತು ಖನಿಜಯುಕ್ತ ಆಹಾರದಿಂದ ಆರೋಗ್ಯ ಸಮಸ್ಯೆ ದೂರ

ಇದರ ಜೊತೆಗೆ ಬೆಳೆಯುತ್ತಿರುವ ಮಕ್ಕಳಿಗೆ ವಿವಿಧ ವಿಟಮಿನ್‌ಗಳು, ಖನಿಜಗಳು ಇರುವ ಆಹಾರಗಳೂ ಬೇಕು. ಆದ್ದರಿಂದ ಆಹಾರದಲ್ಲಿ ಎಲ್ಲಾ ಬಗೆಯ ತರಕಾರಿಗಳನ್ನು ಸೇರಿಸಬೇಕು. ಹಣ್ಣುಗಳನ್ನು ಕೊಡಬೇಕು. ಹಣ್ಣು ಮತ್ತು ತರಕಾರಿಗಳಲ್ಲಿ ಇರುವ ವಿವಿಧ ವಿಟಮಿನ್‌ಗಳು ಮತ್ತು ಖನಿಜಗಳು ಸಾಮಾನ್ಯ ಆರೋಗ್ಯ ಸಮಸ್ಯೆಗಳಾದ ಕೆಮ್ಮ, ನೆಗಡಿ ಮತ್ತು ಜ್ವರಗಳನ್ನು ತಡೆಯುತ್ತವೆ. ಜೊತೆಗೆ ಇರುಳುಗುರುಡುತನ ಬರದಂತೆ ಆಗುತ್ತದೆ. ಎಲ್ಲ ಬಗೆಯ ಪೌಷ್ಟಿಕ ಆಹಾರವನ್ನು ಮಕ್ಕಳು ಸೇವಿಸುವಂತೆ ನೋಡಿಕೊಳ್ಳಬೇಕು. ಹಣ್ಣುಗಳನ್ನು ಹೆಚ್ಚಿಗೆ ಕೊಡುವಂತೆ ಹಸಿ ಸೌತೆಕಾಯಿ, ಹಸಿ ಬಟಾಣಿ, ಬೀಟ್‌ರೂಟ್, ಕ್ಯಾರೆಟ್‌ಗಳನ್ನು ಸಣ್ಣಗೆ ಹೆಚ್ಚಿ ಕೊಡಬೇಕು. ಇದರಿಂದ ಅವರಿಗೆ ತರಕಾರಿ ಮತ್ತು ಹಣ್ಣುಗಳ ಸಹಜ ರುಚಿ ಗೊತ್ತಾಗುತ್ತದೆ. ಆದಷ್ಟು ನೈಸರ್ಗಿಕವಾಗಿ ದೊರಕುವ ರೀತಿಯಲ್ಲಿಯೇ ಹಣ್ಣುಗಳು ಮತ್ತು ತರಕಾರಿಗಳನ್ನು ನೀಡಬೇಕು. ಅಂಗಡಿಯಿಂದ ತಂದ ಶೈತ್ಯೀಕೃತ (ಫ್ರೋಜನ್) ತರಕಾರಿ ಮತ್ತು ಹಣ್ಣುಗಳನ್ನು ಕೊಡಬೇಡಿ (ಪೂರಕ ಮಾಹಿತಿ ನೋಡಿ).

ತರಕಾರಿ ತಿನ್ನಲು ಮಕ್ಕಳು ಇಷ್ಟ ಪಡದೇ ಇದ್ದರೆ ನೀವು ತಯಾರಿಸುವ ಚಪಾತಿ, ತಾಲಿಪಟ್ಟುಗಳಲ್ಲಿ ಸೊಪ್ಪು ಮತ್ತು ತರಕಾರಿ ಸೇರಿಸಿ ಕೊಡಬಹುದು. ಒಂದೇ ಬೇಳೆ ಅಥವಾ ಒಂದೇ ತರಹದ ಧಾನ್ಯ ಬಳಸುವ ಬದಲು ಎರಡು ಮೂರು ತರಹದ ಧಾನ್ಯಗಳ ಮಿಶ್ರಣ ಬಳಸಿದರೆ ಉತ್ತಮ. ಹಣ್ಣುಗಳನ್ನು ತಿನ್ನಲು ಇಷ್ಟ ಪಡದಿದ್ದಾಗ ದ್ರವರೂಪದ ಜ್ಯೂಸ್ ಅಥವಾ ಮಿಲ್ಕ್ ಶೇಕ್ ಕೊಡುವುದರಿಂದ ಹಣ್ಣಿನ ಜೊತೆ ಹಾಲೂ ದೇಹಕ್ಕೆ ಸಿಗುತ್ತದೆ.


Dr Vasundhara Bhupathi

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT