ಸಂಗ್ರಹ ಚಿತ್ರ online desk
ಅಂಕಣಗಳು

2025: ಭಾರತದ ರಕ್ಷಣಾ ರಫ್ತು ಮತ್ತು ಬಜೆಟ್‌ ಪ್ರಮಾಣ ಏರಿಕೆ; 2047 ಟಾರ್ಗೆಟ್!

2024-25ರಲ್ಲಿ, ರಕ್ಷಣಾ ಸಚಿವಾಲಯ 2,09,050 ಕೋಟಿ ರೂಪಾಯಿ ಮೌಲ್ಯದಲ್ಲಿ 193 ರಕ್ಷಣಾ ಒಪ್ಪಂದಗಳಿಗೆ ಸಹಿ ಹಾಕಿದ್ದು, ಇದು ಒಂದು ವರ್ಷದ ಅವಧಿಯಲ್ಲಿ ಮಾಡಿಕೊಳ್ಳಲಾದ ಅತ್ಯಧಿಕ ಮೌಲ್ಯದ ಒಪ್ಪಂದವಾಗಿದೆ.

ಕಳೆದ 11 ವರ್ಷಗಳ ಅವಧಿಯಲ್ಲಿ ಭಾರತದ ರಕ್ಷಣಾ ಉತ್ಪಾದನೆ ಅತ್ಯಂತ ವೇಗ ಪಡೆದುಕೊಂಡಿದೆ. 2023-24ರಲ್ಲಿ ಭಾರತ 1.27 ಲಕ್ಷ ಕೋಟಿ ರೂಪಾಯಿ ಮೌಲ್ಯದ ರಕ್ಷಣಾ ಉತ್ಪನ್ನಗಳನ್ನು ತಯಾರಿಸಿದೆ. ಇದು ಭಾರತದ ಅತ್ಯಧಿಕ ರಕ್ಷಣಾ ಉತ್ಪಾದನೆಯಾಗಿತ್ತು. 2014-15ರಲ್ಲಿ ಈ ಮೌಲ್ಯ ಕೇವಲ 46,429 ಕೋಟಿ ರೂಪಾಯಿ ಆಗಿತ್ತು. ಅಂದರೆ, ಭಾರತದ ರಕ್ಷಣಾ ಉತ್ಪಾದನೆ ಬಹುತೇಕ 174% ಹೆಚ್ಚಳ ಕಂಡಿದ್ದು, ಭಾರತ ಈಗ ವಿದೇಶಗಳನ್ನು ಅವಲಂಬಿಸುವ ಬದಲು ತನ್ನ ಬಹಳಷ್ಟು ರಕ್ಷಣಾ ಉತ್ಪನ್ನಗಳನ್ನು ತಾನೇ ತಯಾರಿಸುತ್ತಿದೆ.

2024-25ರಲ್ಲಿ, ರಕ್ಷಣಾ ಸಚಿವಾಲಯ 2,09,050 ಕೋಟಿ ರೂಪಾಯಿ ಮೌಲ್ಯದಲ್ಲಿ 193 ರಕ್ಷಣಾ ಒಪ್ಪಂದಗಳಿಗೆ ಸಹಿ ಹಾಕಿದ್ದು, ಇದು ಒಂದು ವರ್ಷದ ಅವಧಿಯಲ್ಲಿ ಮಾಡಿಕೊಳ್ಳಲಾದ ಅತ್ಯಧಿಕ ಮೌಲ್ಯದ ಒಪ್ಪಂದವಾಗಿದೆ. ಇವುಗಳ ಪೈಕಿ 1,68,922 ಕೋಟಿ ರೂಪಾಯಿ ಮೌಲ್ಯದ 177 ಒಪ್ಪಂದಗಳನ್ನು ಭಾರತೀಯ ಕಂಪನಿಗಳಿಗೇ ನೀಡಲಾಗಿದೆ. ಭಾರತದ ಬಹುತೇಕ ರಕ್ಷಣಾ ಖರೀದಿ ಆದೇಶಗಳು ಈಗ ದೇಶೀಯ ಉದ್ಯಮಗಳಿಗೇ ಹೋಗುತ್ತಿರುವುದನ್ನು ಇದು ಸೂಚಿಸುತ್ತಿದೆ. ಈ ಮೂಲಕ ʼಮೇಕ್‌ ಇನ್‌ ಇಂಡಿಯಾʼ ಯೋಜನೆಯೂ ಬಲಗೊಳ್ಳುತ್ತಿದೆ.

2025ರ ಜನವರಿಯಿಂದ ಜೂನ್‌ ತಿಂಗಳ ನಡುವೆ 45 ದೊಡ್ಡ ರಕ್ಷಣಾ ಆದೇಶಗಳನ್ನು ಘೋಷಿಸಲಾಗಿದೆ. ಈ ಖರೀದಿಗಳು ಮೂರು ಪ್ರಮುಖ ಟ್ರೆಂಡ್‌ಗಳನ್ನು ತೋರಿಸುತ್ತಿವೆ: ಭಾರತ ತನ್ನ ಹಳೆಯ ಉಪಕರಣಗಳನ್ನು ಮೇಲ್ದರ್ಜೆಗೇರಿಸುತ್ತಿದೆ (ಆಧುನೀಕರಣ), ದೇಶದೊಳಗೇ ಹೆಚ್ಚು ಆಯುಧಗಳನ್ನು ತಯಾರಿಸುತ್ತಿದೆ (ದೇಶೀಯ ನಿರ್ಮಾಣ), ಮತ್ತು ಇತರ ದೇಶಗಳೊಡನೆ ಹೆಚ್ಚು ಬೆರೆತು ಕಾರ್ಯಾಚರಿಸುತ್ತಿದೆ (ಜಾಗತಿಕ ಒಳಗೊಳ್ಳುವಿಕೆ).

ಭಾರತದ ರಕ್ಷಣಾ ರಫ್ತು ಮತ್ತು ಬಜೆಟ್‌

ಭಾರತದ ರಕ್ಷಣಾ ರಫ್ತು ಕಳೆದ 11 ವರ್ಷಗಳಲ್ಲಿ ಅಪಾರ ಪ್ರಮಾಣದಲ್ಲಿ ಏರಿಕೆ ಕಂಡಿದೆ. 2014ರ ಹಣಕಾಸು ವರ್ಷದಲ್ಲಿ ಭಾರತದ ರಕ್ಷಣಾ ರಫ್ತು ಕೇವಲ 680 ಕೋಟಿ ರೂಪಾಯಿ ಆಗಿತ್ತು. ಆದರೆ, 2025ರ ಹಣಕಾಸು ವರ್ಷದ ವೇಳೆಗೆ ಈ ಪ್ರಮಾಣ ದಾಖಲೆಯ 23,620 ಕೋಟಿ ರೂಪಾಯಿಗೆ ತಲುಪಿದ್ದು, 34 ಪಟ್ಟು ಹೆಚ್ಚಳ ಕಂಡಿದೆ.

ಕೇವಲ ಒಂದು ವರ್ಷದಲ್ಲಿ ರಕ್ಷಣಾ ರಫ್ತು 12%ದಷ್ಟು ಹೆಚ್ಚಳ ಕಂಡಿದೆ. ಅಂದರೆ, ಹೆಚ್ಚಿನ ದೇಶಗಳು ಈಗ ಭಾರತೀಯ ನಿರ್ಮಾಣದ ಆಯುಧಗಳು ಮತ್ತು ರಕ್ಷಣಾ ಉಪಕರಣಗಳನ್ನು ಖರೀದಿಸುತ್ತಿದ್ದು, ಭಾರತೀಯ ಉತ್ಪನ್ನಗಳಿಗೆ ಜಾಗತಿಕ ಬೇಡಿಕೆ ಹೆಚ್ಚಿರುವುದನ್ನು ಪ್ರದರ್ಶಿಸಿದೆ.

ಭಾರತ ಈಗ 2029ರ ಹಣಕಾಸು ವರ್ಷದ ವೇಳೆಗೆ ರಕ್ಷಣಾ ರಫ್ತನ್ನು 50,000 ಕೋಟಿ ರೂಪಾಯಿಗಳಿಗೆ ಹೆಚ್ಚಿಸುವ ದೊಡ್ಡ ಗುರಿಯನ್ನೇ ಹಾಕಿಕೊಂಡಿದೆ. ಇದು ಭಾರತ ಪ್ರಮುಖ ಜಾಗತಿಕ ರಕ್ಷಣಾ ಉತ್ಪನ್ನಗಳ ರಫ್ತುದಾರನಾಗುವ ಉದ್ದೇಶ ಹೊಂದಿರುವುದನ್ನು ಪ್ರದರ್ಶಿಸುತ್ತಿದೆ.

2025ರಲ್ಲಿ ಭಾರತದ ವಾರ್ಷಿಕ ರಕ್ಷಣಾ ಉತ್ಪಾದನೆ ಮೊದಲ ಬಾರಿಗೆ 1.5 ಲಕ್ಷ ಕೋಟಿ ರೂಪಾಯಿ ಗಡಿಯನ್ನು ದಾಟಿತು. ಇದು ಹಿಂದಿನ ವರ್ಷಗಳಿಗೆ ಹೋಲಿಸಿದರೆ ಬಹುದೊಡ್ಡ ಜಿಗಿತವಾಗಿದ್ದು, ಭಾರತ ಈಗ ತಾನೇ ಸ್ವತಃ ಹೆಚ್ಚಿನ ರಕ್ಷಣಾ ಉತ್ಪನ್ನಗಳನ್ನು ನಿರ್ಮಿಸುವುದಕ್ಕೆ ಸಾಕ್ಷಿಯಾಗಿದೆ.

ರಕ್ಷಣಾ ಸಚಿವರಾದ ರಾಜನಾಥ್‌ ಸಿಂಗ್‌ ಅವರು ಈ ಸಾಧನೆ ಭಾರತ ರಕ್ಷಣಾ ಉದ್ಯಮ ದಿನದಿಂದ ದಿನಕ್ಕೆ ಶಕ್ತಿಯುತವಾಗುತ್ತಿರುವುದರ ಸಂಕೇತ ಎಂದಿದ್ದು, ಭಾರತ ತನಗೆ ಬೇಕಾದ ರಕ್ಷಣಾ ಉತ್ಪನ್ನಗಳನ್ನು ತಯಾರಿಸುವ ಸಾಮರ್ಥ್ಯ ಗಳಿಸಿಕೊಳ್ಳುತ್ತಿದೆ ಎಂದಿದ್ದಾರೆ.

2024-25ರ ಅಂಕಿಅಂಶಗಳು ಹಿಂದಿನ ವರ್ಷದ 1.2 ಲಕ್ಷ ಕೋಟಿ ರೂಪಾಯಿಗಿಂತಲೂ 18% ಹೆಚ್ಚಳವನ್ನು ಪ್ರದರ್ಶಿಸಿವೆ. ಇದು 2019-20ರಲ್ಲಿ ದಾಖಲಿಸಿದ್ದ 79,071 ಕೋಟಿ ರೂಪಾಯಿಗಿಂತ ಬಹುತೇಕ 90% ಹೆಚ್ಚಳವಾಗಿದೆ. ಇದು ಇತ್ತೀಚಿನ ವರ್ಷಗಳಲ್ಲಿ ಭಾರತದ ರಕ್ಷಣಾ ಉತ್ಪಾದನೆ ಎಷ್ಟರಮಟ್ಟಿಗೆ ಹೆಚ್ಚಳ ಕಂಡಿದೆ ಎನ್ನುವುದನ್ನು ಪ್ರದರ್ಶಿಸುತ್ತಿದೆ.

2025-26ರ ಕೇಂದ್ರ ಬಜೆಟ್‌ನಲ್ಲಿ ಸರ್ಕಾರ ರಕ್ಷಣಾ ಸಚಿವಾಲಯಕ್ಕಾಗಿ 6.81 ಲಕ್ಷ ಕೋಟಿ ರೂಪಾಯಿಗಳನ್ನು ಮೀಸಲಾಗಿಟ್ಟಿತ್ತು. ಇದು ಇಲ್ಲಿಯ ತನಕದ ಅತ್ಯಧಿಕ ಮೊತ್ತವಾಗಿದೆ. ಇದು ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ 9.53% ಹೆಚ್ಚಳವಾಗಿದ್ದು, ಭಾರತದ ರಕ್ಷಣೆ ಮತ್ತು ಭದ್ರತೆಯನ್ನು ಬಲಪಡಿಸುವಲ್ಲಿ ಹೆಚ್ಚಿನ ಗಮನ ಹರಿಸಿರುವುದಕ್ಕೆ ಸಾಕ್ಷಿಯಾಗಿದೆ.

ಈ ಮೊತ್ತದ ಪೈಕಿ, 1.80 ಲಕ್ಷ ಕೋಟಿ ರೂಪಾಯಿಗಳನ್ನು ರಕ್ಷಣಾ ಪಡೆಗಳಿಗೆ ನೂತನ ಆಯುಧ ಉಪಕರಣಗಳನ್ನು ಖರೀದಿಸಲು ಮೀಸಲಿಡಲಾಗಿದೆ. ಇನ್ನು ಹೆಚ್ಚಿನ ಗಮನವನ್ನು ಆಧುನೀಕರಣಕ್ಕೆ ಇಡಲಾಗಿದ್ದು, 1.12 ಲಕ್ಷ ಕೋಟಿ ರೂಪಾಯಿಗಳನ್ನು ಭಾರತೀಯ ಕಂಪನಿಗಳಿಂದಲೇ ಆಯುಧಗಳನ್ನು ಖರೀದಿಸಲು ಮೀಸಲಿಡಲಾಗಿದೆ. ಇದು ದೇಶೀಯ ರಕ್ಷಣಾ ಉದ್ಯಮಕ್ಕೆ ಸೂಕ್ತ ಬೆಂಬಲ ಒದಗಿಸಲಿದೆ.

ಮುಂದಿನ ಹಾದಿ ಹೇಗಿದೆ?

ಜೂನ್‌ 2025ರ ಕಾನ್ಫಿಡರೇಷನ್‌ ಆಫ್‌ ಇಂಡಿಯನ್‌ ಇಂಡಸ್ಟ್ರಿ ಮತ್ತು ಕೆಪಿಎಂಜಿ ಇಂಡಿಯಾಗಳ ವರದಿಯ ಪ್ರಕಾರ, ಭಾರತದ ರಕ್ಷಣಾ ವೆಚ್ಚ 2047ರ ವೇಳೆಗೆ ತೀವ್ರ ಹೆಚ್ಚಳ ಕಾಣುವ ಸಾಧ್ಯತೆಗಳಿವೆ. ರಕ್ಷಣಾ ಬಜೆಟ್‌ 2026ನೇ ಸಾಲಿನ 6.81 ಲಕ್ಷ ಕೋಟಿ ರೂಪಾಯಿಗಳಿಂದ, 2047ರಲ್ಲಿ 31.7 ಲಕ್ಷ ಕೋಟಿ ರೂಪಾಯಿಗೆ ತಲುಪಿ, ಬಹುತೇಕ ಐದು ಪಟ್ಟು ಹೆಚ್ಚಳ ದಾಖಲಿಸುವ ನಿರೀಕ್ಷೆಗಳಿವೆ. ಇದೇ ವೇಳೆ, ರಕ್ಷಣಾ ಉತ್ಪಾದನೆಯೂ 2025ನೇ ಹಣಕಾಸು ವರ್ಷದ 2.8 ಲಕ್ಷ ಕೋಟಿ ರೂಪಾಯಿಗಳಿಂದ ಆರು ಪಟ್ಟಿಗೂ ಹೆಚ್ಚಿನ ಬೆಳವಣಿಗೆ ಕಂಡು, 8.8 ಲಕ್ಷ ಕೋಟಿ ರೂಪಾಯಿ ತಲುಪುವ ಸಾಧ್ಯತೆಗಳಿವೆ.

ಆತ್ಮನಿರ್ಭರ್‌, ಅಗ್ರಣಿ, ಮತ್ತು ಅತುಲ್ಯ ಭಾರತ 2047 ಎಂಬ ಈ ವರದಿ, ಭಾರತದ ರಕ್ಷಣಾ ರಫ್ತುಗಳು 2047ರ ವೇಳೆಗೆ 2.8 ಲಕ್ಷ ಕೋಟಿ ರೂಪಾಯಿ ತಲುಪಬಹುದು ಎಂದು ಅಂದಾಜಿಸಿದೆ. ಇದು 2025ರ 24,000 ಕೋಟಿ ರೂಪಾಯಿಗೆ ಹೋಲಿಸಿದರೆ ಬಹುದೊಡ್ಡ ಜಿಗಿತವಾಗಿದ್ದು, ಮುಂದಿನ ವರ್ಷಗಳಲ್ಲಿ ಭಾರತದ ರಕ್ಷಣಾ ರಫ್ತು ಬಹುತೇಕ 12 ಪಟ್ಟು ಹೆಚ್ಚಾಗುವ ನಿರೀಕ್ಷೆಗಳಿವೆ.

2026ರ ಬಜೆಟ್‌ನಲ್ಲಿ ರಕ್ಷಣಾ ಸಚಿವಾಲಯ 2025-26ನೇ ವರ್ಷವನ್ನು ʼಸುಧಾರಣೆಗಳ ವರ್ಷʼ ಎಂದು ಗುರುತಿಸಲು ನಿರ್ಧರಿಸಿತು. ಇದರ ಗುರಿ ವ್ಯವಸ್ಥೆಗಳು, ಉಪಕರಣಗಳು ಮತ್ತು ಕಾರ್ಯಾಚರಣಾ ವಿಧಾನಗಳನ್ನು ಸುಧಾರಿಸಿ, ರಕ್ಷಣಾ ಪಡೆಗಳನ್ನು ಇನ್ನಷ್ಟು ಬಲಶಾಲಿ ಮತ್ತು ಆಧುನಿಕವಾಗಿಸುವುದಾಗಿದೆ.

ಈ ಸುಧಾರಣೆಗಳು ರಕ್ಷಣಾ ಖರೀದಿಯನ್ನು ಇನ್ನಷ್ಟು ಸರಳ ಮತ್ತು ವೇಗವಾಗಿಸುವ ಗುರಿ ಹೊಂದಿವೆ. ಆ ಮೂಲಕ ರಕ್ಷಣಾ ನಿಧಿಯನ್ನು ಸರಿಯಾಗಿ ಬಳಸಿಕೊಂಡು, ಹಣ ವ್ಯರ್ಥವಾಗದಂತೆ ಖಾತ್ರಿಪಡಿಸಿ, ಪ್ರತಿಯೊಂದು ರೂಪಾಯಿಯೂ ಗರಿಷ್ಠ ಪ್ರಯೋಜನ ಒದಗಿಸುವಂತೆ ಮಾಡಲಾಗುತ್ತದೆ.

ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.

ಇಮೇಲ್: girishlinganna@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅನಧಿಕೃತ ಮನೆಗಳ ತೆರವು: ಕೋಗಿಲು ಲೇಔಟ್​​ಗೆ ಡಿ.ಕೆ ಶಿವಕುಮಾರ್ ಭೇಟಿ; ಡಿಸಿಎಂ ಹೇಳಿದ್ದೇನು? Video

ಬೆಂಗಳೂರು: ಕಿರುತೆರೆ ನಟಿ ನಂದಿನಿ ಆತ್ಮಹತ್ಯೆಗೆ ಶರಣು

ಲಂಕಾ ಹನಿಮೂನ್ ನಲ್ಲಿ 'ಹಳೇ ಲವರ್' ವಿಚಾರಕ್ಕೆ ಜಗಳ! ನವ ದಂಪತಿ ಸೂಸೈಡ್ ಗೆ ಕಾರಣನಾ? ಕಣ್ಣೀರಿನಲ್ಲಿ ಮುಳುಗಿದ ಕುಟುಂಬ!

'ಅವನನ್ನು ಗಲ್ಲಿಗೇರಿಸುವವರೆಗೂ ಹೋರಾಟ': ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಿಸಿದ ಉನ್ನಾವೊ ಅತ್ಯಾಚಾರ ಸಂತ್ರಸ್ತೆ

ಭಾರತೀಯ ಸೇನೆಗೆ 79,000 ಕೋಟಿ ರೂ. ಮೌಲ್ಯದ 'ಆಧುನಿಕ ಶಸ್ತ್ರಾಸ್ತ್ರ' ಖರೀದಿಗೆ DAC ಅನುಮೋದನೆ!

SCROLL FOR NEXT