HMP ವೈರಸ್ online desk
ಅಂಕಣಗಳು

HMP ವೈರಸ್: ಭಯ ಬೇಡ, ಜಾಗ್ರತೆ ಇರಲಿ (ಕುಶಲವೇ ಕ್ಷೇಮವೇ)

ಈ ವೈರಸ್ ಸೋಂಕಿನ ರೋಗಲಕ್ಷಣಗಳಲ್ಲಿ ಕೆಮ್ಮು, ಜ್ವರ, ಉಸಿರಾಟದ ತೊಂದರೆ ಕೂಡ ಸೇರಿವೆ. ತೀವ್ರವಾದ ಸಂದರ್ಭಗಳಲ್ಲಿ, ಇದು ಬ್ರಾಂಕೈಟಿಸ್ ಅಥವಾ ನ್ಯುಮೋನಿಯಾಕ್ಕೆ ಕಾರಣವಾಗಬಹುದು.

ಇತ್ತೀಚೆಗೆ ಚೀನಾದಲ್ಲಿ ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (ಎಚ್‌ಎಂಪಿವಿ) ಹರಡುವಿಕೆ ಹೆಚ್ಚಾಗಿದ್ದು ಏಕಾಏಕಿ ಜಾಗತಿಕವಾಗಿ ಈ ವೈರಸ್ಸಿನ ಬಗ್ಗೆ ಎಚ್ಚರಿಕೆಯನ್ನು ಹೆಚ್ಚಿಸಿದೆ. ಭಾರತ ಸೇರಿದಂತೆ ಹಲವಾರು ದೇಶಗಳಲ್ಲಿ ಈ ವೈರಸ್ ಸೋಂಕು ಪ್ರಕರಣಗಳು ಈಗಾಗಲೇ ವರದಿಯಾಗಿದ್ದು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಈ ವೈರಸ್ ಸೋಂಕಿನ ರೋಗಲಕ್ಷಣಗಳಲ್ಲಿ ಕೆಮ್ಮು, ಜ್ವರ, ಉಸಿರಾಟದ ತೊಂದರೆ ಕೂಡ ಸೇರಿವೆ. ತೀವ್ರವಾದ ಸಂದರ್ಭಗಳಲ್ಲಿ, ಇದು ಬ್ರಾಂಕೈಟಿಸ್ ಅಥವಾ ನ್ಯುಮೋನಿಯಾಕ್ಕೆ ಕಾರಣವಾಗಬಹುದು. ವೈರಸ್ ಹೆಚ್ಚಾಗಲು ಮೂರರಿಂದ ಆರು ದಿನಗಳನ್ನು ತೆಗೆದುಕೊಳ್ಳುತ್ತದೆ, ರೋಗಲಕ್ಷಣಗಳು ತೀವ್ರತೆಯ ಆಧಾರದ ಮೇಲೆ ವಿಭಿನ್ನ ಅವಧಿಯವರೆಗೆ ಇರುತ್ತದೆ.

ಎಚ್‌ಎಂಪಿ ವೈರಸ್ ಇತಿಹಾಸ

ಎಚ್‌ಎಂಪಿ ವೈರಸ್ ಸಾಮಾನ್ಯ ಉಸಿರಾಟದ ವೈರಸ್ ಆಗಿದ್ದು ಶ್ವಾಸಕೋಶದ ಕೆಳ ಮತ್ತು ಮೇಲ್ಭಾಗದ ಉಸಿರಾಟದ ಸೋಂಕುಗಳನ್ನು ಉಂಟುಮಾಡುತ್ತದೆ (ಶೀತದಂತೆ). ಇದು ಸಾಮಾನ್ಯವಾಗಿ ಚಳಿಗಾಲದಲ್ಲಿ ಮತ್ತು ವಸಂತಕಾಲದ ಆರಂಭದಲ್ಲಿ ಕಾಣಿಸಿಕೊಳ್ಳುವ ಋತುಮಾನದ ಕಾಯಿಲೆಯಾಗಿದೆ. ಹೆಚ್ಚು ಗಾಬರಿ ಪಡಬೇಕಿಲ್ಲ.

ಈ ವೈರಸ್ ಹೊಸದಾಗಿ ಕಂಡುಹಿಡಿದ ವೈರಸ್ ಅಲ್ಲ. ಇದನ್ನು ಮೊದಲ ಬಾರಿಗೆ 2001 ರಲ್ಲಿ ಕಂಡುಹಿಡಿಯಲಾಯಿತು ಎಂದು ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಹೇಳಿದೆ. ಆದರೂ ಕೆಲವು ಪುರಾವೆಗಳು ಈ ವೈರಸ್ ಕನಿಷ್ಠ 1958ರಿಂದ ವ್ಯಾಪಕವಾಗಿ ಹರಡಿದೆ ಎಂದು ತಜ್ಞರು ಹೇಳಿದ್ದಾರೆ.

ಎಚ್‌ಎಂಪಿ ವೈರಸ್ vs ಕೊರೊನಾ ವೈರಸ್

ಕೆಲವರು ಇದನ್ನು ಸಾಂಕ್ರಾಮಿಕ ಕೊರೊನಾ ವೈರಸ್ಸಿಗೆ ಹೋಲಿಸುತ್ತಿದ್ದಾರೆ. ಈ ಎರಡೂ ವೈರಸ್ಗಳು ಎಲ್ಲಾ ವಯಸ್ಸಿನ ಜನರಲ್ಲಿ ಉಸಿರಾಟದ ಕಾಯಿಲೆಗೆ ಕಾರಣವಾಗುತ್ತವೆ. ಚಿಕ್ಕ ಮಕ್ಕಳು, ಹಿರಿಯ ವಯಸ್ಕರು ಮತ್ತು ದುರ್ಬಲಗೊಂಡ ರೋಗನಿರೋಧಕ ಶಕ್ತಿ ಹೊಂದಿರುವ ಜನರು ಈ ವೈರಸ್ಸಿನ ಸೋಂಕಿಗೆ ಒಳಗಾಗುವ ಸಂಭವ ಹೆಚ್ಚಾಗಿದೆ. ಇವುಗಳ ಸೋಂಕುಲಕ್ಷಣಗಳು ಸಾಮಾನ್ಯವಾಗಿವೆ – ಬಿಡದೇ ಕಾಡುವ ಕೆಮ್ಮು, ಜ್ವರ, ಮೂಗಿನ ಮತ್ತು ಉಸಿರಾಟದ ತೊಂದರೆ, ಆಯಾಸ, ದೌರ್ಬಲ್ಯದ ಭಾವನೆ, ಗಂಟಲಿನಲ್ಲಿ ಕಿರಿಕಿರಿ, ತಲೆ ಮತ್ತು ಸ್ನಾಯು ನೋವು.

ಈ ಎರಡೂ ವೈರಸ್ಗಳು ಹೆಚ್ಚಾಗಿ ಸೋಂಕಿತ ವ್ಯಕ್ತಿಯಿಂದ ಇತರರಿಗೆ ಕೆಮ್ಮುವಿಕೆ, ಸೀನುವಿಕೆ ಮತ್ತು ನಿಕಟ ವೈಯಕ್ತಿಕ ಸಂಪರ್ಕದಿಂದ ಸ್ರಾವದ ಮೂಲಕ ಹರಡುತ್ತವೆ. ವೈರಸ್ಗಳನ್ನು ಹೊಂದಿರುವ ವಸ್ತುಗಳು ಅಥವಾ ಮೇಲ್ಮೈಗಳನ್ನು ಸ್ಪರ್ಶಿಸುವ ಮೂಲಕ ಮತ್ತು ನಂತರ ಬಾಯಿ, ಮೂಗು ಅಥವಾ ಕಣ್ಣುಗಳನ್ನು ಸ್ಪರ್ಶಿಸುವ ಮೂಲಕ ಅವು ಹರಡುತ್ತವೆ.

ಎಚ್‌ಎಂಪಿ ವೈರಸ್ ಪತ್ತೆ ಹೇಗೆ?

ವೈದ್ಯರ ಸಲಹೆ ಮೇರೆಗೆ ಎಚ್‌ಎಂಪಿವಿ ರೋಗನಿರ್ಣಯವು ಸಾಮಾನ್ಯವಾಗಿ ಪ್ರಯೋಗಾಲಯ ಪರೀಕ್ಷೆಗಳಿಂದ ಬೆಂಬಲಿತವಾದ ವೈದ್ಯಕೀಯ ಮೌಲ್ಯಮಾಪನವನ್ನು ಒಳಗೊಂಡಿರುತ್ತದೆ. ಪಿಸಿಆರ್ (ಪಾಲಿಮರೇಸ್ ಚೈನ್ ರಿಯಾಕ್ಷನ್) ಎಂಬುದು ಗಂಟಲಿನ ಸ್ವ್ಯಾಬ್ಗಳು ಅಥವಾ ಮೂಗಿನ ಆಸ್ಪಿರೇಟ್ಗಳಂತಹ ಉಸಿರಾಟದ ಮಾದರಿಗಳಲ್ಲಿ ವೈರಸ್ ಅನ್ನು ಪತ್ತೆಹಚ್ಚಲು ಅತ್ಯಂತ ನಿಖರವಾದ ವಿಧಾನವಾಗಿದೆ. ಇದರ ಜೊತೆಗೆ, ಕ್ಷಿಪ್ರ ಆಂಟಿಜೆನ್ ಪರೀಕ್ಷೆಗಳು ಮತ್ತು ವೈರಲ್ ಕಲ್ಚರ್ ವಿಧಾನಗಳು ಸಹ ರೋಗನಿರ್ಣಯದಲ್ಲಿ ಸಹಾಯ ಮಾಡಬಹುದು.

ಎಚ್‌ಎಂಪಿ ವೈರಸ್ ಬಗ್ಗೆ ಮಾರ್ಗದರ್ಶಿ ಸೂತ್ರಗಳು

ಎಚ್‌ಎಂಪಿ ವೈರಸ್ ಕೊರೊನಾದಷ್ಟು ಆತಂಕಕಾರಿ ವೈರಸ್ಸಲ್ಲ. ಈ ವೈರಸ್ಸಿನ ಸೋಂಕು ಲಕ್ಷಣಗಳು ತೀರಾ ಗಂಭೀರವಲ್ಲ ಮತ್ತು ಬೇಗನೇ ಗುಣಮುಖರಾಗಬಹುದು. ಆದ್ದರಿಂದ ವಿನಾ ಕಾರಣ ಭಯ ಪಡಬೇಕಿಲ್ಲ. ಸರ್ಕಾರವೇ ಈ ಬಗ್ಗೆ ಮಾಹಿತಿ ಮತ್ತು ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದೆ.

ಈ ವೈರಸ್ ಸೋಂಕಿಗೆ ಪ್ರಸ್ತುತ ಯಾವುದೇ ಲಸಿಕೆ ಇಲ್ಲ. ಆದರೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವ ಮೂಲಕ ಈ ವೈರಸ್ ಹರಡುವಿಕೆಯನ್ನು ತಡೆಗಟ್ಟಬಹುದು.

  • ಕನಿಷ್ಠ 20 ಸೆಕೆಂಡುಗಳ ಕಾಲ ಸಾಬೂನು ಮತ್ತು ನೀರಿನಿಂದ ಆಗಾಗ್ಗೆ ಕೈ ತೊಳೆಯುವುದು ಈ ವೈರಸ್ ಹರಡುವುದನ್ನು ತಡೆಯುವ ಅತ್ಯಂತ ಪರಿಣಾಮಕಾರಿ ವಿಧಾನಗಳಲ್ಲಿ ಒಂದಾಗಿದೆ.

  • ಕೈಗಳನ್ನು ತೊಳೆಯದೇ ಕಣ್ಣು, ಮೂಗು ಅಥವಾ ಬಾಯಿಯನ್ನು ಮುಟ್ಟುಬೇಡಿ.

  • ಶೀತ, ಕೆಮ್ಮು, ಜ್ವರದಂತಹ ಅನಾರೋಗ್ಯ ಇರುವ ಜನರೊಂದಿಗೆ ನಿಕಟ ಸಂಪರ್ಕ ಮಾಡಬೇಡಿ.

  • ಶೀತದ ಲಕ್ಷಣಗಳನ್ನು ಹೊಂದಿರುವ ಜನರು ಕೆಮ್ಮುವಾಗ ಮತ್ತು ಸೀನುವಾಗ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳಬೇಕು.

  • ಸೋಂಕಿತರೊAದಿಗೆ ಕಾಫೀ, ಟೀ ಕಪ್ಪುಗಳನ್ನು ಹಂಚಿಕೊಳ್ಳುವುದು ಮತ್ತು ಅವರ ತಟ್ಟೆಗಳನ್ನು ಬಳಸಿ ಊಟತಿಂಡಿ ಮಾಡಬೇಡಿ. ಬೇರೆಯವರ ಟವೆಲ್ ಮತ್ತು ಬಟ್ಟೆಗಳನ್ನು ಬಳಸಬೇಡಿ.

  • ಹೆಚ್ಚು ಜನರು ಕಿಕ್ಕಿರಿದಿರುವ ಮಾರುಕಟ್ಟೆ, ಮಾಲ್, ರಸ್ತೆ ಮುಂತಾದ ಕಡೆೆ ಹೋಗುವುದಾದರೆ ಮಾಸ್ಕ್ ಧರಿಸಿ ಹೋಗುವುದನ್ನು ರೂಢಿಸಿಕೊಳ್ಳಿ. ಶಿಶುಗಳು ಮತ್ತು ವಯಸ್ಸಾದವರನ್ನು ಹೆಚ್ಚಾಗಿ ಹೊರಗೆ ಅಗತ್ಯವಿಲ್ಲದೇ ಕರೆದೊಯ್ಯಬೇಡಿ.

  • ಮನೆಯ ಒಳಹೊರಗನ್ನು ಸಾಧ್ಯವಾದ ಮಟ್ಟಿಗೆ ಸ್ವಚ್ಛವಾಗಿ ಇಟ್ಟುಕೊಳ್ಳಿ.

  • ಮಕ್ಕಳಿಗೆ ಬೇಗ ಸೋಂಕು ತಗುಲುವ ಸಾಧ್ಯತೆ ಇರುವುದರಿಂದ ಅವರಿಗೆ ಶೀತ, ಜ್ವರ ಬಂದರೆ ವೈದ್ಯರ ಬಳಿಗೆ ಕರೆದೊಯ್ಯಿರಿ. ಮಾಸ್ಕ್ ಧರಿಸಿ ಶಾಲೆಗೆ ಮತ್ತು ಹೊರಗೆ ಹೋಗಲು ಹೇಳಿ

  • ಬಿಸಿ ನೀರು ಕುಡಿಯುವುದನ್ನು ರೂಢಿಸಿಕೊಳ್ಳಿ. ಆಹಾರದಲ್ಲಿ ಶುಂಠಿ, ಬೆಳ್ಳುಳ್ಳಿಗಳನ್ನು ಧಾರಾಳವಾಗಿ ಬಳಸಿ.

  • ಸಮತೋಲಿತ ಆಹಾರ, ತಾಜಾ ತರಕಾರಿ, ಹಣ್ಣಗಳು ಮತ್ತು ತರಕಾರಿಗಳನ್ನು ಸೇವಿಸಿ. ವಾಕಿಂಗ್, ವ್ಯಾಯಾಮ, ಜಾಗಿಂಗ್, ರನ್ನಿಂಗ್ ಮತ್ತು ಧ್ಯಾನ-ಪ್ರಾಣಾಯಾಮ-ಯೋಗಾಭ್ಯಾಸದಂತಹ ಶರೀರವನ್ನು ದೃಢಗೊಳಿಸಿ ರೋಗನಿರೋಧಕತೆ ಹೆಚ್ಚಿಸುವ ಅಭ್ಯಾಸಗಳನ್ನು ಇಟ್ಟುಕೊಳ್ಳಿ.

ಭಾರತದಲ್ಲಿ ಕಿಕ್ಕಿರಿದ ಜೀವನ ಪರಿಸ್ಥಿತಿಗಳು ಮತ್ತು ಸೀಮಿತ ಆರೋಗ್ಯ ಸಂಪನ್ಮೂಲಗಳ ಕಾರಣದಿಂದ ವೈರಸ್ ಸೋಂಕು ತಗುಲುವಿಕೆ ಹೆಚ್ಚಾಗಬಹುದು. ಈ ಬಗ್ಗೆ ಎಲ್ಲರೂ ಎಚ್ಚರದಿಂದ ಇರಬೇಕು.


Dr Vasundhara Bhupathi

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

ಭಾರತದ ಹಿತಾಸಕ್ತಿಗಳ ವಿರುದ್ಧ ಅಫ್ಘಾನಿಸ್ತಾನ ನೆಲ ಬಳಕೆಯಾಗಲ್ಲ, ನೀವು ಆಟ ಆಡಬೇಡಿ- ಪಾಕಿಸ್ತಾನಕ್ಕೆ ಅಫ್ಘಾನ್ ವಿದೇಶಾಂಗ ಸಚಿವರ ನೇರ ಎಚ್ಚರಿಕೆ!

ಚಿಕ್ಕಬಳ್ಳಾಪುರ: 'Miss U Chinna'; ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ಯುವಕ ನೇಣಿಗೆ ಶರಣು; Instagram Post Viral

ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

SCROLL FOR NEXT