ಮುಂಬೈ: ಐಸಿಸಿ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸೋತ ನಂತರ ಸುಮ್ಮನಿದ್ದ ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಇದೀಗ ಮೌನ ಮುರಿದಿದ್ದಾರೆ.
ಸರಣಿಗಳಲ್ಲಿ ಎಷ್ಟೋ ಪಂದ್ಯಗಳನ್ನು ಸೋತಿದ್ದೀವಿ, ಗೆದ್ದಿದ್ದೀವಿ ಆದರೆ ಆಡಿದ ಪ್ರತಿ ಪಂದ್ಯದಲ್ಲೂ ವಿಭಿನ್ನ ಅನುಭವವನ್ನು ಪಡೆದಿದ್ದೇವೆ. ಮಾಡಿದ ತಪ್ಪುಗಳಿಂದಲೂ ಪಾಠ ಕಲಿತಿದ್ದೇವೆ ಎಂದು ಟೀಂ ಇಂಡಿಯಾ ಅಭಿಮಾನಿಗಳಿಗೆ ಟ್ವೀಟ್ ಮಾಡಿದ್ದಾರೆ.
ಸಹೋದದರೇ... ನಿಮ್ಮ ಬೆಂಬಲದಿಂದ ಈ ಟಿ20 ವಿಶ್ವಕಪ್ ಪಂದ್ಯಾವಳಿ ನನಗೆ ಅವಿಸ್ಮರಣೀಯವಾಗುವಂತೆ ಮಾಡಿದೆ. ನಿಮಗೆಲ್ಲರಿಗೂ ಧನ್ಯವಾದಗಳು. ಮುಂದಿನ ಬಾರಿ ಭರ್ಜರಿ ವಾಪಸಾತಿ ಮಾಡುತ್ತೇವೆ ಎಂದು ಬರೆದುಕೊಂಡಿದ್ದಾರೆ.