ಕೊಲ್ಕತಾ: ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲಿವೆ.
ವಿಶ್ವದ 2ನೇ ಅತಿದೊಡ್ಡ ಕ್ರಿಕೆಟ್ ಮೈದಾನ ಎಂಬ ಖ್ಯಾತಿಗೆ ಭಾಜನವಾಗಿರುವ ಕೊಲ್ಕತಾದ ಈಡನ್ ಗಾರ್ಡನ್ಸ್ ನಲ್ಲಿ ಪಂದ್ಯ ನಡೆಯಲಿದೆ.
ಭಾರತ ವಿರುದ್ಧ ವಿಂಡೀಸ್ ತಂಡದ ಬ್ಯಾಟಿಂಗ್ ಕ್ಲಿಕ್ ಆಗಿದ್ದರೂ, ವಿಶ್ವಕಪ್‌ನಲ್ಲಿ ತಂಡಕ್ಕೆ ಹೆಚ್ಚಿನ ಸಮಯ ಕೈಕೊಟ್ಟಿದ್ದು ತಂಡದ ಬ್ಯಾಟಿಂಗ್ ವಿಭಾಗ. ದಕ್ಷಿಣ ಆಫ್ರಿಕಾ ವಿರುದ್ಧ ಸೋಲಿನ ಹಂತದಲ್ಲಿ ಗೆಲುವು ಒಲಿಸಿಕೊಂಡರೆ, ಅಫ್ಘಾನಿಸ್ತಾನ ವಿರುದ್ಧ ತಂಡದ ಬ್ಯಾಟಿಂಗ್ ಸಂಪೂರ್ಣ ಕೈಕೊಟ್ಟಿತ್ತು. ಇನ್ನು ಇಂಗ್ಲೆಂಡ್ ತಂಡ ಸಮತೋಲನದಿಂದ ಕೂಡಿದ್ದರೂ, ನಾಯಕ ಇವೋಯಿನ್ ಮಾರ್ಗನ್ ಬ್ಯಾಟಿಂಗ್‌ನದ್ದೇ ಚಿಂತೆಯಾಗಿದೆ. ಹಾಲಿ ಟೂರ್ನಿಯಲ್ಲೇ 2 ಬಾರಿ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿದ್ದಾರೆ. ಬೌಲಿಂಗ್‌ನಲ್ಲಿ ತಂಡದ ಯಾರ್ಕರ್ ಸ್ಪೆಷಲಿಸ್ಟ್ ಕ್ರಿಸ್ ಜೋರ್ಡಾನ್ ಹಾಗೂ ಆಲ್ರೌಂಡರ್ ಬೆನ್ ಸ್ಟೋಕ್ಸ್ ಪ್ರಚಂಡ ಬೌಲಿಂಗ್ ಫೈನಲ್‌ನಲ್ಲೂ ಮುಂದುವರಿದರೆ, ವಿಂಡೀಸ್‌ಗೆ ಕಠಿಣ ಪರಿಸ್ಥಿತಿ ಒದಗಲಿದೆ.
ವೆಸ್ಟ್ ಇಂಡೀಸ್ ಸಂಭಾವ್ಯ ತಂಡ
ಕ್ರಿಸ್ ಗೇಲ್, ಜಾನ್ಸನ್ ಚಾರ್ಲ್ಸ್, ಲೆಂಡ್ಲ್ ಸಿಮನ್ಸ್, ಮರ್ಲಾನ್ ಸ್ಯಾಮ್ಯುಯೆಲ್ಸ್, ದಿನೇಶ್ ರಾಮ್‌ದಿನ್ (ವಿ.ಕೀ), ಡ್ವೇನ್ ಬ್ರಾವೊ, ಆಂಡ್ರೆ ರಸೆಲ್, ಡರೇನ್ ಸ್ಯಾಮ್ಮಿ (ನಾಯಕ), ಕಾರ್ಲೋಸ್ ಬ್ರಾಥ್‌ವೇಟ್, ಸುಲೇಮಾನ್ ಬೆನ್, ಸ್ಯಾಮ್ಯುಯೆಲ್ ಬದ್ರೀ.
ಇಂಗ್ಲೆಂಡ್ ಸಂಭಾವ್ಯ ತಂಡ
ಜೇಸನ್ ರಾಯ್, ಅಲೆಕ್ಸ್ ಹ್ಯಾಲ್ಸ್, ಜೋ ರೂಟ್, ಇವೋಯಿನ್ ಮಾರ್ಗನ್ (ನಾಯಕ), ಜೋಸ್ ಬಟ್ಲರ್ (ವಿ.ಕೀ), ಬೆನ್ ಸ್ಟೋಕ್ಸ್, ಮೋಯಿನ್ ಅಲಿ, ಕ್ರಿಸ್ ಜೋರ್ಡಾನ್, ಆದಿಲ್ ರಶೀದ್, ಡೇವಿಡ್ ವಿಲ್ಲಿ, ಲಿಯಾಮ್ ಪ್ಲಂಕೆಟ್.