ಟಿ20 ವಿಶ್ವಕಪ್ ವಿಜೇತ ವೆಸ್ಟ್ ಇಂಡೀಸ್ ತಂಡ (ಸಂಗ್ರಹ ಚಿತ್ರ) 
ಕ್ರಿಕೆಟ್

ವಿಶ್ವಕಪ್ ಗೆದ್ದರೂ ವಿಂಡೀಸ್ ಚಾಂಪಿಯನ್ಸ್ ಟ್ರೋಫಿ ಆಡಲ್ಲ!

ಬಲಾಢ್ಯ ತಂಡಗಳನ್ನೇ ಮಣಿಸಿ ಚುಟುಕು ಕ್ರಿಕೆಟ್ ನ ವಿಶ್ವಕಪ್ ಎತ್ತಿ ಹಿಡಿದು ವಿಶ್ವ ಸಾಮ್ರಾಟರಾಗಿರುವ ವೆಸ್ಟ್ ಇಂಡೀಸ್ ತಂಡ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಆಡುವ ಅರ್ಹತೆ ಕಳೆದುಕೊಂಡಿದೆ.

ಕೋಲ್ಕತಾ: ಬಲಾಢ್ಯ ತಂಡಗಳನ್ನೇ ಮಣಿಸಿ ಚುಟುಕು ಕ್ರಿಕೆಟ್ ನ ವಿಶ್ವಕಪ್ ಎತ್ತಿ ಹಿಡಿದು ವಿಶ್ವ ಸಾಮ್ರಾಟರಾಗಿರುವ ವೆಸ್ಟ್ ಇಂಡೀಸ್ ತಂಡ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಆಡುವ ಅರ್ಹತೆ  ಕಳೆದುಕೊಂಡಿದೆ.

ಅರೆ ಇದೇನಿದು ವಿಶ್ವಚಾಂಪಿಯನ್ನರು ಅರ್ಹತೆ ಕಳೆದುಕೊಂಡರೇ ಎಂದು ಆಶ್ಚರ್ಯಪಡಬೇಡಿ. ಚಾಂಪಿಯನ್ಸ್ ಟ್ರೋಫಿ ಸರಣಿಯಲ್ಲಿ ಪಾಲ್ಗೊಳ್ಳಲು ವಿಂಡೀಸ್ ಎದುರಾಗಿರುವುದು ಅದರ ರ್ಯಾಕಿಂಗ್  ತೊಡಕು. ಟಿ20 ವಿಶ್ವಕಪ್ ಗೆದ್ದು ವಿಂಡೀಸ್ ತಂಡ ತನ್ನ ಸ್ಥಾನವನ್ನು ಉತ್ತಮ ಪಡಿಸಿಕೊಂಡಿದೆಯಾದರೂ, ಏಕದಿನ ರ್ಯಾಕಿಂಗ್ ನಲ್ಲಿ ಅದರ ಸ್ಥಾನ ಕುಸಿದಿದೆ. ಪ್ರಸ್ತುತ ವಿಂಡೀಸ್ ತಂಡ 9 ನೇ  ಸ್ಥಾನದಲ್ಲಿದ್ದು, ಬಾಂಗ್ಲಾದೇಶ 8ನೇ ಸ್ಥಾನದಲ್ಲಿದೆ.

ಹೀಗಾಗಿ ಚಾಂಪಿಯನ್ಸ್ ಟ್ರೋಫಿಗೆ ರ್ಯಾಕಿಂಗ್ ಪಟ್ಟಿಯಲ್ಲಿರುವ ಮೊದಲ 8 ತಂಡಗಳು ಮಾತ್ರ ಅರ್ಹತೆ ಹೊಂದಿದ್ದು, 9ನೇ ರ್ಯಾಂಕ್ ಪಡೆದಿರುವ ವೆಸ್ಟ್ ಇಂಡೀಸ್ ತಂಡ ಟೂರ್ನಿಯಲ್ಲಿ ಪಾಲ್ಗೊಳ್ಳುವ  ಅರ್ಹತೆ ಕಳೆದುಕೊಂಡಿದೆ. ಆದರೆ ಟಿ20 ವಿಶ್ವಕಪ್ ನ ಅಂತಿಮಘಟ್ಟದ ಲೀಗ್ ಪಂದ್ಯದಲ್ಲಿ ಭಾರತದ ವಿರುದ್ಧ ವಿರೋಚಿತಕ ಸೋಲು ಕಂಡಿದ್ದ ಬಾಂಗ್ಲಾದೇಶ ತಂಡ ಚಾಂಪಿಯನ್ಸ್ ಟ್ರೋಫಿ ಅರ್ಹತೆ  ಗಿಟ್ಟಿಸಿಕೊಳ್ಳುವಲ್ಲಿ ಸಫಲವಾಗಿದೆ.

ಮುಂಬರುವ 2017ಜೂನ್ 1ರಿಂದ 18ರವೆರೆಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ನಡೆಯಲಿದ್ದು, ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್,  ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ. ಟೂರ್ನಿಗೆ ಇಂಗ್ಲೆಂಡ್ ಆತಿಥ್ಯವಹಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!

We’re getting married! ನಾವು ಮದುವೆ ಆಗುತ್ತಿದ್ದೇವೆ: ಕೊನೆಗೂ ಭಾವಿ ಪತಿ ಜತೆ ಗುಡ್ ನ್ಯೂಸ್ ನೀಡಿದ ನಟಿ ಸ್ಪಂದನಾ