ಅಭ್ಯಾಸ ನಿರತ ಆರ್ ಸಿಬಿ ತಂಡ (ಸಂಗ್ರಹ ಚಿತ್ರ) 
ಕ್ರಿಕೆಟ್

ಈ ವರ್ಷವಾದರೂ ನೀಗಲಿದೆಯೇ ಆರ್ ಸಿಬಿಯ ಪ್ರಶಸ್ತಿ ಕನಸು..!

ಐಪಿಎಲ್ ಶುರುವಾದಾಗಿನಿಂದಲೂ ಪ್ರಶಸ್ತಿಯ ಬರ ಎದುರಿಸುತ್ತಿರುವ ಆರ್ ಸಿಬಿ ತಂಡ ಪ್ರಸಕ್ತ ಸಾಲಿನಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ತನ್ನ ಪ್ರಶಸ್ತಿ ಬರವನ್ನು ನೀಗಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದೆ...

ಬೆಂಗಳೂರು: ಐಪಿಎಲ್ ಶುರುವಾದಾಗಿನಿಂದಲೂ ಪ್ರಶಸ್ತಿಯ ಬರ ಎದುರಿಸುತ್ತಿರುವ ಆರ್ ಸಿಬಿ ತಂಡ ಪ್ರಸಕ್ತ ಸಾಲಿನಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ತನ್ನ ಪ್ರಶಸ್ತಿ ಬರವನ್ನು ನೀಗಿಸಿಕೊಳ್ಳಲು  ತುದಿಗಾಲಲ್ಲಿ ನಿಂತಿದೆ.

ಐಪಿಎಲ್ ಸೀಸನ್-9ನಲ್ಲಿ ಇಂದಿನಿಂದ ಆರ್ ಸಿಬಿ ತಂಡದ ಯಾತ್ರೆ ಆರಂಭವಾಗುತ್ತಿದ್ದು, ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸನ್  ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸುತ್ತಿದೆ. ಆ ಮೂಲಕ ಟಿ20 ಕ್ರಿಕೆಟ್ ವಿಶ್ವಕಪ್ ಜಾತ್ರೆಯ ನ೦ತರ ಮ೦ಗಳವಾರದಿ೦ದ ಉದ್ಯಾನನಗರಿ ಬೆ೦ಗಳೂರಿನಲ್ಲಿ 9ನೇ ಆವೃತ್ತಿಯ  ಐಪಿಎಲ್ ರ೦ಗೇರಲಿದೆ.

ವಿರಾಟ್ ಕೊಹ್ಲಿ, ಕ್ರಿಸ್ ಗೇಯ್ಲ್, ಎಬಿಡಿವಿಲಿಯರ್ಸ್, ಶೇನ್ ವಾಟ್ಸನ್ ರಂತಹ ವಿಶ್ವ ಶ್ರೇಷ್ಠ ಬ್ಯಾಟ್ಸ್ ನ್‍ಗಳಿದ್ದರೂ ಇದುವರೆಗೆ ಒಮ್ಮೆಯೂ ಚಾ೦ಪಿಯನ್ ಆಗದಿರುವ ಬೆಂಗಳೂರು ತಂಡ ಈ ಬಾರಿ  ಉತ್ತಮ ಪ್ರದರ್ಶನ ನೀಡುವ ಮೂಲಕ ಪ್ರಶಸ್ತಿ ಗೆಲುವಿನ ಹ೦ಬಲದಲ್ಲಿದೆ. ಇನ್ನು ಕಳೆದ 8 ಸೀಸನ್ ಗಳಲ್ಲಿ ತಂಡಕ್ಕೆ ಪ್ರೋತ್ಸಾಹ ನೀಡುತ್ತಿದ್ದ ತಂಡದ ಸಹ ಮಾಲೀಕ ವಿಜಯ್ ಮಲ್ಯ ಅನುಪಸ್ಥಿತಿ  ಈ ಬಾರಿ ಖಂಡಿತಾ ಆರ್ ಸಿಬಿ ತಂಡವನ್ನು ಕಾಡಲಿದೆ. ಸಾಲ ಮರುಪಾವತಿ ವಿಚಾರವಾಗಿ ವಿದೇಶಕ್ಕೆ ಹಾರಿರುವ ಮಲ್ಯ, ಈ ಬಾರಿಯ ಐಪಿಎಲ್ ಟೂರ್ನಿಗೆ ಗೈರಾಗಲಿದ್ದಾರೆ.

ತ೦ಡದಲ್ಲಿ ತಾರಾ ಬಲವಿದ್ದರೂ ಈ ಬಾರಿ ವಿಜಯ್ ಮಲ್ಯ ಮಾಲೀಕತ್ವ ಹಾಗೂ ವಿಶೇಷ ಪ್ರೊೀತ್ಸಾಹದ ಕೊರತೆ ಇದೆ. ಪ್ರತಿ ಆವೃತ್ತಿಗಳಲ್ಲಿ ಅಮೋಘ ಆರ೦ಭ ಕಾಣುವ ಆರ್‍ಸಿಬಿ ಕೊನೇ  ಕ್ಷಣದಲ್ಲಿ ಕ್ರಿಕೆಟ್ ಟಚ್ ಅನ್ನೇ ಕಳೆದುಕೊ೦ಡ೦ತೆ ಆಡುವ ಚಾಳಿ ಹೊ೦ದಿದೆ. ಹೀಗಾಗಿ ಎರಡು ಬಾರಿಯ ರನ್ನರ್‍ಅಪ್ ಆರ್‍ಸಿಬಿ ಕನಿಷ್ಠ ಈ ಅವಕಾಶದಲ್ಲಾದರೂ ಪ್ರಶಸ್ತೀ ಗೆದ್ದರೆ ಅಭೀಮಾನಿಗಳಿಗೆ  ಸ೦ತಸವಾಗಲಿದೆ.

ರನ್ ಮಳೆ ನಿರೀಕ್ಷೆ
ಇನ್ನು ಟಿ20 ವಿಶ್ವಕಪ್ ನಲ್ಲಿ ಮುಂಬೈ ಪಂದ್ಯದಲ್ಲಿ ರನ್ ಮಳೆಯನ್ನೇ ಹರಿಸಿದ್ದ ಕ್ರಿಸ್ ಗೇಯ್ಲ್ ಅದೇ ಪ್ರದರ್ಶನವನ್ನು ಐಪಿಎಲ್ ನಲ್ಲಿಯೂ ಮುಂದುವರೆಸುವ ವಿಶ್ವಾಸ ಹೊಂದಿದ್ದಾರೆ.  ಐಪಿಎಲ್‍ನಲ್ಲಿ ಗರಿಷ್ಠ 5 ಶತಕ ಸಿಡಿಸಿರುವ ಬ್ಯಾಟ್ಸ್ ಮನ್ ಗೇಲ್, ಕಳೆದ ಆವೃತ್ತಿಯ ಮೊದಲ ಪ೦ದ್ಯದಲ್ಲಿ 90ಕ್ಕೂ ಅಧಿಕ ರನ್ ಸಿಡಿಸಿದ್ದರು. ಇನ್ನು ಟಿ20 ವಿಶ್ವಕಪ್ ನಲ್ಲಿ ಅಮೋಘ ಬ್ಯಾಟಿಂಗ್  ಪ್ರದರ್ಶನ ನೀಡಿದ್ದ ವಿರಾಟ್ ಕೊಹ್ಲಿ ಕೂಡ ಅದೇ ಪ್ರದರ್ಶನವನ್ನು ಐಪಿಎಲ್ ನಲ್ಲಿ ಮುಂದುವರೆಸುವ ಸಾಧ್ಯತೆಗಳಿವೆ. ಇವರಲ್ಲದೆ ಎಬಿಡಿ ವಿಲಿಯರ್ಸ್ ಮತ್ತು ಇತ್ತೀಚೆಗೆ ಅಂತಾರಾಷ್ಟ್ರೀಯ  ಕ್ರಿಕೆಟ್ ಗೆ ವಿದಾಯ ಹೇಳಿರುವ ಶೇನ್ ವಾಟ್ಸನ್ ಕೂಡ ಅಬ್ಬರಿಸಲು ಸಜ್ಜಾಗಿ ನಿಂತಿದ್ದಾರೆ.

ಅತ್ತ ಹೈದರಾಬಾದ್ ತಂಡ ಕೂಡ ಆರ್ ಸಿಬಿಗಿಂತ ತಾನೇನು ಕಡಿಮೆ ಇಲ್ಲ ಎನ್ನುವ ರೀತಿಯಲ್ಲಿದ್ದು, ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡೂ ವಿಭಾಗದಲ್ಲಿ ಸಮತೋಲನದಿಂದ ಕೂಡಿದೆ. ಡೇವಿಡ್  ವಾನ೯ರ್, ಶಿಖರ್ ಧವನ್, ಕೇನ್ ವಿಲಿಯಮ್ಸನ್, ಇವೋಯಿನ್ ಮಾಗ೯ನ್ ಬ್ಯಾಟಿ೦ಗ್ ಅಸ್ತ್ರವಾದರೆ, ಆಶಿಶ್ ನೆಹ್ರಾ, ಕಿವೀಸ್ ವೇಗಿ ಟ್ರೆ೦ಟ್ ಬೌಲ್ಟ್, ಮುಸ್ತಾಫಿಜುರ್ ರೆಹಮಾನ್, ಕನ್ನಡಿಗ  ಅಭೀಮನ್ಯು ಮಿಥುನ್ ಬೌಲಿ೦ಗ್ ಶಕ್ತಿಯಾಗಿದ್ದಾರೆ. ಆದರೆ ಈ ತ೦ಡದ ಶ್ರೀಷ್ಠ ಆಲ್ರೌ೦ಡರ್ ಯುವರಾಜ್ ಸಿ೦ಗ್ ಗಾಯದಿ೦ದ ಇನ್ನೂ ಫಿಟ್ ಆಗದಿರುವುದರಿ೦ದ ಪ೦ದ್ಯಕ್ಕೆ ಅಲಭ್ಯರಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚು.ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಬೆಂಗಳೂರಿನಲ್ಲಿ 5 ಪ್ರತ್ಯೇಕ ಕಮಿಷನರೇಟ್‌ ಸ್ಥಾಪನೆ; 1,022 ಹೊಸ ಹುದ್ದೆ ಸೃಷ್ಟಿಗೆ ಸಚಿವ ಸಂಪುಟ ಅಸ್ತು

ಹಬ್ಬಗಳ ಹೊತ್ತಲ್ಲೆ ಕಾಂಗ್ರೆಸ್‌ನಿಂದ ಜನತೆಗೆ ಮತ್ತೊಂದು ಶಾಕ್: Nandini ಹಾಲಿನ ದರ ಲೀಟರ್‌ಗೆ 8 ರೂ. ಏರಿಕೆಗೆ ಸಂಪುಟ ಸಮ್ಮತಿ!

ನೈಸ್ ಯೋಜನೆ ನನ್ನ ಕೂಸಾದರೆ, ಸೂಲಗಿತ್ತಿ ಯಾರು? ನನ್ನ ಕಿಡ್ನಿಗೆ ಸಮಸ್ಯೆ ಇರಬಹುದು, ಬ್ರೇನ್‌ಗೆ ಅಲ್ಲ: ಕಾಂಗ್ರೆಸ್ ವಿರುದ್ಧ ಗುಡುಗಿದ ದೇವೇಗೌಡ