ಹರ್ಭಜನ್ ಸಿಂಗ್ ಅವರ ಟ್ವೀಟ್ ಗಳು (ಚಿತ್ರಕೃಪೆ: ಟ್ವಿಟರ್) 
ಕ್ರಿಕೆಟ್

ಟ್ವಿಟರ್ ಕಾಳಗಕ್ಕೆ ಕಾರಣವಾಯ್ತು ಭಜ್ಜಿ ಹಾಕಿದ ಫೋಟೋ..!

ಕ್ರಿಕೆಟಿಗ ಭಜ್ಜಿ ಟ್ವಿಟರ್ ಕಾಳಗ ವಿಚಾರವಾಗಿ ಮತ್ತೆ ಸುದ್ದಿಯಲ್ಲಿದ್ದು, ಪ್ರಧಾನಿ ಮೋದಿ ಅವರ ಗಮನ ಸೆಳೆಯಲು ಹಾಕಿದ್ದ ಒಂದು ಫೋಟೋಗೆ ಬಂದ ಪ್ರತಿಕ್ರಿಯೆಗಳು ಭಜ್ಜಿ ಅವರ ಕೋಪ ನೆತ್ತಿಗೇರಿವಂತೆ ಮಾಡಿದೆ...

ನವದೆಹಲಿ: ಕ್ರಿಕೆಟಿಗ ಹರ್ಭಜನ್ ಸಿಂಗ್ ಟ್ವಿಟರ್ ಕಾಳಗ ವಿಚಾರವಾಗಿ ಮತ್ತೆ ಸುದ್ದಿಯಲ್ಲಿದ್ದು, ಪ್ರಧಾನಿ ಮೋದಿ ಅವರ ಗಮನ ಸೆಳೆಯಲು ಹಾಕಿದ್ದ ಒಂದು ಫೋಟೋಗೆ ಬಂದ ಪ್ರತಿಕ್ರಿಯೆಗಳು ಭಜ್ಜಿ ಅವರ ಕೋಪ ನೆತ್ತಿಗೇರಿವಂತೆ ಮಾಡಿದೆ.

ಮಗುವಿನ ತಾಯಿಯೊಬ್ಬಳನ್ನು ನಡುರಸ್ತೆಯಲ್ಲಿಯೇ ಪೊಲೀಸ್ ಪೇದೆಯೊಬ್ಬ ಲಾಠಿಯಿಂದ ಹೊಡೆಯುತ್ತಿರುವ ದೃಶ್ಯ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರ ಕೋಪಕ್ಕೆ ಕಾರಣವಾಗಿದ್ದು, ಕೂಡಲೇ ಅದನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ವೀಟ್ ಮಾಡಿದ್ದಾರೆ. "ರಕ್ಷಕರಾಗಬೇಕಿದ್ದ ಪೊಲೀಸರು ನಮ್ಮವರನ್ನೇ ಥಳಿಸುತ್ತಿರುವುದು ಸರಿಯಲ್ಲ. ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ"  ಎಂದು ಟ್ವಿಟರ್ ನಲ್ಲಿ ಭಜ್ಜಿ ಮನವಿ ಮಾಡಿದ್ದರು.

ಹರ್ಭಜನ್ ಸಿಂಗ್ ಅವರ ಟ್ವೀಟ್ ಅನ್ನು ವಿರೋಧಿಸಿ ಕೆಲವರು ಪ್ರತಿಕ್ರಿಯೆ ನೀಡಿದ್ದರು. ಓರ್ವ ಬಳಕೆದಾರ ಮಾತ್ರ ಆ ಮಹಿಳೆ ನಿಮ್ಮ ರಾಜ್ಯದವರೇ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದ. ಇದಕ್ಕೆ ಕಠಿಣವಾಗಿ ಪ್ರತಿಕ್ರಿಯಿಸಿದ್ದ ಭಜ್ಜಿ, ಆಕೆ ನಮ್ಮ ರಾಜ್ಯದವರೇ ಆಗಿಬೇಕೆಂದು ಇಲ್ಲ. ಯಾರೇ ಆದರೂ ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ ಎಂದು ಹೇಳಿದ್ದರು. ಆದರೆ ಅಷ್ಟಕ್ಕೇ ಸುಮ್ಮನಾಗದ ಆ ವ್ಯಕ್ತಿ ಮತ್ತೆ ಭಜ್ಜಿ ಕಾಲೆಳೆದಾಗ ಆಕ್ರೋಶಗೊಂಡ  ಹರ್ಭಜನ್, ನೀನೊಬ್ಬ ಮೂರ್ಖ, ಮೊದಲು ನಿನ್ನನ್ನು ಬಂಧಿಸಬೇಕು ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದರು.

ಟ್ವಿಟರ್ ನಲ್ಲಿ ಭಜ್ಜಿ ಕಾಳಗ ಪ್ರಸಂಗದ ಸರಣಿ ಟ್ವೀಟ್ ಗಳು ಈ ಕೆಳಕಂಡಂತಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್-ಪ್ರಿಯಾಂಕಾ ವಶಕ್ಕೆ ಪಡೆದ ದೆಹಲಿ ಪೊಲೀಸರು: ಇಂಡಿಯಾ ಕೂಟದ 9 ಗಂಟೆಗಳ ಧರಣಿಗೆ ಬ್ರೇಕ್!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚುನಾವಣಾ ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಕಲಬುರಗಿಯಲ್ಲಿ ಶಾಕಿಂಗ್ ಘಟನೆ: ತೊಗರಿ ಹೊಲದಲ್ಲಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ!