ಇನ್ಜಮಾಮ್ ಉಲ್ ಹಕ್ (ಕೃಪೆ : ಎಎಫ್ ಪಿ)
ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಇನ್ಜಮಾಮ್ ಉಲ್ ಹಕ್ ಪಾಕಿಸ್ತಾನ ಕ್ರಿಕೆಟ್ ತಂಡದ ಪ್ರಧಾನ ಆಯ್ಕೆಗಾರರಾಗಿ ಹಕ್ ನೇಮಕವಾಗಿದ್ದಾರೆ. ಈ ಹಿನ್ನಲೆಯಲ್ಲಿ ಹಕ್ ಅಫ್ಘಾನಿಸ್ತಾನದಗ ಕ್ರಿಕೆಟ್ ಕೋಚ್ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಅಫ್ಘಾನಿಸ್ತಾನ್ ಕ್ರಿಕೆಟ್ ಮಂಡಳಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದ ಹಕ್ ಆ ವರ್ಷಾಂತ್ಯವರೆಗೆ ಅಫ್ಘಾನ್ ಕೋಚ್ ಆಗಿ ಕಾರ್ಯ ನಿರ್ವಹಿಸಬೇಕಿತ್ತು.
ಪಾಕಿಸ್ತಾನದ ಖ್ಯಾತ ಬ್ಯಾಟ್ಸ್‌ಮೆನ್ ಆಗಿದ್ದ ಹಕ್ 378 ಏಕ ದಿನ ಪಂದ್ಯಗಳನ್ನಾಡಿದ್ದಾರೆ. 2012ರಲ್ಲಿ ಕೆಲ ಕಾಲ ಪಾಕಿಸ್ತಾನ ಟೀಂನ ಬ್ಯಾಟಿಂಗ್ ಸಲಹೆಗಾರರಾಗಿಯೂ ಇವರು ಕಾರ್ಯ ನಿರ್ವಹಿಸಿದ್ದರು.
ವಾರಗಳ ಹಿಂದೆಯಷ್ಟೇ ಮುಕ್ತಾಯಗೊಂಡ ಟಿ20 ವಿಶ್ವಕಪ್ ಪಂದ್ಯಗಳಲ್ಲಿ ಅಫ್ಘಾನ್ ಟೀಂನ್ನು ಟಾಪ್ 10 ಸ್ಥಾನಕ್ಕೇರಿಸಿದ ಸಾಧನೆ ಹಕ್ ಅವರದ್ದು.