ಟಿನೊ ಬೆಸ್ಟ್ 
ಕ್ರಿಕೆಟ್

500ಕ್ಕೂ ಹೆಚ್ಚು ಮಹಿಳೆಯರ ಜೊತೆ ಮಲಗಿದ್ದೇನೆ: ಮಾಜಿ ಕ್ರಿಕೆಟಿಗ ಟಿನೊ ಬೆಸ್ಟ್

ಪುಸ್ತಕದಲ್ಲಿ ತಮ್ಮನ್ನು ತಾವು ಗಂಡು ವೇಶ್ಯೆ ಎಂದು ಟಿನೂ ಕರೆದುಕೊಂಡಿದ್ದಾರೆ. ಇಲ್ಲಿಯವರೆಗೂ ತನ್ನ ರಾಸಲೀಲೆಗಳನ್ನು ಪಾಪಪ್ರಜ್ಞೆಯಂಥ ಭಾವದಡಿ ಎಲ್ಲೂ ಹೇಳಿಕೊಂಡಿರಲಿಲ್ಲವಂತೆ...

ಮೈಂಡ್ ದ ವಿಂಡೋಸ್: ಮೈ ಸ್ಟೋರಿ ಎಂಬ ಆತ್ಮಕತೆಯಲ್ಲಿ ವೆಸ್ಟ್ ಇಂಡೀಸ್ ಮಾಜಿ ಕ್ರಿಕೆಟಗ ಟಿನೊ ಬೆಸ್ಟ್ ತಾನು 500ಕ್ಕೂ ಹೆಚ್ಚು ಮದನೆಯರ ಜತೆ ಮಲಗಿದ್ದಾಗೆ ಜಗಜ್ಜಾಹೀರು ಮಾಡಿದ್ದಾರೆ.

ಟಿನೊ ತನ್ನ ಬದುಕಿನ ರಸಿಕತನದ ರಸ ಕ್ಷಣಗಳನ್ನು ತಮ್ಮ ಆತ್ಮಕತೆಯಲ್ಲಿ ಬಿಡಿ ಬಿಡಿಯಾಗಿ ವರ್ಣಿಸಿದ್ದಾರೆ. ಪತ್ನಿ ಮೆಲಿಸ್ಸಾರಿಂದ ವಿಚ್ಛೇದನ ಪಡೆದ ನಂತರವಷ್ಟೇ ರಾಸಲೀಲೆಗಳಲ್ಲಿ ಮಿಂದೆದಿದ್ದಾಗಿ ಹೇಳಿಕೊಂಡಿದ್ದಾರೆ.

ಪುಸ್ತಕದಲ್ಲಿ ತಮ್ಮನ್ನು ತಾವು ಗಂಡು ವೇಶ್ಯೆ ಎಂದು ಟಿನೊ ಕರೆದುಕೊಂಡಿದ್ದಾರೆ. ಇಲ್ಲಿಯವರೆಗೂ ತನ್ನ ರಾಸಲೀಲೆಗಳನ್ನು ಪಾಪಪ್ರಜ್ಞೆಯಂಥ ಭಾವದಡಿ ಎಲ್ಲೂ ಹೇಳಿಕೊಂಡಿರಲಿಲ್ಲವಂತೆ. ಆದರೆ ತಮ್ಮ ಪುಸ್ತಕದಲ್ಲಿ ಸಹಜವಾಗಿ, ತೀರಾ ಲವಲವಿಕೆಯಿಂದಲೇ ಆಪ್ತರೊಂದಿಗೆ ತಮ್ಮ ಆಪ್ತ ವಿಚಾರಗಳನ್ನು ಹೇಳಿಕೊಂಡಂತೆ ಕಥಾವಸ್ತು ಸಾಗುತ್ತದೆ ಎಂದು ಹೇಳಿದ್ದಾರೆ.

ಕ್ರಿಕೆಟಿಗನಾಗಿದ್ದರಿಂದ ಇಷ್ಟೊಂದು ಹುಡುಗಿಯರ ಜತೆ ಪಲ್ಲಂಗ ಹಂಚಿಕೊಳ್ಳಲು ಸಾಧ್ಯವಾಯಿತು. ಪ್ರತಿ ಬಾರಿ ವೆಸ್ಟ್ ಇಂಡೀಸ್ ಅಥವಾ ಬಾರ್ಬಡಾಸ್ ತಂಡಗಳ ಜತೆ ಪ್ರವಾಸ ಕೈಗೊಳ್ಳುವಾಗಲೆಲ್ಲಾ ಈ ಬಾರಿ ಎಷ್ಟು ಹುಡುಗಿಯರ ಜತೆ ಮಲಗಬಲ್ಲೆ ಎಂಬುದನ್ನು ಯೋಚಿಸಿಯೇ ರೋಮಾಂಚನಗೊಳ್ಳುತ್ತಿದ್ದೆ. 2005ರಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದಾಗ ಸುಮಾರು 40 ಹುಡುಗಿಯರೊಂದಿಗೆ ಡೇಟಿಂಗ್ ನಡೆಸಿದ್ದೆ ಎಂಬ ಪ್ರತಿಯೊಂದು ವಿಚಾರವನ್ನು ಸ್ಪಷ್ಟವಾಗಿ ನಮೂದಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

Video: 80 ಸಾವಿರ ಹಣವಿದ್ದ ಬ್ಯಾಗ್ ನಾಪತ್ತೆ, ಮೇಲಿಂದ ಕೋತಿಯಿಂದ ಹಣದ ಸುರಿಮಳೆ! ಸಿಕ್ಕಿದೆಷ್ಟು ಗೊತ್ತಾ?

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

SCROLL FOR NEXT