ಕ್ರಿಸ್ ಗೇಯ್ಲ್, ಇರಾಕ್ ಥಾಮಸ್ 
ಕ್ರಿಕೆಟ್

ಕ್ರಿಸ್ ಗೇಯ್ಲ್ ಟಿ20 ವೇಗದ ಶತಕ ಸರಿಗಟ್ಟಿದ ಇರಾಕ್ ಥಾಮಸ್

ಕ್ರಿಕೆಟ್ ನಲ್ಲಿ ಒಬ್ಬರು ಮಾಡಿದ ದಾಖಲೆಗಳನ್ನು ಮತ್ತೊಬ್ಬರು ಮುರಿಯುವುದು ಸಾಮಾನ್ಯ. ಅದರಂತೆ ವೆಸ್ಟ್ ಇಂಡೀಸ್ ನ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್...

ಲೂಯಿಸ್‌ ಡಿ ಓರ್‌(ಜಮೈಕಾ): ಕ್ರಿಕೆಟ್ ನಲ್ಲಿ ಒಬ್ಬರು ಮಾಡಿದ ದಾಖಲೆಗಳನ್ನು ಮತ್ತೊಬ್ಬರು ಮುರಿಯುವುದು ಸಾಮಾನ್ಯ. ಅದರಂತೆ ವೆಸ್ಟ್ ಇಂಡೀಸ್ ನ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಯ್ಲ್ ರ ವೇಗದ ಟಿ20 ಶತಕದ ವಿಶ್ವದಾಖಲೆಯನ್ನು 23ರ ಹರೆಯದ ಬ್ಯಾಟ್ಸ್ ಮನ್ ಇರಾಕ್ ಥಾಮಸ್ ಮುರಿದು ಹಾಕಿದ್ದಾರೆ.

ಕೆರಿಬಿಯನ್‌ ದೇಶಿ ಕ್ರಿಕೆಟ್‌ನಲ್ಲಿ ಟ್ರಿನಿಡಾಡ್‌-ಟೊಬಾಗೊ ತಂಡದ ಇರಾಕ್‌ ಥಾಮಸ್‌ ಕೇವಲ 21 ಎಸೆತಗಳಲ್ಲಿ ಶತಕ ಸಿಡಿಸಿದ್ದು, 30 ಎಸೆತಗಳಲ್ಲಿ ಗೇಯ್ಲ್ ಸಿಡಿಸಿದ್ದ ಶತಕದ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.

2013ರ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡಿದ್ದ ಕ್ರಿಸ್‌ ಗೇಯ್ಲ್ ಬೆಂಗಳೂರಿನಲ್ಲಿ ಪುಣೆ ವಾರಿಯರ್ ವಿರುದ್ಧದ ಪಂದ್ಯದಲ್ಲಿ 30 ಎಸೆತಗಳಲ್ಲಿ ಶತಕ ಪೂರೈಸಿದ್ದರು. ಇದು ಟಿ-20 ಇತಿಹಾಸದಲ್ಲೇ ಅತೀ ವೇಗದ ಶತಕವಾಗಿತ್ತು. ಈಗ ಈ ಹೆಗ್ಗಳಿಕೆ ಇರಾಕ್‌ ಥಾಮಸ್‌ ಪಾಲಾಗಿದೆ.

ಸಾðಬರೋ-ಮಾಸನ್‌ ಹಾಲ್‌ ಪರ ಆಡಿದ ಥಾಮಸ್ ಎದುರಾಳಿ ಸ್ಪೇಸೈಡ್ ತಂಡದ ಬೌಲರ್ ಗಳನ್ನು ಚೆನ್ನಾಗಿ ದಂಡಿಸಿ 31 ಎಸೆತದಲ್ಲಿ ಅಜೇಯ 131 ರನ್ ಸಿಡಿಸಿದರು. ಈ ವೇಗದ ಶತಕದಲ್ಲಿ 15 ಸಿಕ್ಸರ್ ಹಾಗೂ 5 ಬೌಂಡರಿಗಳನ್ನು ಒಳಗೊಂಡಿದೆ. ಥಾಮಸ್‌ ಭರ್ಜರಿ ಬ್ಯಾಟಿಂಗ್ ನಿಂದಾಗಿ ಸ್ಪೇಸೈಡ್‌ 152 ರನ್ನುಗಳ ಮೊತ್ತವನ್ನು ಸಾðಬರೋ-ಮಾಸನ್‌ ಹಾಲ್‌ ಕೇವಲ 8 ಓವರ್‌ಗಳಲ್ಲಿ ಗುರಿಮುಟ್ಟಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!