ಕ್ರಿಕೆಟ್

ಸಾವಿನ ಅಂಚಿಗೆ ಹೋಗಿದ್ದ ನನಗೆ ತ್ರಿಶತಕ ಒತ್ತಡವೆನಿಸಲಿಲ್ಲ: ಕರುಣ್ ನಾಯರ್

Vishwanath S
ಮುಂಬೈ: ಕರುಣ್ ನಾಯರ್ ತಮ್ಮ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನದಲ್ಲಿ ತ್ರಿಶತಕ ಸಿಡಿಸುವ ಮೂಲಕ ಐತಿಹಾಸಿಕ ದಾಖಲೆ ಬರೆದಿದ್ದು, ಕರುಣ್ ತಾನು ಸಾವನ್ನು ತೀರಾ ಸನಿಹದಿಂದ ನೋಡಿ ಅದರಿಂದ ಬಚಾವ್ ಆಗಿ ಬಂದಿದ್ದೆ ಹೀಗಾಗಿ ನನಗೆ ತ್ರಿಶತಕ ಬಾರಿಸುವ ಸಮಯದಲ್ಲಿ ಒತ್ತಡವೆನಿಸಲಿಲ್ಲ ಎಂದು ಹೇಳಿದ್ದಾರೆ. 
ಚೆನ್ನೈನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ತ್ರಿಶತಕ ಸಾಧನೆ ಮಾಡಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಕರುಣ್ ನಾಯರ್ ತಾವು ದೇವರ ಹರಕೆ ತೀರಿಸಲು ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಬೋಟ್ ದುರಂತ ಸಂಭವಿಸಿತ್ತು ಅದರಲ್ಲಿ ನಾನು ಸಾವಿನ ಸನಿಹಕ್ಕೆ ಹೋಗಿದ್ದೆ. ಈಜು ಬರದ ನಾನು ನೀರಿನಲ್ಲಿ ಮುಳುಗುತ್ತಿದ್ದಾಗ ಸ್ಥಳೀಯರು ನನ್ನನ್ನು ರಕ್ಷಿಸಿದ್ದರು. ಮತ್ತೇ ಬದುಕಿ ಬಂದಿದ್ದೇ ಅದೃಷ್ಟ ಎಂದು ಹೇಳಿದರು. 
ರಾಷ್ಟ್ರೀಯ ತಂಡಕ್ಕೆ ಪಾದಾರ್ಪಣೆ ಮಾಡಿದ್ದ ಕಾರಣಕ್ಕಾಗಿ ಜುಲೈನಲ್ಲಿ ಕೇರಳದ ಶ್ರೀ ಪಾರ್ಥಸಾರಥಿ ದೇವಸ್ಥಾನಕ್ಕೆ ತೆರಳಿದ್ದೇ. 100ಕ್ಕೂ ಅಧಿಕ ಭಕ್ತಾಧಿಗಳಿದ್ದ ಸ್ನೇಕ್ ಬೋಟ್ ಪಂಪಾ ನದಿಯಲ್ಲಿ ಮುಳುಗಿತ್ತು. ಪವಾಡಸದೃಶ್ಯವಾಗಿ ಕರುಣ್ ಪಾರಾಗಿದ್ದರು. ಈ ಬೋಟ್ ದುರಂತದಲ್ಲಿ 6 ಮಂದಿ ಸಾವಿಗೀಡಾಗಿದ್ದರು. 
SCROLL FOR NEXT