ನವದೆಹಲಿ: ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕಾಲೆಳೆಯದ ಕ್ರಿಕೆಟಿಗರು ಯಾರಾದರೂ ಇದ್ದಾರೆ ಎಂಬ ಪ್ರಶ್ನೆ ಮೂಡುವಂತಾಗಿದೆ. ಏಕೆಂದರೆ ಮಾಜಿ ಪಾಕ್ ಆಫ್ ಸಿನ್ನರ್ ಸಕ್ಲೇನ್ ಮುಷ್ತಾಕ್ ಅವರ ಹುಟ್ಟುಹಬ್ಬಕ್ಕೆ ಸೆಹ್ವಾಗ್ ವಿಶಿಷ್ಠ ಶೈಲಿಯಲ್ಲಿ ಶುಭ ಕೋರಿದ್ದಾರೆ.
ಸೆಹ್ವಾಗ್ ತಮ್ಮ ಟ್ವೀಟ್ ನಲ್ಲಿ 2009ರ ಮಾರ್ಚ್ ನಲ್ಲಿ ಪಾಕಿಸ್ತಾನ ವಿರುದ್ಧದ ಮುಲ್ತಾನ್ ಟೆಸ್ಟ್ ಪಂದ್ಯದಲ್ಲಿ ಸಕ್ಲೇನ್ ಎಸೆತದಲ್ಲಿ ಸಿಕ್ಸರ್ ಬಾರಿಸಿ ತ್ರಿಶತಕ ಬಾರಿಸಿದರು. ಈ ಸಿಕ್ಸರ್ ಬಾರಿಸುವ ದೃಶ್ಯವುಳ್ಳ ವಿಡಿಯೋವನ್ನು ಸಕ್ಲೇನ್ ಗೆ ವೀರೂ ಕಳುಹಿಸಿದ್ದಾರೆ. ನಂತರ ಸಕ್ಲೇನ್ ಗೆ ಜನ್ಮದಿನದ ಶುಭಾಶಯ ಹೇಳಿದ್ದು ಹೀಗೆ.
ಸಕ್ಲೇನ್ ಮುಷ್ತಾಕ್ ನಿಮಗೆ ಒಳ್ಳೆಯದಾಗಲಿ. ಅಂತಹ ನೆನಪುಗಳನ್ನು ಕೊಟ್ಟಿದ್ದಕ್ಕಾಗಿ ಧನ್ಯವಾದಗಳು. ಈ ವಿಡಿಯೋವನ್ನು ನೋಡಿ ಆನಂದಿಸಿ ಎಂದು ಕಾಲೆಳೆದಿದ್ದಾರೆ.