ಕ್ರಿಕೆಟ್

ಜಿಂಬಾಬ್ವೆ ವಿರುದ್ಧ ಕ್ಲೀನ್ ಸ್ವೀಪ್ ಮಾಡಿದರೂ ಟೀಂಇಂಡಿಯಾ ರ‍್ಯಾಂಕಿಂಗ್‌ ನಲ್ಲಿ ಬದಲಾವಣೆ ಇಲ್ಲ!

Srinivasamurthy VN

ದುಬೈ: ಮುಂಬರುವ ಜಿಂಬಾಬ್ವೆ ಪ್ರವಾಸದ ಕುರಿತು ನಿರೀಕ್ಷೆಗಳು ಗರಿಗೆದರಿರುವಂತೆಯೇ ಪ್ರಸ್ತುತ ಬಿಡುಗಡೆಯಾಗಿರುವ ಅಂಕಿ ಅಂಶಗಳು ಟೀಂ ಇಂಡಿಯಾಗೆ ನಿರಾಸೆ ಮೂಡಿಸಿದೆ.

ಮುಂಬರುವ ಜಿಂಬಾಬ್ವೆ ಏಕದಿನ ವಿರುದ್ಧ ಸರಣಿಯಲ್ಲಿ ಕ್ಲೀನ್ ಸ್ವೀಪ್ ಮಾಡುವ ಮೂಲಕ ರ‍್ಯಾಂಕಿಂಗ್‌ ನಲ್ಲಿ ಮೇಲೇರುವ ಆಸೆ ಇನ್ನು ಆಸೆಯಾಗಿಯೇ ಉಳಿಯಲಿದ್ದು, ಜಿಂಬಾಂಬ್ವೆ ಪ್ರವಾಸದಲ್ಲಿ  ಟೀಂ ಇಂಡಿಯಾ ಕ್ಲೀನ್ ಸ್ವೀಪ್ ಮಾಡಿದರೂ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಮೇಲೇರಲು ಸಾಧ್ಯವಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮೂಲಗಳ ಪ್ರಕಾರ ಜಿಂಬಾಂಬ್ವೆ ವಿರುದ್ಧದ 3 ಏಕದಿನ  ಪಂದ್ಯಗಳ ಸರಣಿಯಲ್ಲಿ ಭಾರತ ಕ್ಲೀನ್‌ಸ್ವೀಪ್ ಸಾಧನೆ ಮಾಡಿದರೂ ಐಸಿಸಿ ರ‍್ಯಾಂಕಿಂಗ್‌ನಲ್ಲಿ ಯಾವುದೇ ಪ್ರಗತಿ ಕಾಣುವುದಿಲ್ಲವಂತೆ.

ರ‍್ಯಾಂಕಿಂಗ್‌ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿರುವ ಜಿಂಬಾಬ್ವೆ ವಿರುದ್ಧದ ಕ್ಲೀನ್‌ಸ್ವೀಪ್ ಮಾಡಿದರೆ ಭಾರತಕ್ಕೆ ಕೇವಲ 1 ಅಂಕ ಮಾತ್ರ ದೊರೆಯುತ್ತುದೆ. ಆಗ ಟೀಂ ಇಂಡಿಯಾದ ಒಟ್ಟಾರೆ 110  ಆಗಲಿದ್ದು, ಭಾರತ 4ನೇ ಸ್ಥಾನದಲ್ಲೇ ಉಳಿಯಲಿದೆ. ಜೂನ್ 11ರಿಂದ ಹರಾರೆಯಲ್ಲಿ ನಡೆಯಲಿರುವ ಸರಣಿಯಲ್ಲಿ ಒಂದು ಪಂದ್ಯ ಸೋತರೆ ಭಾರತ ಒಂದು ಅಂಕ ನಷ್ಟ ಅನುಭವಿಸಲಿದೆ.

SCROLL FOR NEXT