ಚೆನ್ನೈ: ಭಾರತ ಕ್ರಿಕೆಟ್ ತಂಡದ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುವುದಕ್ಕಾಗಿ ಇನ್ನೆರಡು ದಿನಗಳಷ್ಟೇ ಬಾಕಿ ಇದ್ದು, ಬುಧವಾರ ಸಂಜೆ ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಜೇಸನ್ ಗಿಲ್ಲೆಸ್ಪಿ ಸಹ ಅರ್ಜಿ ಸಲ್ಲಿಸಿದ್ದು, ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿರುವ ಏಕೈಕ ಪ್ರಮುಖ ವಿದೇಶಿ ಆಟಗಾರನಾಗಿದ್ದಾರೆ.
ಆಸ್ಟ್ರೇಲಿಯಾದ ಮಾಜಿ ಆಲ್ ರೌಂಡರ್ ಸ್ಟುವರ್ಟ್ ಲಾ ಹಾಗೂ ಐಪಿಎಲ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಕೋಚ್ ಆಗಿದ್ದ ಟಾಮ್ ಮೂಡಿ ಸಹ ಭಾರತ ಕ್ರಿಕೆಟ್ ತಂಡದ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುತ್ತಾರೆ ಎಂದು ತಿಳಿದುಬಂದಿದೆ. ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ವೆಂಕಟೇಶ್ ಪ್ರಸಾದ್ ಈಗಾಗಲೇ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದು, ಬೌಲಿಂಗ್ ಕೋಚ್ ಆಗುವ ಇಚ್ಛೆ ವ್ಯಕ್ತಪಡಿಸಿದ್ದಾರೆ.
ಸಂದೀಪ್ ಪಾಟೀಲ್, ರವಿ ಶಾಸ್ತ್ರಿ, ಬಲ್ವಿಂದರ್ ಸಿಂಗ್ ಸಾಧು, ರಾಬಿನ್ ಸಿಂಗ್, ಲಾಲ್ ಚಂದ್ ರಜಪೂತ್ ಅರ್ಜಿ ಸಲ್ಲಿಸಿರುವ ಇತರ ಪ್ರಮುಖರಾಗಿದ್ದಾರೆ.
ಒಟ್ಟಾರೆ ಭಾರತೀಯ ಕ್ರಿಕೆಟ್ ತಂಡದ ಕೋಚ್ ಸ್ಥಾನಕ್ಕೆ ಅರ್ಜಿ ಸಲ್ಲಿಸಿರುವ 8 ಘಟಾನುಘಟಿಗಳ ಪಟ್ಟಿ ಇಂತಿದೆ.
ರವಿ ಶಾಸ್ತ್ರಿ
ಸಂದೀಪ್ ಪಾಟೀಲ್
ಲಾಲ್ ಚಂದ್ ರಜಪೂತ್
ವೆಂಕಟೇಶ್ ಪ್ರಸಾದ್
ರಾಬಿನ್ ಸಿಂಗ್
ಬಲ್ವಿಂದರ್ ಸಿಂಗ್ ಸಾಧು
ಜೇಸನ್ ಗಿಲ್ಲೆಸ್ಪಿ
ಸ್ಟುವರ್ಟ್ ಲಾ