ಪಾಕಿಸ್ತಾನ ಕ್ರಿಕೆಟ್ ತಂಡ ಕೋಚ್ ವಕಾರ್ ಯೂನಿಸ್ (ಸಂಗ್ರಹ ಚಿತ್ರ) 
ಕ್ರಿಕೆಟ್

ಮನಸ್ಸಿನಲ್ಲಿ ಇದ್ದುದನ್ನು ಅಫ್ರಿದಿ ಹೇಳಿದ್ದು, ವಿವಾದ ಅಗತ್ಯವಿಲ್ಲ: ವಕಾರ್ ಯೂನಿಸ್

ಅತ್ತ ಪಾಕಿಸ್ತಾನದಲ್ಲಿ ಶಾಹಿದ್ ಅಫ್ರಿದಿ ಭಾರತ ಪ್ರೀತಿ ಹೇಳಿಕೆ ವಿವಾದ ಹುಟ್ಟುಹಾಕುತ್ತಲೇ ಇತ್ತ ಭಾರತದಲ್ಲಿರುವ ಪಾಕಿಸ್ತಾನ ಕ್ರಿಕೆಟ್ ತಂಡದ...

ನವದೆಹಲಿ: ಅತ್ತ ಪಾಕಿಸ್ತಾನದಲ್ಲಿ ಶಾಹಿದ್ ಅಫ್ರಿದಿ ಭಾರತ ಪ್ರೀತಿ ಹೇಳಿಕೆ ವಿವಾದ ಹುಟ್ಟುಹಾಕುತ್ತಲೇ ಇತ್ತ ಭಾರತದಲ್ಲಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ಕೋಚ್ ವಕಾರ್ ಯೂನಿಸ್ ಅಫ್ರಿದಿ  ಬೆಂಬಲಕ್ಕೆ ನಿಂತಿದ್ದಾರೆ.

ಭಾರತದಲ್ಲೇ ಹೆಚ್ಚಿನ ಪ್ರೀತಿ ಸಿಗುತ್ತದೆ’ ಎನ್ನುವ ಹೇಳಿಕೆ ತವರಿನಿಂದ ಟೀಕೆ ಎದುರಿಸುತ್ತಿರುವ ಪಾಕಿಸ್ತಾನ ತಂಡದ ನಾಯಕ ಶಾಹಿದ್ ಅಫ್ರಿದಿಗೆ ಕೋಚ್ ವಕಾರ್ ಯೂನಿಸ್ ಬೆಂಬಲ ನೀಡಿದ್ದು,  ಅಫ್ರಿದಿ ಹೇಳಿದ ಹೇಳಿಕೆಯಲ್ಲಿ ಯಾವುದೇ ವಿವಾದಾತ್ಮಕ ಅಂಶವಿಲ್ಲ. ತಮ್ಮ ಮನಸ್ಸಿನಲ್ಲಿ ಇದ್ದುದನ್ನು ಅವರು ನೇರವಾಗಿ ಹೇಳಿದ್ದಾರೆ ಅಷ್ಟೇ ಎಂದು ವಕಾರ್ ತಿಳಿಸಿದ್ದಾರೆ.

ಈ ಪ್ರಕರಣದ ಬಗ್ಗೆ ತಾವು ಅಫ್ರಿದಿಯವರೊಂದಿಗೆ ಮಾತನಾಡಿದ್ದು, ಅಫ್ರಿದಿ ತಾವು ಸಕಾರಾತ್ಮಕ ವಿಚಾರವನ್ನು ಹೇಳಲು ಮಾತ್ರ ಬಯಸಿದ್ದಾಗಿ ವಕಾರ್ ವಿವರಿಸಿದ್ದಾರೆ. ‘ನನ್ನ ಪ್ರಕಾರ ಅಫ್ರಿದಿ  ಅವರ ಆ ಮಾತಿನಲ್ಲಿ ಯಾವುದೇ ವಿವಾದಿತ ಅಂಶವಿಲ್ಲ. ಅದು ಅವರ ಭಾವನೆ. ಇದನ್ನು ಹಿಡಿದುಕೊಂಡು ವಿವಾದ ಮಾಡುವ ಬದಲು ಇಲ್ಲಿಯೇ ಬಿಟ್ಟುಬಿಡಬೇಕು. ಕ್ರಿಕೆಟ್ ಆಟದ  ಮೂಲಕ  ಎದುರಾಳಿಯನ್ನು ಸೋಲಿಸಲು ಬಂದಿದ್ದೇವೆ. ಹಾಗಾಗಿ ಕ್ರಿಕೆಟ್ ಬಗ್ಗೆ ಗಮನ ವಹಿಸಿದರೆ ಒಳ್ಳೆಯದು’ ಎಂದು ಪಂದ್ಯಪೂರ್ವ ಸುದ್ದಿಗೋಷ್ಠಿಯಲ್ಲಿ ವಕಾರ್ ಹೇಳಿದರು.

ಅಂತೆಯೇ ವಿವಾದವನ್ನು ಪಕ್ಕಕ್ಕಿಟ್ಟು ಗುಣಮಟ್ಟದ ಕ್ರಿಕೆಟ್ ಆಡುವತ್ತ ಗಮನವಹಿಸಿ ಎಂದು ಪಾಕಿಸ್ತಾನ ಆಟಗಾರರಿಗೆ ಹೇಳಿದ್ದೇನೆ ಎಂದು ವಕಾರ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ