ಮಾರ್ಟಿನ್ ಕ್ರೋವ್ ಮತ್ತು ಕಿವೀಸ್ ತಂಡ (ಸಂಗ್ರಹ ಚಿತ್ರ) 
ಕ್ರಿಕೆಟ್

ಕಿವೀಸ್ ಗೆಲುವಿಗೆ ಸ್ಪೂರ್ತಿಯಾದ ಮಾರ್ಟಿನ್ ಕ್ರೋವ್

ಭಾರತದ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಅಭೂತಪೂರ್ವ ಗೆಲುವಿಗೆ ಇತ್ತೀಚೆಗೆ ಮೃತರಾದ ಮಾಜಿ ಆಟಗಾರ ಮಾರ್ಟಿನ್ ಕ್ರೋವ್ ಅವರೇ ಸ್ಪೂರ್ತಿ ಎಂದು ತಿಳಿದುಬಂದಿದೆ.

ನಾಗ್ಪುರ: ಭಾರತದ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಅಭೂತಪೂರ್ವ ಗೆಲುವಿಗೆ ಇತ್ತೀಚೆಗೆ ಮೃತರಾದ ಮಾಜಿ ಆಟಗಾರ ಮಾರ್ಟಿನ್ ಕ್ರೋವ್ ಅವರೇ ಸ್ಪೂರ್ತಿ ಎಂದು  ತಿಳಿದುಬಂದಿದೆ.

ಈ ಹಿಂದೆ ಮಾರ್ಟಿನ್ ಕ್ರೋವ್ ಅವರು ಹೂಡಿದ್ದ ತಂತ್ರವನ್ನೇ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ನಾಯಕ ಭಾರತದ ವಿರುದ್ಧ ಅಳವಡಿಸಿ ಅದರಲ್ಲಿ ಯಶಸ್ಸು ಕೂಡ  ಪಡೆದಿದ್ದಾರೆ. ಕಿವೀಸ್ ಮಾಜಿ ನಾಯಕ ಮಾರ್ಟಿನ್ ಕ್ರೋವ್ 1992ರ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಸ್ಪಿನ್ನರ್ ದೀಪಕ್ ಪಟೇಲ್‌ರನ್ನು ಮೊದಲ ಓವರ್‌ನಲ್ಲೇ ಕಣಕ್ಕಿಳಿಸಿ ದಿಟ್ಟನಡೆ  ಇಟ್ಟಿದ್ದರು.

ಭಾರತದ ವಿರುದ್ಧದ ಪಂದ್ಯದಲ್ಲಿ ಕಿವೀಸ್ ಪಡೆ ಕೂಡ ಇದೇ ತಂತ್ರಗಾರಿಕೆಯನ್ನು ಪ್ರಯೋಗಿಸಿ ಅದರಲ್ಲಿ ಯಶಸ್ವಿ ಕೂಡ ಆಗಿದೆ. ಭಾರತದ ವಿರುದ್ಧದ  ಪಂದ್ಯದಲ್ಲಿ ಮಾರ್ಟಿನ್ ಗೌರವಾರ್ಥ ಕಪ್ಪುಪಟ್ಟಿ ಧರಿಸಿ ಕಣಕ್ಕಿಳಿದಿದ್ದ ಕಿವೀಸ್ ತಂಡಕ್ಕೆ ಅವರ ಸ್ಪಿನ್ ಮಂತ್ರವೂ ಸ್ಪೂರ್ತಿಯಾಗಿದ್ದು ವಿಶೇಷ.

ಟಿ20 ಪಂದ್ಯವೊಂದರಲ್ಲಿ ಸ್ಪಿನ್ನರ್‌ಗಳೇ 9 ವಿಕೆಟ್ ಕಬಳಿಸಿದ 3ನೇ ದೃಷ್ಟಾಂತವಿದು. ಈ ಹಿಂದೆ ಜಿಂಬಾಬ್ವೆ (2008), ಶ್ರೀಲಂಕಾ (2012) ಸ್ಪಿನ್ನರ್‌ಗಳು ಈ ಸಾಧನೆ ಮಾಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಸ್ಪಾದಲ್ಲಿ ಅಕ್ರಮ ಚಟುವಟಿಕೆ' ಎಂದು ಆರೋಪಿಸಿ ದಾಂಧಲೆ; 5 ಲಕ್ಷ ರೂ ಗೆ ಬೇಡಿಕೆ, 1 ಲಕ್ಷ ವಸೂಲಿ! ಶಾಕಿಂಗ್ ಘಟನೆ

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!

Bigg Boss Kannada: ಟಾಸ್ಕ್ ವೇಳೆ ಕುಸಿದು ಬಿದ್ದ ನಟಿ ಸಂಗೀತಾ ಭಟ್; ಆರೋಗ್ಯದಲ್ಲಿ ಏರುಪೇರು! ವಿಡಿಯೋ ವೈರಲ್