ಕ್ರಿಕೆಟ್

ಮಹಿಳಾ ವಿಶ್ವಕಪ್ ಟಿ20: ಪಾಕ್ ವಿರುದ್ಧ ಭಾರತಕ್ಕೆ ಸೋಲು

ಒಂದು ಕಡೆ ಕೋಲ್ಕತಾದಲ್ಲಿ ಭಾರತ-ಪಾಕಿಸ್ತಾನ ಹೈ ವೋಲ್ಟೋಜ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ...

ನವದೆಹಲಿ: ಒಂದು ಕಡೆ ಕೋಲ್ಕತಾದಲ್ಲಿ ಭಾರತ-ಪಾಕಿಸ್ತಾನ ಹೈ ವೋಲ್ಟೋಜ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ದೆಹಲಿಯಲ್ಲಿ ನಡೆದ ಟಿ20 ವಿಶ್ವಕಪ್ ಮಹಿಳೆಯರ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ 2ರನ್ ಗಳಿಂದ ಪರಾಭವಗೊಂಡಿದೆ.
ಪಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ, 7 ವಿಕೆಟ್ ನಷ್ಟಕ್ಕೆ 96 ರನ್​ಗಳ ಟಾರ್ಗೆಟ್ ನೀಡಿತ್ತು. ಭಾರತ ವನಿತೆಯರ ಗುರಿ ಬೆನ್ನತ್ತಿದ್ದ ಪಾಕ್ ವನಿತೆಯರು, 16 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 77ರನ್ ಗಳಿಸಿದರು.
ಮಹಿಳೆಯರ ಪಂದ್ಯಕ್ಕೂ ಮಳೆ ಅಡ್ಡಿಯಾದ ಹಿನ್ನೆಲೆಯಲ್ಲಿ ಡಕ್ ವರ್ಥ್ ಲೂಯಿಸ್ ನಿಯಮದಂತೆ ಪಾಕ್ ತಂಡ ಗೆಲವು ಸಾಧಿಸಿತು.
ಪಾಕ್ ಪರ ನಹಿದಾ ಖಾನ್ 14, ಸಿದ್ರಾ ಆಮಿನ್ 26 ರನ್​ಗಳನ್ನು ಪೇರಿಸಿದರು. ಭಾರತದ ಪರ ರಾಜೇಶ್ವರಿ ಗಾಯಕ್ವಾಡ್, ಶಿಖಾ ಪಾಂಡ್ಯಾ, ಜುಲನ್ ಗೋಸ್ವಾಮಿ, ಹರ್ಮನ್​ಪ್ರೀತ್ ಕೌರ್ ತಲಾ 1 ವಿಕೆಟ್ ಪಡೆದರು
ಭಾರತದ ಮಿಥಲಿ ರಾಜ್ 16, ಹರ್​ಪ್ರೀತ್ ಸಿಂಗ್ ಕೌರ್ 16, ವೇದ ಕೃಷ್ಣಮೂರ್ತಿ 24, ಜೆ. ಗೋಸ್ವಾಮಿ 14 ರನ್ ಗಳಿಸಿದ್ದರು.
ಪಾಕ್ ಪರ ಅನಮ್ ಆಮಿನ್, ಅಸ್ಮಾವಿಯಾ ಇಕ್ಬಲ್, ಸನಾ ಮಿರ್, ಸಾದಿಯಾ ಯೂಸೊಫ್ ಹಾಗೂ ನಿದಾ ದಾರ್ ತಲಾ ಒಂದು ವಿಕೆಟ್ ಪಡೆದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

RCB ಫ್ಯಾನ್ಸ್ ಗೆ ಸಿಹಿಸುದ್ದಿ: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ IPL ಪಂದ್ಯ ಆಯೋಜನೆಗೆ ಕರ್ನಾಟಕ ಸರ್ಕಾರ ಗ್ರೀನ್ ಸಿಗ್ನಲ್!

T20 ವಿಶ್ವಕಪ್ 2026: ಇತಿಹಾಸ ಬರೆದ ಭಾರತ.. ಅತೀ ದೊಡ್ಡ ಜಯ, ಜಗತ್ತಿನ ಯಾವ ತಂಡವೂ ಮಾಡದ ದಾಖಲೆ!

T20 ವಿಶ್ವಕಪ್ 2026: ಗುರು ದೇವೋ ಭವ.. ಮಾಜಿ ಕೋಚ್ Gary Kirsten ಬಿಗಿದಪ್ಪಿದ ಹಾರ್ದಿಕ್ ಪಾಂಡ್ಯಾ!

ಮಹಾಶಿವರಾತ್ರಿ: ಬೆಂಗಳೂರಿನಲ್ಲಿ ಫೆಬ್ರವರಿ 15 ರಂದು ಮಾಂಸ ಮಾರಾಟ, ವಧೆ ನಿಷೇಧ

T20 ವಿಶ್ವಕಪ್ 2026: ಭಾರತ ಭರ್ಜರಿ ಬೌಲಿಂಗ್, ನಮೀಬಿಯಾ ವಿರುದ್ಧ 93 ರನ್ ಜಯ

SCROLL FOR NEXT