ಬಿಹಾರ: ಟಿ 20 ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಸಂಭ್ರಮಾಚರಣೆ ಸ್ಟೇಡಿಯಂನಲ್ಲಿ ಮಾತ್ರವಲ್ಲ ಹೋಟೆಲ್‌ಗಳಲ್ಲಿಯೂ ನಡೆದಿದೆ. ಭಾರತ ಮತ್ತು ಪಾಕ್ ನಡುವಿನ ಪಂದ್ಯ ವೀಕ್ಷಣೆಗಾಗಿ ಜನರು ಟೀವಿಯ ಮೊರೆ ಹೋಗುವಾಗ ಜನರನ್ನು ತಮ್ಮತ್ತ ಸೆಳೆಯುವುದಕ್ಕಾಗಿ ಹೋಟೆಲ್‌ನವರು ಕ್ರಿಕೆಟ್ ಸ್ಪೆಷಲ್ ಖಾದ್ಯ ತಯಾರಿಸಿ ತಂತ್ರ ಹೂಡಿದ್ದಾರೆ. ದೊಡ್ಡ ದೊಡ್ಡ ನಗರಗಳಲ್ಲಿರುವ ಹೋಟೆಲ್‌ಗಳು ಬೃಹತ್ ಸ್ಕ್ರೀನ್ ನಲ್ಲಿ ಕ್ರಿಕೆಟ್ ವೀಕ್ಷಣೆಗೆ ಅವಕಾಶ ಒದಗಿಸಿದ್ದು ಮಾತ್ರವಲ್ಲದೆ ಸ್ಪೆಷಲ್ ಆಹಾರವನ್ನೂ ಸಿದ್ಧಪಡಿಸಿದ್ದವು.
ಪಾಟ್ನಾದ ಹೋಟೆಲ್‌ವೊಂದು ಕ್ರಿಕೆಟ್ ಪ್ರೇಮಿಗಳಿಗಾಗಿ ವಿಶೇಷ ವಿಶ್ವಕಪ್ ಮೆನುವನ್ನೇ ಸಿದ್ಧಪಡಿಸಿದೆ. ಈ ವಿಶೇಷ ಮೆನುವಿನಲ್ಲಿ ಏನೆಲ್ಲಾ ಇತ್ತು ಗೊತ್ತಾ?
ಮಹೀ ಹೆಲಿಕಾಪ್ಟರ್ ಟಿಕ್ಕಾ, ವಿರಾಟ್ ಕೊಹ್ಲಿ ಕಬಾಬ್, ಪನೀರ್ ಪಾಂಡ್ಯಾ ಕಬಾಬ್, ಶಿಖರ್ ಗಳ್ಳರ್ ಕಬಾಬ್, ಧೋನಿ ಸಮ್ಮರ್ ಮೋಕ್‌ಟೇಲ್, ವಿರಾಟ್ ಕೂಲ್ ಕ್ರಶ್ ಪಾಕೆಟ್ ಪಿಂಚ್ ಮೊದಲಾದ ಖಾದ್ಯಗಳನ್ನು ಉಣಬಡಿಸಲಾಗಿದೆ.
ಹಿಟ್ ವಿಕೆಟ್, ಬಿಟ್‌ವೀನ್ ದ ಗ್ಲೌಸ್, ಕೌಟ್ ಆ್ಯಂಡ್ ಬೌಲ್ಡ್, ಗೂಗ್ಲೀ, ಕವರ್ ಡ್ರೈವ್ ಎಂಬುದು ಇನ್ನೊಂದು ಹೋಟೆಲ್‌ನಲ್ಲಿದ್ದ ಮೆನು. ಮಹಿ ಫಿಶ್ ಟಿಕ್ಕಾ, ಹೌಜಾಟ್ ಕವರ್ ಡ್ರೈವ್, ಅಫ್ರೀದಿ ಬೂಂ ಬೂಂ ಕೂಡಾ ಮೆನುನಲ್ಲಿದ್ದ ಸ್ಪೆಷಲ್ ಐಟಂಗಳು
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos