ಮೊಹಾಲಿ: ವೆಸ್ಟ್ ಇಂಡೀಸ್ ವಿರುದ್ಧದ ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಭಾರತ ಮಹಿಳಾ ತಂಡ 3 ರನ್ ಗಳಿಂದ ಸೋತು ಟಿ20 ವಿಶ್ವಕಪ್ ಪಂದ್ಯಾವಳಿಯಿಂದ ಹೊರಬಿದ್ದಿದೆ.
ವೆಸ್ಟ್ ಇಂಡೀಸ್ ನೀಡಿದ 114 ರನ್ ಗಳ ಸಾಧಾರಣ ಮೊತ್ತ ಬೆನ್ನಟ್ಟಿದ ಭಾರತ ನಿಗದಿತ 20 ಓವರ್ ಗಳಲ್ಲಿ 111 ರನ್ ಗಳಿಸಷ್ಟೇ ಶಕ್ಯವಾಯಿತು. ಇದರೊಂದಿಗೆ ಭಾರತ ಟೂರ್ನಿಯಿಂದ ಹೊರಕ್ಕೆ ಬಂದಿದೆ.
ಭಾರತ ಪರ ಮಿಥಾಲಿ ರಾಜ್ 1, ವೇದಾ ಕೃಷ್ಣಮೂರ್ತಿ 18, ಸ್ಮತಿ ಮಂಧನ 22, ಹರಮನ್ಪ್ರೀತ್ ಕೌರ್ 7, ಅನುಜಾ ಪಾಟೀಲ್ 26, ಜೂಲನ್ ಗೋಸ್ವಾಮಿ 25, ಶಿಖಾ ಪಾಂಡೆ 6, ಇಕ್ತಾ ಬಿಸ್ತಾ 1, ಎಸ್ ವರ್ಮಾ 1, ರಾಜೇಶ್ವರಿ ಗಾಯಕ್ವಾಡ್ ಅಜೇಯ 1 ಹಾಗೂ ಪೂನಂ ಯಾದವ್ 1 ರನ್ ಗಳಿಸಿದ್ದಾರೆ.
ವೆಸ್ಟ್ ಇಂಡೀಸ್ ಪರ ಡಿಜೆಎಸ್ ಡೋಟಿನ್ 3, ಎಎಸ್ಎಸ್ ಫ್ಲೆಚೇರ್ 2 ವಿಕೆಟ್ ಪಡೆದಿದ್ದಾರೆ.
ವಿಂಡೀಸ್ ಪರ ಎಚ್ ಕೆ ಮಾಥ್ಯೂಸ್ 6, ಟೈಲರ್ 47, ಕೆಎ ನೈಟ್ 0, ಕ್ವೇನ್ಟಿನಾ 4, ಡಿಜೆಎಸ್ ಡೋಟಿನ್ 45 ರನ್ ಗಳಿಸಿದ್ದಾರೆ.
ಭಾರತ ಪರ ಹರಮನ್ಪ್ರೀತ್ ಕೌರ್ 4, ಅನೂಜಾ ಪಾಟೀಲ್ 3, ಬಿಸ್ತಾ 1 ವಿಕೆಟ್ ಪಡೆದಿದ್ದಾರೆ.