ಅಫ್ಘಾನ್ ಕ್ರಿಕೆಟಿಗರ ಜತೆ ಸ್ಟೆಪ್ ಹಾಕಿದ ಗೇಲ್ 
ಕ್ರಿಕೆಟ್

ತನ್ನ ಟೀಂ ಸೋತರೂ ಅಫ್ಘಾನ್ ಆಟಗಾರರ ಖುಷಿಯಲ್ಲಿ ಭಾಗಿಯಾದ ಕ್ರಿಸ್ ಗೇಲ್!

ವಿಶ್ವಕಪ್ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಪರಾಭವಗೊಳಿಸಿದ ನಂತರ ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಆಟಗಾರರು ಖುಷಿಯಲ್ಲಿ ಕುಣಿಯುತ್ತಿದ್ದರೆ, ಕ್ರಿಸ್ ಗೇಲ್ ...

ನಾಗ್ಪುರ: ವಿಶ್ವಕಪ್ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಪರಾಭವಗೊಳಿಸಿದ ನಂತರ ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಆಟಗಾರರು ಖುಷಿಯಲ್ಲಿ ಕುಣಿಯುತ್ತಿದ್ದರೆ, ಕ್ರಿಸ್ ಗೇಲ್ ಕೂಡಾ ಅವರ ಜತೆ ಭಾಗಿಯಾಗಿದ್ದಾರೆ.
ಅಫ್ಘಾನ್ ಕ್ರಿಕೆಟಿಗರು ತನ್ನ ತಂಡವನ್ನು ಸೋಲಿಸಿದ್ದರೂ, ಅವರ ಗೆಲುವಿನ ಕ್ಷಣದಲ್ಲಿ ತಾನೂ ಭಾಗಿಯಾಗುವ ಮೂಲಕ ಕ್ರಿಸ್‌ಗೇಲ್ ಕ್ರಿಕೆಟ್ ಎಂಬುದು ಆಟವಷ್ಟೇ, ಅಲ್ಲಿ ಸೋಲು ಗೆಲವು ಇದ್ದದ್ದೇ. ಇಲ್ಲಿ ತಂಡಗಳ ನಡುವೆ ಯಾವುದೇ ಅಸಹನೆ, ದ್ವೇಷ ಇರುವುದಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. 
ಭಾನುವಾರ ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾನ ವೆಸ್ಟ್ ಇಂಡೀಸ್‌ನ್ನು 6 ರನ್‌ಗಳಿಂದ ಪರಾಭವಗೊಳಿಸಿತ್ತು. ಪಂದ್ಯ ಮುಗಿದ ನಂತರ ಅಫ್ಘಾನಿಸ್ತಾನದ ಆಟಗಾರರಿಗೆ ಅಭಿನಂದನೆ ತಿಳಿಸಲು ಕ್ರಿಸ್ ಗೇಲ್ ಮೈದಾನಕ್ಕಿಳಿದಿದ್ದರು.
ಅಲ್ಲಿ ಅಫ್ಘಾನ್ ಕ್ರಿಕೆಟಿಗರ ಜತೆ ಸ್ಟೆಪ್ ಹಾಕಿದ ಗೇಲ್ ನಂತರ ಸೆಲ್ಫೀ ಮತ್ತು ಗ್ರೂಪ್ ಫೋಟೋಗೆ ಪೋಸ್ ಕೊಟ್ಟು ಕೆಲವು ಸಂತೋಷದ ಕ್ಷಣಗಳನ್ನು ಕಳೆದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!